ಹುಡುಗೀಯರು ಹೀಗ್ಯಾಕೆ ಅಂತಾ ಬರೆಯುವುದು ಸರಿಯಾ ಅಥವಾ ಹುಡುಗರು ಯಾಕಿಂಗಾಡ್ತಾರೆ ಎಂದು ಬರೆಯುವುದು ಸೂಕ್ತವಾ ಎಂಬ ಗೊಂದಲ ನನ್ನಲ್ಲಿದೆ. ಆದ್ರೂ ಎರಡು ತರಹ ಬರೆಯುವುದೂ ಶಾನೇ ಡೇಂಜರ್. ಯಾಕಂದ್ರೆ ಫೆಮಿನಿಸ್ಟ್ ಸಂಘಟನೆಗಳು, ಯುವಕ ಮಂಡಳಿ ಸದಸ್ಯರುಗಳಿಗೆ ಈ ಬರಹ ಓದಿ ನೋವಾಗಬಹುದು! ಹಾಗಂತ, ನನ್ನ ಬರಹ ಹಿಡಿದುಕೊಂಡು ಗಾಂ ಪ್ರತಿಮೆ ಎದುರು ಯಾರೂ ಹೋರಾಟ ನಡೆಸುವುದಿಲ್ಲ ಎಂಬುದಂತೂ ಗ್ಯಾರಂಟಿ. ಅಯ್ಯೋ ಸಿವಾ, ಏನೋ ಬರೆಯಕ್ಕೆ ಹೊಂಟಿದ್ದು ಏನೇನು ಆಗಕ್ ಹತ್ತೈತಿ! ಇಲ್ಲ, ಟ್ರ್ಯಾಕ್ ತಪ್ಪಿಲ್ಲ. ಹಾಗಾಗಿ ನೇರವಾಗಿ ವಿಷ್ಯಕ್ಕೆ ಬರುತ್ತಿದ್ದೇನೆ.
ವಿಷ್ಯ ಏನಪ್ಪಾ ಅಂತಂತಂದ್ರೆ…ಈ ಹುಡುಗೀಯರು ಯಾಕೆ ಹೀಗೆ ಅಂತಾ! ಹುಡುಗೀಯರಿಗೆ ಏನಾಗಿದೆ ಅನ್ನೋದಕ್ಕಿಂತ, ಆಗಲಿಕ್ಕೆ ಉಳಿದಿರುವುದೇನು ಎಂಬುದು ಮುಖ್ಯವಾದ ಪ್ರಶ್ನೆ. ಅಲ್ಲ , ಈ ಬೆಂಗಳೂರಲ್ಲಿ ನಮ್ಮ ‘ನಾರಿ’ಗಳಿಗೆ ಸ್ವಂತ ಐಡೆಂಟಿಟಿ ಇಲ್ಲವೇನೋ ಅನ್ನಿಸ್ತಾ ಇದೆ. ಹಿಂದೆಲ್ಲ ಸ್ಯಾರಿ ಉಡ್ತಾ ಇದ್ದರಂತೆ. ಹಾಗಾಗಿ ‘ಭಾರತೀಯ ನಾರಿ’ ಎಂಬ ವಿಶೇಷಣ ಸ್ತ್ರೀ ಸಮುದಾಯಕ್ಕೆ ಇತ್ತಂತೆ. ಇವತ್ತು ಒಂದಷ್ಟು (ಬೆಂಗಳೂರಿನ ಮಟ್ಟಿಗೆ ಈ ಪ್ರಮಾಣ ಶೇ.೬೦ಕ್ಕಿಂತ ಜಾಸ್ತಿ ಇರಬಹುದು)ಹುಡುಗೀಯರು ಬಾರ್ನಲ್ಲಿ ಕೂತು…ಅಲ್ಲಲ್ಲ…ಮನೆ, ಹಾಸ್ಟೆಲ್ನಲ್ಲಿ ಕೂತು ಕುಡಿತಾರೆ. ಇನ್ನೂ ಕೆಲವರು ಐಷಾರಾಮಿ ಹೋಟೆಲ್ಗೆ ಹೋಗಿ ಎರಡು ಪೆಗ್ ಏರಿಸುತ್ತಾರೆ. ಸಿಗರೇಟು ಸೇದ್ತಾರೆ, ಹುಡುಗರಂತೆ ಡ್ರೆಸ್ ಮಾಡಿಕೊಳ್ಳುತ್ತಾರೆ…
‘ಲೋ ಯಪ್ಪ ಸುಮ್ನಿಕಿರೋ, ನೀನೇನು ಸಂಸ್ಕೃತಿ ಗುತ್ತಿಗೆ ತಗಂಡಿಯೇನು? ಹುಡುಗ್ರು ಏನು ಬೇಕಾದ್ರು ಮಾಡಬಹುದು, ನಾವು ಹುಡುಗೀಯರು ಮಾಡಂಗಿಲ್ಲ ಅನ್ನಾಕೆ ಇದೇನು ತಾಲಿಬಾನಾ?!’
ಹೋಯ್ ಅಕ್ಕೋರೆ ನಿಮ್ಮ ಕೂಗು ನಂಗೆ ಶೆರಿಯಾಗಿಯೇ ಕೇಳಿಸ್ತಾ ಐತಿ. ನಾನು ಈಗ ಹೇಳಾಕ್ ಹೊಂಟಿರೋ ಈಸ್ಯ ಕೂಡ ಅದೇನೆ. ಓಸಿ ಸಮಾಧಾನ ಮಾಡ್ಕಂಡು ಓದ್ತೀರಾ?!
ಅಡುಗೆ ಮನೆಯಲ್ಲಿ ಸೌಟು ಹಿಡಿದುಕೊಂಡೇ ಬದುಕಬೇಕಾ ಎಂಬ ಹಠಮಾರಿತನದೊಂದಿಗೆ ಹೆಣ್ಣು ನಾಲ್ಕು ಗೋಡೆಗಳ ನಡುವಣ ಹೊಸ್ತಿಲನ್ನು ದಾಟಿ ಹೊರಬಂದಿದ್ದಾಳೆ. ಆದರೆ ಈಗ ಆಗಿರುವ ಪರಿಣಾಮವೇನು?
ಓ ಮರೆತೇ ಹೋಗಿತ್ತು ಕ್ಷಮಿಸಿ…ವ್ಯತ್ಯಾಸ ಯಾಕೆ ಎಂಬ ಪ್ರಶ್ನೆಯಿಂದಲೇ ನಮ್ಮ ಫೆಮಿನಿಸ್ಟ್ ಸಂಘಟನೆಗಳು ಹುಟ್ಟಿದ್ದು ಅಲ್ವಾ?! ಅಂದಹಾಗೆ ಇದರ ಲಾಭ ಆಗಿದ್ದು ಯಾರಿಗೆ?!
ಮಹಾನಗರಿಯಲ್ಲಿ ಪಟ್ಟಿ ಮಾಡಬಹುದಾದಷ್ಟು ಐಷಾರಾಮಿ ಹೋಟೆಲ್ಗಳಿವೆ. ಅದರಲ್ಲಿ ಅರ್ಧದಷ್ಟು ಹೋಟೆಲ್ನಲ್ಲಿ ಮೊಣಕಾಲನ್ನೂ ಆವರಿಸಿದ ಬಟ್ಟೆ ತೊಟ್ಟ ಚೆಂದದ ಹುಡುಗೀಯರು ಹಲವಾರು ಹುದ್ದೆ ನಿಭಾಯಿಸುತ್ತಿದ್ದಾರೆ. ಇಲ್ಲಿ ‘ಆತಿಥೋದ್ಯಮ’ ಎಂಬ ಪದವಿಗಿಂತ ಮೊಣಕಾಲಿಗಿಂತ ಚಿಕ್ಕದಾದ ಬಟ್ಟೆ ತೊಡುವುದೇ ಮುಖ್ಯವಾದ ವಿಷಯ. ಅದಕ್ಕೆ ಒಪ್ಪದವರಿಗೆ ಕೆಲಸವಿಲ್ಲ.
ಬಹುತೇಕ ಕಂಪನಿಗಳು ಸಾರ್ವಜನಿಕ ಸಂಪರ್ಕ ಅಕಾರಿ, ಪತ್ರಿಕಾ ಸಂಪರ್ಕ ಅಕಾರಿಗಳನ್ನು ನೇಮಿಸಿಕೊಳ್ಳುತ್ತವೆ. ೩೫ರ ಪ್ರಾಯದ ಒಳಗಿನ ಚೆಂದದ, ಚೆಲ್ಲು, ಚೆಲ್ಲು ಮಾತನಾಡುವ ಹುಡುಗಿಗೆ ಮಾತ್ರ ಆದ್ಯತೆ. ೪೦ರ ಪ್ರಾಯದ ಆಂಟಿಯರಿಗೆ ಅವಕಾಶವಿಲ್ಲ. ವಯಸ್ಸು ಆಗುತ್ತಿದ್ದಂತೆ ಆ ಚೆಂದದ ಹುಡುಗಿಗೂ ಗೇಟ್ ಪಾಸ್ ಲಭ್ಯ. ಹಾಗಾಗಿಯೇ ಅವುಗಳು ಕೂತು ಊಟ ಮಾಡಲು ಸಾಕಾಗುವಷ್ಟು ಸಂಬಳ, ನಾನಾ ಬಗೆಯ ಸೌಕರ್ಯ ಒದಗಿಸುವುದು. ಅಷ್ಟೆಲ್ಲ ಸಿಗಬೇಕಾದ್ರೆ ಮೊಣಕಾಲಿಗಿಂತ ಮೇಲಿನ ಡ್ರೆಸ್ ಹಾಕಿದರೆ, ಚೆಲ್ಲು, ಚೆಲ್ಲಾಗಿ ಹಲ್ಲು ಕಿರಿದರೆ ಆಗುವ ನಷ್ಟವಾದರೂ ಏನು ಅಲ್ವಾ?! ಅಡುಗೆ ಮನೆಯಲ್ಲಿ ಸೌಟು ಹಿಡಿದ್ರೆ ಇಷ್ಟೆಲ್ಲ ಸೌಕರ್ಯ ಸಿಗತ್ತಾ?!
ಈ ಟ್ರೆಂಡ್ ಇವತ್ತು ಮಾಧ್ಯಮವನ್ನೂ ಆವರಿಸಿದೆ. ವಿಶೇಷವಾಗಿ ಆಂಗ್ಲ ಭಾಷೆಯ ವಾಹಿನಿಗಳಲ್ಲಿ ಸೌದಂರ್ಯವೇ ಮುಖ್ಯವಾದ ಅರ್ಹತೆ. ಪ್ರತಿ ಎಂಎನ್ಸಿ ಕಂಪನಿಯಲ್ಲಿ ಸ್ವಾಗತಕಾರಿಣಿಯಾಗಿ ಹುಡುಗಿ/ಹುಡುಗ ಇರುತ್ತಾರೆ. ವಿಮಾನದಲ್ಲೂ ಇದೇ ರೀತಿಯ ವ್ಯವಸ್ಥೆಯಂತೆ. ನಾನಿನ್ನು ವಿಮಾನ ಹತ್ತಿಲ್ಲ. ಹಾಗಾಗಿ ಆ ಕುರಿತು ಮಾತಿಲ್ಲ.
ನಾನಿಲ್ಲಿ ಹುಡುಗರಿಗೆ ಅವಕಾಶ ಸಿಗುತ್ತಿಲ್ಲ ಎಂಬ ದಾಟಿಯಲ್ಲಿ ಮಾತನಾಡುತ್ತಿಲ್ಲ. ನೈಜವಾಗಿ ಅರ್ಹತೆ ಇದ್ದವನು ಅವಕಾಶ ಪಡದೇ ಪಡೆಯುತ್ತಾನೆ ಎಂಬುದು ನನ್ನ ನಿಲುವು. ಹುಡುಗಿಯ ಸ್ಥಿತಿಯ ಕುರಿತು, ಹುಡುಗಿ ಬಳಕೆಯಾಗುತ್ತಿರುವ ಪರಿಯ ಕುರಿತಾಗಿ ಹೇಳುತ್ತಿರುವೆ ಅಷ್ಟೆ. ನಾವು ‘ಸ್ತ್ರೀ’ಗೆ ವಿಶೇಷ ಗೌರವ ಕೊಡುವ ಸಂಪ್ರದಾಯದವರು. ಆಕೆ ಒಂದು ಮಗುವಿಗೆ ಮೊದಲ ಗುರು. ಒಂದು ಮಗುವಿನಿಂದ ಒಂದು ಸಮಾಜ. ಹಾಗಾಗಿ ಸಮಾಜಕ್ಕೂ ಆಕೆಯೇ ಮೊದಲ ಗುರು. ಹಾಗಾಗಿ ನಮ್ಮಲ್ಲಿ ತಾಯಿಗೆ ಪೂಜನೀಯ ಸ್ಥಾನ. ತಾಯಿಯೇ ಹೆಂಡ ಕುಡಿಯುತ್ತಾಳೆ ಎಂದರೆ, ಆ ಮನೆಯ ಪರಿಸ್ಥಿತಿಯನ್ನು ಒಮ್ಮೆ ಕಲ್ಪಿಸಿಕೊಂಡು ನೋಡಿ. ಆ ಮನೆಯಲ್ಲಿ ಹುಟ್ಟುವ ಮಗು ಏನಾಗಬಹುದು ಎಂದು ಆಲೋಚಿಸಿ. ತಂದೆ ಹೆಂಡ ಕುಡಿಯುವುದು ಹಲವಾರು ಕುಟುಂಬಗಳಲ್ಲಿ ಸಹಜ. ಗಂಡು ಮಾಡುವುದನ್ನು ನಾನ್ಯಾಕೆ ಮಾಡಬಾರದು ಎಂದು ಈ ವಿಚಾರದಲ್ಲೂ ವಾದಿಸುವವರಿಗೆ…ಯಾಕೆ ಮಾಡಬಾರದಾಗಿತ್ತು ಎಂಬುದು ನಿಮ್ಮ ಮಕ್ಕಳು ಬೆಳೆದ ನಂತರ ನಿಮಗೆ ಅರಿವಾಗುತ್ತದೆ ಎಂಬುದಷ್ಟೇ ಉತ್ತರ.
ಇನ್ನೂ ‘ಶೀಲ’ ಎಂಬುದು ಮನಸ್ಸಿಗೆ ಸಂಬಂಸಿದ್ದ ಅಥವಾ ದೇಹಕ್ಕಾ ಎಂಬುದು ನನಗಂತೂ ಗೊತ್ತಿಲ್ಲ. ಆದರೆ ನಮ್ಮ ಸಮಾಜದಲ್ಲಿ ಶೀಲ ಕೂಡ ಗಂಭೀರ ವಿಚಾರ. ಹುಡುಗರು ಯಾರ ಜತೆಗೆ ಬೇಕಾದರೂ ಮಲಗಬಹುದು, ನಾವು…ಖಂಡಿತಾ ನೀವು ಮಲಗುತ್ತೀರಾ ಎಂದಾದರೆ, ಕಾತುರತೆಯಿಂದ ಕಾದು ಕುಳಿತವರು ಬಹಳಷ್ಟು ಮಂದಿ ಇದ್ದಾರೆ. ಚರ್ಮ ಸುಕ್ಕುಗಟ್ಟುವರೆಗೂ ನಿಮಗೆ ಸಾಕಷ್ಟು ಅವಕಾಶವಿದೆ! ಆವತ್ತಿನ ದೇವದಾಸಿ ಪದ್ದತಿ, ಇವತ್ತು ‘ಬಾಯ್ಫ್ರೆಂಡ್’ ಸಂಸ್ಕೃತಿಯಾಗಿ ಬದಲಾಗಿದೆ…ಅಲ್ಲಲ್ಲ…ಹೈಟೆಕ್ ಆಗಿದೆ! ಹುಡುಗರ ಜತೆ ಸುತ್ತುವ, ಬೀದಿ ಬದಿಯಲ್ಲಿ ಬೈಕ್ ನಿಲ್ಲಿಸಿಕೊಂಡು ‘ಲವ್’ ಎಂಬ ಹೆಸರಲ್ಲಿ ಹರಟೆ ಹೊಡೆಯುವ ೨-೩ ಹುಡುಗಿಯರನ್ನು ಒಂದೂವರೆ ವರ್ಷಗಳ ಸುಮ್ಮನೆ ಗಮನಿಸಿ. ಆಕೆ ಕನಿಷ್ಟ ೩ ಬಾಯ್ಫ್ರೆಂಡ್ಗಳನ್ನು ಬದಲಿಸುತ್ತಿರುತ್ತಾಳೆ. ಆಕೆ ಬದಲಿಸುತ್ತಾಳೋ ಅಥವಾ ಹುಡುಗ ಆಕೆಯನ್ನು ಬದಲಿಸುತ್ತಾನೋ ಎಂಬುದು ನನಗಂತೂ ಗೊತ್ತಿಲ್ಲ. ಇದು ತಮಾಷೆಗೆ ಹೇಳಿದ್ದಲ್ಲ. ನಮ್ಮ ಮನೆ ಬಳಿಯಿರುವ ಹುಡುಗಿಯರ ಪಿ.ಜಿ ನೋಡಿದ ನಂತರ ನಿಮಗೆ ಈ ಪ್ರಯೋಗದ ಕುರಿತು ಹೇಳುತ್ತಿರುವೆ. ದುಡ್ಡು ಖರ್ಚು ಮಾಡಲು ಹುಡುಗ ಸಿದ್ಧನಿದ್ದರೆ, ಹುಡುಗಿ ಸುಲಭವಾಗಿ ಸಿಗುತ್ತಾಳೆ ಎಂಬುದು ನನಗೆ ಅನ್ನಿಸಿದೆ. ವೆಶ್ಯಾ ಗೃಹಗಳಿಗೆ ಹೋಗಿ ಭಯದಲ್ಲಿ ಮಜಾ ತೆಗೆದುಕೊಳ್ಳುವುದಕ್ಕಿಂತ, ಇದೇ ಸುಲಭ ಎಂದು ಮಹಾನಗರಿಯ ಸಾಕಷ್ಟು ಹುಡುಗರು ನಿರ್ಧರಿಸಿದಂತಿದೆ!
ಮನೆ ಪಕ್ಕದ ಪಿ.ಜಿ ತೋರಿಸಿದಾಗ ರೂಮಿನ ಗೆಳೆಯ ರಾಜಾರಾಮ, ನಾನಂತೂ ಕೆಲಸದಲ್ಲಿ ಇರೋ ಹುಡುಗಿಯನ್ನ ಮದ್ವೆ ಆಗಲ್ಲ ಅನ್ನುತ್ತಿದ್ದ. ಮಹಾನಗರಿಯ ಹುಡುಗಿಯನ್ನು ಇವತ್ತು ಸಾಕಷ್ಟು ಪ್ರಜ್ಞಾವಂತ ಹುಡುಗರು ತಿರಸ್ಕರಿಸುವ ಮಟ್ಟಕ್ಕೆ ನಮ್ಮ ವ್ಯವಸ್ಥೆ ಬಂದು ನಿಂತಿದೆ. ಪಟ್ಟಣ್ಣ ಸೇರಿದ ಹುಡುಗಿಗೆ ಎಷ್ಟು ಜನರ ಜತೆ ಸಂಬಂಧ ಇರಬಹುದು ಎಂದು ಅನುಮಾನದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲಸ, ಹಣದ ಅನಿವಾರ್ಯತೆ, ಸ್ವತಂತ್ರ್ಯ…ಇವೆಲ್ಲವೂ ನಿಮ್ಮ ವೈಯಕ್ತಿಕ ವಿಚಾರ. ನಾನಿಲ್ಲಿ ಸಮಾಜದ ಸ್ಥಿತಿಯನ್ನು ಹೇಳಿದ್ದೇನೆ ಅಷ್ಟೆ. ಹಾಸ್ಯ, ಗಂಭೀರವಾಗಿ ಲೇಖನ ಉದ್ದವಾಗಿದೆ. ನೀವು ಸಂಸ್ಕೃತಿಗೆ ಬದ್ಧರಾಗಿಯೇ ಇರಬೇಕು ಎಂಬ ಹಠ ನನ್ನದೇನಲ್ಲ. ಯಾಕೆಂದರೆ ಅಮ್ಮ ಹೇಳಿದಂತೆ ನಾನೇನು ಈ ವರ್ಗದ ಯಾವ ಹುಡುಗಿಯನ್ನೂ ಮದ್ವೆಯಾಗಬೇಕಿಲ್ಲ. ಕಂಡವರ ಮನೆ ಹೆಣ್ಣು ಮಕ್ಕಳು ಏನಾದರೂ ನನಗೇನು ತಲೆಬಿಸಿಯಿಲ್ಲ. ಇದು ನನ್ನ ಅಂತಿಮ ನಿರ್ಧಾರ.
‘ಅಣಾ ಬೆಂಗಳೂರಿಗೆ ಬರ್ಲಾ, ಎಂಥಾದ್ರು ಜಾಬ್ ಇದ್ದ’ ಅಂತಾ ಊರಿನ ಹುಡುಗಿಯೊಬ್ಬಳು ಮುಗ್ಧವಾಗಿ ಕೇಳಿದ್ದಕ್ಕೆ ಇಷ್ಟೆಲ್ಲ ಬರೆಯಬೇಕಾಯಿತು…
(ವಿ.ಸೂ:-ಮಹಾನಗರಿಯ ಹುಡುಗಿಯರೆಲ್ಲ ಹೀಗೆ ಎಂಬ ಅರ್ಥವಲ್ಲ. ಆದರೆ, ಬಹುತೇಕರು ಹೀಗಾಗುತ್ತಿದ್ದಾರೆ ಎಂಬುದನ್ನು ಈ ಲೇಖನ ಹೇಳಲು ಹೊರಟಿದೆ…)
ವಿನಾಯಕ ಸಾರ್
ನಿಮ್ಮ ಕಾಳಜಿ ತು೦ಬಾ ಒಳ್ಳೆಯದಿದೆ .. ಹಾಗು ಲೇಖನವು ಸಕಾಲಿಕ .. ಆದರೆ ನಾನು ಒಬ್ಬಳು ಸ್ತ್ರೀ ಯಾಗಿ ನನಗೂ ಅರ್ಥವಾಗದ್ದು ನಿಜವಾಗಿ ಹಾಗೆ ಮಾಡುವ ಸ್ತ್ರೀ ಯಾವದನ್ನು ಹೇಳಲು ಹೊರಟ್ಟಿದ್ದಾಳೆ ?? ತಾನು ಆಧುನಿಕ ಮನೋಭಾವದವಳು ಎ೦ದೆ ಅಥವಾ ತಾನು ಪುರುಷನಿಗಿ೦ತ ಯಾವುದರಲ್ಲಿ ಕಮ್ಮಿ ಇಲ್ಲ ಎ೦ದೆ ???
ಉತ್ತರ ನಿಮಗೆ ಸಿಕ್ಕಿದರೆ ನಮಗೂ ಹೇಳಿ ..
hettavaru gamanisadiddare, magaLu ellige hOguttaaLe, yaara jote bereyuttaaLe avaLa haava-bhaavagaLenu yaavudannu appa ammandiru gamanisade, makkaLu kELidaagalella kELidashTu haNa koTTare namma javaabhdaari mugiyitu endu konDare aaguvudE idu. namma maadhyamadarava sahakaaravu bahaLashTide ee niTTInalli. keTTa jaahiraatugaLannu gaLigegondarante TV yalli prakaTisidare, innEnaaguttade neeve hELi?
ದುಡ್ಡಿನ ಮುಂದೆ ಇದ್ಯಾವುದೂ ಮುಖ್ಯವಲ್ಲವೇ ಅಲ್ಲ ಬಿಡಿ. ಮಹಾನಗರದ ಹಲವಾರು ವೃತ್ತಿಗಳಲ್ಲಿ ಹೆಣ್ಣು ಶೋ ಪೀಸ್. ಪ್ರತಿಭೆಗಿಂತ ರೂಪ, ದೇಹ ಸೌಂದರ್ಯ, ಅವರ ’ಸಹಕಾರ’ಕ್ಕೇ ಹೆಚ್ಚು ಮಣೆ. ಬೇಡದ ಕಡೆಯೆಲ್ಲಾ ನಮ್ಮ ಮಹಿಳಾವಾದಿಗಳಿಗೆ ದೌರ್ಜನ್ಯಗಳು, ಶೋಷಣೆಗಳು ಕಾಣುತ್ತವೆ. ಆದರೆ ಇಂತದ್ದನ್ನು ಮಾತ್ರ ವಿರೋಧಿಸುವುದಿಲ್ಲ ಅವರು. ಅನೈತಿಕತೆಯನ್ನು, ಗಂಡು ಮಾಡುವ ಕೆಟ್ಟ ಕೆಲಸಗಳನ್ನೂ ಹೈಟೆಕ್ಕಾಗಿ ಮಾಡಿದರೆ ಅವರ ಮಾತು ಬಂದ್! ಏಕೆಂದರೆ ಅದು ಸ್ತ್ರೀಸ್ವಾತಂತ್ರ್ಯ .
ಮೊಣೆಕಾಲಿನ ಮೇಲಿನ ಬಟ್ಟೆ, ಅರ್ಧರಾತ್ರಿಯ ಕುಡಿತ, ಬಾಯ್ ಫ್ರೆಂಡ್ ಸಂಸ್ಕೃತಿ ಇವೆಲ್ಲಾ ಸ್ತ್ರೀ ಪ್ರಗತಿಯ ಸಂಕೇತಗಳು. ಅದೆಲ್ಲಾ ಕೇಳುವಂತಿಲ್ಲ ಯಾರೂ.! ಕೇಳಿದರೆ ನೀವು ತಾಲಿಬಾನು.
But one thing is, this situation can’t be generalised about our girls.
ಮನೆ ಬಿಟ್ಟು ಪಿಜಿಯಲ್ಲಿ ಇದ್ದ ಹಲವಾರು ಹುಡ್ಗೀರು ಹೀಗೆ. ‘ಮು೦ದೆ’ ಬರುವ ಸ೦ಕೇತ ಅದು
ವಿನಾಯಕ,
ನಿಮ್ಮ ಮೇಲೂ ಪಿಂಕ್ ಅಭಿಯಾನ ಶುರುವಾಗುವಂತೆ ಕಾಣುತ್ತೆ… 🙂
ನನಗೆ ಮುಂಬಯಿಯಲ್ಲಿ ಹುಡುಗಿಯರು ಸೀಗರೇಟು ಸೇದುವುದು ನೋಡಿದಾಗ ಎನೂ ಅನಿಸಿದ್ದಿಲ್ಲ, let them enjoy their life… ಎಂದು ಸುಮ್ಮನಾಗಿದ್ದಿದೆ, ಆದರೆ ಸುಮಾರು ಎರಡು ತಿಂಗಳ ಹಿಂದೆ ಒಂದು ಹುಡುಗಿ ಚೂಡಿದಾರ ಹಾಕಿಕೊಂಡು ಸೀಗರೇಟು ಸೇದುವುದನ್ನು ನೋಡಿದಾಗ ಎರಡು ದಿನ ಮನಸಿಗೇನೋ ಕಸಿವಿಸಿಯೆನಿಸಿತು. ಅದೆಕೋ ಗೋತ್ತಿಲ್ಲ ಜಿನ್ಸ್-ಟಿಷರ್ಟ್ ತೋಟ್ಟ ತರುಣಿ ಸೀಗರೇಟು ಸೇದುವುದನ್ನು ನೋಡಿದಾಗ ಎನೂ ಅನಿಸದ್ದು ಅಂದೇಕೆ ಹಾಗೆ ಅನಿಸಿತೋ ಇವತ್ತಿಗೂ ಅರ್ಥವಾಗಿಲ್ಲ.
ಹುಡುಗಿಯರು ಸೀಗರೇಟು ಸೇದುವುದು ಸರಿಯೋ-ತಪ್ಪೋ ಎಂಬುದನ್ನು ನಾನು ಚರ್ಚಿಸಲಾರೆ, ಎಕೆಂದರೆ ಸೀಗರೇಟು ಕೆಟ್ಟದ್ದು ಮತ್ತು ಅದನ್ನೂ ನಾನು ಸುಟ್ಟುಕಾಕುತ್ತಿರುವುದರಿಂದ.
-ಶೆಟ್ಟರು
ವಿನಾಯಕರೆ ನಿಮ್ಮ ಮಾತನ್ನು ಪೂರ ಒಪ್ಪದೇ ಹೋದರು ಒಂದಿಷ್ಟು ಒಪ್ಪುವೆ. ಕೆಲವೊಂದು ಕಂಪನಿ ಗಳಲ್ಲಿ ಹುಡುಗೀರಿಗೆ ಮಾತ್ರ ಅಂತ ಕೆಲಸ ಇರ್ತವೆ (ಸುಂದರವಾಗಿ ಇರುವವರಿಗೆ ಮಾತ್ರ ಅನ್ನೋದು ಡೀಫಾಲ್ಟ್ ) ಕೆಲವೇ ಕೆಲವು ತಿಂಗಳು ಗಳ ಕೆಳಗೆ ಒಬ್ಬ ಒಂದು ದೊಡ್ಡ ಕಂಪನಿ ಯಾ ಮ್ಯಾನೇಜರ್, “ಶಾಸ್ತ್ರಿ ಅ ಹುಡುಗಿ ಜೊತೆ ಇಂಟರ್ವ್ಯೂ ನ ಸಂಜೆ ೮ ಕೆ ನಾನೆ ಫಿಕ್ಸ್ ಮಾಡ್ಕೊತೀನಿ” ಅಂದಿದ್ದ. ಇಂಟರ್ವ್ಯೂ ಆಯಿತು, ಆದ್ರೆ ಸೆಲೆಕ್ಟ್ ಆಗಿಲ್ಲ, ಯಾಕೆಂದರೆ ಅವಳು ಗಂಡ ನ ಜೊತೆ ಹೋಗಿದ್ಲು!! ಆಮೇಲೆ ಸ್ವಲ್ಪ ಗಲಾಟೆ ಆಗಿ ಅ ಮ್ಯಾನೇಜರ್ ಕೆಲಸ ಬಿಟ್ಟು ಬೇರೆ ಹೋದ!! ಇರಲಿ ಸೌಂದರ್ಯ ಅನ್ನೋದು ಕೂಡ ಒಂದು ಕ್ವಾಲಿಫಿಕಶನ್ ಆಗಿದೆ.
ಆಮೇಲೆ ಲೇಖನ ಹುಡುಗೀರ ಬದಲು ಫೆಮಿನಿಸ್ಟ್ ಸಂಗಟನೆ ಗಳ ಬಗ್ಗೆ ನೆ ಟಾರ್ಗೆಟ್ ಮಾಡಿದ್ದಿರಿ. ರೇಣುಕ ಚೌದರಿ ಅನ್ನೋ ಮಾನವ ಪ್ರಾಣಿ ಗೆ ಕನ್ನಡ ಓದಲು ಬಂದಿದ್ದಾರೆ ಚೆನ್ನಾಗಿತ್ತು.
ಹುಡುಗೀರು ಸಿಗರೆಟ್, ಮಧ್ಯಪಾನ ಮಾಡುವುದರ ಬಗ್ಗೆ ನಿಮಗೇಕೆ ಅಷ್ಟು ಬೇಸರ? ನಾವು ‘ಸ್ತ್ರೀ’ಗೆ ವಿಶೇಷ ಗೌರವ ಕೊಡುವ ಸಂಪ್ರದಾಯದವರು, ಹಾಗೇನೇ ನಾವು ಪತಿಯೇ ಪರದೈವ, ಕಣ್ಣಿಗೆ ಕಾಣೋ ದೇವರು ಅಂತ ನಂಬೋ ಸಂಪ್ರದಾಯ ಅಲ್ವ? ಗಂಡು ಕುಡಿತಾನೆ ಅಂದ್ರೆ ಮನೆ ಮನೆಯ ಮೂಲ ಆಸರೆ ಗೆ ಹುಳ ಹಿಡಿದಂತೆ ಅಲ್ಲವೇ? ಹೋಗಲಿ ಬಿಡಿ, ಕುಡಿಯೋರ ಪ್ರಕಾರ ಅದು ಕೇವಲ ಮನೋರಂಜನೆ ಗೆ, ಅದು ಗಂಡಸಿಗೆ ಮಾತ್ರ ಅಂತ ಏನು ಇಲ್ಲ ವಲ್ಲ? ಮಹಿಳೆಯರು ಇಗ ಮಾತ್ರ ಅಲ್ಲ, ಹಿಂದೇನು ಕುಡಿತ ಇದ್ರೂ, ಹುಕ್ಕ ಮುಂದವುಗಳನ್ನ ಸೇದುತ್ತಾ ಇದ್ದರು ಅಂತ ಓದಿದ್ದೀನಿ. (ಪುಸ್ತಕದಲ್ಲಿ ಓದಿದ್ದು, ನಾನು ನೋಡಿಲ್ಲ ಬಿಡಿ)
ಮತ್ತೆ ಹುಡುಗೀರು ಮಾತ್ರ ಅಲ್ಲ, ಹುಡುಗರು ಸಿಕ್ಕಾಪಟ್ಟೆ ಬದಲಾಗಿದ್ದಾರೆ, ಎಷ್ತದ್ರು ಹುಡುಗ, ನಡೆಯುತ್ತೆ ಅನ್ನೋ ಮನೋಭಾವ ನಮ್ಮದು. ಎಷ್ಟೊಂದು ಜನ ಹುಡುಗರ ಪರ್ಸ್ ನಲ್ಲಿ ಕಾನ್ದೊಮ್ಸ್ ಇತ್ತುಕೊಂಡಿರೋಲ್ವ ಹಾಗೆ. ಒಂದಂತು ನಿಮ್ಮ ಮಾತು ಸತ್ಯ, ವೈಶ್ಯ ಗ್ರಹ ಕ್ಕೆ ಹೊಗೊದಕಿಂತ ದುಡ್ಡಿಗೆ ಸಿಗೋ ಗರ್ಲ್ ಫ್ರೆಂಡ್ better ಅನ್ನೋದು ಹಲವಾರು ಜನ ನಿರ್ದರಿಸಿದ್ದಾರೆ.
ನೀವು ನನ್ನ ಮಾತನ್ನು ಒಪ್ಪದೇ ಇರಬಹುದು, ಇದು ನನ್ನ ಅಭಿಪ್ರಾಯ ಹೇಳಬೇಕು ಅನ್ನಿಸಿತು.
ಆಮೇಲೆ ಇನ್ನೊದು ಮಾತು, ಅಕಸ್ಮಾತ್ ನನೆನದ್ರು ಮಾಡುವೆ ಆಗಬೇಕು ಅಂತ ತೀರ್ಮಾನ ಮಾಡಿದರೆ ಅ “ಗರ್ಲ್ ಫ್ರೆಂಡ್” ಕ್ಯಾಟಗರಿ ಯಾ ಹುಡುಗೀರು ಬೇಡ.
ವಿನಾಯಕ ಅವರೆ ನಿಮ್ಮ ಮಾತು ನಿಜ. ಈಗಿನ ಆಧುನಿಕ ಮಹಿಳೆ ಗೊಂದಲಕ್ಕೊಳಗಾಗಿದ್ದಾಳೊ, ಅಥವಾ ಇದು ಅವಳ ದಡ್ಡತನವೋ ತಿಳಿಯುತ್ತಿಲ್ಲ. ಸಿನೆಮಾ , ಜಾಹೀರಾತುಗಳು, ಟಿವಿ ರಿಯಾಲಿಟಿ ಶೊಗಳು ಎಲ್ಲೆಡೆ ಅರೆಬೆತ್ತಲೆ ಹುಡುಗಿಯರಿಗೆ ಪ್ರಾಶಸ್ತ್ಯ. ಮೈತುಂಬ ಬಟ್ಟೆ ಧರಿಸಿರುವವರನ್ನು ಗೇಲಿ ಮಾಡುವ ಅನೇಕ ದೃಶ್ಯಗಳನ್ನು ಧಾರವಾಹಿಗಳಲ್ಲಿ,ಸಿನೆಮಾಗಳಲ್ಲಿ ನೋಡಬಹುದು.ಅದನ್ನೆ ಅನುಕರಿಸುವವರಿಗೆ ಸ್ತ್ರೀವಾದಿಗಳೆಂಬ ಹಣೆಪಟ್ಟಿಯನ್ನು ಧರಿಸಿ ಮೆರೆವವರಿಗೆ ಇದು ಶೊಷಣೆಯ ಇನ್ನೊಂದು ಮುಖ ಎಂದು ಅರ್ಥವಾಗುತ್ತಿಲ್ಲವೊ ಅಥವಾ ಇದು ಗಂಡಸರನ್ನು ಶೊಷಿಸುವ ವಿಧಾನವೆಂದು ತಿಳಿದಿದ್ದಾರೊ ಗೊತ್ತಿಲ್ಲ.
ರೂಪಾ ಅವರೇ,
ನಿಮ್ಮ ಬೆಂಬಲಕ್ಕೆ ಧನ್ಯವಾದಗಳು
ಪ್ರವಿ,
ನಿಮ್ಮ ಮಾತು ನಿಜ. ದುಡ್ಡು ಕೊಟ್ಟು ಖರೀದಿಸಬಹುದಾದ ವಸ್ತುಗಳಲ್ಲಿ ಹುಡುಗಿಯೂ ಒಂದು ಅಂತಾ ನನಗೆ ಇತ್ತೀಚಿನ ದಿನಗಳಲ್ಲಿ ಅನ್ನಿಸುತ್ತಿದೆ. ಅಂದಹಾಗೆ ಇದು ನನ್ನ ವೈಯಕ್ತಿಕ ಅನಿಸಿಕೆ ಅಷ್ಟೆ…
ಪ್ರಮೋದ್
ನಿಮ್ಮ ಮಾತು ನಿಜ. ಪಿ.ಜಿ ದುಡಿಯುವ ಹೆಣ್ಣು ಮಕ್ಕಳ ಆಶ್ರಯ ತಾಣ. ಹಾಗಾಗಿ ಅಲ್ಲಿನ ವಾತಾವರಣವೂ ಹಾಗಿದೆ!
ಶೆಟ್ಟರ್,
ನೀವು ಚೂಡಿದಾರ ಹಾಕಿಕೊಂಡು ಸಿಗರೇಟು ಸೇದುವವರನ್ನು ಮಾತ್ರ ನೋಡಿದ್ದೀರಿ…ಆದ್ರೆ ನನ್ನ ದುರಾದೃಷ್ಟ ಹಣೆಗೆ ಕುಕುಂಮ ಇಟ್ಟುಕೊಂಡು, ಹರಳೆಣ್ಣೆ ಹಾಕಿ ತಲೆ ಬಾಚಿಕೊಂಡು ವಾರಕ್ಕೆ ಮೂರು ಹುಡುಗರ ಜತೆ ಕೆಲವರನ್ನು ಕಂಡಿದ್ದೇನೆ! ಅವರ ಕುರಿತು ಅನುಮಾನ ಪಡೋ ನಾನು ಸರಿಯಿಲ್ವಾ ಅಥವಾ ಅವರೇ ಸರಿಯಿಲ್ವಾ ಅನ್ನೋದು ನನಗೆ ಗೊತ್ತಿಲ್ಲ.
ಬಾಲು ಅವರೇ,
ನಾನು ಕೊನೆಯಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆ. ನನ್ನ ಮಾತನ್ನು ಒಪ್ಪಲೇ ಬೇಕು ಅನ್ನುವ ಹಠಮಾರಿತನ ನನ್ನದಲ್ಲ ಅಂತಾ…ಸೋ ನಿಮ್ಮ ಮಾತನ್ನು ಸ್ವೀಕರಿಸಿರುವೆ…
ಸುಮಾ ಅವರೇ
ಥ್ಯಾಂಕ್ಸ್….
ಹಾಳಾಗಿ ಹೋಗ್ಲಿ ತಗ. ಆದರೆ ಕಂಡೋರ ಮನೆ ಹೊಕ್ಕು ಅವರ ಮನೆ haalu ಮಾಡದರೆ ಇದ್ರೆ ಆಯಿತು. ಈಗಿನ ಕಾಲದ ಹೆಣ್ಣು ಹುಡುಗಿಯರು ಹಕ್ಕಲು ಹತ್ತಿ ಹೋಗಿದಾರೆ. ಹುಡುಗರಲ್ಲಿ ಬದಲಾವಣೆ ಬಹಳ ನಿದಾನ. ಆದರೆ ಹುಡುಗಿಯರು ಕೆಲವೇ ವರ್ಷದಲ್ಲಿ ಹಿಂದಕ್ಕೆ ಬರಲಾರದಸ್ತು ದೂರ ಹೋಗಿದಾರೆ. ಗಂಡಸರು ಹಿಂದೂ ಕುಡಿಯುಥಿದ್ದರು, ಈಗಲೂ ಕುಡಿಯುತ್ತಾರೆ. ಅವರಿಗೆ ಕುಡಿಯಬಾರದು, ಸಿಗರೇಟ್ ಸೇದಬಾರದು ಎಂದು ಬುದ್ದಿ ಹೇಳಬೇಕಾದ ಹೆಣ್ಣು ಮಕ್ಕಳೇ ಜೊತೆಗೆ ಕೂತು ಕುಡಿಯಲು ಶುರು ಮಾಡಿದರೆ, ಭಾರತೀಯ ಕುಟುಂಬ ವ್ಯವಸ್ಥೆಯನ್ನ ದೇವರೇ ಕಾಪಾಡಬೇಕು.
ಯಾಕೋ ಬರೆದಿದ್ದು ಅಷ್ಟು ಸರಿ ಅನ್ನಿಸಲಿಲ್ಲ. ನನ್ನ ಕೆಲವೊಂದು ಅನಿಸಿಕೆ.
-ನನಗೆ ಗೊತ್ತಿರುವ ಕೆಲ ಫ್ಯಾಮಿಲಿಗಳಲ್ಲಿ ತಂದೆ-ತಾಯಿ ಇಬ್ಬರು ಸೇರಿ ಕುಡಿಯುತ್ತಾರೆ. ಇಲ್ಲಿ ಕುಡಿಯುವುದು ಅನ್ನೋದು ಚಟದ ತರಹ ಅಲ್ಲ. ಸೋಶಿಯಲ್ ಡ್ರಿನ್ಕಿನ್ಗ್ಸ !! ಅವರ ಮಕ್ಕಳೇನು ಹಾಳಾಗಿಲ್ಲ. ತುಂಬಾ ಚೆನ್ನಾಗೆ ಬೆಳೆಯುತ್ತಿದ್ದಾರೆ. ಹೆಣ್ಮಕ್ಕಳು ಕುಡಿತಾರೆ ಅನ್ನೋದು ಶಹರದ ವಾತಾವರಣದಲ್ಲಿ ಒಂದು ಸಾಮಾನ್ಯ ಸಂಗತಿ. ಅವಳು ಕುಡಿತಾಳೆ, ಸಿಗರೇಟು ಸೇದುತ್ತಾಳೆ ಅಂದ ಮಾತ್ರಕೆ ಕೆಟ್ಟು ಹೋಗಿದ್ದಾಳೆ ಎಂದು ತೀರ್ಮಾನಿಸಲು ಬರುವುದಿಲ್ಲ. ಆದರೆ ಇಂತಹ ಸಂಗತಿಗಳನ್ನು ನೋಡದೆ ಬೆಳೆದ ಸಣ್ಣ ಪಟ್ಟಣಗಳ ಮತ್ತು ಹಳ್ಳಿಗಳ ಜನರಿಗೆ ಇದೊಂದು ಜೀರ್ಣಿಸಿ ಕೊಳ್ಳಲಾಗದ ಸಂಗತಿ.
-“ನಾವು ‘ಸ್ತ್ರೀ’ಗೆ ವಿಶೇಷ ಗೌರವ ಕೊಡುವ ಸಂಪ್ರದಾಯದವರು” ಹ್ಹ ಹ್ಹ ಹ್ಹಾ ಒಳ್ಳೆ ಜೋಕು
-“ದುಡ್ಡು ಕೊಟ್ಟು ಖರೀದಿಸಬಹುದಾದ ವಸ್ತುಗಳಲ್ಲಿ ಹುಡುಗಿಯೂ ಒಂದು ಅಂತಾ ನನಗೆ ಇತ್ತೀಚಿನ ದಿನಗಳಲ್ಲಿ ಅನ್ನಿಸುತ್ತಿದೆ” – ಇತ್ತೀಚಿನ ದಿನಗಳಲ್ಲಿ ಹುಡುಗಿ ಯಾಕೆ ಹುಡುಗರನ್ನು ಖರೀದಿ ಮಾಡಬಹುದು 😉 ಹುಡುಗ “ವೈಶ್ಯೆ” ಯರೂ ಬೆಕಾ ಬಿಟ್ಟಿ ಇದ್ದಾರೆ ಸ್ವಾಮಿ.
-“ಮಹಾನಗರಿಯ ಹುಡುಗಿಯನ್ನು ಇವತ್ತು ಸಾಕಷ್ಟು ಪ್ರಜ್ಞಾವಂತ ಹುಡುಗರು ತಿರಸ್ಕರಿಸುವ ಮಟ್ಟಕ್ಕೆ ” – 😀 ಮಹಾನಗರಿಯ ಹುಡುಗಿಯರು ಮದುವೆಯಾಗೋದು ಮಹಾನಗರಿಯ ಹುಡುಗರನ್ನು. ಅವರೇನು ನೀವು ತಿಳಿದುಕೊನ್ಡಸ್ಟು ಸಾಚಾ ಅಲ್ಲ 🙂
-ನೀವು ಜಾಸ್ತಿ ತಲೆಬಿಸಿ ಮಾಡಿಕೊಬೇಡಿ. ಜಾಗತೀಕರಣಕ್ಕೆ ತಕ್ಕಂತೆ ಬದಲಾದ ನೈತಿಕ ಮೌಲ್ಯ ಗಳು , ಕುಟುಂಬ ವ್ಯವಸ್ಥೆ. ಈ ದೊಡ್ಡ ಶಹರಗಳ ಹುಡುಗಿಯರು-ಹುಡುಗರು ಅರ್ಥವಾಗಬೇಕಾದಲ್ಲಿ ನಾವು ಇನ್ನೊಂದು ಜನ್ಮದಲ್ಲಿ ಈ ಶಹರದಲ್ಲೇ ಹುಟ್ಟಬೇಕಾದಿತು.
ಅಪ್ಪಿ, ನೀಲಾಂಜಲ, ಪ್ರತಿಕ್ರಿಯೆಗೆ ಥ್ಯಾಂಕ್ಸ್…