ಪೋರ್ನ್ ಬ್ಯಾನ್ ರಾಷ್ಟ್ರೀಯ ವಿಪತ್ತು ಎಂಬಂತೆ ಕಳೆದ ಕೆಲವು ದಿನಗಳಿಂದ ಚರ್ಚೆಯಾಗುತ್ತಿದೆ. ಫೇಸ್ಬುಕ್, ವಾಟ್ಸಪ್ನಲ್ಲಿ ಒಂದಷ್ಟು ಜೋಕುಗಳು ಹರಿದಾಡುತ್ತಿವೆ. ಪರ-ವಿರೋಧದ ನಿಲುವುಗಳು ಇದ್ದೇ ಇದೆ! ನೀವು ಯಾವುದೇ ಸೆಕ್ಸ್ ವೀಡಿಯೋ ನೋಡಿದ್ರೂ, ಅದು ಸಹಜವಾಗಿದ್ದಲ್ಲ, ಸಂಪಾದನೆಗೊಂಡ ಆವೃತಿ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತೆ. ಕ್ಯಾಮೆರ ಫ್ರೇಮ್ಗಳು, ಬದಲಾಗುವ ಸ್ಥಳಗಳು, ಮ್ಯೂಸಿಕ್ನಲ್ಲಿನ ವ್ಯತ್ಯಯಗಳು ಎಲ್ಲವೂ ಕೂಡ ಇದೊಂದು ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋನಂತೆ ಎಡಿಟೆಡ್ ಆವೃತಿ ಮತ್ತು ಪೂರ್ತಿ ಸ್ಕ್ರಿಪ್ಟೆಡ್ ಎಂಬುದನ್ನು ಸೂಚಿಸುತ್ತದೆ.
ಜಗತ್ತಿಗೆ ಚಲಿಸುವ ಚಿತ್ರಗಳ ಪರಿಕಲ್ಪನೆ ಬಂದಾಗಿನಿಂದ ಈ ಪೊರ್ನೊಗ್ರಫಿಯ ಇತಿಹಾಸ ಸಿಗುತ್ತೆ. ಅಂದ್ರೆ ೧೮೯೦ರ ದಶಕದಿಂದಲೆ ಈ ಉದ್ಯಮ ಆರಂಭವಾಗಿದ್ದು ಎಂಬ ಅನುಮಾನದಿಂದ ಗೂಗಲ್ನಲ್ಲಿ ಇಂಥ ಚಿತ್ರಗಳು ಎಲ್ಲಿ ತಯಾರಾಗುತ್ತವೆ, ಹೇಗೆ ತಯಾರಾಗುತ್ತವೆ, ಇವುಗಳ ಹಕ್ಕಿಕತ್ತು ಏನು ಎಂಬ ಕುರಿತು ಒಂದಷ್ಟು ದಿನದ ಹಿಂದೆ ಸುಮ್ಮನೆ ಜಾಲಾಡಿದ್ದೆ.
ಈ ಪೋರ್ನ್ ವೀಡಿಯೋ ಉತ್ಪಾದಕ ಪ್ರೊಡೆಕ್ಷನ್ ಹೌಸ್ಗಳು ಮುಖ್ಯವಾಗಿ ಬೇರು ಬಿಟ್ಟಿರುವುದು ಯೂರೋಪ್ ಮತ್ತು ಅಮೆರಿಕದಲ್ಲಿ. ಒಂದು ಅಂದಾಜಿನ ಪ್ರಕಾರ ೨೦೧೨ರವೇಳೆಗೆ ಈ ನೀಲಿಚಿತ್ರ ಜಗತ್ತಿನ ವಾರ್ಷಿಕ ಆದಾಯ ೧೫-೨೦ ಶತಕೋಟಿ ಡಾಲರ್. ಅಮೆರಿಕದ ೨ ಪ್ರಮುಖ ವೆಬ್ಸೈಟ್ಗಳು ವರ್ಷಕ್ಕೆ ಸುಮಾರು ೪ ಶತಕೋಟಿ ಡಾಲರ್ನಷ್ಟು ವಹಿವಾಟು ನಡೆಸುತ್ತಿವೆ. ಅಲ್ಲಿಗೆ ಇದೊಂದು ವ್ಯವಸ್ಥಿತ ಉದ್ಯಮ ಎಂಬುದನ್ನು ಖಾತ್ರಿಪಡಿಸಿಕೊಂಡು ಇಂಟರ್ನೆಟ್ನಲ್ಲಿ ಜಾಲಾಡುತ್ತ ಹೋದಾಗ ನನಗೆ ಇಂಗ್ಲಿಷ್ನ ೨ ಅತ್ಯದ್ಭುತ ಲೇಖನ ಸಿಕ್ಕಿತ್ತು.
ಮುಖ್ಯವಾಗಿ ಅಮೆರಿಕದ ಸ್ಯಾನ್ ಫೆರ್ನಾಂಡೊ ವ್ಯಾಲಿ ಇಂಥ ಚಿತ್ರಗಳನ್ನು ಉತ್ಪಾದಿಸುವ ಅತಿ ಹೆಚ್ಚು ಪ್ರೊಡೆಕ್ಷನ್ ಹೌಸ್ಗಳನ್ನು ಹೊಂದಿರುವ ಅಡ್ಡ. ಅಲ್ಲಿಗೆ ಭೇಟಿ ನೀಡುವ ಲೇಖಕಿಯೊಬ್ಬಳು ಅಲ್ಲಿನ ಇಡೀ ಜಗತ್ತನ್ನು ವಿವರಿಸಿ ಒಂದು ಅದ್ಭುತವಾದ ಲೇಖನ ಬರೆಯುತ್ತಾಳೆ. ಇಡೀ ಪೋರ್ನ್ ಜಗತ್ತು ಒಂದು ಹಾಲಿವುಡ್ ಸಿನಿಮಾ ಉದ್ಯಮದಂತೆ ಎಂಬುದನ್ನು ಆಕೆ ಬರೆಯುತ್ತಾಳೆ. ಅಲ್ಲೊಬ್ಬ ನಿರ್ದೇಶಕ ಇರುತ್ತಾನೆ, ಆತನಿಗೆ ಸಹಾಯಕರು ಇರುತ್ತಾರೆ. ಸ್ಕ್ರಿಪ್ಟ್ ಇರುತ್ತೆ. ಕಾಲ್ಶೀಟ್ ಕೊಟ್ಟ ಸಮಯಕ್ಕೆ ಪೋರ್ನ್ ಮಾಡೆಲ್ಗಳು ಬರುತ್ತಾರೆ. ಶೂಟಿಂಗ್ ಮುಗಿಸಿಕೊಂಡು ಹೋಗುತ್ತಾರೆ ಎಂಬುದರಿಂದ ಹಿಡಿದು ಯಾವ್ಯಾವ ಫ್ರೇಮ್ಗಳು ಎಲ್ಲಿ, ಹೇಗೆ ಶೂಟ್ ಆಗುತ್ತೆ ಎಂಬುದನ್ನು ಆಕೆ ವಿವರಿಸುತ್ತಾಳೆ.
ಇದಿಷ್ಟು ಕಾನೂನಿನ ಅಂಗೀಕೃತ ಚೌಕಟ್ಟಿನಲ್ಲಿ ನಡೆಯುವ ನೀಲಿ ಚಿತ್ರ ಉದ್ಯಮದ ಕಥೆ. ಅಂದ್ರೆ ಈ ಚಿತ್ರ ನಿರ್ಮಾಣ ಸಂಸ್ಥೆಗಳು ಅಮೆರಿಕ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತವೆ. ಇಲ್ಲಿ ಬರುವ ನಟ, ನಟಿ, ನಿರ್ದೇಶಕರೆಲ್ಲರಿಗೆ ಸಂಭಾವನೆ ಕೊಡುತ್ತವೆ. ಇಲ್ಲಿ ಕೆಲಸ ಮಾಡುವ ಎಲ್ಲರಿಗೂ ಇದೊಂದು ಹೊಟ್ಟೆ ಪಾಡಿನ ಉದ್ಯಮ. ಕನ್ನಡದಲ್ಲಿ ದಿನಕ್ಕೆ ೫೦ ಧಾರಾವಾಹಿಗಳು ಓಡುವಂತೆ ಅಲ್ಲಿಯೂ ದಿನಕ್ಕೆ ನೂರಾರು ಪೋರ್ನ್ ಚಿತ್ರಗಳ ಶೂಟಿಂಗ್ ನಡೆಯುತ್ತದೆ. ವೆಬ್ಸೈಟ್, ಡಿವಿಡಿ, ಪ್ರಿಂಟ್ ಮುಂತಾದ ಮಾಧ್ಯಮಗಳ ಮೂಲಕ ಅವು ಬಿತ್ತರಗೊಳ್ಳುತ್ತವೆ. ಅದ್ರಿಂದ ಸಂಸ್ಥೆ ಆದಾಯ ಗಳಿಸುತ್ತದೆ. ಹೀಗಾಗಿ ಇಲ್ಲಿ ದುಡ್ಡಿಗಾಗಿ ಅಥವಾ ಚಪಲ ತೀರಿಸಿಕೊಳ್ಳಲು ಇಷ್ಟ ಇದ್ದವರು ಮಾತ್ರ ಕೆಲಸ ಮಾಡುತ್ತಾರೆ.
ಆದರೆ ಇದೇ ಜಗತ್ತಿನ ಇನ್ನೊಂದು ಮುಖವಿದೆ. ಅದು ಮಾಫಿಯ ಜಗತ್ತು. ತೆರಿಗೆ ರಹಿತವಾಗಿ, ಕಾನೂನುಬಾಹೀರವಾಗಿ ನಡೆಯುವ ಜಗತ್ತಿದು. ಇಲ್ಲಿ ಹೆಣ್ಣುಮಗಳೊಬ್ಬಳಿಗೆ ಡ್ರಗ್ ನೀಡಿಯೋ, ಕಿಡ್ನಾಪ್ಮಾಡಿಯೋ, ಬೆದರಿಕೆಯಿಂದಲೊ ನೀಲಿ ಚಿತ್ರಗಳು ತಯಾರಾಗುತ್ತವೆ. ಯಾವುದೋ ಹೊಟೇಲ್ನಲ್ಲಿ, ಬಚ್ಚಲು ಮನೆಯಲ್ಲಿ ಸಿಸಿ ಕ್ಯಾಮೆರ ಇಟ್ಟು ಶೂಟಾದ ಅಸ್ಪಷ್ಟವಾದ, ಲೈಟಿಂಗ್ ಇಲ್ಲದ, ಎಡಿಟಿಂಗ್ ಇಲ್ಲದ ವೀಡಿಯೋಗಳು ಈ ಜಗತ್ತಿನಲ್ಲಿ ಸೃಷ್ಟಿಯಾಗುತ್ತವೆ! ಇದೊಂದು ಅಪಾಯಕಾರಿ ಪ್ರಪಂಚ. ಅನೇಕ ಹೆಣ್ಣುಮಕ್ಕಳ ಬದುಕನ್ನು ಬೀದಿಗೆ ತರುವ ಪ್ರಪಂಚ. ಇದ್ರಿಂದ ಸರ್ಕಾರಕ್ಕೆ ನಯಾ ಪೈಸೆ ಆದಾಯವೂ ಬರುವುದಿಲ್ಲ. ಅಮೆರಿಕ ಸರ್ಕಾರ ಇಂಥವರನ್ನು ಹಿಡಿದು, ಹಿಡಿದು ಬುಟ್ಟಿಗೆ ತುಂಬುತ್ತಿದೆ.
ನಾನು ಮೇಲೆ ಮಾತಾಡಿದ ಅಮೇರಿಕದ ಇಂಡಸ್ಟ್ರಿಯಂತೆ ಜಗತ್ತಿನ ಉಳಿದ ದೇಶಗಳ ಉದ್ಯಮವಿದೆ. ಆದ್ರೆ ನೀವು ಏಷ್ಯಾಕ್ಕೆ ಬಂದ್ರೆ ಅದೊಂಚೂರು ಭಿನ್ನವಾಗಿದೆ. ಇಲ್ಲಿ ಅನೇಕ ರಾಷ್ಟ್ರಗಳಲ್ಲಿ ದಟ್ಟ ದರಿದ್ರವಾದ ಬಡತನವಿದೆ ಮತ್ತು ಸಿಂಗಲ್ ಮಾಮ್, ಸೂಳೆಗಾರಿಕೆ ಎಂಬ ಸಂಸ್ಕೃತಿ ಹೆಚ್ಚಾಗಿದೆ. ಹೀಗಾಗಿ ಈ ಸಂಸ್ಕೃತಿಯವರು ಹೊಟ್ಟೆಪಾಡಿಗಾಗಿ, ದುಡ್ಡಿನ ಆಮಿಷಕ್ಕಾಗಿ, ಬದುಕಿನ ಅನಿವಾರ್ಯತೆಗಾಗಿ ನೀಲಿ ಚಿತ್ರ ಜಗತ್ತಿನೊಳಗೆ ಒಂದಾಗಿದ್ದಾರೆ.
ಇವಿಷ್ಟು ಹಾರ್ಡ್ಕೋರ್ ಪೋರ್ನ್ ಕಥೆ! ಭಾರತ ಇವತ್ತೊಂದು ಸಂಕೀರ್ಣ ಸ್ಥಿತಿಯಲ್ಲಿದೆ. ಸಹಸ್ರಮಾನದ ತಲೆಮಾರು ಅಥವಾ ಮಿಲೇನಿಯಂ ಜನರೇಷನ್ ಎಂದು ಕರೆಸಿಕೊಳ್ಳುವ ಇಂದಿನ ಯುವ ಸಮುದಾಯ ಒಂದು ರೀತಿ ಅತಂತ್ರ ಸ್ಥಿತಿಯಲ್ಲಿದೆ. ಆಕಡೆ ಪೂರ್ತಿಯಾಗಿ ಪಾಶ್ಚಾತ್ಯ ಸಂಸ್ಕೃತಿ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಈಕಡೆ ಭಾರತೀಯಯಾಗಿ ಉಳಿಯುವ ಇರಾದೆಯೂ ಇಲ್ಲ. ವೇಗಯುತವಾಗಿ ಐಷಾರಾಮಿತನ ಬರಬೇಕು, ಬದುಕನ್ನು ಎಂಜಾಯ್ ಮಾಡಿಬಿಡಬೇಕು ಎಂಬ ಚಪಲ. ಹಾಗಂತ ಪೂರ್ತಿಯಾಗಿ ಪಾಶ್ಚಾತ್ಯರಂತೆ ಅಪ್ಪ-ಅಮ್ಮ, ಗಂಡ, ಸಂಸಾರ, ಸಮಾಜವನ್ನು ಬಿಟ್ಟು ಏಕಾಂಗಿಯಾಗುವ ನಿಲ್ಲುವ ಧೈರ್ಯವಿಲ್ಲ( ನಮ್ಮಲ್ಲಿ ಬಹಳ ಜನಕ್ಕೆ ಪಾಶ್ಚತ್ಯರೆಲ್ಲ ಮೂರು ಬಿಟ್ಟವರಂತೆ ಬದುಕುತ್ತಾರೆ ಎಂಬ ಬಹುದೊಡ್ಡ ತಪ್ಪು ಕಲ್ಪನೆಯಿದೆ. ಶೇ. ೩೦-೪೦ರಷ್ಟು ಪಾಶ್ಚಾತ್ಯರು ಮಾತ್ರ ಹಾಗೆ ಬದುಕುವುದು. ಉಳಿದ ೬೦-೭೦ರಷ್ಟು ಮಂದಿ ಶುದ್ಧವಾಗಿ ಭಾರತೀಯರಂತೆ ಸಂಸಾರ, ಸಂಬಂಧ ಎಂಬ ಸಂಕೋಲೆಯಲ್ಲಿನ ಬದುಕನ್ನು ಇಷ್ಟಪಡುವವರು. ಅವರ ಚಿಂತನೆ, ಬದುಕಿನ ಶೈಲಿಯಲ್ಲಿ ಒಂಚೂರು ವ್ಯತ್ಯಾಸವಿರುತ್ತದೆ. ಆದರೆ ಬದುಕಿನ ಮೂಲ ಉದ್ದೇಶ ನಮ್ಮ ದೇಶದಂತೆ ಇದೆ).
ಇಂಥ ಒಂದು ಸಂದಿಗ್ಧ ಸ್ಥಿತಿ ಹುಟ್ಟು ಹಾಕಿರುವುದೇ ಕಾರ್ಪೊರೇಟ್ ಹಾದರಿಕೆ! ಬಹುಶಃ ಈ ಪದ ಬಳಕೆ ತಪ್ಪಾಗಬಹುದು. ಯಾಕಂದ್ರೆ ಒಬ್ಬ ಓಶೋ, ಭೈರಪ್ಪನವರನ್ನು ಓದಿಕೊಂಡ ನಾನಂತೂ ಸೆಕ್ಸ್ನ್ನು ಅಸಹ್ಯ, ತಪ್ಪು, ಕಾನೂನು ಬಾಹೀರ ಎಂಬ ರೀತಿಯಲ್ಲಿ ಮಾತನಾಡಲಾರೆ. ಆದ್ರೆ ಯಾವುದೋ ಆಮಿಷಕ್ಕೆ ಒಳಗಾಗಿ ಸೆಕ್ಸ್ನ್ನು, ದೇಹವನ್ನು ಮಾರಿಕೊಳ್ಳುವ ಪ್ರಕ್ರಿಯೆಗೆ ನಾನಂತೂ ಹಾದರಿಕೆ ಎಂತಲೇ ಕರೆಯುತ್ತೇನೆ. ಸ್ವಯಂ ಇಚ್ಛೆಯಿಂದ, ಪ್ರೀತಿಯಿಂದ ದೈಹಿಕ ಸಂಬಂಧ ಇಟ್ಟುಕೊಂಡಿದ್ದರೆ ಅದು ಬೇರೆಯ ಮಾತು ಹಾಗೂ ಅವರ ಬದುಕಿನ ಸ್ವತಂತ್ರವದು.
ಸಾಫ್ಟ್ವೇರ್, ಮಾಧ್ಯಮ ಸೇರಿದಂತೆ ಕಾರ್ಪೊರೇಟ್ ಜಗತ್ತಿನಲ್ಲಿ ಕೆಲಸ ಮಾಡುತ್ತಿರುವ ಅನೇಕ ಗೆಳೆಯರು ಮಾತಾಡುವುದನ್ನು ಕೇಳಿದ್ದೇನೆ. ‘ಅದೊಂದು ಹುಡುಗಿಯಿಂದ ಇಡೀ ಆಫೀಸ್ ಹಾಳಾಗಿದೆ. ಆ ಹುಡುಗಿ ಬಂದವಳೆ ಎಷ್ಟು ಬೇಗ ಬೆಳೆಯುತ್ತಿದ್ದಾಳೆ. ತಲೆಯಲ್ಲಿ ಎರಡಕ್ಷರವಿಲ್ಲದಿದ್ದರೂ ಎದೆಯೊಳಗಿನ ಎರಡಕ್ಷರಗಳು ಕೆಲಸ ಮಾಡುತ್ತಿವೆ’ ಇಂಥ ಹತ್ತಾರು ಮಾತುಗಳನ್ನು ನಿತ್ಯವೂ ಕೇಳುತ್ತಿರುತ್ತೇವೆ. ಇಂಥ ಹುಡುಗಿಯರಿಂದ ನಿಜವಾದ ಪ್ರತಿಭಾವಂತ ಕಳೆದು ಹೋಗಿರುತ್ತಾನೆ. ತನ್ನ ತನವನ್ನು ಪೂರ್ತಿಯಾಗಿ ಕಳೆದುಕೊಂಡು ಕೆಲಸ ಮಾಡುತ್ತಿರುತ್ತಾನೆ. ಇದೆಲ್ಲ ಎಷ್ಟು ದಿನ ನಡೆಯುತ್ತೆ ಎಂಬುದು ನಂತರದ ಮಾತು. ಆದ್ರೆ ನಡೆದಷ್ಟೆ ದಿನದಲ್ಲಿ ಬೇರೆಯವರು ಅನುಭವಿಸುವ ನೋವು, ಯಾತನೆ ದೊಡ್ಡದಿದೆ.
ಪೋರ್ನ್ ಜಗತ್ತಿಗಿಂತ ಭಯಾನಕವಾದ ಜಗತ್ತೊಂದು ಇಲ್ಲಿ ನಿರ್ಮಾಣವಾಗುತ್ತಿದೆ. ನಿಜವಾಗಿಯೂ ಪ್ರತಿಭೆ ಹೊಂದಿದ್ದು ಬೆಳವಣಿಗೆ ಬೇರೆ. ಅಂಥ ಬೆಳವಣಿಗೆಗಳು ಕಣ್ಣಿಗೆ ಸ್ಪಷ್ಟವಾಗಿಯೂ ಕಾಣುತ್ತದೆ. ಯಾರಿಗೂ ಕಾಣದಂತೆ ಕತ್ತಲಿನಲ್ಲಿ ನಡೆದ ಬೆಳವಣಿಗೆಗಳು, ಮನಸ್ಸಿಗಂತೂ ಅರ್ಥವಾಗುತ್ತದೆ! ಇದ್ರಿಂದ ಹುಡುಗರು ಮಾತ್ರವಲ್ಲ, ಪ್ರತಿಭಾವಂತ ಅನೇಕ ಹುಡುಗಿಯರು ವ್ಯಥೆ ಪಡುತ್ತಿದ್ದಾರೆ.
ಸರಿ, ತಪ್ಪುಗಳ ನಿರ್ಣಯ ಕಷ್ಟ. ಒಂದು ಅಧಿಕಾರ, ದುಡ್ಡಿಗಾಗಿ ತಮ್ಮನ್ನು ತಾವು ಕದ್ದು-ಮುಚ್ಚಿ ಮಾರಿಕೊಳ್ಳುವವರಿಗಿಂತ ತೀರ ‘ನನ್ನ ಹೊಟ್ಟೆಪಾಡೇ ಇದು’ ಅಂತ ಒಪ್ಪಿಕೊಂಡು, ಪೂರ್ತಿ ಬಿಚ್ಚಿ ಬೆತ್ತಲಾಗಿ ನಿಲ್ಲುವವರೇ ಉತ್ತಮರು ಅನ್ನಿಸುತ್ತಾರೆ. ನಾನು ಯಾವಾಗ್ಲೂ ಹೇಳ್ತಾ ಇರ್ತಿನಿ ಈ ಹಾಕಿಸಿಕೊಳ್ಳುವ ಪ್ರಕ್ರಿಯೆ ಹಾಕಿಸಿಕೊಂಡವಳು ಮತ್ತು ಹಾಕಿದವನಿಗೆ ಮಾತ್ರ ಗೊತ್ತಿರುತ್ತೆ ಅಂತ! ಒಂದು ನಾಗರೀಕತೆಯ ಅಂತ್ಯವಾಗಬೇಕಾಗಿದ್ದು ಅನಾಗರೀಕತೆಯಲ್ಲೇ! ಅಂದ್ರೆ ಮನುಷ್ಯರಿಗೆ ಒಂದು ಹಂತದಲ್ಲಿ ಬಟ್ಟೆ ತೊಡುವುದು ಗೊತ್ತಿರಲಿಲ್ಲ. ಅದರ ವ್ಯುತ್ಕ್ರಮ ರೂಪವಾಗಿ ಮುಂದೊಂದು ದಿನ ಗೊತ್ತಿದ್ದು ಬಟ್ಟೆ ತೊಡಲಾಗದ ಸಮಾಜವು ನಿರ್ಮಾಣವಾಗುತ್ತೆ. ಅದೇ ಈ ಪ್ರಸ್ತುತ ನಾಗರೀಕತೆಯ ಅಂತ್ಯ!
ಅಂದಹಾಗೆ ಸೆಕ್ಸ್ ಎಂಬುದು ನನ್ನ ಪ್ರಕಾರ ಭಾರತದ ಮಟ್ಟಿಗೆ ತೀರ ವೈಯಕ್ತಿಕವಾಗಿದ್ದು. ನೀವು ಎಲ್ಲರಲ್ಲಿಯೂ ತೋರಿಸಿಕೊಳ್ಳಲಾಗದೆ ತೀರ ಗೌಪ್ಯತೆಯಿಂದ ನಿಮ್ಮ ದಾಂಪತ್ಯದ ಸಂಬಂಧವನ್ನು ಕಾಪಾಡಿಕೊಳ್ಳುವುದು ಅದ್ರಿಂದ ಮಾತ್ರ. ಯಾವತ್ತು ಅದು ಮುಕ್ತವಾಗುತ್ತೋ ಆವತ್ತು ಒಂದು ನಾಯಿಗು, ದನಕ್ಕು, ಮನುಷ್ಯನಿಗೂ ಯಾವ ವ್ಯತ್ಯಾಸವೂ ಉಳಿಯುವುದಿಲ್ಲ. ಆಗ ಬಟ್ಟೆ ಹಾಕಿಕೊಂಡು ಬದುಕುವುದು, ಈ ಪೋರ್ನು ಬ್ಯಾನ್ ಎಂಬ ರಾಷ್ಟ್ರೀಯ ವಿಪತ್ತು ಯಾವುದು ಇರುವುದಿಲ್ಲ! ಅಕ್ರಮಕ್ಕೆ ಕಡಿವಾಣ ಹಾಕುವುದು ಅವಶ್ಯ ಕೆಲಸ. ಮೋದಿ ಮಾಡಿದ್ದು ಅದನ್ನೆ. ಅಂದಹಾಗೆ ಅದಕ್ಕಿಂತ ಮುಂಚೆ ಒಬಾಮಾ ಈ ಕೆಲಸ ಮಾಡಿದ್ದಾರೆ. ಯಾಕೆ ಎಲ್ಲ ಪೋರ್ನ್ ತಾಣಗಳಿಗೂ ಕಡಿವಾಣ ಬಿದ್ದಿಲ್ಲ ಎಂಬುದಕ್ಕೂ ಇದೇ ಉತ್ತರ. ಅಮೆರಿಕ ಕೊಟ್ಟ ಪಟ್ಟಿಯನ್ನೇ ಭಾರತ ಭಟ್ಟಿಯಿಳಿಸಿದೆ ಜೊತೆಗೊಂದಿಷ್ಟು ಭಾರತೀಯ ವೆಬ್ಸೈಟ್ಗಳನ್ನು ಸೇರಿಸಿ. ಉದ್ಯಮವಾಗಿ ನಡೆಯುವ ನೀಲಿಚಿತ್ರಕ್ಕೆ ಅವಕಾಶ ನೀಡಿದೆ. ಮೋದಿಗೆ ಜೈ! ಇದನ್ನು ವಿರೋಧಿಸಿ ಟೌನ್ಹಾಲ್ನಲ್ಲಿ ವಿನೂತನವಾಗಿ ಪ್ರತಿಭಟನೆ ಮಾಡಿದ್ರೆ ಅವರಿಗಂತೂ ಮೊದಲು ಜೈ!!!
ಅಂಥ ಹುಡುಗಿಯರ ನಡುಗೆ ನಾವು ಕಳೆದು ಹೋಗಿದ್ದೆೇವೆ!
ಆಗಷ್ಟ್ 7, 2015 aksharavihaara ಮೂಲಕ
>> ಇದೊಂದು ವ್ಯವಸ್ಥಿತ ಉದ್ಯಮ ಎಂಬುದನ್ನು ಖಾತ್ರಿಪಡಿಸಿಕೊಂಡು ಇಂಟರ್ನೆಟ್ನಲ್ಲಿ ಜಾಲಾಡುತ್ತ ಹೋದಾಗ ನನಗೆ ಇಂಗ್ಲಿಷ್ನ ೨ ಅತ್ಯದ್ಭುತ ಲೇಖನ ಸಿಕ್ಕಿತ್ತು.
ಆ ಎರಡು ಲೇಖನಗಳ ಕೊಂಡಿಗಳನ್ನು ನೀಡುತ್ತೀರಾ ?