ಮಳೆಗಾಲ ಶುರುವಾದರೆ
ಬರೀ ಮೋಡದ ಮುಸುಕು
ಚಾದರ ಹೊದ್ದು ಮಲಗಿದರೆ
ಏಳಲು ಒಪ್ಪುವುದಿಲ್ಲ ಮನಸು
ಮೋಡದ ಪೊರೆ ಸರಿದಾಗ
ಮಬ್ಬುಗತ್ತಲಿನ ಬೆಳಕು ಹೊರಗೆ
ಸರಿಸಲಾಗದ ಪೊರೆಯ
ಕತ್ತಲಿನ ಥಳಕು ಸದಾ ನನ್ನೊಳಗೆ
ಮನೆಯಂಗಳದ ಹೊಳೆಯಲ್ಲಿ
ಮನದಂಗಳದ ಪ್ರವಾಹಕ್ಕೆ ಬೆಲೆಯಿಲ್ಲ
ಅವಳಿಗಾಗಿ ಅತ್ತರೆ ಪ್ರಯೋಜನವೂ ಇಲ್ಲ
ಅಳದಿರಲು ಅದ್ಯಾಕೋ ಹೃದಯ ಒಪ್ಪುತ್ತಿಲ್ಲ!
ದೂರ್ವಾಸರ ಶಾಪ ಶಕುಂತಲೆಗಲ್ಲ
ದುಶ್ಯಂತನಿಗೆ ಎಂದು ಅರ್ಥವಾಗದ ಕವಿ
ತನಗೆ ತೋಚಿದ್ದನ್ನೇ ಗೀಚಿಬಿಟ್ಟಿದ್ದಾನಲ್ಲ
ಎಂದಾಗ ಸಿಟ್ಟಾಗಿದ್ದ ಮೋಡದೊಳಗಣ ರವಿ!
manataTTuva kavite.
ದೂರ್ವಾಸರ ಶಾಪ ಶಕುಂತಲೆಗಲ್ಲ ದುಶ್ಯಂತನಿಗೆ…. thumba istavaaythu
ಅವಳಿಗಾಗಿ ಅತ್ತರೆ ಪ್ರಯೋಜನವೂ ಇಲ್ಲ
ಅಳದಿರಲು ಅದ್ಯಾಕೋ ಹೃದಯ ಒಪ್ಪುತ್ತಿಲ್ಲ…….(baaravaada hrudaya)
thumba chennagide
“ದೂರ್ವಾಸರ ಶಾಪ ಶಕುಂತಲೆಗಲ್ಲ
ದುಶ್ಯಂತನಿಗೆ ಎಂದು ಅರ್ಥವಾಗದ ಕವಿ
ತನಗೆ ತೋಚಿದ್ದನ್ನೇ ಗೀಚಿಬಿಟ್ಟಿದ್ದಾನಲ್ಲ” nijavaagirabhude yochisuttiddene.. gandigu hrudayvembudu untalla
ಪ್ರತಿಕ್ರಿಯೆಗೆ ಧನ್ಯವಾದಗಳು…
baala chenagiddu..