ಅಂತಿಮ ಕ್ಷಣದವರೆಗಿನ ಕುತೂಹಲಗಳು ಯಾವತ್ತೂ ಚೆಂದ. ಇಲ್ಲವಾದರೆ ಅದೊಂಥರ ಒನ್ ಸೈಡ್ ಮ್ಯಾಚ್ನಂತಾಗುತ್ತದೆ. ನನ್ನ ಪಾಲಿಗೆ ಮೊದಲ ಪುಸ್ತಕದ ಹೆರಿಗೆ ಅಕ್ಷರಶಃ ರೋಮಾಂಚನ ಪಂದ್ಯವಾಗಿತ್ತು. ಕಾರ್ಯಕ್ರಮದ ಹಿಂದಿನ ದಿನದ ಸಂಜೆವರೆಗೂ ಪುಸ್ತಕ ಬಿಡುಗಡೆಯಾಗತ್ತೊ, ಇಲ್ಲವೊ ಎಂಬ ಅನುಮಾನವಿತ್ತು! ಪುಸ್ತಕ ಬಿಡುಗಡೆಯಾಗುವುದು ನಿಕ್ಕಿ ಎಂದು ಶನಿವಾರ ಸಂಜೆ ೭ ಗಂಟೆಗೆ ತೀರ್ಮಾನವಾಗಿ, ಭಾನುವಾರ ಬೆಳಿಗ್ಗೆ ೧೧.೧೫ಕ್ಕೆ ಪುಸ್ತಕವೂ ಹೊರಬಂತು. ಒಂದೆಡೆ ಕಾರ್ಯಕ್ರಮಕ್ಕೆ ಬಂದವರನ್ನು ಕಂಡು ಖುಷಿಯಾದರೆ, ಇನ್ನೊಂದೆಡೆ ಕಾರ್ಯಕ್ರಮಕ್ಕೆ ಬಂದೇ ಬರ್ತೀವಿ ಅಂದವರೆಲ್ಲ ಕಾಣುತ್ತಿಲ್ಲವಲ್ಲ ಎಂಬ ಬೇಸರ.
‘ನನ್ನ ಕಾರ್ಯಕ್ರಮಕ್ಕೆ ಪ್ರೇಕ್ಷಕರಿಗಿಂತ ಅತಿಥಿಗಳೇ ಬೇಗ ಬರ್ತಾರೆ’ ಎಂಬ ಪ್ರಕಾಶಕರಾದ ಗೌರಿ ಸುಂದರ್ ಮಾತು ನಿಜವಾಗಿತ್ತು. ಜಿ.ವೆಂಕಟಸುಬ್ಬಯ್ಯ, ಎನ್.ಎಸ್ ಲಕ್ಷಿನಾರಾಯಣ ಭಟ್ಟರು, ಎಚ್.ಎಸ್ ದೊರೆಸ್ವಾಮಿ ಎಲ್ಲರಿಗಿಂತ ಮೊದಲು ಬಂದವರು. ಹಾಗಾಗಿ ಅವರೊಂದಿಗೆ ಸುಮಾರಷ್ಟು ಸಮಯ ಕಳೆಯುವ ಅವಕಾಶ ಸಿಕ್ಕಿತು. ಇವರೆಲ್ಲರ ಕುರಿತು ಕೇಳಿದ್ದೆ ಹೊರತು, ಹತ್ತಿರದಿಂದ ಮಾತನಾಡಿರಲಿಲ್ಲ. ವೆಂಕಟಸುಬ್ಬಯ್ಯನವರಂತೂ ತೀರಾ ಆಪ್ತರಂತೆ ಹೆಗಲ ಮೇಲೆ ಕೈಯಿಟ್ಟು ಮಾತಾಡಿಸಿದರು ವಯಸ್ಸು, ಪಾಂಡಿತ್ಯಗಳ ಅರಿವಿಲ್ಲದೆ. ನಿಂಘಟು ತಜ್ಞ, ಹಿರಿಯ ಸಾಹಿತಿಯೊಬ್ಬರೊಂದಿಗೆ ಮಾತಾಡುತ್ತಿದ್ದೇನೆ ಎಂಬ ಪರಿವೂ ನನಗೂ ಇರಲಿಲ್ಲ. ನನ್ನ ಪಾಲಿಗೆ ಇದೊಂದು ವಿಸ್ಮಯ ಕ್ಷಣ.
ಕಾರ್ಯಕ್ರಮದ ಕುರಿತು ತೀರಾ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ . ವಸುಧೇಂದ್ರ, ಲಕ್ಷ್ಮಿನಾರಾಯಣ್ ಭಟ್, ಸಿ.ಎನ್ ರಾಮಚಂದ್ರನ್, ವಿಜಯಾ ಸುಬ್ಬುರಾಜ್ ವೇದಿಕೆಯಲ್ಲಿದ್ದರು ಮತ್ತು ಮಾತನಾಡಿದರು. ಪುಸ್ತಕಕ್ಕೆ ಚೆಂದದ ಮುಖಪುಟ ರಚಿಸಿ ಕೊಟ್ಟ ಎಂ.ಡಿ ಮಂಜುನಾಥ್, ಚಿತ್ರ ಬಿಡಿಸಿಕೊಟ್ಟ ರಾಜೇಶ್ ಪುಜಾರ್ ಇಬ್ಬರೂ ಅನಿವಾರ್ಯ ಕಾರಣದಿಂದ ಕಾರ್ಯಕ್ರಮಕ್ಕೆ ಬರಲಿಲ್ಲ. ಮುನ್ನುಡಿ ಬರೆದುಕೊಟ್ಟ ನಾಗೇಶ್ ಹೆಗಡೆ ಬಿಡುಗಡೆಗೆ ಬರಲಾರೆ ಎಂದು ಮೊದಲೇ ಹೇಳಿದ್ದರು. ಪುಸ್ತಕ ಬರೆಯುವದರಲ್ಲಿ ನನ್ನ ಶ್ರಮವಿದೆ ನಿಜ. ಆದರೆ ಪುಸ್ತಕ ಮುದ್ರಣಗೊಳ್ಳುವುದರ ಹಿಂದೆ ಈ ಗೆಳೆಯರ ಶ್ರಮವೂ ಇದೆ. ಹಾಗಾಗಿ ಇವರಿಗೆ ಧನ್ಯವಾದ ಹೇಳಲೇ ಬೇಕು.
ಯಾರಿಗೂ ವೈಯಕ್ತಿಕವಾಗಿ ಸಂಪರ್ಕಿಸಿ, ಕರೆ ಮಾಡಿ ಆಹ್ವಾನ ನೀಡಲು ಸಾಧ್ಯವಾಗಿರಲಿಲ್ಲ. ಆದಾಗ್ಯೂ ಬ್ಲಾಗ್, ಮೇಲ್ಗಳನ್ನು ನೋಡಿ ಅನೇಕ ಗೆಳೆಯರು ಕಾರ್ಯಕ್ರಮಕ್ಕೆ ಬಂದಿದ್ದಾರೆ. ಎಲ್ಲರಿಗೂ ಥ್ಯಾಂಕ್ಸು. ಇನ್ನು ಅನೇಕರು ಕುಳಿತ ಜಾಗದಿಂದಲೇ ಶುಭ ಹಾರೈಸಿದ್ದಾರೆ. ಖಂಡಿತ ಅವರ ಶುಭ ಹಾರೈಕೆಗಳಿಗೂ ಕೃತಜ್ಞ. ನನಗೆ ಯಾವ ಜವಬ್ದಾರಿಯನ್ನೂ ನೀಡದೆ, ಎಲ್ಲವನ್ನೂ ನಿರ್ವಹಿಸಿದ ಸುಂದರ ಹಾಗೂ ಕಣ್ವ ಪ್ರಕಾಶನದ ಎಲ್ಲ ಗೆಳೆಯರಿಗೂ ಥ್ಯಾಂಕ್ ಹೇಳಬೇಕು. ಕಾರ್ಯಕ್ರಮದ ಕುರಿತು ಎಲ್ಲ ಕಡೆ ಪ್ರಚಾರ ನೀಡಿದ ಗೆಳೆಯ ಸುಶ್ರುತ, ವಿಕಾಸ್, ನಿಧಿ, ಅವಧಿ ಎಲ್ಲರಿಗೂ ಧನ್ಯವಾದಗಳು. ಅಂದಹಾಗೆ ಅನೇಕರು ಪುಸ್ತಕ ಎಲ್ಲಿ ಸಿಗುತ್ತದೆ ಎಂದು ಕೇಳಿದ್ದಾರೆ. ನವ ಕರ್ನಾಟಕ ಮತ್ತು ಅಂಕಿತದಲ್ಲಿ ಲಭ್ಯವಿದೆಯಂತೆ.
ಚೊಚ್ಚಲ ಹೆರಿಗೆಯ ಶುಭಾಶಯಗಳು. ಇನ್ನೂ ನೂರು ಹೆರಿಗೆಗಳಾಗಲಿ ಎಂದು ಹಾರೈಸುತ್ತೇನೆ!
ವಿನಾಯಕ್ .. ಚೊಚ್ಚಲ ಹೆರಿಗೆ ಅನುಭವ.. ಸಖತ್ ಆಗಿದೆ.. ಕಂಗ್ರಾಟ್ಸ್.. ಬರವಣಿಗೆಯ ಮೆರವಣಿಗೆ ಹೀಗೆಯೇ ಸಾಗಲಿ.. 🙂
ಒಳ್ಳೇ ವಿಷಯ! ಅಭಿನಂದನೆಗಳು ನಿಮಗೆ.
ಶುಭಾಶಯ ವಿನಾಯಕ್ …ಇಂಥ ಹೆರಿಗೆ ೧೦೦ ಗಡಿ ದಾಟಲಿ..ಎಲ್ಲಾ ನಾರ್ಮಲ್ ಡೆಲಿವರಿ ನೇ ಆಗಲಿ….(..ಮಗುವಿನ ಮುಖ ಸ್ವಲ್ಪ ಹತ್ತಿರದಿಂದ ತೋರಿಸಿ…)
ನಮಸ್ತೆ ವಿನಾಯಕ. ನಿನ್ನ ಪುಸ್ತಕ ಬಂದಿದ್ದು ನೋಡಿ ತುಂಬಾ ಖುಷಿಯಾಯಿತು. ನನಗೆ ಇದರ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಗೊತ್ತಾಗಿದ್ರೆ ಖಂಡಿತಾ ಬರುವ ಪ್ರಯತ್ನ ಮಾಡ್ತಿದ್ದೆ.
ಅದೇನೇ ಪುಸ್ತಕದ ಮುಖಪುಟ, ಬಿಡುಗಡೆಯ ಫೋಟೋಸ್ ನೋಡಿ ಸಂತಸವಾಯಿತು. ಪುಸ್ತಕ ತಗೋತೀನಿ. ನಿನ್ನ ಈ ಸಂಭ್ರಮ ಮತ್ತಷ್ಟು ಇಮ್ಮಡಿಯಾಗಲಿ.
ಇಂಥಹ ಸಂಭ್ರಮಗಳು ನೂರಾಗಲಿ ಅಂತ ಹಾರೈಸುವೆ. ಅಭಿನಂದನೆಗಳು. –ರಾಮಚಂದ್ರ ಹೆಗಡೆ
innashtu bareyiri.. ee sala miss aaytu.. hegu idde idyalla next book release function! all the best friend.
ಅಭಿನಂದನೆಗಳು. ಅಕ್ಷರ ವಿಹಾರ – ೨ ಬರಲಿ 🙂
ಸುನಾಥ ಕಾಕಾ,
ನಿಮ್ಮ ಹಾರೈಕೆ ನಿಜವಾಗಲಿ…ಪ್ರೋತ್ಸಾಹಕ್ಕೆ ಧನ್ಯವಾದಗಳು.
ಉಮೇಶ್ ಅವರೆ,
ಧನ್ಯವಾದಗಳು
ಹಂಸಾನದಿ,
ಬ್ಲಾಗಿಗೆ ಭೇಟಿ ನೀಡಿ ಪ್ರತಿಕ್ರಿಯಿಸಿರುದಕ್ಕೆ ಥ್ಯಾಂಕ್ಸ್
ಅಮಿತಕ್ಕ
ದನ್ಯವಾದಗಳು
ರಾಚಂ,
ನಾನು ಮೊದಲೇ ಹೇಳಿದಂತೆ ಯಾರಿಗೂ ಮುಖತಃ ಭೇಟಿ ಮಾಡಿ, ಕರೆ ಮಾಡಿ ಕರೆಯಲು. ಸಾಧ್ಯವಾಗಲಿಲ್ಲ. ಇಮೇಲ್ ಮೂಲಕ ಆಹ್ವಾನ ಕಳುಹಿಸಿದ್ದೆ. ನಿಮಗೆ ತಲುಪಿಲ್ಲ ಅನ್ನಿಸುತ್ತದೆ. ಕ್ಷಮೆ ಇರಲಿ…
ನಟೇಶ್
ಥ್ಯಾಂಕ್ಸ್
ವಿಕಾಸ್
ಅಕ್ಷರ ವಿಹಾರ ೨ ಅಂತಾ ಮಾಡುವ ಆಲೋಚನೆಯಿಲ್ಲ. ಥ್ಯಾಂಕ್ಸ್
ಪ್ರಿಯ ವಿನಾಯಕ,
ನಿಮ್ಮ ಮೊದಲ ಹೆರಿಗೆಗೆ ಧನ್ಯವಾದಗಳು. ನಿಮ್ಮ ಸಂಭ್ರಮದ ಕ್ಷಣಗಳನ್ನು ಕಂಡು ಸಂತಸವಾಯಿತು. ನಿಮ್ಮ ಈ ಪ್ರಯತ್ನಕ್ಕೆ ಅಭೂತಪೂರ್ವ ಜಯ ಸಿಕ್ಕಲಿ ಎಂಬುದೆ ನನ್ನ ಒತ್ತಾಸೆ.
ಪ್ರೀತಿಯಿಂದ
ವಿಜಯ.ನರಗುಂದ
ವಿಷಯ ಓದಿ ತಿಳಿದು ಸಂತೋಷವಾಯಿತು. ಶುಭಾಶಯಗಳು, ವಿನಾಯಕ.
nice..
visit my blog @ http://ragat-paradise.blogspot.com
RAGHU