ಕಾರ್ತೀಕದ ಮುಸ್ಸಂಜೆ
ಮಬ್ಬು ಮಬ್ಬಾಗಿತ್ತು
ಹಣತೆಗಳ ನಡುವೆಯೂ
ಜಗುಲಿ ಕತ್ತಲಾಗಿತ್ತು
ಬಿಕ್ಕುತ್ತಿದ್ದಳು ಒಬ್ಬಳೇ
ಕಣ್ಣೀರು ಇಳಿಯದಂತೆ
ಅಳುವಿನ ಸದ್ದು
ಯಾರಿಗೂ ಕೇಳದಂತೆ
ಉಕ್ಕಿದ ನೆರೆ ಕಾರಣವಲ್ಲ
ಅವಳ ನಗು ಮಾಸಲು
ನಾಲಗೆ ಹೊರಳುತ್ತಿಲ್ಲ
ಬೇಸರದ ಕಾರಣ ಹೇಳಲು
ಬಲು ದೂರ ನಡೆದಿದ್ದಾನೆ
ನಡು ಹಾದಿಯಲ್ಲಿ ಕೈಬಿಟ್ಟು
ದೂರು ಕಾರಣಗಳ
ಸರಮಾಲೆಯನ್ನು ಎದುರಿಗಿಟ್ಟು
ಕಾರ್ತೀಕದ ಮುಸ್ಸಂಜೆ
ಮಬ್ಬು ಮಬ್ಬಾಗಿತ್ತು…
(ವಿ.ಸೂ:- ಅಕ್ಷರ ವಿಹಾರಕ್ಕೆ ೨ ವರ್ಷ ತುಂಬಿದೆ. ಇಲ್ಲಿನ ಬರಹಗಳನ್ನು ಓದಿ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು)
2 ವರ್ಷ ಪೂರೈಸಿದ್ದಕ್ಕೆ ಕಂಗ್ರಾಟ್ಸು. ಈ ಕವನದಂತೆ ನಿಮ್ಮ ಬ್ಲಾಗೂ ಚಂದವಿದೆ.
🙂 good one…
ಹುಟ್ಟುಹಬ್ಬದ ಶುಭಾಶಯಗಳು.
ವಿನಾಯಕ್ ಸಾರ್ ,
೨ ವರ್ಷ ಪೂರೈಸಿದ್ದಕ್ಕೆ ಅಭಿನ೦ದನೆಗಳು. ಹೀಗೆ ಒಳ್ಳೆಯ ಬರಹಗಳನ್ನು ಓದುಗರಿಗೆ ನೀಡುತ್ತಾ ಇರಿ ಎ೦ದು ಹಾರೈಸುತ್ತೇನೆ.
ಸುಬಾಸಯ ಕಣ್ಮಗಾ.. ನೂರ್ಕಾಲ ವೈನಾಗಿರು. 😉
ಕಂಗ್ರಾಟ್ಸು..
happy blogging.
ನಿಮ್ ಬ್ಲಾಗ್ ಡೈನಮಿಕ್ ಇದೆ. ಮುಂದುವರೆಸಿ ಹೀಗೆ..
ಕವನ ಚೆಂದಾಗೈತೆ 🙂 ಎರಡು ವರುಷ ತುಂಬಿದ ಹರುಷಕ್ಕೆ ಅಭಿನಂದನೆಗಳು!