ಹುಡುಗಿಯೆಂದರೆ ಹಾಗೆ,
ಕೇದಗೆಯ ಘಮದಂತೆ
ಅಲ್ಲ, ಕೇದಗೆಯ ಹೂವಿನಂತೆ
ಬಿದರಿನ ಮಟ್ಟಿಯಲ್ಲಿ
ಸರ್ಪಗಾವಲಿನಲ್ಲಿ ಬೆಳೆದು
ಹಾದಿಹೋಕರ ಕಣ್ಣು ಕುಕ್ಕುವುದು
ಕೀಳುವ ಬಯಕೆಯಾಗಿ ಮಟ್ಟಿಯನೇರಿದರೆ
ಚುಚ್ಚುವ ಬಿದಿರ ಮುಳ್ಳುಗಳು
ಬಗ್ಗದೆ ಗಟ್ಟಿಯಾಗಿ ಏರುತ್ತ ಹೋದಂತೆ
ಮೂಗಿಗಡಚುವ ಪರಿಮಳ
ಕಿತ್ತ ಹೂವಿನೊಂದಿಗೆ ಕೆಳಗಿಳಿದರೆ
ಚೂಪಗೆ ಕಾದು ಕುಳಿತಿಹರು ಹಲವರು!
ಘಮವೆಂಬುದು ನೈಸರ್ಗಿಕವಾದರೂ
ಒಂದು ಬಗೆಯ ಕೃತಕ ಸುಗಂಧದಂತೆ
ತಾಸೆರಡುತಾಸಿಗೆ ಆರಿ ಹೋಗುವುದು
ಸಂಜೆಯೊಳಗೇ ಬಾಡುವುದು ಸೂರ್ಯನ ತಾಪಕ್ಕೆ
ಮುಳ್ಳು ತರಚಿದ ಗಾಯ ಮಾಸುವುದರೊಳಗೆ
ಕಳಚಿ ಬೀಳುವುದು ಘಮದ ಮುಖವಾಡ
ಕೇದಗೆಯ ಜಾತಿಯೇ ಹಾಗೆ
ಸೂಕ್ಷ್ಮ, ಅತಿ ಸೂಕ್ಷ್ಮ,
ಎಷ್ಟಂದರೂ ಪಕ್ಕೆಗಳಿಲ್ಲದ ಹೂವದು!
ಚೂರು ಕೈಜಾರಿದರೂ ಒಂದೇಸಳೂ ಸಿಗದು
ಮುಂಜಾನೆ ಕಂಡ ಬೆಡಗಿನ ಕೇದಗೆಯಲ್ಲ
ಆದರೂ ಅದರ ಆಕರ್ಷಣೆಗೆ ಸೋಲದವರಿಲ್ಲ
ಬಿದಿರ ಮಟ್ಟಿ ಏರದ ಹೊರತು ಅರ್ಥವಾಗುವುದಿಲ್ಲ
ಕೆಳಗೇ ಕುಳಿತು ಇಣುಕಿದರೆ ಪ್ರಯೋಜನವಿಲ್ಲ
ದ್ವಂದಗಳ ನಡುವೆ ಕಳೆದಿದೆ ಹಲವು ಶಿವರಾತ್ರಿ
ಈ ಸಲ ಹಬ್ಬಕ್ಕಾದರೂ ಕೀಳಬೇಕಿದೆ ಕೇದಗೆಯ
ಶಿವನ ಮುಡಿಯೇರಿದ ಪ್ರಸಾದವಾದರೆ…
ಕಿವಿಗೆ ಮುಡಿದುಕೊಂಡರಾಯಿತು ಸುಮ್ಮನೆ!
ಹ ಹ…ಇದೇನು ಸ್ವಂತ ಅನುಭವದಿಂದ ಹುಟ್ಟಿದ ಕವನದಂತಿದೆ !!. ಏನೇ ಇರಲಿ …ನೀನು ಬರೆದಿದ್ದು ಚನಾಗಿದೆಯೋ ..ಅಥವ ನನಗೇ ಇಷ್ಟ ಆಯ್ತೋ ಗೊತ್ತಿಲ್ಲ . ಎರಡು ಇರಬಹುದು ಬಹುಶಃ 🙂
ಲೈಕ್ಡ್ ಇಟ್ ಡ್ಯೂಡ್.. 🙂
Superb! Poem is too good 🙂
excellent !
ಚೆನ್ನಾಗಿದೆ… ಇಷ್ಟ ಆಯಿತು..
ತುಂಬಾ ಚೆನ್ನಾದ ಕವಿತೆ…ಇಷ್ಟವಾಯಿತು..
ಅಹಾ! ನಿಮ್ಮ ಕವನವೂ ಕೇದಗೆಯ ಹಾಗೆ ಗಂಧವತಿಯಾಗಿದೆ!