ಸ್ನೇಹಿತರೆ,
ಯಾರೊ ಅನಾಮಧೇಯ ವ್ಯಕ್ತಿಯೊಬ್ಬ ಪದೆ, ಪದೆ ನನ್ನ ಬ್ಲಾಗಿಗೆ ಕೆಟ್ಟ ಪ್ರತಿಕ್ರಿಯೆ ಹಾಕಲು ಶುರು ಮಾಡಿದ್ದಾನೆ. ನನ್ನ ಹಿಂದಿನ ಬರಹಕ್ಕೆ ಆತ ಹಾಕಿದ ಕಮ್ಮೆಂಟ್ಗೆ ನಾನು ಉತ್ತರ ನೀಡಿರುವೆ. ಆತನಿಗೆ ನೀಡಿದ ಉತ್ತರ್ ಇಲ್ಲಿದೆ. ನನ್ನ ಮೇಲ್ ಐಡಿಯ ನಕಲು ರೂಪದಲ್ಲಿ ಆತ ಪ್ರತಿಕ್ರಿಯೆ ನೀಡುತ್ತಿರುವುದರಿಂದ ಇದನ್ನು ನಿಮ್ಮೆಲ್ಲರ ಗಮನಕ್ಕೆ ತಂದಿದ್ದೇನೆ..
ಆತ ಹಿಂದಿನ ಲೇಖನಕ್ಕೆ ಹಾಕಿದ ಪ್ರತಿಕ್ರಿಯೆಗೆ ನನ್ನ ಉತ್ತರ ಇಲ್ಲಿದೆ…
ಹಲೊ ಪಯಣಿಗ ಅವರೆ
ನೀವು ನನ್ನ ಬರಹಗಳನ್ನು ಬೈದು ಹಾಕಿದ ಮೊದಲ ಕಮ್ಮೆಂಟ್ನ್ನು ಡಿಲಿಟ್ ಮಾಡಿದೆ. ಪುನಃ ಮತ್ತೆ ಕಮ್ಮೆಂಟ್ ಹಾಕಿರುವಿರಿ. ಹಾಗಾಗಿ ಪ್ರಕಟಿಸುತ್ತಿರುವೆ. ಬೈಗುಳ ತಪ್ಪು ತಿದ್ದಿಕೊಳ್ಳುವಂತಿದ್ದರೆ ಖಂಡಿತಾ ಒಪ್ಪುತ್ತಿದೆ. ನನ್ನದು ಪಯಣಿಗ ೨೦೦೫ ಎಂಬ ಈ ಮೇಲ್ ಐಡಿ. ನೀವು ಪಯಣಿಗ೩೦೦೦ ಎಂಬ ಐಡಿ ಸೃಷ್ಟಿಸಿ ಈ ಕೆಲಸ ಮಾಡುತ್ತಿರುವಿರಿ. ಎಲ್ಲ ಸ್ನೇಹಿತರ ಗಮನಕ್ಕೆ ಇಲ್ಲಿ ಕಮ್ಮೆಂಟಿಸಿರುವ ಪುಣ್ಯಾತ್ಮನ ಐಪಿ ಸಂಖ್ಯೆ 117.192.207.136. ಇದು ನಾನು ಒಳ್ಳೆ ಮಾತಿನಲ್ಲಿ ಪಯಣಿಗನಿಗೆ ಹೇಳಿರುವ ಕಿವಿ ಮಾತು. ತಪ್ಪು ತಿದ್ದಿಕೊಳ್ಳದಿದ್ದರೆ ನಿನ್ನ ಭಾಷೆಯಲ್ಲೇ ಉತ್ತರ ನೀಡಬೇಕಾಗುತ್ತದೆ ಪಯಣಿಗ…
ಆತ ಹಾಕಿರುವ ಪ್ರತಿಕ್ರಿಯೆ ಹಾಗೂ ಆತನ ಕುರಿತ ಮಾಹಿತಿ…
girish girijah@gmail.com 117.192.206.18 |
Submitted on 2010/11/28 at 6:30 am
ಇಂಥ ಡಬ್ಬಾ ಬ್ಲಾಗಿನ ಬರಹಗಳನ್ನು ಯಾರ್ ಕದೀತಾರೋ ಆ ಶಿವನೇ ಬಲ್ಲ…. ಅಂತ ಭ್ರಮೆಗಳ್ನೆಲ್ಲ ಇತ್ಕೊಂಡಿದೀಯಾ ಗುರೂ |
payaniga payaniga3000@gmail.com 117.192.207.136 |
Submitted on 2010/11/28 at 11:04 am
ತನ್ನನ್ನು ತಾನೇ ಬೈದಂಗೆ ಮಾಡಿಕೊಂಡು, ತನ್ನನ್ನೇ ಹೊಗಳಿಕೊಳ್ಳುವ ಲೇಖನ. ಇದನ್ನೇ ನಮ್ಮ ಪರಮಗುರುವಿನ ಭಾಷೆಯಲ್ಲಿ ಸ್ವಕುಚಮರ್ದನ ಅಂತಾರೆ. ಹೆಂಗೈತೆ ಮೈಗೆ ? |
ಇಂತಹ ಕುಚೋದ್ಯದ ವರ್ತನೆಯಿಂದಾಗಿ ಬೇಸರವಾಗುತ್ತಿದೆ.
ಏನ್ ಜನಾನಪ! ಸುಮ್ನೆ ಕಿರಿಕಿರಿ ಮಾಡ್ತಾರೆ.
Crime branch ge ond complaint kodu.. oddu olage haktare..
ಸುನಾಥ್ ಸರ್ ಮತ್ತು ವಿಕಾಸ್
ಹೌದು ಜನಕ್ಕೆ ಸುಮ್ಮನಿರುವುದು ಕಂಡರೆ ಅಲರ್ಜಿ
ಫ್ರೆಂಡ್
ಹ ಅದನ್ನೆ ಮಾಡಿದ್ದು. ಕಮ್ಮೆಂಟ್ ರೇಸ್ಕೋರ್ಸ್ ರಸ್ತೆಯ ಕಚೇರಿ ಒಂದರಿಂದ ದಾಖಲಾಗಿದ್ದು ಅಂತ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಮುಂದಿನ ಕ್ರಮ ತೆಗೆದುಕೊಳ್ಳುತ್ತಾರಂತೆ…