Feeds:
ಲೇಖನಗಳು
ಟಿಪ್ಪಣಿಗಳು

Archive for ಜುಲೈ, 2012

ಅಣ್ಣಾ ಹಜಾರೆ ಬೀದಿಗಿಳಿಯುತ್ತಾರೆ. ದೇಶಕ್ಕೆ ದೇಶವೆ ಬದಲಾಗಿ ಹೋಗುತ್ತೆ. ಪ್ರಬಲ ಲೋಕಪಾಲ್‌ಗಾಗಿ ನಮ್ಮ ಹೋರಾಟ. ನೀವು ಬನ್ನಿ, ಬೆಂಬಲಿಸಿ…ಹಾಗಂತ ಹೇಳಿಕೊಂಡು ತಿರುಗಾಡಿದವರು ಬಹಳ ಮಂದಿ. ಫೇಸ್‌ಬುಕ್‌ನಲ್ಲಿ, ಇ-ಮೇಲ್‌ನಲ್ಲಿ ಎಲ್ಲ ಅಣ್ಣಾ ಹೋರಾಟದ್ದೆ ಚರ್ಚೆ. ಅಷ್ಟು ಸಾಲದು ಎಂಬಂತೆ ಮೊಬೈಲ್‌ಗೂ ಹಜಾರೆ ಹೋರಾಟದ ಮೆಸೇಜ್. ಇವನ್ನೆಲ್ಲ ನೋಡಿದ ನಂತರ ನನಗನ್ನಿಸಿದ್ದನ್ನು  ಈ  ಲೇಖನದಲ್ಲಿ ಬರೆದೆ.

ಊಹೂಂ, ಅಣ್ಣಾ ಹೋರಾಟದಿಂದ ಆಡಳಿತ ವ್ಯವಸ್ಥೆಯಲ್ಲಿ ಯಾವೊಬ್ಬ ಮಂತ್ರಿಯ ಒಂದು ಕೂದಲು ಅಲ್ಲಾಡಲಿಲ್ಲ. ಯಾವೊಬ್ಬ ರಾಜಕಾರಣಿಯೂ ರಾಜೀನಾಮೆ ಕೊಡಲಿಲ್ಲ. ಬದಲಾಗಿ ಅಣ್ಣಾ ತಣ್ಣಗಾಗಿ ಬಿಟ್ಟರು. ಅಣ್ಣಾ ಹಿಂದೆ ಹೋದ ಒಂದಷ್ಟು ಮಂದಿ, ಫ್ರೀಡಂ ಪಾರ್ಕ್‌ನಲ್ಲಿ ಕುಳಿತ ಒಂದಷ್ಟು ಮಂದಿ ಹೊಸ ಅನುಭವ ಪಡೆದರು!

ಈಗ ಮಂಗಳೂರು ಘಟನೆಯ ಕಾವು. ೨೦೦೯ರ ಪಬ್ ಗಲಾಟೆಯಾದಾಗಲೂ ಇದೇ ರೀತಿ ಕಾವಿತ್ತು. ಹೆಣ್ಣು ಮಕ್ಕಳ ಮೇಲೆ ಕೈಮಾಡಿದವರನ್ನೆಲ್ಲ ಗಲ್ಲಿಗೇರಿಸುವವರೆಗೂ ಬಿಡುವುದಿಲ್ಲ ಅನ್ನೊಹಾಗಿತ್ತು. ಆಫ್‌ಕೋರ್ಸ್ ನಾನು ಆ ಘಟನೆಯನ್ನು ಸಮರ್ಥಿಸಿ ಬರೆದಿದ್ದೆ. ಯಾಕಂದರೆ ಆವತ್ತು ದಾಳಿಯಾದ ಜಾಗ, ಸ್ಥಿತಿ ಎಲ್ಲವೂ ಬೇರೆ.

ಈ ಸಲದ ದಾಳಿ ಸಮರ್ಥನೀಯವಲ್ಲ ಎಂಬುದು ನಿಜ. ಆದರೆ ಯಾರದ್ದೊ ಪಸರ್ನಲ್ ಪಾರ್ಟಿಗೆ ಹೋಗಿ ದಾಳಿ ಮಾಡಲಾಗಿದೆ ಎಂಬುದು ಸತ್ಯವಲ್ಲ ಅನ್ನಿಸುತ್ತಿದೆ. ಹಾಗೆ ದಾಳಿ ಮಾಡಿವುದಿದ್ದರೆ ಅದೆಷ್ಟೊ ಪಾರ್ಟಿಗಳು ದಿನನಿತ್ಯ ನಗರಗಳಲ್ಲಿ ಸಿಗುತ್ತವೆ. ವೈಯಕ್ತಿಕ ಕಾರಣಕ್ಕೊ, ಇನ್ನ್ಯಾವುದೊ ಕಾರಣಕ್ಕೆ ದಾಳಿ ನಡೆದಿದೆ. ಅದೊಂದು ಹೋಮ್ ಸ್ಟೆ. ಬಹುಶಃ ಹಿಂದೂ ಜಾಗರಣ ವೇದಿಕೆಯವರು ನಂದಿ ಬೆಟ್ಟದಲ್ಲಿ, ಬಂಡಿಪುರದಲ್ಲಿ ಇರುವ ಹೋಮ್‌ಸ್ಟೆಗಳು, ಐಷಾರಾಮಿ ಲಾಡ್ಜ್‌ಗಳ ಒಳಹೊಕ್ಕು ನೋಡಿಲ್ಲ! ಅಥವಾ ಈ ಜಾಗದಲ್ಲೆಲ್ಲ ಹಿಂದು ಜಾಗರಣ ವೇದಿಕೆಯಿಲ್ಲ!

ಪರವೊ, ವಿರೋಧವೊ ಒಂದು ಅಲೆ ಎದ್ದಿರುವುದು ನಿಜಕ್ಕೂ ಸ್ವಾಗತಾರ್ಹ. ಆದರೆ ಈ ಅಲೆ ಎಷ್ಟು ದಿನ ಎಂಬುದು ಮುಖ್ಯ. ಗುಂಪಿನಲ್ಲಿ ಗೋವಿಂದ ಅಂದವರ ಕಥೆಯಿದು. ದಾಳಿಯಾದ ಮೂರು, ನಾಲ್ಕು ಅಥವಾ ಐದು ದಿನ ಈ ಅಲೆ ಜೋರಾಗಿ ಇರುತ್ತೆ. ಆರನೆ ದಿನಕ್ಕೆ ಎಲ್ಲರಿಗೂ ಎಲ್ಲವೂ ಮರೆತು ಹೋಗಿರುತ್ತೆ. ಯಾಕಂದ್ರೆ ದಾಳಿಯಲ್ಲಿ ನಮ್ಮ ಅಕ್ಕ,ತಂಗಿ, ಒಡಹುಟ್ಟಿದವರು ಇಲ್ಲವಲ್ಲ!

ಕೇವಲ ಮಂಗಳೂರು ದಾಳಿಗೆ ಮೀಸಲಾದ ಮಾತು ಇದಲ್ಲ. ಮುಂಬೈ ಬಾಂಬ್ ಸ್ಪೋಟವಾದಗಲೂ ನಮಗೆ ಅದೇ ಉತ್ಸಾಹ. ಕಸಬ್ ಹಿಡಿದಾಗಲೂ ನಮ್ಮದು ಅದೇ ಅಬ್ಬರ. ಫೇಸ್‌ಬುಕ್‌ಗೆ ಕಾಲಿಟ್ಟರೆ ಕೆಲವರಂತೂ ಜಗತ್ತೆ ಮುಳುಗಿ ಹೋಯಿತು ಅನ್ನುವ ಹಾಗೆ ಆಡುತ್ತಿದ್ದಾರೆ. ಆಫ್‌ಕೋರ್ಸ್ ಅವರ ಆ ಅಬ್ಬರದಿಂದ ಏನಾದರೂ ಆಗುವುದಾದದರೆ ಅಥವಾ ಏನಾದರೂ ಆಗುವವರೆಗೂ ಅವರು ಅಬ್ಬರಿಸುವುದಾದರೆ ಖಂಡಿತಾ ಅದು ಸ್ವಾಗತಾರ್ಹ.

ದೇಶಕ್ಕೆ ಬಾಂಬ್ ಇಟ್ಟ ಕಸಬ್‌ಗೆ ಇನ್ನೂ ಏನು ಮಾಡಲು ನಮ್ಮ ಹಣೆಬರಹಕ್ಕೆ ಸಾಧ್ಯವಾಗಿಲ್ಲ. ಬೀದಿಯಲ್ಲಿ ಹುಡುಗಿಯರನ್ನು ರೇಪ್ ಮಾಡಿ ರಾಜಾರೋಷವಾಗಿ ಬದುಕುತ್ತಿರುವವರು ಇಲ್ಲಿ ಇದ್ದಾರೆ. ಅಂಥದರಲ್ಲಿ ರೈಲಿನಿಂದ ಒಂದು ಹುಡುಗಿಯನ್ನು ಎಸೆದವರು, ಯಾವುದೊ ಪಬ್ ಮೇಲೆ ದಾಳಿ ಮಾಡಿದವರಿಗೆ ಏನು ಆಗಬಹುದು. ನೂರಾರು ಎಕರೆ ಭೂಮಿ ನುಂಗಿದವರಿಗೆ ನಮ್ಮಲ್ಲಿ ಶಿಕ್ಷೆಯಿಲ್ಲ. ೨-೩ ದಿನ ಜೈಲಿನಲ್ಲಿಟ್ಟು ಕೊನೆಗೆ ನಾಲ್ಕನೆ ದಿನ ಜಾಮೀನು ಸಿಕ್ಕಿತು ಎಂಬ ಸುದ್ದಿ. ಐದನೇ ದಿನಕ್ಕೆ ಅದು ಹಳತು. ಮತ್ತೆ ಅದು ನೆನಪಾಗುವುದು ಕೋರ್ಟ್‌ನಲ್ಲಿ ವಿಚಾರಣೆಗೆ ಬಂದಾಗ. ಅದರ ತೀರ್ಪು ಬರುವುದರೊಳಗೆ ಆತನೇ ಬದುಕಿರೋದಿಲ್ಲ!

ಬೇಕಾದರೆ ಇವತ್ತಿನಿಂದ ಲೆಕ್ಕವಿಟ್ಟು ನೋಡಿ ಮಂಗಳೂರು ಘಟನೆಯ ಕಾವು ನಮ್ಮಲ್ಲಿ ಎಷ್ಟು ದಿನ ಉಳಿಯುತ್ತೆ ಅನ್ನೋದನ್ನ! ಹೊಡೆದವರಿಗೆ ಏನಾಗುತ್ತೆ, ಹೊಡೆಸಿಕೊಂಡವರು ಏನಾಗುತ್ತಾರೆ ಅನ್ನೋದನ್ನ! ಏನು ಆಗಲಿ, ಬಿಡಲಿ ಮುಂದಿನ ದಾಳಿಯಲ್ಲಿ ಮತ್ತೆ ಈಸಲದ ದಾಳಿ ಬಾಕ್ಸ್ ಐಟಂ ಆಗಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತೆ ಅನ್ನೊದು ದಿಟ.

Read Full Post »

ಬರೆಯಲಿಕ್ಕೆ ಅಂತಾ ವರ್ಡ್‌ಪ್ರೆಸ್‌ನ ೩೦*೪೦ ಸೈಟ್‌ನಲ್ಲಿ ನಿರ್ಮಿಸಿಕೊಂಡ ಪುಟಾಣಿ ಸೂರಿಗೀಗ ೪ ವರ್ಷ ತುಂಬಿದೆ. ಜೊತೆಗೆ ನಾನು ಬೆಂಗಳೂರಿಗೆ ಬಂದು ಬರವಣಿಗೆಯಲ್ಲಿ ಬದುಕು ಕಟ್ಟಿಕೊಂಡು ೫ ವರ್ಷ ಪೂರ್ಣಗೊಂಡಿದೆ. ೫ ವರ್ಷಗಳಲ್ಲಿ ಸಾಕಷ್ಟು ಬರೆದಿರುವೆ. ಆ ಕ್ಷಣಕ್ಕೆ ಅನ್ನಿಸಿದ್ದು, ತೋಚಿದ್ದು ಎಲ್ಲವಕ್ಕೂ ಅಕ್ಷರ ರೂಪ ಸಿಕ್ಕಿದೆ. ನನ್ನ ಪಾಲಿಗೆ ಬರವಣಿಗೆ ಅನ್ನೋದು ಒಂಥರ ಏಕಾಂಗಿತನ ಹೋಗಲಾಡಿಸುವ ಗೆಳೆಯನಿದ್ದಂತೆ…ಹೀಗೆ ಬರೆದಿರುವುದರಲ್ಲಿ ನೀವು ಒಂದಷ್ಟನ್ನು ಇಷ್ಟಪಟ್ಟಿದ್ದೀರಿ. ಪ್ರತಿಕ್ರಿಯಿಸಿರುವಿರಿ. ಕೆಲವಷ್ಟು ಇಷ್ಟವಾಗದೆ ಇರಬಹುದು. ಒಬ್ಬರಿಗೆ ಇಷ್ಟವಾಗೋದು ಮತ್ತೊಬ್ಬರಿಗೆಇ ಷ್ಟವಾಗಬೇಕು ಅಂತೇನಿಲ್ಲ. ಒಂದು ಸಲ ತಿಂದ ತಿಂಡಿ, ಮತ್ತೊಂದು ಸಲ ಅಷ್ಟೇ ರುಚಿ  ನೀಡಬೇಕು ಅನ್ನೋದಕ್ಕು ಸಾಧ್ಯವಿಲ್ಲ.  ನನ್ನ ವಿಹಾರದಲ್ಲಿ ಜೊತೆಯಾದ ನಿಮ್ಮೆಲ್ಲರಿಗೂ ಥ್ಯಾಂಕ್ಸ್. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ…

Read Full Post »