ಅದ್ಯಾಕೋ ಗೊತ್ತಿಲ್ಲ ನಮ್ಮ ಬ್ಲಾಗ್ಲೋಕದ ತುಂಬೆಲ್ಲ ಜಾತಿಯ ಕುರಿತು ಚರ್ಚೆ ನಡೆಯುತ್ತಿದೆ. ಮೇಲ್ಜಾತಿಯವರನ್ನು ಬೈಯ್ಯುವ ಸಂಪ್ರದಾಯ ಮುಂದುವರಿದಿದೆ. ಹಾಗಾಗಿ once again ಮತ್ತೊಂದು ವಿವಾದಿತ ಲೇಖನವೊಂದಕ್ಕೆ ಕೈಹಾಕುತ್ತಿದ್ದೇನೆ!?!
ಜಾತ್ಯಾತೀತವಾದ ಎಂದರೆ ಮೇಲ್ಜಾತಿಯವರನ್ನು ಬೈಯ್ಯುವುದಾ?
ಹಾಗಂತ ಒಂದು ಪ್ರಶ್ನೆ ಎತ್ತಿದ ಕೂಡಲೇ ನಮ್ಮ ಸೋ ಕಾಲ್ಡ್ ಜಾತ್ಯಾತೀತವಾದಿಗಳ ತಲೆ ೮೦೦ ವರ್ಷಗಳ ಹಿಂದಿನ ಇತಿಹಾಸಕ್ಕೆ ಹೋಗಿ ಬಿಡುತ್ತದೆ! ‘ಆ ಊರಲ್ಲಿ ದಲಿತರು ಕೆರೆ ನೀರು ಮುಟ್ಟುವಂತಿಲ್ಲ, ಈ ಊರಲ್ಲಿ ಕೆಳವರ್ಗದವರು ಮೇಲ್ಜಾತಿ ಕೇರಿಗೆ ಬರುವಂತಿಲ್ಲ…೮೦೦ ವರ್ಷಗಳ ಕಾಲ ಬ್ರಾಹ್ಮಣರು ದಲಿತರನ್ನು ಶೋಷಿಸಿದ್ದಾರೆ….ಉದ್ದುದ್ದ ಪಟ್ಟಿಯನ್ನು ಬಿಡುಗಡೆ ಮಾಡುತ್ತಾರೆ!
ಸ್ವಾಮಿ ಪ್ರಶ್ನೆ ಅದಲ್ಲ, ಜಾತ್ಯಾತೀತತೆ ಅಂದರೆ ಮತ್ತೆ ಅಲ್ಲಿ ಯಾಕೆ ದಲಿತ, ಬ್ರಾಹ್ಮಣ ಅಂತಾ ತಾರತಮ್ಯ…?
ಊಹುಂ, ಮತ್ತದೇ ಉತ್ತರ…ಬ್ರಾಹ್ಮಣರು ದಲಿತರನ್ನು ಹಿಂದೆ ತುಳಿದರು..ಈಗಲೂ ತುಳಿಯುತ್ತಿದ್ದಾರೆ…
ಅಲ್ಲಾ ಸ್ವಾಮಿ ಬ್ರಾಹ್ಮಣರನ್ನು ಬೈದರೆ ಸಮಸ್ಯೆ ಪರಿಹಾರವಾಗತ್ತಾ?
ಊಹುಂ ಮತ್ತದೇ ರಾಗ, ಬ್ರಾಹ್ಮಣರು ದಲಿತರಿಗೆ ಗರಟೆಯಲ್ಲಿ ನೀರು ಕೊಡುತ್ತಾರೆ…
ಇಂತಹದ್ದೊಂದು ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯವಿದೆಯಾ? ಈವರೆಗೆ ಪರಿಹಾರ ಹುಡುಕಲು ಹೋದ ಬಹತೇಕ ಮಂದಿ ಸೋತಿದ್ದಾರೆ!
ಮೇಲ್ಜಾತಿಯವರು ಕೆಳವರ್ಗದವರನ್ನು ಶೋಷಿಸಿದರು, ಶೋಷಿಸುತ್ತಿದ್ದಾರೆ. ಶಾಲೆಯಲ್ಲಿ ವಿದ್ಯೆ ಕಲಿಯಲು ಅವಕಾಶ ನೀಡಲಿಲ್ಲ. ದೇವಸ್ಥಾನದ ಒಳಕ್ಕೆ ಬಿಡಲಿಲ್ಲ. ಸಹ ಪಂಕ್ತಿಯಲ್ಲಿ ಊಟ ಹಾಕಲಿಲ್ಲ. ಅಂಬೆಡ್ಕರ್ಗೆ ಮುಂಬೈನಲ್ಲಿ ಬಾಡಿಗೆ ಮನೆ ಸಿಗಲಿಲ್ಲ…ಇಂತಹದ್ದೊಂದು ಕೂಗನ್ನು ನನಗೆ ತಿಳುವಳಿಕೆ ಬಂದ ದಿನದಿಂದಲೂ ಕೇಳುತ್ತಲೇ ಇದ್ದೇನೆ.
ಅಚ್ಚರಿ ಎಂದರೆ ನಮ್ಮ ದೇಶದಲ್ಲಿ ದಲಿತರ ಪರ ದ್ವನಿ ಎತ್ತಿದವರು, ಶೋಷಣೆಯ ವಿರುದ್ಧ ಹೋರಾಡಿದವರಲ್ಲಿ ಮೇಲ್ಜಾತಿಯವರದ್ದೇ ಸಿಂಹಪಾಲು.(ವ್ಯವಸ್ಥೆಯ ವಿರುದ್ಧ ಮಾತನಾಡಲಾಗದಷ್ಟು ದಲಿತರನ್ನು ಮೇಲ್ವರ್ಗದವರು ಹೆದರಿಸಿದ್ದಾರೆ! ತುಳಿದಿದ್ದಾರೆ…ಹೀಗಾಗಿ ಅವರು ಬಂದಿದ್ದನ್ನೆಲ್ಲಾ ಸ್ವೀಕರಿಸುತ್ತಾರೆ ಎಂದು ಮತ್ತೆ ಮೇಲ್ವರ್ಗದವರನ್ನು ಬೈಯ್ಯುತ್ತಾರೆ ಹೊರತೂ ಮೇಲ್ಜಾತಿಯವ ಮಾಡುತ್ತಿರುವ ಉತ್ತಮ ಕಾರ್ಯದ ಬಗೆಗೆ ಮಾತನಾಡುವುದಿಲ್ಲ ಬಿಡಿ! ಅಥವಾ ಅವ ಮೇಲ್ಜಾತಿಯವನಲ್ಲ. ಹುಟ್ಟುತ್ತಲೇ ತನ್ನ ಜನಿವಾರ ಕಿತ್ತು ಬಿಸಾಡಿದ ಅಂತಲೂ ಹೇಳುತ್ತಾರೆ. ಒಟ್ಟಿನಲ್ಲಿ ಮೇಲ್ಜಾತಿಯ ಒಂದಿಷ್ಟು ಮಂದಿ ಕೆಳವರ್ಗದ ಶ್ರೇಯಸ್ಸಿಗಾಗಿ ದುಡಿದಿದ್ದಾರೆ ಎಂಬುದನ್ನು ನಮ್ಮ ಜಾತ್ಯಾತೀತವಾದಿಗಳು ಒಪ್ಪಿಕೊಳ್ಳುವುದೇ ಇಲ್ಲ!)
ಇವತ್ತು ಕೆಳವರ್ಗದ ಸಾಕಷ್ಟು ಜನ ವಿದ್ಯೆ ಪಡೆಯುತ್ತಿದ್ದಾರೆ. ಅಧಿಕಾರಿಗಳಾಗುತ್ತಿದ್ದಾರೆ. ಅದೆಷ್ಟೋ ಜನ ಜಾತಿಯ ವಿರುದ್ಧ ಸೆಟೆದು ನಿಂತಿದ್ದಾರೆ. ರಾಮಕೃಷ್ಣ ಆಶ್ರಮದಂಥ, ಆರ್ಎಸ್ಎಸ್ನಂಥ ಅದೆಷ್ಟೋ ಸಂಸ್ಥೆಗಳು ಜಾತಿ ಹೋಗಲಾಡಿಸಲು ಹೋರಾಡುತ್ತಿವೆ. ಆದಾಗ್ಯೂ ಜಾತಿ ಪದ್ಧತಿ ಇದೆ ಅಂದರೆ ಕಾರಣವೇನು?(ಬ್ರಾಹ್ಮಣರೇ ಕಾರಣ ಅನ್ನುತ್ತಾರೆ!)
ಶಿವರಾಮ ಕಾರಂತರು ‘ಹುಚ್ಚು ಮನಸಿನ ಹತ್ತು ಮುಖಗಳು’ ಕೃತಿಯ ಒಂದು ಕಡೆ ಬರೆದುಕೊಳ್ಳುತ್ತಾರೆ. ‘ಶಿವರಾಮ ದಲಿತರ ಕೇರಿಗೆ ಹೋಗಿ ಪಾಯಿಖಾನೆ ಗುಂಡಿತೊಡುವಾಗ ಬ್ರಾಹ್ಮಣ ಅನ್ನಿಸಲಿಲ್ಲ. ಆದರೆ ಚುನಾವಣೆಗೆ ನಿಂತಾಗ ಬ್ರಾಹ್ಮಣನಾಗಿಬಿಟ್ಟ!’(ಇದು ಅವರ ಯಥಾವತ್ತು ಸಾಲುಗಳಲ್ಲ. ಈ ಅರ್ಥ ಬರುವಂತೆ ಬರೆದುಕೊಂಡಿದ್ದಾರೆ. ಆ ಕೃತಿ ಓದಿ ಸಾಕಷ್ಟು ವರ್ಷ ಕಳೆದಿರುವುದರಿಂದ ಯಥಾವತ್ತು ಸಾಲುಗಳು ಮರೆತು ಹೋಗಿದೆ. ಕ್ಷಮೆ ಇರಲಿ)ಇನ್ನೂ ವ್ಯವಸ್ಥೆಯ ವಿರುದ್ಧ, ಸಂಪ್ರದಾಯದ ವಿರುದ್ಧ ಹೋರಾಡಿದ ಅಡಿಗರಿಗೆ ಕಡೆ ಘಳಿಗೆಯಲ್ಲಿ ನಮ್ಮ ಸಮಾಜದ ಒಂದಿಷ್ಟು ಮಂದಿ ನೀಡಿದ ಸಮ್ಮಾನವಾದರೂ ಎಂತಹದ್ದು?! ಇಂತಹ ಅದೆಷ್ಟೋ ಉದಾಹರಣೆಗಳು ನಮ್ಮ ಸಮಾಜದಲ್ಲಿ ಸಿಗುತ್ತವೆ.
ಇನ್ನೂ ಆರ್ಎಸ್ಎಸ್ನ್ನು ಜನಿವಾರಿಗಳ ಸಂಘಟನೆ ಅಂತಾ ಬೈಯ್ಯುತ್ತಾರೆ. ದಲಿತರಿಗಾಗಿ, ಚಿಂದಿ ಆಯುವ ಮಕ್ಕಳಿಗಾಗಿ ಆರ್ಎಸ್ಎಸ್ ನಡೆಸುತ್ತಿರುವ ನರೇಂದ್ರ ನೆಲೆ, ಸೇವಾ ಪ್ರತಿಷ್ಠಾನಗಳು ನಮ್ಮ ಕಣ್ಣಿಗೆ ರಾಚುವುದೇ ಇಲ್ಲ. ನೆಲೆ, ಪ್ರತಿಷ್ಠಾನಕ್ಕಾಗಿ ಬದುಕನ್ನು ಮುಡುಪಾಗಿಟ್ಟಿರುವ ಮಂದಿಯಲ್ಲಿ ಬ್ರಾಹ್ಮಣರು, ಕೊಂಕಣಿಗರೇ ಹೆಚ್ಚು ಎಂಬುದು ನಮಗೆ ತಿಳಿಯುವುದೇ ಇಲ್ಲ! ಸ್ವಯಂಸೇವಕರಲ್ಲಿ ಕೆಳವರ್ಗದವರೂ ಇದ್ದಾರೆ, ಎಲ್ಲರೂ ಒಂದೇ ಸೂರಿನಲ್ಲಿ ವಾಸಿಸುತ್ತಾರೆ. ಒಟ್ಟಿಗೆ ಊಟ ಮಾಡುತ್ತಾರೆ ಎಂಬುದೆಲ್ಲಾ ಗೊತ್ತಿದ್ದರೂ ಜನಿವಾರಿ, ಬಿಜೆಪಿ…ಇತ್ಯಾದಿ ಬೈಗುಳ ತಪ್ಪಿದ್ದಲ್ಲ!
ಸ್ವಾಮಿ ಒಂದು ರಾಮಚಂದ್ರಾಪುರ ಮಠ ಹೋಮಕ್ಕೆ ತುಪ್ಪ ಸುರಿದಾಗ ನಿಮಗೆ ಹೊಟ್ಟೆಗಿಲ್ಲದವರ ನೆನಪಾಗುತ್ತದೆ. ಆದರೆ ಒಂದು ಆದಿಚುಂಚನಗಿರಿಯಲ್ಲಿ ಸುರಿಯುವ ತುಪ್ಪದ ಲೆಕ್ಕದ ಉಸಿರೇ ನಿಮ್ಮಲ್ಲಿ ಇಲ್ಲವಲ್ಲ? ಉಪ್ಪಾರ ಮಠಗಳು, ಕೊಳದ ಮಠಗಳು ಪಟ್ಟಾಭಿಷೇಕದ ಹೆಸರಲ್ಲಿ ದುಂದುವೆಚ್ಚ ಮಾಡುವಾಗ ಚಿಂದಿ ಆಯುವವರ ಹೊಟ್ಟೆ ತುಂಬಿರುತ್ತದೆಯಾ?
ನಮ್ಮ ಸಮಾಜದಲ್ಲಿ ಕೆಳವರ್ಗದಿಂದ ಹಿಡಿದು ಮೇಲ್ವರ್ಗದವರೆಗಿನ ಪ್ರತಿ ಜಾತಿಗೂ ಅದರದ್ದೇ ಆದ ಮಠಗಳಿವೆ. ಸ್ವಾಮಿಗಳಿದ್ದಾರೆ ಎಂಬುದು ನಿಮಗೆಲ್ಲಾ ಗೊತ್ತಿಲ್ಲವೇ? ಪೇಜಾವರರು, ರಾಘವೇಶ್ವರರು, ಶೃಂಗೇರಿ ಶ್ರೀಗಳು ಮಾತ್ರ ನಿಮ್ಮ ಕಣ್ಣನ್ನು ಕುಕ್ಕುವುದು ಯಾಕೆ?
ಕೆಳಜಾತಿಯಲ್ಲೂ ಅನೇಕ ಪಂಗಡಗಳಿವೆ. ಬೆಸ್ತರು ತಮಗಿಂತ ಕೆಳ ಜನಾಂಗಕ್ಕೆ ನೀರು ಕೊಡುವುದಿಲ್ಲ. ದಲಿತರಲ್ಲೂ ಹಲವು ಪಂಗಡಗಳಿವೆ. ಗೌಡ ಜನಾಂಗದಲ್ಲೂ ಸಾಕಷ್ಟು ತಾರತಮ್ಯವಿದೆ. ಅವೆಲ್ಲಾ ನಿಮ್ಮ ಗಮನಕ್ಕೆ ಬರುವುದೇ ಇಲ್ಲವೇ? ಅಂದಹಾಗೆ ಈ ಎಲ್ಲಾ ತಾರತಮ್ಯಗಳೂ ೮೦೦ ವರ್ಷಗಳ ಹಿಂದಿನಿಂದಲೇ ನಡೆದುಕೊಂಡು ಬರುತ್ತಿದೆ!
ಅದೇನೆ ಇರಲಿ, ಸಮಾಜ ಬದಲಾವಣೆಯ ಹಾದಿ ತುಳಿದರೂ ಜಾತಿಯ ಬೇರು ಗಟ್ಟಿಯಾಗಿ ಉಳಿದುಕೊಂಡಿದೆ ಅಂದರೆ ಅದಕ್ಕೆ ಮೇಲ್ಜಾತಿಯವರು ಮಾತ್ರ ಕಾರಣ ಎಂದು ದೂಷಿಸಿವುದು ಖಂಡಿತಾ ಹುಚ್ಚುತನದ ಪರಾಮಾವಧಿ.
ರೆಡ್ಡಿಗಳ ಪ್ರಾಬಲ್ಯವಿರುವ ನಾಡಿನಲ್ಲಿ ಬ್ರಾಹ್ಮಣನೊಬ್ಬ ಟಿಕೆಟ್ ಗಿಟ್ಟಿಸಲು ಸಾಧ್ಯವಾ? ಬ್ರಾಹ್ಮಣನ ಕ್ಷೇತ್ರದಲ್ಲಿ ಲಿಂಗಾಯತ ಗೆಲ್ಲಲ್ಲು ಸಾಧ್ಯವಾ? ದಲಿತರ ಕೇರಿಗಳ ಮತವನ್ನು ಗೌಡ ಜನಾಂಗದವ ಗಿಟ್ಟಿಸುತ್ತಾನಾ…?
ಹೌದು, ನಮ್ಮ ಇಡೀ ರಾಜಕೀಯ ವ್ಯವಸ್ಥೆ ನಿಂತಿರುವುದೇ ಈ ಲೆಕ್ಕಾಚಾರದ ಮೇಲೆ. ಇದಕ್ಕೆ ಯಾವ ಪಕ್ಷವೂ ಹೊರತೇನಲ್ಲ. ಜಾತ್ಯಾತೀತ ಎಂಬ ಬ್ಯಾನರ್ ಹೊತ್ತ ಪಕ್ಷಗಳು ಹಗಲಿರುಳು ಜಾತ್ಯಾತೀತವಾದವನ್ನು ಕನವರಿಸಿದರೂ , ಟಿಕೆಟ್ ಕೊಡುವುದು ಜಾತಿ ಪ್ರಾಬಲ್ಯದ ಮೇಲೇನೆ! ಹಾಗೇ ನೋಡಿದರೆ ನಮ್ಮ ರಾಜ್ಯ ರಾಜಕಾರಣದಲ್ಲಿ ಬ್ರಾಹ್ಮಣರ ಸಂಖ್ಯೆ ತೀರಾ ಕಡಿಮೆ. ಆದರೂ ಜಾತಿ ಸಂಘರ್ಷ ಇದೆಯಲ್ಲಾ ಸ್ವಾಮಿ?!
ಹೇಗೆ ತೂಗಿ ನೋಡಿದರೂ ಜಾತಿಯನ್ನು ಬೆಳೆಸುವಲ್ಲಿ, ಭದ್ರವಾಗಿ ಕಾಪಾಡಿಕೊಂಡು ಬರುವುದರ ಹಿಂದೆ ಪ್ರತಿಯೊಬ್ಬ ರಾಜಕಾರಣಿಯ ಶ್ರಮ ಅಪಾರವಾಗಿದೆ! ಅದರ ಜತೆಗೆ ಪ್ರತಿ ಜಾತಿಯ ಪಾಲು ಇದೆ!
ಜಾತಿ ಬ್ಯಾನೆರ್ನಡಿ ಅದೆಷ್ಟು ಪ್ರೆಸ್ಮೀಟ್ ನಡೆಯುತ್ತವೆ ಎಂಬುದನ್ನು ನೀವು ಒಮ್ಮೆ ಬೆಂಗಳೂರಿನ ಪ್ರೆಸ್ಕ್ಲಬ್ಗೆ ಬಂದು ನೋಡಿ. ಯಾವುದೇ ಚುನಾವಣೆಯಲ್ಲಿ ಗೆದ್ದ ಸ್ವಜಾತಿಯ ಅಭ್ಯರ್ಥಿಯನ್ನು ಅದೆಷ್ಟು ಜಾತಿ ಬಾಂಧವರು ಸ್ವಾಗತಿಸುತ್ತಾರೆ, ಪತ್ರಿಕೆಗಳಲ್ಲಿ ಅದೆಷ್ಟು ಅಭಿನಂದನೆಗಳ ಜಾಹೀರಾತು ಬರುತ್ತವೆ ಎಂಬುದನ್ನು ಸುಮ್ಮನೆ ಒಮ್ಮೆ ಗಮನಿಸಿ ನೋಡಿ. ಆ ನಂತರವೂ ಜಾತಿ ಪದ್ಧತಿಗೆ ಮೇಲ್ಜಾತಿಯವರು ಮಾತ್ರ ಕಾರಣ ಅನ್ನಿಸಿದರೆ ನಿಮ್ಮ ಬೈಗುಳದ ಚಾಳಿ ಮುಂದುವರಿಸಿ.
ಅಂದಹಾಗೆ ಈ ಲೇಖನದ ಕುರಿತು ಮುಕ್ತ ಚರ್ಚೆಗೆ ಅವಕಾಶವಿದೆ. ಆದರೆ ಅದೇ ೮೦೦ ವರ್ಷದ ಹಿಂದಿನ ಪುರಾಣ, ಗರಟೆ, ಚಂಬುಗಳ ಕುರಿತಾಗಿ ಪ್ರಶ್ನೆ ಎತ್ತುವುದರ ಬದಲು ಪ್ರಸ್ತುತ ಏನಾಗುತ್ತಿದೆ, ಏನಾಗಬೇಕಾಗಿದೆ ಎಂಬುದನ್ನು ಚರ್ಚಿಸೋಣ. ನೀವು ಗರಟೆ, ಚೆಂಬಿನ ಕುರಿತಾಗಿ ಚರ್ಚಿಸುವುದಾದರೆ ನನ್ನದೇನೂ ಅಭ್ಯಂತರವಿಲ್ಲ. ನಾನು ಚರ್ಚೆಯಲ್ಲಿ ಭಾಗವಹಿಸದೇ ವೇದಿಕೆಯನ್ನು ನಿಮಗೆ ಬಿಟ್ಟುಕೊಡುತ್ತೇನೆ!
ಅಂದಹಾಗೆ ಈ ಲೇಖನವನ್ನು ಓದಿದ ಕೆಲವರು ನನ್ನನ್ನೂ ಮೇಲ್ಜಾತಿಯ ವಕ್ತಾರ ಅಂತಾ ಬೈದುಕೊಳ್ಳಲೂಬಹುದು ಅಲ್ವಾ?!
well written, we should ask people who talk secularism to eliminate ‘caste/religion’ from the govt application forms in first place.
ಅಮರ ಹೇಳಿದ್ದು ಸರಿ. ಅದನ್ನು ತೆಗೆದು ಬಿಟ್ಟರೆ ಬಹುತೇಕ ಸಮಸ್ಯೆಗಳು ಬರುವುದೇ ಇಲ್ಲ.
ಜಾತಿ ಎಂಬ ಸಮಸ್ಯೆ ಬಗೆ ಹರಿಯದ ಸಮಸ್ಯೆ. ಭಾರತೀಯ ಹಿಂದೂಗಳೆಲ್ಲರೂ ಒಂದೇ ಜಾತಿ ಎಂದರೆ ಹಿಂದೂ ಧರ್ಮದಲ್ಲಿ ಮೀಸಲಾತಿ ಪಡೆಯುತ್ತಿರುವ ಮಂದಿ ಆಗದು ಎಂದು ದೊಡ್ಡಮಟ್ಟದ ಹೋರಾಟ ಮಾಡುತ್ತಾರೆ. ಸವಲತ್ತಿಗಾಗಿ ಜಾತಿ ಈಗ ಹಿಂದುಳಿದವರಿಗೆ ಬೇಕು.ಹಾಗಾಗಿ ನಿರಂತರ ಜಾತಿ ಪೋಷಕರು ಬ್ರಾಹ್ಮಣರಲ್ಲ ಲಿಂಗಾಯಿತರಲ್ಲ ಎಂಬುದು ಸರ್ವವಿಧಿತ. ಈ ಮೀಸಲಾತಿ ಎಂಬ್ದುದು ಸೇಡು ತೀರಿಸಿಕೊಳ್ಳುವ ಚಟವಾಗಿ ಮಾರ್ಪಟ್ಟಿದೆ. ಹಾಗಾಗಿ ಅಂಬೇಡ್ಕರ್ ಹೇಳಿದ ಮೀಸಲಾತಿ ಜಾರಿಯಾಗಿ ಐವತ್ತು ವರ್ಷದ ನಂತರ ಅದು ಇರಬಾರದು ಎಂಬ ಮಾತಿಗೆ ಅವರೇ ಅರ್ಥ ಇಲ್ಲ ಎನ್ನುತ್ತಿದ್ದಾರೆ.
“ಜಾತ್ಯಾತೀತವಾದ ಎಂದರೆ ಮೇಲ್ಜಾತಿಯವರನ್ನು ಬೈಯ್ಯುವುದಾ?”
ನಂಗೂ ಈ ಸಮಸ್ಯೆ ತುಂಬಾ ದಿನಗಳಿಂದ ಕಾಡುತ್ತಿದೆ. ಇನ್ನು ಉತ್ತರ ಸಿಕ್ಕಿಲ್ಲ.
😀
ನೀವು ಹೇಳಿದ್ದು ಸರಿ. “ಒಗ್ಗಟ್ಟಿನಲ್ಲಿ ಬಲವಿದೆ” ಎಂಬುದನು ಜನ ತಪ್ಪಾಗಿ ತಿಳಿದು, ಗುಂಪುಗಾರಿಕೆ ಮಾಡಿ ಕಚ್ಚಾಡುತ್ತಿದ್ದಾರೆ (ಕಚ್ಚಾಡಿಸಲ್ಪಡುತ್ತಿದ್ದಾರೆ ಎಂದರೂ ತಪ್ಪಾಗದು). ನಮ್ಮ ದೇಶ ಮುಂದೆ ಬರಲು ಎಲ್ಲರೂ ಒಂದಾದರೆ ಮಾತ್ರ ಸಾಧ್ಯ. ಪರಸ್ಪರ ಕಚ್ಚಾಡುತ್ತಿದರೆ, ಹಿಂದೆ ಬ್ರಿಟಿಶರು ಅದರ ಲಾಭ ಪಡೆದಂತೆ, ಮುಂದೆ ಇನ್ನ್ಯಾರೋ ಲಾಭ ಪಡೆಯುವರು….
ಬ್ರಾಹ್ಮಣರನ್ನ, ಬ್ರಾಹ್ಮಣ ಸ್ವಾಮೀಜಿಗಳನ್ನ ಬೈದ್ರೆ ಅಪಾಯವೇನೂ ಇಲ್ಲ ಅಂತ ಅವರಿಗೆ ಗೊತ್ತು. bereyavarige ಬೈದ್ರೆ ತಮ್ಮ ಗತಿ ಏನಾಗ್ಬೋದು ಅಂತ ಗೊತ್ತಿರತ್ತೆ.
ನನಗೂ ಇದೆ ರೀತಿ ಅನಿಸಿದ್ದಿದೆ. ಹಿಂದೆ ಹೀಗಾಯ್ತು , ಹಾಗಾಯ್ತು ಅಂತ ಈಗಿನ, ಮುಂದಿನ ಪೀಳಿಗೆಗಳಿಗೂ ಜಾತಿದ್ವೇಶ ಯಾಕೆ ಹಬ್ಬಿಸೋ ಕೆಲಸ ಮಾಡ್ತಾರೆ ‘ಹಿರಿಯರು’ ಅನಿಸಿಕೊಂಡವರು ಅಂತ.
nimma vaadakke nanna poorna sammathiyide………what a wonderful writer you are?
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.
ಗೂಢಾಚಾರಿಗಳೇ ತಾವು ಅನಾಮಧೇಯವಾಗಿ ಕಮ್ಮೆಂಟ್ ಮಾಡುವುದಕ್ಕಿಂತ ಹೆಸರು ಹೇಳುವುದು ಒಳಿತು. ಇಲ್ಲವಾದರೆ ಜನ ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಅನಿ ವೇ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ಇಲ್ಲಿ ಪರ ವಿರೋಧ ಎರಡಕ್ಕೂ ಅವಕಾಶವಿದೆ
ಎಲ್ರೂ ಜಾತಿವಾದಕ್ಕೆ ನಿಂತ ತಕ್ಷಣ ೮೦೦ ವರ್ಷ ೧೦೦೦ ಅಂತ ಹೇಳ್ತರಲ್ಲ. ಆಧುನಿಕ ಸಮಾಜ ಅಂತ ನಾವೇನು ಕರಿತಾ ಇದೀವಲ್ಲ? ಜಾತಿ ಪದ್ದತಿ ಹೇಗೆ ಹುಟ್ಟಿದೆ ಅನ್ನುವುದಕ್ಕೆ ಉದಾಹರಣೆ ಇಲ್ಲೆ ಸಿಗುತ್ತೆ ನಾವು ಗಮನಿಸ ಬೇಕು ಅಷ್ಟೆ. ನಮ್ಮಲ್ಲಿ ಜಾತಿ ಪದ್ದತಿ ಇಲ್ಲ ಅಂತ ಹೇಳುವ ಎಲ್ಲ ಧರ್ಮದವರೂ ಚರಂಡಿ ಶೌಚಾಲಯ ಶುಚಿಗೊಳಿಸುವವನನ್ನು ತಮ್ಮ ಮನೆಗೆ ಬಿಟ್ಕೊತರ?
ನಾನು ನೀವು ಕೆಲಸ ಮಾಡುವ ಪರಿಸರದಲ್ಲಿ ಜಾತಿ ಪದ್ದತಿ ಹುಟ್ಕೊತಾ ಇಲ್ವ? ಹಿಂದೂ ಜಾತಿ ಪದ್ದತಿ ಬಿಡಿ. ಅದೇ ದಲಿತ ಅಧಿಕಾರಿವರ್ಗದವನು ಅದೆ ದಲಿತವರ್ಗದ ಕಸ ಗುಡಿಸುವವನ ಹೆಗಲ ಮೇಲೆ ಕೈ ಹಾಕ್ಕೊಂಡೂ ಅವನ ಜೊತೆ ತನ್ನ ಊಟ ಹಂಚಿಕೊಳ್ತನ?
೧೦-೧೫ ಶತಮಾನಗಳ ಹಿಂದೆನೂ ಇದೇ ಆಗಿರೋದು ಅದು ಕ್ರಮೇಣ ಬೆಳೆದು ಬೇರೆ ಬೇರೆ ವೃತ್ತಿ ಆಧಾರಿತ ಜಾತಿ ಪದ್ದತಿಗೆ ಎಲ್ಲರ ಕೊಡುಗೆಯೂ ಇದೆ ಅಲ್ವ? ನಾನು ಕೆಲ್ಸ ಮಾಡುವ ಕಾರ್ಖಾನೆಯಲ್ಲಿ ೧೦ನೇ ತರಗತಿ ಪಾಸಾಗದವರು ಪಾಸಾದವರ ಜೊತೆ ಸೇರಲ್ಲ ಆಡಳಿತ ಮಂಡಳಿ ಅವರವರನ್ನು ಬೇರೆಯಾಗಿ ಗುರುತಿಸುತ್ತೆ. ನಿಮಗೆ ಆಶ್ಚರ್ಯ ಆಗಬಹುದು ನಮ್ಮಲ್ಲಿ ಟಾಯ್ಲೆಟ್ ಗಳೂ ಕೂಡ ಅಧಿಕಾರಿಗಳಿಗೆ ಬೇರೆ ನೌಕರರಿಗೆ ಬೇರೆ. ಇದೆಲ್ಲ ಜಾತಿ ಪದ್ದತಿ ಅಲ್ವ? ಹೆಸರು ಬೇರೆ ಅಷ್ಟೆ ಸ್ವಾಮಿ. ೧೦-ಶತಮಾನದ ಹಿಂದೆ ಇಷ್ಟೆಲ್ಲ ಸೌಲಭ್ಯಗಳು ಙ್ಞಾನ ಇಲ್ಲದಾಗ ಅಂತದ್ದೊಂದು ಪದ್ದತಿ ಅಳವಡಿಕೆಯಾಗಿದೆ. ಅದು ತಪ್ಪು ಒಪ್ಪಿಕೊಳ್ಳೊಣ. ಆದರೆ ನನ್ನ ಊರಿನಲ್ಲಿ ಇವತ್ತು ಕೂಡ ದಲಿತರ ಕೇರಿಗೆ ನಾವು ಹೋದ್ರೆ ಅಲ್ಲಿಂದ ನಮ್ಮನ್ನು ಓಡಿಸಲಾಗುತ್ತೆ. ಪೋಷಿಸಿಕೊಂಡು ಬರ್ತಾ ಇರೋವ್ರು ಅವರ ನಾವ? ಡಿಪ್ಲೊಮದವನು ಐ ಟಿ ಐ ನವನ ಜೊತೆ ಬೆರೆಯಲ್ಲ ಐ ಟಿ ಐ ನವನು ೧೦ ನೆ ತರಗತಿಯಲ್ಲಿ ಪಾಸಾದವನ ಜೊತೆಯಲ್ಲಿ ಬೆರೆಯಲ್ಲ. ಇವರೆಲ್ಲರ ಜೊತೆ ಬಿ.ಈ ನವನು ಬೆರೆಯಲ್ಲ ಅದೆಲ್ಲ ಹಾಳಾಗ್ಲಿ ಸ್ವಾಮಿ ಬಿ.ಈ ನವನ ಜೊತೆ ಅವನಿಗಿಂತ ಹೆಚ್ಚು ಓದಿದವನು ಬೆರಿತಾ ಇಲ್ಲ. ಇದೆ ಅಲ್ವ ಜಾತಿ ಪದ್ದತಿ ಹೀಗೆ ಅಲ್ವ ಆಗ್ಲೂ ಹುಟ್ಟಿ ಕೊಂಡಿದೆ ಅಲ್ವ?
ಜಾತಿ ಪದ್ದ್ದತಿ ಅನ್ನೋದು ಬೇರೆಯವರಿಗಿಂತ ನಾನು ಮೇಲು ಅನ್ನುವುದರ ವಿಸ್ತೃತ ರೂಪ ಅಲ್ವ? ಅದು ಕ್ರಮೇಣ ಮನಸ್ಸಿನ ಮೌಡ್ಯವಾಗಿ ಬೆಳೆದಿದೆ ಅಲ್ವ?
ಸರಿಯಾಗಿ ಹೇಳಿದ್ರಿ ವಿನಾಯಕರೇ.
ನನ್ನ ಆರ್ಥಿಕ ಮತ್ತು ಬೌದ್ದಿಕ ಸಮಾನ ರೊಡನೆ ಒಡನಾಡಿಕೊಳ್ಳುತ್ತಾ ಹೋಗುವ ಮನುಷ್ಯನ ಮನಸ್ಸು ತಪ್ಪೆನ್ನುವುದಾದರೆ. ನಾವೇಕೆ ನಮ್ಮ ಕೊಳಗೇರಿಗಳಲ್ಲಿ ಮನೆ ಕಟ್ಟಿ ಕೊಳ್ಳುತ್ತಿಲ್ಲ? ದಲಿತ ಜಾತಿಯವನೆಂದು ಕರೆದು ಕೊಳ್ಳುವ ನಮ್ಮ ನಾಯಕರುಗಳೇಕೆ ಅವರ ಮನೆಗಳನ್ನು ಕೊಳಗೇರಿಯ ಮಧ್ಯದಲ್ಲೇಕೆ ನಿರ್ಮಿಸಿಲ್ಲ.
ಮುಂದಿನ ಪ್ರಶ್ನೆ, ಅದು ಹೇಗೆ ವಂಶ ಪಾರಂಪರ್ಯವಾಗಿ ಬೆಳೆಯಿತು ಎಂಬುದು ಅಲ್ಲವೆ? ತನ್ನ ಮಗ ನನ್ನಂತಾಗಲಿ ಎನ್ನುವ ಅಪ್ಪನ ತುಡಿತ ಇರಬಹುದೇ? ಅಥವಾ ನಮ್ಮ ಮನೆಯಲ್ಲಿ ನಡೆಯುತ್ತಿದ್ದ ಕಾಯಕಗಳು ನನಗೆ ಅಪ್ಯಾಯಮಾನ ಅಥವ ಸುಲಭವಾಗಿ ಕಾಣಿಸಿ ಅದನ್ನೆ ಮಗನೂ ಅನುಸರಿಸಿಕೊಂಡು ಬಂದಿರಬಹುದಲ್ಲವೆ? ಅದು ತಪ್ಪಾದರೆ ನೆಹರೂ ಮಗಳು ಪ್ರಧಾನಿಯಾದದ್ದು ತಪ್ಪೇ? ಅವರ ವಂಶವೇ ರಾಜಕಾರಣಿಗಲೇಕಾದರು? ಖರ್ಗೆ ಮಗ ಈಗಾಗಲೇ ಮರಿ ಪುಡಾರಿಯಲ್ಲವೆ? ದೇವೇಗೌಡ, ಬೊಮ್ಮಾಯಿ, ಪಟೇಲ್, ಹೆಗಡೆ, ಬಂಗಾರಪ್ಪ, ದೇವಿಲಾಲ್, ಸಿಂಧಿಯಾ, ಮಹಾಜನ್ ಮಕ್ಕಳೇಕೆ ರಾಜಕಾರಣಿಗಳಾದರು? ರವಿ ಬೆಳಗೆರೆ ಮಗಳು ಪತ್ರಕರ್ತೆ ಏಕಾದಳು? ಸುನೀಲ್ ಗವಾಸ್ಕರ್ ಮಗ ಕ್ರಿಕಟರ್ ಏಕಾದ? ಲಂಕೇಶ್ ಮಕ್ಕಳೇಕೆ ಗೌರಿ ಲಂಕೇಶ್ ಪತ್ರಿಕೆ, ಇಂದ್ರಜಿತ್ ಲಂಕೇಶ್ ಪತ್ರಿಕೆ ಎಂದು ಹೆಸರಿಟ್ಟುಕೊಂಡರು? ರಾಜಕುಮಾರ್ ಮಕ್ಕಳೇಕೆ ನಟರಾದರು? ಎಂದು ನಾವೇಕೆ ಕೇಳುತ್ತಿಲ್ಲ? ಎಲ್ಲರಿಗೂ ತಮ್ಮ ಬಾಲ್ಯದಲ್ಲಿ ಎದುರಾಗಿರುವ ಪ್ರಶ್ನೆ ಮುಂದೆ “ನೀನೇನಾಗ್ತೀಯೋ” ಎಂದಾಗ ನಾವೆಲ್ಲ ನಮ್ಮಪ್ಪನ ವೃತ್ತಿಯನ್ನೇ ಹೇಳಿರಲಿಲ್ಲವೇ? ಇಂದು ಬಿಡಿ ಪ್ರತಿಯೊಬ್ಬರೂ ಸಾಫ್ಟ್ವೇರ್ ಇಂಜಿನಿಯರ್ ಎಂದು ಹೇಳುವುದು ಸಾಮಾನ್ಯ!!! ಮೇಷ್ಟ್ರರ ಮಗನಾದ ನಾನಂತೂ ಮೇಷ್ಟ್ರೂ ಎಂದೆ ಹೇಳುತ್ತಿದ್ದೆ ಆಗೇನೂ ನನಗಾಗಲೀ ನಿಮಗಾಗಲೀ ಜಾತಿ ಪದ್ದತಿಯ ಅರಿವಿರಲಿಲ್ಲವಲ್ಲ. ನಮ್ಮ ಮನೆಯಲ್ಲಿ ನಡೆಯುತ್ತಿದ್ದ ಕಸುಬುಗಳು ನಮಗೆ ಆಗ ಸುಲಭವಾಗಿ ಕಾಣಿಸುತ್ತಿತ್ತು ಮತ್ತು ಅದರ ಕೌಶಲಗಳನ್ನು ನಾವು ನೋಡುತ್ತಾ ಬೆಳೆಯುತ್ತಿದ್ದೆವು ಅದಕ್ಕಾಗಿಯೇ ಅದು ನಮಗೆ ಸುಲಭದ್ದಾಗಿ ಕಂಡಿದ್ದರಿಂದಲೇ ಅದೇ ಆಲದ ಮರಕ್ಕೆ ನಾವೆಲ್ಲ ನೇತು ಹಾಕಿಕೊಂಡಿದ್ದಿರಬಹುದಲ್ಲವೇ?
ಇಲ್ಲೊಂದು ಉದಾಹರಣೆ ನನ್ನ ಸಹೋದ್ಯೋಗಿಯೊಬ್ಬ ಡಿಪ್ಲೊಮಾ ನಂತರ ಇಂಜಿನಿಯರಿಂಗ್ ಮುಗಿಸಿದರೂ ಆತ ನಮ್ಮೊಡನೆ ಸೇರಿದಾಗ ಆತ ಕೊಟ್ಟ ಕಾರಣ ಏನು ಗೊತ್ತೆ ತಂದೆಯ ಒತ್ತಾಯ. ಮುಂದೆ ತಿಳಿದದ್ದು ಆತನ ತಂದೆಯೂ ಇಲ್ಲೆ ಕೆಲಸ ಮಾಡುತ್ತಿದಾರೆಂದು. ಕೊನೆಗೆ ೧೦ ವರ್ಶಗಳ ನಂತರವೇ ಈ ಕೆಲಸ ಬಿಟ್ಟು ಮಾಹಿತಿ ತಂತ್ರಙ್ಞಾನ ಕ್ಷೇತ್ರಕ್ಕೆ ಜಿಗಿದದ್ದು. ಅಲ್ಲಿ ತಂದೆಯ ಮನಸ್ಸು ಎಣಿಸಿದ್ದು ಏನು ಯೋಚಿಸಿ ನೋಡಿ. ಈಗಲೂ ನನ್ನ ಸಹೋದ್ಯೋಗಿಯೊಬ್ಬ (ಈತ ಪರಿಶಿಷ್ಟ ಪಂಗಡಕ್ಕೆ ಸೇರಿದವ) ೪ನೆ ದರ್ಜೆಯ ನೌಕರನಾಗಿ ಕೆಲಸ ಮಾಡುತ್ತಿದ್ದಾನೆ ಆದರೆ ಆತನ ವಿದ್ಯಾರ್ಹತೆ ಬಿ.ಬಿ.ಎಂ ಮತ್ತು ಎಂ.ಬಿ.ಏ. ಅದಕ್ಕೆ ಕಾರಣ ಆತನ ತಂದೆಯ ಬಲವಂತ. ೈಲ್ಲಿ ತಾನು ಆರಾಮವಾಗಿ ಜೀವನ ನಡೆಸಿದ್ದೇನೆ ತನ್ನ ಮಗನೂ ಹಾಗೇ ಆರಾಮಾವಾಗಿರಲಿ ಎನ್ನುವ ತಂದೆಯ ಎಣಿಕೆ ತಪ್ಪು ಒಪ್ಪು ಅವರಿಗೆ ಬಿಟ್ಟದ್ದು ಅಲ್ಲವೆ? ನಮ್ಮೊಡನೆ ಟ್ರೈನೀಯಾಗಿದ್ದ ಒಬ್ಬಾತ ನಂತರ ತನ್ನ ಕುಲ ಕಸುಬಾದ ಶಿಲ್ಪಿಯಾಗುವುದಾಗಿ ತಿಳಿಸಿ ಹೊರಟೇಬಿಟ್ಟ ಆತನಿಗೆ ಹಿಂದುಳಿದ ವರ್ಗಕ್ಕೆ ಸಿಗುವ ಎಲ್ಲ ಸೌಲಭ್ಯಗಳಿದ್ದರೂ ಅದರಿಂದ ಒಳ್ಳೆಯ ನೌಕರಿ ಗಿಟ್ಟಿಸುವ ಅವಕಾಶವಿದ್ದರೂ ಶಿಲ್ಪಿ ಕೆಲ್ಸವೇ ನನಗೆ ಸೂಕ್ತ ಎಂದು ಆತ ನಿರ್ಧರಿಸಲಿಕ್ಕೆ ನಾವೆಲ್ಲ ಹೊಣೆಯೇ?
ಜಾತಿ ಪದ್ದತಿ ಬೆಳೆದು ಬಂದದ್ದು ಇದೇ ರೀತಿಯಲ್ಲಲ್ಲವೆ? ಸಾಮಾಜಿಕ ಸ್ತಿತಿಗತಿ ಆರ್ಥಿಕ ಶಕ್ತಿ ಬೌದ್ದಿಕತೆ ಕುಶಲತೆ ಆಧರಿಸಿ ಮನುಷ್ಯ ತಾನು ಹೆಚ್ಚೆಂದು ಭಾವಿಸುತ್ತಾ ಆ ಶಕ್ತಿಗಳಿಲ್ಲದವರು ಕೀಳೆಂದು ಭಾವಿಸುತ್ತಾ ಇಂದಿನ ಆಧುನಿಕ ಸಮಾಜ ಭಾವಿಸಿರ ಬೇಕಾದರೆ ೧೦ ಶತಮಾನಗಳ ಹಿಂದೆ ಭಾವಿಸಿದು ತಪ್ಪೆ? ಹಾಗಾದರೆ ಇಂದಿನದೂ ತಪ್ಪಲ್ಲವೆ? ಯಾವುದೇ ಜಾತಿಪದ್ದತಿ ಧರ್ಮಾಧಾರಿತವಲ್ಲ ಅದು ಸಮಾಜಾಧಾರಿತ ಅಲ್ಲವೆ? ಜಾತಿ ಪದ್ದತಿಯೆನ್ನುವುದು ಒಂದು ಮನಸ್ತಿತಿ ಅಲ್ಲವೆ? ಯೋಚಿಸಿ ನೋಡಿ
ನಮ್ಮಲ್ಲಿ ಜಾತಿಪದ್ದತಿ ವೃತ್ತಿಯಾಧಾರಿತ ಎನ್ನುವುದಕ್ಕೆ ಹುಟ್ಟಿನಿಂದ ಬ್ರಾಹ್ಮಣನಾಗಿದ್ದವ ಮಯೂರವರ್ಮನೆಂದು ಕನ್ನಡದ ಮೊದಲ ದೊರೆಯಾಗಿ ಪ್ರಸಿದ್ದಿಯಾಗಿದ್ದು ಹೇಗೆ?
ಇದೊಂದು ತಲೆಯಿಲ್ಲದವನ ಬಡಬಡಿಕೆ ಎಂದು ತೀರ್ಮಾನಿಸುವ ಮೊದಲು ಒಮ್ಮೆ ಯೋಚಿಸಿ ನೋಡಿ.
ಹೈಸ್ಕೂಲ್ ನಲ್ಲಿ ” ಜಾತಿ ಪದ್ಧತಿ ನಿರ್ಮೂಲನೆ ಹೇಗೆ” ಎಂಬ ವಿಷಯದ ಮೇಲೆ ನಾನು ಮಾತಾಡಿದ್ದೆ.
“ಎಲ್ಲ ಹಿಂದುಳಿದ ಜಾತಿಯವರಿಗೆ ಜನಿವಾರ , ಶಿವದಾರ ಹಾಕಿಬಿಡೋಣ ಅಥವಾ ಮುಂದುವರಿದ ಜಾತಿಯವರೆಲ್ಲ ಹರಿಜನರಾಗಿ ಬಿಡೋಣ” ಅಂತ ಹೇಳಿದ್ದೆ. ಈಗ ಜಾತಿ ಪದ್ಧತಿ ಮೊದಲಿನಷ್ಟು ಇಲ್ಲ.
ನನಗೆ ಹೈಸ್ಕೂಲನಲ್ಲಿ ನಮ್ಮ ಮಾಸ್ತರೊಬ್ಬರು ಹೀಗೆ ಹೇಳಿದ್ದರು
” ನಿನಗೆ ಕೆಳ ಜಾತಿಯ ಅವಮಾನ ಗೊತ್ತಾಗಬೇಕೆಂದರೆ
೧)ದೇವಾಲಯಕ್ಕೆ ಹೋಗು.. ಹೋರಗೆ ನಿಂತುಕೊ, ಪ್ರಸಾದ ಕೊನೆಗೆ ತೆಗೆದುಕೊ, ದೇವರ ದರ್ಶನ ಸಾಧ್ಯವಾಗದಿದ್ದರೆ ಬೇಸರ ಪಟ್ಟು ಕೋಳ್ಳಬೇಡ
೨) ಆ ದೇವಸ್ಥಾನದಲ್ಲಿ ಭೋಜನ ವ್ಯವಸ್ಥೆ ಇದ್ದರೆ ಹೊರಗೆ ಕುಳಿತು ಊಟ ಮಾಡು…”
ಇಷ್ಟು ಮಾತ್ರ ನೆನಪಿದೆ. ಅವರು ಮುಂದುವರೆದ ಜಾತಿಯವರಾಗಿದ್ದರು.
ತಪ್ಪು ಆಗಿದೆ, ನಾವೇ ಸರಿ ಮಾಡಬೇಕು.. ಮಾಡೋಣ.
ಹೌದು… ಮೇಲ್ವರ್ಗದವರನ್ನು ದೂಷಿಸಿದರೆ, ಅವರನ್ನು ಬೈಯುವವರೆಲ್ಲರೂ ಜಾತ್ಯತೀತವಾದಿಗಳು. ಯಾರೆಲ್ಲ ‘ದಲಿತ’ ಎಂಬ ಶಬ್ದವನ್ನು ಎತ್ತುತ್ತಾರೋ ಅವರೆಲ್ಲ ಕೋಮುವಾದಿಗಳು. ದಲಿತರಿಗೆ ಸರಕಾರದಿಂದ ದೊರೆಯುವ ಸೌಲಭ್ಯ ಎಲ್ಲೆಲ್ಲಾ ದುರುಪಯೋಗವಾಗುತ್ತಿದೆ, ಇದರಲ್ಲಿ ನಿಜವಾಗಿ ಮೇಯುವವರು ಯಾರು ಎಂಬೆಲ್ಲಾ ಅವ್ಯವಹಾರಗಳನ್ನು ಬಯಲಿಗೆಳೆದರೆ ಮಾತ್ರ ನಾವು ಕೋಮುವಾದಿಗಳು. ಎಲ್ಲಾ ತಿಳಿದಿದ್ದೂ ಬಾಯ್ಮುಚ್ಚಿಕೊಂಡು ಸುಮ್ಮನಿದ್ದರೆ… ಕಟ್ಟಾ ಜಾತ್ಯತೀತವಾದಿಗಳು.
ಬ್ರಾಹ್ಮಣ ಎಂಬ ಕಾರಣಕ್ಕೆ ಮೀಸಲಾತಿ ಕಾಟದಿಂದಾಗಿ ಉದ್ಯೋಗ ದೊರೆಯದೆ ಆ ಸಮುದಾಯದ ಮಂದಿ ಒದ್ದಾಡುತ್ತಿದ್ದಾರೆ ಎಂದು ಸೊಲ್ಲೆತ್ತುತ್ತೀರೋ… ನೀವು ಕೋಮುವಾದಿಯಾಗಿಬಿಡುತ್ತೀರಿ.
ಮೀಸಲಾತಿಯಿಂದ “ಅರ್ಹತೆ” ಗಳಿಸಿದವರಿದ್ದರೂ, ನಿಮ್ಮಲ್ಲಿರುವ ಪ್ರತಿಭೆಯ ಪ್ರಭೆಯಿಂದಾಗಿ ನೀವೇನಾದರೂ ಉನ್ನತ ಉದ್ಯೋಗ ಪಡೆದುಕೊಂಡಿರೋ… ನೀವು ಮೇಲ್ವರ್ಗದ ಮಂದಿಯಾಗಿಬಿಡುತ್ತೀರಿ ಮತ್ತು ಕೆಳವರ್ಗದವರನ್ನು ತುಳಿಯುತ್ತೀರಿ ಎಂಬ ಆರೋಪ ನಿಮ್ಮ ಮೇಲೆ ಬರುತ್ತದೆ.
ನಾನೂ ಶೀಘ್ರದಲ್ಲೇ ಕೋಮುವಾದಿ ಹುದ್ದೆ ತೊರೆದು ಜಾತ್ಯತೀತವಾದಿಯಾಗಲು ಹೊರಟಿದ್ದೇನೆ… 😉
ಲಾಭ ಅಂತು ಗ್ಯಾರಂಟಿ ಆಗೇ ಆಗುತ್ತೆ ಅವಿ, ಏನಾದರೂ ಆಗಿ ಲಾಭ ಮಾಡ್ಕೊಳಿ ಅಷ್ಟೆ.
ಸ್ವಾಮಿ ವಿನಾಯಕರವ್ರೆ ಸ್ವಲ್ಪ ಸಮಾಧಾನ. ತಮ್ಮ ಬ್ಲಾಗ್ಗೆ ನನ್ನ ದಿಕ್ಕಾರ ಪುಸ್ತಕದ ಬದನೆಕಾಯಿನ ನೋಡ್ಕಂಡು
ಬ್ಲಾಗ್ ಬರಿಬೇಡಿ ಸ್ವಲ್ಪ ಗ್ರಾಮಾಂತರದ ಪ್ರದೇಶಗಳಿಗೆ ಹೋಗಿದ್ದ ಬನ್ನಿ. ಮತ್ತೆ ಯಾವ ಮೇಲ್ಜಾತಿಯವರಿಂದ ಯಾವ ದಲಿತನಿಗು
ಅನುಕೂಲ ಆಗಿಲ್ಲ ಅಕಸ್ಮಾತ್ ಏನಾದ್ರೂ ಆಗಿದ್ರೆ ಆವರ ಸ್ವಾರ್ಥ ಇರುತ್ತೆ .
ಅಚ್ಚರಿ ಎಂದರೆ ನಮ್ಮ ದೇಶದಲ್ಲಿ ದಲಿತರ ಪರ ದ್ವನಿ ಎತ್ತಿದವರು, ಶೋಷಣೆಯ ವಿರುದ್ಧ ಹೋರಾಡಿದವರಲ್ಲಿ ಮೇಲ್ಜಾತಿಯವರದ್ದೇ ಸಿಂಹಪಾಲು.! ಈ ವಿಷಯದಲ್ಲಿ ಅವ್ರಹೆಸ್ರುಗಳನ್ನು ತಿಳಿಸಿದರೆ ಒಳ್ಳೇದು ಯಾಕಂದ್ರೆ ನಮಗೆ ಅಂತರಂಗದಿಂದ ಹೋರಾಡಿದ ಮೇಲ್ಜಾತಿಯವರ ಬಗ್ಗೆ ಸ್ವಲ್ಪ ತಿಳ್ಕೊಬೇಕು ನೋಡಿ!
ಹಾಗೇ ನಮ್ಮದೇಶಕ್ಕೆ ಸ್ವಾತಂತ್ರ್ಯ ಬಂದು ಅರ್ಧ ಶತಮಾನ ಕಳೆದರು ನಮ್ಮ ರಾಜ್ಯದಲ್ಲೇ ಇಂದಿಗೂ ಒಬ್ಬ ದಲಿತ ನಾಯಕ ಮುಖ್ಯಮಂತ್ರಿಯಾಗಿಲ್ಲ .ಯಾಕೆ ಅಂತ ತಮಗೂ ಗೊತ್ತಿರೋದೇ ಕಂಡ್ರಿ ಮೇಲ್ಜಾತಿಯವರ ಕಿತಾಪತಿ.
ಆದರು ದಲಿತರಿಗೆ ಹೆಚ್ಹಿನ ಸೌಲಭ್ಯ ಅನ್ನೋ ಹೊಟ್ಟೆ ಕಿಚ್ಚು .ಇತಿಹಾಸಕ್ಕೆ ಹೋಗ್ಬೇಡಿ ಇವತ್ತಿನ ಪರಿಸ್ಥಿತಿಯನ್ನೇ ನೋಡ್ರಿ .ಯಾಕೋ ಜಾಣ ಕುರುಡು ಅನ್ಸುತ್ತೆ !
ಪ್ರೀತಮ್,
ನಿಮ್ಮ ಪ್ರಶ್ನೆಗೆ ಉತ್ತರಿಸುವಷ್ಟು ತಿಳಿದವನಲ್ಲ ನಾನು. ನಿಜಕ್ಕೂ ನೀವೇ ಬುದ್ಧಿವಂತರು…!!!
nodi jathi bagge mathaduva rajakaranigalu athava jathiya vadeegalu antha helekolova vavaru modalu avara manegalali ee sampradaya belasali .bere jathiyavarali andare kelajathi kelagena pangada muslim hagu inethara.. sambanda belasali