ಸಂಜೆ ವೇಳೆಯಲ್ಲಿ ಬನಶಂಕರಿ ಎರಡನೇ ಹಂತದಲ್ಲಿರುವ ಅರಬಿಂದೋ ಶಾಲೆಯ ಮೈದಾನಕ್ಕೆ ಹೋದರೆ, ನಾಯಕ/ನಿರ್ದೇಶಕ ರಮೇಶ್ ಅರವಿಂದ್ ತಮ್ಮ ಪುಟಾಣಿ ಕಂದ ಅರ್ಜುನ್ ಜತೆ ಬ್ಯಾಟು, ಬಾಲು ಹಿಡಿದು ನಿಂತಿರುತ್ತಾರೆ. ಕ್ರಿಕೆಟ್ ಆಡುತ್ತಾ, ಮಗನ ಹಿಂದೆ ಓಡುತ್ತಿರುತ್ತಾರೆ! ಚಲನಚಿತ್ರದಲ್ಲಿ ಡಬ್ಬಲ್ ಆಕ್ಟಿಂಗ್ ಮಾತ್ರ ಮಾಡುತ್ತೇನೆ. ಸಂಸಾರದ ನೌಕೆಯಲ್ಲಿ ಮಗ, ಗಂಡ, ಅಪ್ಪ…ಹಲವಾರು ಪಾತ್ರ ಎಂದು ನಕ್ಕರು ಜಿ.ರಮೇಶ್.
‘ರಾತ್ರಿ ಎಷ್ಟೇ ತಡವಾಗಿ ಮಲಗಿದರೂ ಕೂಡ, ಪ್ರತಿ ನಿತ್ಯ ಬೆಳಿಗ್ಗೆ ೬.೧೫ಕ್ಕೆ ಏಳುತ್ತೇನೆ. ೭ಗಂಟೆವರೆಗೂ ಮನೆಯಲ್ಲಿ ಬೇರೆ ಯಾರೂ ಎದ್ದಿರುವುದಿಲ್ಲ. ಈ ವೇಳೆಯಲ್ಲಿ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳಲು ಅಗತ್ಯವಾದ ಯೋಗ, ವ್ಯಾಯಾಮಗಳನ್ನು ಮಾಡುತ್ತೇನೆ. ಚಿತ್ರೀಕರಣವಿದ್ದರೆ ೬.೩೦-೭ ಗಂಟೆಯೊಳಗೆ ಮನೆ ಬಿಡುತ್ತೇನೆ. ಮನೆಯಿಂದಲೇ ಮೇಕಪ್ ಮಾಡಿಕೊಂಡು ಕಾರಿನಲ್ಲಿ ಡ್ರೈವರ್ ಜತೆ ಚಿತ್ರೀಕರಣದ ಸ್ಥಳಕ್ಕೆ ಹೋಗುವುದು ಮಾಮೂಲಾಗಿದೆ. ಚಿತ್ರೀಕರಣ ಇಲ್ಲದ ದಿನ ೮.೩೦ಕ್ಕೆ ಪತ್ನಿ ಅರ್ಚನಾ, ಮಗ ಅರ್ಜುನ್, ಮಗಳು ನಿಹಾರಿಕಾ ಜತೆ ಕುಳಿತ ತಿಂಡಿ ತಿನ್ನುತ್ತೇನೆ. ಅದರ ನಂತರ ಆವತ್ತಿನ ಕಾರ್ಯಗಳು ಆರಂಭವಾಗುತ್ತದೆ’ ಎಂದು ಅವರು ದಿನಚರಿ ವಿವರಿಸಲು ಶುರುವಿಟ್ಟರು.
ನಟರಾಗಿದ್ದಾಗ ವರ್ಷಕ್ಕೆ ೮-೯ ಚಿತ್ರದಲ್ಲಿ ಅಭಿನಯಿಸುತ್ತಿದ್ದ ರಮೇಶ್, ನಿರ್ದೇಶಕರಾದ ನಂತರ ೧-೨ ಸಿನಿಮಾ ಮಾತ್ರ ಮಾಡುತ್ತಿದ್ದಾರೆ. ಇದುವರೆಗೆ ನಾನಾ ಭಾಷೆಗಳ ೧೨೦ಕ್ಕೂ ಅಕ ಚಿತ್ರದಲ್ಲಿ ಅಭಿನಯಿಸಿರುವ ಅವರು, ಈವರೆಗಿನ ಜೀವನದ ಬಹುಪಾಲು ದಿನಗಳನ್ನು ಚಿತ್ರೀಕರಣದಲ್ಲೇ ಕಳೆದಿದ್ದಾರೆ. ಈ ವರ್ಷ ೬ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿರುವ ಅವರು, ಬೆಳಿಗ್ಗೆ ೬.೧೫ ಚಿತ್ರೀಕರಣದ ಸ್ಥಳಕ್ಕೆ ಹೋದರೆ, ಮತ್ತೆ ಮನೆ ತಲುಪುವುದು ರಾತ್ರಿ ೯.೩೦ಕ್ಕೆ. ಚಿತ್ರೀಕರಣವಿಲ್ಲದ ಸಮಯದಲ್ಲಿ ಬೆಳಿಗ್ಗೆ ೧೦.೩೦ಗೆ ತಾವು ಮಾಡುತ್ತಿರುವ ಚಿತ್ರದ ಕುರಿತು ಸಂಬಂತರೊಂದಿಗೆ ಚರ್ಚೆ ನಡೆಸುತ್ತಾರೆ. ದಿನಕ್ಕೆ ೪ ಪತ್ರಿಕೆಗಳನ್ನು ತಪ್ಪದೇ ಓದುವ ಹವ್ಯಾಸವಿದೆ. ಜತೆಗೆ ಕನ್ನಡ, ಇಂಗ್ಲೀಷ್ ಕಾದಂಬರಿಗಳನ್ನು ಇಷ್ಟಪಡುತ್ತಾರೆ. ಮಧ್ಯಾಹ್ನ ೮-೧೦ನಿಮಿಷ ನಿದ್ದೆ ಮಾಡುವುದೆಂದರೆ ರಮೇಶ್ಗೆ ಪಂಚ ಪ್ರಾಣವಂತೆ. ನಂತರ ಸ್ವಲ್ಪ ಹೊತ್ತು ಟಿವಿ ನೋಡುತ್ತಾರೆ. ೩.೩೦ರಿಂದ ಚಿತ್ರದ ಕುರಿತು ಮತ್ತೆ ಚರ್ಚೆ ಆರಂಭಿಸಿ, ೫.೩೦ ವೇಳೆಗೆ ಫ್ರೀ ಆಗುತ್ತಾರೆ. ಸಂಜೆ ಕತ್ತಲಾದ ನಂತರ ಮಗ ಅರ್ಜುನ್ ಜತೆ ಕ್ರಿಕೆಟ್, ಪತ್ನಿ-ಮಕ್ಕಳ ಜತೆ ವಿಹಾರ…
ಒಂದು ಚಿತ್ರ ಮುಗಿದ ನಂತರ ಕುಟುಂಬದ ಜತೆ ನಾಲ್ಕಾರು ದಿನ ದೂರದೂರಿಗೆ ಪ್ರವಾಸಕ್ಕೆ ಹೋಗುವುದು ಅವರ ರೂಢಿ. ಅಪ್ಪ-ಅಮ್ಮ, ಸಹೋದರರೆಲ್ಲ ಮನೆಗೆ ಸಮೀಪದಲ್ಲೆ ಇದ್ದಾರೆ. ಬಿಡುವಿನ ವೇಳೆಯಲ್ಲಿ ಅವರ ಮನೆಗೆ ಹೋಗುತ್ತೇನೆ ಎನ್ನುತ್ತಾರೆ. ಹಿರಿಯ ನಾಗರೀಕರಿಗಾಗಿ ಇರುವ ‘ಡಿಗ್ನಿಟಿ ಫೌಂಡೇಷನ್’ ಹಾಗೂ ಬುದ್ದಿಮಾಂಧ್ಯ ಮಕ್ಕಳ ಸಂಸ್ಥೆಯಾದ ‘ಮಾನಸ’ಕ್ಕೆ ರಾಯಭಾರಿಯಾಗಿರುವ ಇವರು, ಅರ್ಥಪೂರ್ಣ ಸಾರ್ವಜನಿಕ ಕಾರ್ಯಕ್ರಮಗಳಿಗೆ ಮಾತ್ರ ಹೋಗುತ್ತಾರೆ. ಜತೆಗೆ, ಶಾಲಾ ಕಾರ್ಯಕ್ರಮಗಳನ್ನೂ ಅಟೆಂಟ್ ಮಾಡುತ್ತಾರೆ. ಚಿತ್ರೀಕರಣದ ಸಮಯದಲ್ಲಿ ಮಾತ್ರ ಅಭಿಮಾನಿಗಳಿಗೆ ಭೇಟಿಯ ಅವಕಾಶ. ಕಾರಿನಲ್ಲಿ ಪ್ರಯಾಣ ಮಾಡುವಾಗ ಪರಿಚಿತರು, ಸ್ನೇಹಿತರು, ಅಭಿಮಾನಿಗಳಿಂದ ಬಂದಿರುವ ಇ-ಮೇಲ್, ಮೊಬೈಲ್ ಸಂದೇಶವನ್ನು ಪರಿಶೀಲಿಸಿ ಉತ್ತರ ನೀಡುತ್ತಾರೆ. ಯಾರೇ ಫೋನ್ ಮಾಡಿದರೂ ಕೂಡ, ಸ್ವತಃ ಅವರೇ ರಿಸೀವ್ ಮಾಡಿ ಮಾತನಾಡುತ್ತಾರೆ. ಪ್ರಯಾಣದ ಸಮಯ ಡಿವಿಡಿ ನೋಡಲು, ಅಧ್ಯಯನಕ್ಕೆ ಮೀಸಲು.
‘ಹುಟ್ಟಿ-ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಾದರೂ, ೪ನೇ ತರಗತಿವರೆಗೆ ಓದಿದ್ದು ತಮಿಳುನಾಡಿನ ‘ಕುಂಬಕೋಣಂ’ನಲ್ಲಿರುವ ಅಜ್ಜಿಮನೆಯಲ್ಲಿ. ತಮಿಳಿನಲ್ಲಿ ರಮೇಶ್ ಅಂತಾ ಇನ್ನೊಬ್ಬ ನಟರಿದ್ದರು. ಹಾಗಾಗಿ ನನ್ನ ಹೆಸರಿನ ಹಿಂದೆ ‘ಅರವಿಂದ್’ ಸೇರ್ಪಡೆ ಆಯಿತು. ಅದು ಹೇಗೆ, ಯಾರಿಂದ ಸೇರ್ಪಡೆಯಾಯಿತು ಎಂದು ನನಗೂ ಸರಿಯಾಗಿ ಗೊತ್ತಿಲ್ಲ. ಅಲ್ಲಿ ಅರವಿಂದ್ ಎಂದು ಜನಪ್ರಿಯನಾದೆ. ಕನ್ನಡದಲ್ಲಿ ರಮೇಶ್ ಅರವಿಂದ್ ಎಂದೇ ಪರಿಚಿತನಾದೆ’ ಎಂದು ಮಾತು ರಮೇಶ್ ಮುಗಿಸಿದರು.
ಜನ್ಮ ಕುಂಡಲಿ
ಮೂಲ ಹೆಸರು-ಜಿ.ರಮೇಶ್
ಜನ್ಮ ದಿನಾಂಕ-ಸೆ.೧೦, ೧೯೬೪
ಮೂಲ ಸ್ಥಳ-ಬೆಂಗಳೂರು
ವಿದ್ಯಾಭ್ಯಾಸ-ಮೆಕ್ಯಾನಿಕಲ್ ಎಂಜಿನಿಯರಿಂಗ್
ಮೊದಲ ಅಭಿನಯದ ಚಿತ್ರ-ಮೌನಗೀತೆ(ಜನಪ್ರಿಯವಾಗಿದ್ದು ‘ಸುಂದರ ಸ್ವಪ್ನ’ ಚಿತ್ರದ ಮೂಲಕ)
ಇಷ್ಟದ ಸಿನಿಮಾ-ಲಗಾನ್, ಭೂತಯ್ಯನ ಮಕ್ಕಳು
ಇಷ್ಟದ ನಟ/ನಟಿ-ಕಮಲ್ಹಾಸನ್
Very Impressive Biography.I like his acting & talking style of kannada, very much
ಜನ್ಮ ಕುಂಡಲಿ ಬೇಡ , ಬರೀ ಕುಂಡಲಿ ಇರಲಿ ಸಾಕು 🙂
ramesh E mail _ niharjun@vsnl.com
Ramesh website: http://ramesharavind.com/
Nodi maja madi
Nimma baravanige tumbaa chennaagide….
Ramesh eshtu simple alvaa…?
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು…