ರಾತ್ರಿ ಆಗಸದಲ್ಲಿ
ಮೋಡಗಳ ಕಪ್ಪು -ಬಿಳುಪಿನಾಟ
ನಡು-ನಡುವೆ
ನಕ್ಷತ್ರಗಳ ಮಲ್ಲಿಗೆಯಂಥ ನಗು
ಬಿದಿಗೆ ಚಂದ್ರಮ
ಸುಮ್ಮನೆ ನೋಡುತ್ತಿದ್ದಾನೆ ಗುಮ್ಮನಂತೆ
ನಡು-ನಡುವೆ ನಗುತ್ತಿದ್ದಾನೆ
ಏನೋ ಅರ್ಥವಾದಂತೆ!
ಇದೆಲ್ಲ ಕನಸೋ-ನನಸೋ
ನನಗೆ ಅರ್ಥವಾಗುತ್ತಿಲ್ಲ
ಅರ್ಥವಾದರೂ
ಅರ್ಥವಾಯಿತು ಎಂದು ಹೇಳಲಾಗುತ್ತಿಲ್ಲ!
ಕೋಳಿಯ ಕೂಗು ಕಿವಿಗಡಚುತ್ತಿತ್ತು
ನಕ್ಕಿದು ಚಂದ್ರನಲ್ಲ
ಸೂರ್ಯ ಎಂದು ಗೊತ್ತಾದಾಗ
ಬೆಳಗಾಗಿಯೇ ಹೋಗಿತ್ತು!
ನಿಮ್ಮದೊಂದು ಉತ್ತರ