Feeds:
ಲೇಖನಗಳು
ಟಿಪ್ಪಣಿಗಳು

Archive for ಆಗಷ್ಟ್, 2009

ಹುಡುಗೀಯರು ಹೀಗ್ಯಾಕೆ ಅಂತಾ ಬರೆಯುವುದು ಸರಿಯಾ ಅಥವಾ ಹುಡುಗರು ಯಾಕಿಂಗಾಡ್ತಾರೆ ಎಂದು ಬರೆಯುವುದು ಸೂಕ್ತವಾ ಎಂಬ ಗೊಂದಲ ನನ್ನಲ್ಲಿದೆ. ಆದ್ರೂ ಎರಡು ತರಹ ಬರೆಯುವುದೂ ಶಾನೇ ಡೇಂಜರ್. ಯಾಕಂದ್ರೆ ಫೆಮಿನಿಸ್ಟ್  ಸಂಘಟನೆಗಳು, ಯುವಕ ಮಂಡಳಿ ಸದಸ್ಯರುಗಳಿಗೆ ಈ ಬರಹ ಓದಿ ನೋವಾಗಬಹುದು! ಹಾಗಂತ, ನನ್ನ ಬರಹ ಹಿಡಿದುಕೊಂಡು  ಗಾಂ ಪ್ರತಿಮೆ ಎದುರು ಯಾರೂ ಹೋರಾಟ ನಡೆಸುವುದಿಲ್ಲ  ಎಂಬುದಂತೂ ಗ್ಯಾರಂಟಿ. ಅಯ್ಯೋ ಸಿವಾ, ಏನೋ ಬರೆಯಕ್ಕೆ ಹೊಂಟಿದ್ದು ಏನೇನು ಆಗಕ್ ಹತ್ತೈತಿ! ಇಲ್ಲ, ಟ್ರ್ಯಾಕ್ ತಪ್ಪಿಲ್ಲ. ಹಾಗಾಗಿ  ನೇರವಾಗಿ ವಿಷ್ಯಕ್ಕೆ ಬರುತ್ತಿದ್ದೇನೆ.

ವಿಷ್ಯ  ಏನಪ್ಪಾ  ಅಂತಂತಂದ್ರೆ…ಈ ಹುಡುಗೀಯರು ಯಾಕೆ ಹೀಗೆ  ಅಂತಾ!  ಹುಡುಗೀಯರಿಗೆ ಏನಾಗಿದೆ ಅನ್ನೋದಕ್ಕಿಂತ, ಆಗಲಿಕ್ಕೆ  ಉಳಿದಿರುವುದೇನು ಎಂಬುದು ಮುಖ್ಯವಾದ ಪ್ರಶ್ನೆ. ಅಲ್ಲ , ಈ ಬೆಂಗಳೂರಲ್ಲಿ  ನಮ್ಮ ‘ನಾರಿ’ಗಳಿಗೆ ಸ್ವಂತ ಐಡೆಂಟಿಟಿ ಇಲ್ಲವೇನೋ ಅನ್ನಿಸ್ತಾ ಇದೆ. ಹಿಂದೆಲ್ಲ  ಸ್ಯಾರಿ ಉಡ್ತಾ ಇದ್ದರಂತೆ. ಹಾಗಾಗಿ ‘ಭಾರತೀಯ ನಾರಿ’ ಎಂಬ ವಿಶೇಷಣ ಸ್ತ್ರೀ ಸಮುದಾಯಕ್ಕೆ ಇತ್ತಂತೆ. ಇವತ್ತು  ಒಂದಷ್ಟು (ಬೆಂಗಳೂರಿನ ಮಟ್ಟಿಗೆ  ಈ ಪ್ರಮಾಣ ಶೇ.೬೦ಕ್ಕಿಂತ ಜಾಸ್ತಿ ಇರಬಹುದು)ಹುಡುಗೀಯರು ಬಾರ್‌ನಲ್ಲಿ  ಕೂತು…ಅಲ್ಲಲ್ಲ…ಮನೆ, ಹಾಸ್ಟೆಲ್‌ನಲ್ಲಿ  ಕೂತು ಕುಡಿತಾರೆ. ಇನ್ನೂ  ಕೆಲವರು ಐಷಾರಾಮಿ ಹೋಟೆಲ್‌ಗೆ ಹೋಗಿ ಎರಡು ಪೆಗ್ ಏರಿಸುತ್ತಾರೆ. ಸಿಗರೇಟು ಸೇದ್ತಾರೆ, ಹುಡುಗರಂತೆ ಡ್ರೆಸ್ ಮಾಡಿಕೊಳ್ಳುತ್ತಾರೆ…

‘ಲೋ ಯಪ್ಪ  ಸುಮ್ನಿಕಿರೋ, ನೀನೇನು ಸಂಸ್ಕೃತಿ ಗುತ್ತಿಗೆ ತಗಂಡಿಯೇನು? ಹುಡುಗ್ರು ಏನು ಬೇಕಾದ್ರು ಮಾಡಬಹುದು, ನಾವು ಹುಡುಗೀಯರು ಮಾಡಂಗಿಲ್ಲ  ಅನ್ನಾಕೆ ಇದೇನು ತಾಲಿಬಾನಾ?!’

ಹೋಯ್ ಅಕ್ಕೋರೆ ನಿಮ್ಮ ಕೂಗು ನಂಗೆ ಶೆರಿಯಾಗಿಯೇ ಕೇಳಿಸ್ತಾ  ಐತಿ. ನಾನು ಈಗ ಹೇಳಾಕ್ ಹೊಂಟಿರೋ ಈಸ್ಯ ಕೂಡ ಅದೇನೆ. ಓಸಿ ಸಮಾಧಾನ ಮಾಡ್ಕಂಡು ಓದ್ತೀರಾ?!

ಅಡುಗೆ ಮನೆಯಲ್ಲಿ  ಸೌಟು ಹಿಡಿದುಕೊಂಡೇ ಬದುಕಬೇಕಾ ಎಂಬ ಹಠಮಾರಿತನದೊಂದಿಗೆ ಹೆಣ್ಣು  ನಾಲ್ಕು ಗೋಡೆಗಳ ನಡುವಣ ಹೊಸ್ತಿಲನ್ನು ದಾಟಿ ಹೊರಬಂದಿದ್ದಾಳೆ. ಆದರೆ ಈಗ ಆಗಿರುವ ಪರಿಣಾಮವೇನು?

ಓ ಮರೆತೇ  ಹೋಗಿತ್ತು ಕ್ಷಮಿಸಿ…ವ್ಯತ್ಯಾಸ ಯಾಕೆ ಎಂಬ ಪ್ರಶ್ನೆಯಿಂದಲೇ ನಮ್ಮ  ಫೆಮಿನಿಸ್ಟ್  ಸಂಘಟನೆಗಳು ಹುಟ್ಟಿದ್ದು ಅಲ್ವಾ?! ಅಂದಹಾಗೆ ಇದರ ಲಾಭ ಆಗಿದ್ದು  ಯಾರಿಗೆ?!

ಮಹಾನಗರಿಯಲ್ಲಿ  ಪಟ್ಟಿ  ಮಾಡಬಹುದಾದಷ್ಟು  ಐಷಾರಾಮಿ ಹೋಟೆಲ್‌ಗಳಿವೆ. ಅದರಲ್ಲಿ  ಅರ್ಧದಷ್ಟು  ಹೋಟೆಲ್‌ನಲ್ಲಿ  ಮೊಣಕಾಲನ್ನೂ ಆವರಿಸಿದ ಬಟ್ಟೆ  ತೊಟ್ಟ  ಚೆಂದದ ಹುಡುಗೀಯರು ಹಲವಾರು ಹುದ್ದೆ  ನಿಭಾಯಿಸುತ್ತಿದ್ದಾರೆ. ಇಲ್ಲಿ  ‘ಆತಿಥೋದ್ಯಮ’ ಎಂಬ ಪದವಿಗಿಂತ ಮೊಣಕಾಲಿಗಿಂತ ಚಿಕ್ಕದಾದ ಬಟ್ಟೆ  ತೊಡುವುದೇ ಮುಖ್ಯವಾದ ವಿಷಯ. ಅದಕ್ಕೆ  ಒಪ್ಪದವರಿಗೆ ಕೆಲಸವಿಲ್ಲ.

ಬಹುತೇಕ ಕಂಪನಿಗಳು ಸಾರ್ವಜನಿಕ ಸಂಪರ್ಕ ಅಕಾರಿ, ಪತ್ರಿಕಾ ಸಂಪರ್ಕ ಅಕಾರಿಗಳನ್ನು ನೇಮಿಸಿಕೊಳ್ಳುತ್ತವೆ. ೩೫ರ ಪ್ರಾಯದ ಒಳಗಿನ ಚೆಂದದ, ಚೆಲ್ಲು, ಚೆಲ್ಲು  ಮಾತನಾಡುವ ಹುಡುಗಿಗೆ ಮಾತ್ರ ಆದ್ಯತೆ. ೪೦ರ ಪ್ರಾಯದ ಆಂಟಿಯರಿಗೆ ಅವಕಾಶವಿಲ್ಲ. ವಯಸ್ಸು ಆಗುತ್ತಿದ್ದಂತೆ ಆ ಚೆಂದದ ಹುಡುಗಿಗೂ ಗೇಟ್ ಪಾಸ್ ಲಭ್ಯ. ಹಾಗಾಗಿಯೇ ಅವುಗಳು ಕೂತು ಊಟ ಮಾಡಲು ಸಾಕಾಗುವಷ್ಟು  ಸಂಬಳ, ನಾನಾ ಬಗೆಯ ಸೌಕರ್ಯ ಒದಗಿಸುವುದು. ಅಷ್ಟೆಲ್ಲ  ಸಿಗಬೇಕಾದ್ರೆ ಮೊಣಕಾಲಿಗಿಂತ ಮೇಲಿನ ಡ್ರೆಸ್  ಹಾಕಿದರೆ, ಚೆಲ್ಲು, ಚೆಲ್ಲಾಗಿ ಹಲ್ಲು  ಕಿರಿದರೆ ಆಗುವ ನಷ್ಟವಾದರೂ ಏನು ಅಲ್ವಾ?! ಅಡುಗೆ ಮನೆಯಲ್ಲಿ  ಸೌಟು  ಹಿಡಿದ್ರೆ  ಇಷ್ಟೆಲ್ಲ  ಸೌಕರ್ಯ ಸಿಗತ್ತಾ?!

ಈ ಟ್ರೆಂಡ್ ಇವತ್ತು ಮಾಧ್ಯಮವನ್ನೂ ಆವರಿಸಿದೆ. ವಿಶೇಷವಾಗಿ ಆಂಗ್ಲ  ಭಾಷೆಯ ವಾಹಿನಿಗಳಲ್ಲಿ  ಸೌದಂರ್ಯವೇ ಮುಖ್ಯವಾದ ಅರ್ಹತೆ.  ಪ್ರತಿ ಎಂಎನ್‌ಸಿ ಕಂಪನಿಯಲ್ಲಿ  ಸ್ವಾಗತಕಾರಿಣಿಯಾಗಿ ಹುಡುಗಿ/ಹುಡುಗ ಇರುತ್ತಾರೆ. ವಿಮಾನದಲ್ಲೂ  ಇದೇ ರೀತಿಯ ವ್ಯವಸ್ಥೆಯಂತೆ. ನಾನಿನ್ನು  ವಿಮಾನ ಹತ್ತಿಲ್ಲ. ಹಾಗಾಗಿ ಆ ಕುರಿತು ಮಾತಿಲ್ಲ.

ನಾನಿಲ್ಲಿ  ಹುಡುಗರಿಗೆ ಅವಕಾಶ ಸಿಗುತ್ತಿಲ್ಲ  ಎಂಬ ದಾಟಿಯಲ್ಲಿ  ಮಾತನಾಡುತ್ತಿಲ್ಲ. ನೈಜವಾಗಿ ಅರ್ಹತೆ ಇದ್ದವನು ಅವಕಾಶ ಪಡದೇ ಪಡೆಯುತ್ತಾನೆ ಎಂಬುದು ನನ್ನ  ನಿಲುವು. ಹುಡುಗಿಯ ಸ್ಥಿತಿಯ ಕುರಿತು, ಹುಡುಗಿ ಬಳಕೆಯಾಗುತ್ತಿರುವ ಪರಿಯ ಕುರಿತಾಗಿ ಹೇಳುತ್ತಿರುವೆ ಅಷ್ಟೆ. ನಾವು ‘ಸ್ತ್ರೀ’ಗೆ ವಿಶೇಷ ಗೌರವ ಕೊಡುವ ಸಂಪ್ರದಾಯದವರು. ಆಕೆ ಒಂದು ಮಗುವಿಗೆ ಮೊದಲ ಗುರು. ಒಂದು ಮಗುವಿನಿಂದ ಒಂದು ಸಮಾಜ. ಹಾಗಾಗಿ ಸಮಾಜಕ್ಕೂ ಆಕೆಯೇ ಮೊದಲ ಗುರು. ಹಾಗಾಗಿ ನಮ್ಮಲ್ಲಿ  ತಾಯಿಗೆ ಪೂಜನೀಯ ಸ್ಥಾನ. ತಾಯಿಯೇ ಹೆಂಡ ಕುಡಿಯುತ್ತಾಳೆ ಎಂದರೆ, ಆ ಮನೆಯ ಪರಿಸ್ಥಿತಿಯನ್ನು  ಒಮ್ಮೆ  ಕಲ್ಪಿಸಿಕೊಂಡು ನೋಡಿ. ಆ ಮನೆಯಲ್ಲಿ  ಹುಟ್ಟುವ ಮಗು ಏನಾಗಬಹುದು ಎಂದು ಆಲೋಚಿಸಿ. ತಂದೆ ಹೆಂಡ ಕುಡಿಯುವುದು ಹಲವಾರು ಕುಟುಂಬಗಳಲ್ಲಿ  ಸಹಜ. ಗಂಡು  ಮಾಡುವುದನ್ನು ನಾನ್ಯಾಕೆ ಮಾಡಬಾರದು ಎಂದು ಈ ವಿಚಾರದಲ್ಲೂ  ವಾದಿಸುವವರಿಗೆ…ಯಾಕೆ ಮಾಡಬಾರದಾಗಿತ್ತು ಎಂಬುದು ನಿಮ್ಮ  ಮಕ್ಕಳು ಬೆಳೆದ ನಂತರ ನಿಮಗೆ ಅರಿವಾಗುತ್ತದೆ ಎಂಬುದಷ್ಟೇ  ಉತ್ತರ.

ಇನ್ನೂ ‘ಶೀಲ’ ಎಂಬುದು ಮನಸ್ಸಿಗೆ ಸಂಬಂಸಿದ್ದ  ಅಥವಾ ದೇಹಕ್ಕಾ  ಎಂಬುದು ನನಗಂತೂ ಗೊತ್ತಿಲ್ಲ. ಆದರೆ ನಮ್ಮ  ಸಮಾಜದಲ್ಲಿ  ಶೀಲ ಕೂಡ ಗಂಭೀರ ವಿಚಾರ. ಹುಡುಗರು ಯಾರ ಜತೆಗೆ ಬೇಕಾದರೂ ಮಲಗಬಹುದು, ನಾವು…ಖಂಡಿತಾ ನೀವು ಮಲಗುತ್ತೀರಾ ಎಂದಾದರೆ, ಕಾತುರತೆಯಿಂದ ಕಾದು ಕುಳಿತವರು ಬಹಳಷ್ಟು  ಮಂದಿ ಇದ್ದಾರೆ. ಚರ್ಮ ಸುಕ್ಕುಗಟ್ಟುವರೆಗೂ ನಿಮಗೆ ಸಾಕಷ್ಟು  ಅವಕಾಶವಿದೆ! ಆವತ್ತಿನ ದೇವದಾಸಿ ಪದ್ದತಿ, ಇವತ್ತು ‘ಬಾಯ್‌ಫ್ರೆಂಡ್’ ಸಂಸ್ಕೃತಿಯಾಗಿ ಬದಲಾಗಿದೆ…ಅಲ್ಲಲ್ಲ…ಹೈಟೆಕ್ ಆಗಿದೆ! ಹುಡುಗರ ಜತೆ ಸುತ್ತುವ, ಬೀದಿ ಬದಿಯಲ್ಲಿ  ಬೈಕ್ ನಿಲ್ಲಿಸಿಕೊಂಡು ‘ಲವ್’ ಎಂಬ ಹೆಸರಲ್ಲಿ  ಹರಟೆ ಹೊಡೆಯುವ ೨-೩ ಹುಡುಗಿಯರನ್ನು ಒಂದೂವರೆ ವರ್ಷಗಳ ಸುಮ್ಮನೆ ಗಮನಿಸಿ. ಆಕೆ ಕನಿಷ್ಟ  ೩ ಬಾಯ್‌ಫ್ರೆಂಡ್‌ಗಳನ್ನು ಬದಲಿಸುತ್ತಿರುತ್ತಾಳೆ. ಆಕೆ ಬದಲಿಸುತ್ತಾಳೋ ಅಥವಾ ಹುಡುಗ ಆಕೆಯನ್ನು ಬದಲಿಸುತ್ತಾನೋ ಎಂಬುದು ನನಗಂತೂ ಗೊತ್ತಿಲ್ಲ.  ಇದು ತಮಾಷೆಗೆ ಹೇಳಿದ್ದಲ್ಲ. ನಮ್ಮ ಮನೆ ಬಳಿಯಿರುವ ಹುಡುಗಿಯರ ಪಿ.ಜಿ ನೋಡಿದ ನಂತರ ನಿಮಗೆ ಈ ಪ್ರಯೋಗದ ಕುರಿತು ಹೇಳುತ್ತಿರುವೆ. ದುಡ್ಡು  ಖರ್ಚು ಮಾಡಲು ಹುಡುಗ ಸಿದ್ಧನಿದ್ದರೆ, ಹುಡುಗಿ ಸುಲಭವಾಗಿ ಸಿಗುತ್ತಾಳೆ ಎಂಬುದು ನನಗೆ ಅನ್ನಿಸಿದೆ. ವೆಶ್ಯಾ ಗೃಹಗಳಿಗೆ ಹೋಗಿ ಭಯದಲ್ಲಿ  ಮಜಾ ತೆಗೆದುಕೊಳ್ಳುವುದಕ್ಕಿಂತ, ಇದೇ  ಸುಲಭ ಎಂದು ಮಹಾನಗರಿಯ ಸಾಕಷ್ಟು  ಹುಡುಗರು ನಿರ್ಧರಿಸಿದಂತಿದೆ!

ಮನೆ ಪಕ್ಕದ ಪಿ.ಜಿ ತೋರಿಸಿದಾಗ ರೂಮಿನ ಗೆಳೆಯ ರಾಜಾರಾಮ, ನಾನಂತೂ ಕೆಲಸದಲ್ಲಿ  ಇರೋ ಹುಡುಗಿಯನ್ನ ಮದ್ವೆ ಆಗಲ್ಲ  ಅನ್ನುತ್ತಿದ್ದ. ಮಹಾನಗರಿಯ ಹುಡುಗಿಯನ್ನು ಇವತ್ತು ಸಾಕಷ್ಟು  ಪ್ರಜ್ಞಾವಂತ ಹುಡುಗರು ತಿರಸ್ಕರಿಸುವ ಮಟ್ಟಕ್ಕೆ ನಮ್ಮ  ವ್ಯವಸ್ಥೆ ಬಂದು ನಿಂತಿದೆ. ಪಟ್ಟಣ್ಣ  ಸೇರಿದ ಹುಡುಗಿಗೆ ಎಷ್ಟು  ಜನರ ಜತೆ ಸಂಬಂಧ ಇರಬಹುದು ಎಂದು ಅನುಮಾನದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.  ಕೆಲಸ, ಹಣದ ಅನಿವಾರ್ಯತೆ, ಸ್ವತಂತ್ರ್ಯ…ಇವೆಲ್ಲವೂ ನಿಮ್ಮ  ವೈಯಕ್ತಿಕ ವಿಚಾರ. ನಾನಿಲ್ಲಿ  ಸಮಾಜದ ಸ್ಥಿತಿಯನ್ನು ಹೇಳಿದ್ದೇನೆ ಅಷ್ಟೆ. ಹಾಸ್ಯ, ಗಂಭೀರವಾಗಿ ಲೇಖನ ಉದ್ದವಾಗಿದೆ. ನೀವು ಸಂಸ್ಕೃತಿಗೆ ಬದ್ಧರಾಗಿಯೇ ಇರಬೇಕು ಎಂಬ ಹಠ ನನ್ನದೇನಲ್ಲ. ಯಾಕೆಂದರೆ ಅಮ್ಮ  ಹೇಳಿದಂತೆ ನಾನೇನು ಈ ವರ್ಗದ ಯಾವ ಹುಡುಗಿಯನ್ನೂ ಮದ್ವೆಯಾಗಬೇಕಿಲ್ಲ. ಕಂಡವರ ಮನೆ ಹೆಣ್ಣು ಮಕ್ಕಳು ಏನಾದರೂ ನನಗೇನು ತಲೆಬಿಸಿಯಿಲ್ಲ. ಇದು ನನ್ನ ಅಂತಿಮ ನಿರ್ಧಾರ.

‘ಅಣಾ ಬೆಂಗಳೂರಿಗೆ ಬರ‍್ಲಾ, ಎಂಥಾದ್ರು ಜಾಬ್ ಇದ್ದ’ ಅಂತಾ ಊರಿನ ಹುಡುಗಿಯೊಬ್ಬಳು ಮುಗ್ಧವಾಗಿ ಕೇಳಿದ್ದಕ್ಕೆ ಇಷ್ಟೆಲ್ಲ  ಬರೆಯಬೇಕಾಯಿತು…

(ವಿ.ಸೂ:-ಮಹಾನಗರಿಯ ಹುಡುಗಿಯರೆಲ್ಲ ಹೀಗೆ ಎಂಬ ಅರ್ಥವಲ್ಲ. ಆದರೆ, ಬಹುತೇಕರು ಹೀಗಾಗುತ್ತಿದ್ದಾರೆ ಎಂಬುದನ್ನು ಈ ಲೇಖನ ಹೇಳಲು ಹೊರಟಿದೆ…)

Read Full Post »