ಬದುಕಿನಲ್ಲೂ ಯಾವುದಕ್ಕಾದ್ರೂ ಒಂದು ಮಿತಿ ಅಂತ ಇರುತ್ತೆ. ಒಂದಷ್ಟು ದಿನ ಅಥವ ತಿಂಗಳು ಅಥವ ವರ್ಷಕ್ಕೆ ಎಲ್ಲವೂ ಬೇಜಾರು ಬರುತ್ತೆ. ಬದಲಾವಣೆ ಬೇಕು ಅನ್ನಿಸುತ್ತೆ. ಹೊಸತನವನ್ನು ಮನಸ್ಸು ಬಯಸುತ್ತೆ…೬-೮ ವರ್ಷ ಆದ್ರೂ ಬೇಜಾರು ತರಿಸದೇ ಇರೋದು ಅಂದ್ರೆ ಬರವಣಿಗೆ. ನಾನು ನನ್ನ ಚಿಂತನೆಯ ತೆವಲುಗಳನ್ನು ತೀರಿಸಿಕೊಳ್ಳಲು ಕಟ್ಟಿಕೊಂಡ ಅಕ್ಷರ ವಿಹಾರಕ್ಕೆ ೫ ವರ್ಷ ತುಂಬಿ ಹೋಗಿದೆ. ೫ ವರ್ಷದಿಂದ ಬರಿತಾನೆ ಇದೀನಾ ಅನ್ನಿಸ್ತು ಒಂದ್ಸಲ. ಬಹುಶಃ ಬೇಜಾರಿಲ್ಲದೆ ಇಷ್ಟು ದೀರ್ಘವಾಗಿ ಮಾಡಿದ ಕಸುಬು ಅಂದ್ರೆ ಬರವಣಿಗೆ ಮಾತ್ರ! ಬರವಣಿಗೆಯೇ ಬದುಕು ಆಗಿರೋದರಿಂದ ಇದು ಅನಿವಾರ್ಯವಾ ಗೊತ್ತಿಲ್ಲ.
ಆರಂಭದಲ್ಲಿ ಬ್ಲಾಗು, ಬರಹ ಅಂದ್ರೆ ಸಿಕ್ಕಪಟ್ಟೆ ಕ್ರೇಜು ಇತ್ತು. ಯಾವುದಾದರೂ ಪತ್ರಿಕೆಯಲ್ಲಿ ನನ್ನ ಲೇಖನ ಪ್ರಕಟವಾಗಿದೆ ಅಂದ್ರೆ ಬಹಳ ಖುಷಿ. ಆದ್ರೆ ಈಗ ಹಾಗಲ್ಲ. ಅದಕ್ಕೆ ಹೇಳಲಾಗದ ಹಲವು ಕಾರಣಗಳಿವೆ! ಆದ್ರೂ ಬರೆಯುವ ಉತ್ಸಾಹ ಮಾತ್ರ ಕುಗ್ಗಿಲ್ಲ. ನೀವು ಹೀಗೆ ಬಂದು ಹಾಗೆ ಓದ್ತಾ ಇರಿ…ನಾನು ಬರೀತಾ ಇರ್ತಿನಿ. ಅಕ್ಷರ ವಿಹಾರದ ಓದುಗರೆಲ್ಲರಿಗೂ ಥ್ಯಾಂಕ್ಸ್…