ಸೂರ್ಯನ ತಾಪವಿರದ
ಜನರ ತಾಪತ್ರಯವಿರದ
ನಿಶಬ್ದದ ರಾತ್ರಿಯ ಬೆಳಕಿಗಾಗಿ
ಕನವರಿಸುತ್ತಿದೆ ಮನ
ಮೇಲ್ನೋಟದಿ ಚೆಂದದ ನಗು
ಒಳಗೊಳಗೆ ಹಾಲಿನಂಥ ವಿಷ
ಸ್ವಚ್ಛಂದದ ನಗುವಿನಲ್ಲೂ ಕಲಬೆರಕೆ
ಎಷ್ಟಂದರೂ ಮಹಾನಗರಿಯಿದು!
ನಿತ್ಯದ ಸೂರ್ಯ ಕಿರಣಗಳಂತೆ
ಅರ್ಥವಾಗದು ಪರ ಮನ
ಚರ್ಮಕ್ಕೆ ತಾಕಿದರೂ ಗೊತ್ತಾಗದು
ವಿಷ ಕಿರಣಗಳ ಒಳ ಹೂರಣ
ಕನವರಿಸುತ್ತಿದೆ ಮನ
ಚಂದಮಾಮನ ನಿಷ್ಕಲ್ಮಶ ನಗೆಗಾಗಿ
ಸಿಕ್ಕಂತೆ ಭಾಸವಾಗಿ ಮಾಯವಾಗುತ್ತದೆ
ಆ ನಗುವಿನ ಸಂಭ್ರಮ
ಹಾಗಾಗಿಯೇ ಇದು ತಿಂಗಳ ಬೆಳಕು!
ಮನದ ಕನವರಿಕೆ ನಿಮಗೆ ಕವನದಲ್ಲಾದರೂ ಸಿಕ್ಕಿದೆ. ಅಭಿನಂದನೆಗಳು!
ಚೆಂದದ ಅರ್ಥಪೂರ್ಣ ಕವಿತೆ
ಈ ‘ತಿಂಗಳ ಬೆಳಕು’. 🙂
Nice poem..
nange nin kavana ishta aatu… 🙂
“ಮೇಲ್ನೋಟದಿ ಚೆಂದದ ನಗು
ಒಳಗೊಳಗೆ ಹಾಲಿನಂಥ ವಿಷ”
“ಹಾಲಿನಂಥ ವಿಷ”…
idu hange saadya??? explaination needed…
ಸುನಾಥ್ ಸರ್, ರಾಘವೆಂದ್ರ ಹೆಗಡೆ, ತೇಜಕ್ಕ
ಪ್ರೋತ್ಸಾಹಕ್ಕೆ ಧನ್ಯವಾದಗಳು…
ದಿವ್ಯಾ
ಅದು ಹಂಗೆ, ವಿವರಣೆ ಕಷ್ಟ!