ಹೇ ಏಸುವೇ, ಇವರನ್ನು ಕಾಪಾಡಪ್ಪ ತಂದೆ…!
ಸೆಪ್ಟೆಂಬರ್ 25, 2008 aksharavihaara ಮೂಲಕ
ಹಿಂದು ಧರ್ಮದಲ್ಲಿ ದಲಿತರನ್ನು ಶೋಷಿಸಿಲಾಗುತ್ತಿದೆ, ಹಿಂದುಳಿದವರನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿದೆ, ಅಂತಹವರು ಕ್ರಿಶ್ಚಿಯನ್ನರಾದರೆ ತಪ್ಪೇನು? ಎಂದು ವಾದಿಸುವವರು ಬಹಳ ಜನರಿದ್ದಾರೆ. ಹಾಗಂತ ಆ ರೀತಿ ವಾದ ಮಾಡುವವರು ಯಾವತ್ತೂ ಮತಾಂತರಗೊಂಡಿಲ್ಲ! ಮತಾಂತರಗೊಂಡ ಹಿಂದುವನ್ನು ಕ್ರೈಸ್ತ ಸಮುದಾಯ ಯಾವ ತರಹ ಸ್ವೀಕರಿಸುತ್ತದೆ ಎಂಬುದರ ಕುರಿತು ಮತಾಂತರ ಸಮರ್ಥಿಸುವ ವಿಚಾರವಾದಿಗಳಲ್ಲಿ ಉತ್ತರವಿಲ್ಲ. ಒಬ್ಬ ದಲಿತ, ಕ್ರೈಸ್ತನಾಗಿ ಪರಿವರ್ತನೆಗೊಂಡ ನಂತರ ಅನುಭವಿಸುವ ನೋವು, ಸಂಕಟಗಳ ಕುರಿತು ಅವರಿಗೆ ಗೊತ್ತಿಲ್ಲ. ಕ್ರೈಸ್ತರಲ್ಲೂ ಅನೇಕ ಪಂಗಡಗಳಿವೆ. ಅವರಲ್ಲೂ ಒಳ ಜಗಳ ಸಾಕಷ್ಟಿದೆ ಎಂಬುದರ ಪರಿವೇ ಅವರಿಗಿಲ್ಲ!
‘ತನ್ನ ಪತ್ನಿ ಸೀತೆಯನ್ನು ರಾವಣನಿಂದ ರಕ್ಷಿಸಿಕೊಳ್ಳಲಾಗದ ರಾಮ ದೇವರಾಗುವುದು ಹೇಗೆ?’ ‘ಬ್ರಾಹ್ಮಣರಿಗೆ ಮೂಲ ಪುರುಷನಾದ ವಶಿಷ್ಟ ಮಹರ್ಷಿ, ಶ್ರೀರಾಮನಿಗೆ ಗುರು ಆಗಿದ್ದಾನೆ. ಈತನು ವೇಶ್ಯೆಯಾದ ಊವರ್ಶಿ ಗರ್ಭದಲ್ಲಿ ಹುಟ್ಟಿದನು. ಸೂಳೆಯಾದ ಊವರ್ಶಿ ಮಹಾವಿಷ್ಣುವಿಗೆ ಕುಮಾರಿ. ವಶಿಷ್ಟನು ಈ ಶೂದ್ರ ಸ್ತ್ರೀಯನ್ನು ತನ್ನ ಹೆಂಡತಿಯನ್ನಾಗಿ ಮಾಡಿಕೊಂಡನು. ಇವರಿಬ್ಬರ ಸಂತಾನದಿಂದ ಬಂದವರೇ ಬ್ರಾಹ್ಮಣರು’ ಇಂತಹ ಭವ್ಯವಾದ, ದಿವ್ಯವಾದ ಸಾಲುಗಳು ಸಿಕ್ಕಿದ್ದು ಮಂಗಳೂರಿನ ಚರ್ಚ್ ಮೇಲೆ ಬಜರಂಗದಳದವರು ದಾಳಿ ನಡೆಸಿ ವಶಪಡಿಸಿಕೊಂಡ ‘ಸತ್ಯದರ್ಶಿನಿ’ ಎಂಬ ಮಹಾಗ್ರಂಥದಲ್ಲಿ! ಮತಾಂತರಕ್ಕೆ ಕುಮ್ಮಕ್ಕು ನೀಡುತ್ತಿದ್ದ ಚರ್ಚ್ಗಳ ಮೇಲೆ ಬಜರಂಗದಳದವರು ದಾಳಿ ನಡೆಸಿರುವುದು ಎಲ್ಲೆಡೆ ಚರ್ಚೆಯಾಗುತ್ತಿದೆ. ದುರಂತವೆಂದರೆ ಸತ್ಯದರ್ಶಿನಿಯಲ್ಲಿ ಕ್ರೈಸ್ತ ಪಾದ್ರಿಗಳು ಸಾರಲು ಹೊರಟ ವಿಚಾರದ ಕುರಿತು ಯಾರೂ ಉಸಿರನ್ನೇ ಎತ್ತುತ್ತಿಲ್ಲ.
ಅಲ್ಲೆಲ್ಲೋ ಡೆನ್ಮಾರ್ಕ್ನಲ್ಲಿ ಪ್ರವಾದಿ ಮಹಮ್ಮದರ ವ್ಯಂಗ್ಯ ಚಿತ್ರ ಬರೆಯಲಾಗಿತ್ತಂತೆ. ಅದಕ್ಕೆ ಬೆಂಗಳೂರಿನ ಶಿವಾಜಿ ನಗರದಲ್ಲಿ ಈಗೊಂದು ಎರಡು ವರ್ಷದ ಹಿಂದೆ ನಡೆದ ಗಲಾಟೆಯ ಕ್ಷಣಗಳು ನಿಮಗೆ ನೆನಪಿರಬಹುದು. ದುರಂತ ನೋಡಿ ಪ್ರವಾದಿ ನಿಂದನೆಗೆ ಒಳಗಾದರೆ, ಏಸುವನ್ನು ಬೈದರೆ ನಮ್ಮ ದೇಶದಲ್ಲಿ ದೊಡ್ಡ ಗಲಭೆಯೇ ನಡೆಯುತ್ತದೆ. ನಮ್ಮವರೇ ಬಣ್ಣ ಬಣ್ಣದ ಹೇಳಿಕೆ ನೀಡಿ, ಹಲವು ಬಗೆಯ ವಾದ ಮಂಡಿಸಿ ಅಂತಹ ಗಲಭೆಯನ್ನು ಸಮರ್ಥಿಸುತ್ತಾರೆ. ಆದರೆ ರಾಮನನ್ನು, ಕೃಷ್ಣನನ್ನು ಅವಹೇಳನ ಮಾಡಿದರೆ, ದಲಿತರು, ಅಸ್ಪೃಶ್ಯತೆ…ಇತ್ಯಾದಿ, ಇತ್ಯಾದಿ ಕೂಗು ಕೇಳಿಬರುತ್ತದೆ ಹೊರತೂ ಅವಹೇಳನ ಮಾಡಿದವರ ಬಣ್ಣ ಬಯಲಾಗುವುದೇ ಇಲ್ಲ!
‘ಸೀತೆಯನ್ನು ರಕ್ಷಿಸಲು ಸೋತ ರಾಮ ದೇವರಲ್ಲ ಎಂದಾದರೆ, ತನ್ನನ್ನು ತಾನೇ ರಕ್ಷಿಸಿಕೊಳ್ಳಲಾಗದೇ ಶಿಲುಬೆಗೇರಿದ ಏಸು ಜಗತ್ತಿಗೆ ಮಹಾಪ್ರಭುವಾಗುವುದು ಹೇಗೆ?! ವಸಿಷ್ಟರು ಊವರ್ಶಿ ಗರ್ಭದಲ್ಲೇ ಹುಟ್ಟಿರಬಹುದು, ನಿಮ್ಮ ಏಸು ಯಾರ ಗರ್ಭದಲ್ಲಿ ಜನ್ಮ ಪಡೆದ?! ಆತನ ತಂದೆ ತಾಯಿಗಳು ಯಾರು ಎಂಬುದರ ಕುರಿತು ಆ ಪರಿ ಗೊಂದಲವಿದೆಯಲ್ಲಾ? ಅದಕ್ಕಿಂತ ನಮ್ಮ ವಸಿಷ್ಟರೇ ಶ್ರೇಷ್ಠರಲ್ವಾ?!’ ಹಾಗಂತ ಅವರನ್ನು ಯಾರು ಪ್ರಶ್ನಿಸುವವರೇ ಇಲ್ಲದಂತಾಗಿದ್ದರು. ಅಂತಹದ್ದೊಂದು ಸಾಹಸಕ್ಕೆ ಕೈಹಾಕಿದ ಬಜರಂಗದಳದವರ ವಿರುದ್ಧ ಕೆಲವರು ಹರಿಹಾಯುತ್ತಿದ್ದಾರೆ. ಅದನ್ನು ನಿಷೇಧಿಸಿ ಅಂತಾ ಹಲವರು ಕಿರುಚುತ್ತಿದ್ದಾರೆ!
ಚರ್ಚ್ಗಳ ಮೇಲೆ ದಾಳಿ ನಡೆಸಿದ ಬಜರಂಗದಳದವರಿಗೆ ಜೈಲು ಶಿಕ್ಷೆ ಪ್ರಾಪ್ತವಾಯಿತು. ಆದರೆ ಹಿಂದು ದೇವರನ್ನು ಬೆತ್ತಲೆಗೊಳಿಸಿದ ಎಂ.ಎಫ್ ಹುಸೇನ್ಗೆ ಯಾವ ಶಿಕ್ಷೆಯಾಯಿತು? ಆತನ ವಿರುದ್ಧ ನಮ್ಮ ಸರಕಾರಗಳು ಯಾವ ಕ್ರಮ ಕೈಗೊಂಡವು?! ಮತಾಂತರಕ್ಕೆ ಕುಮ್ಮಕ್ಕು ನೀಡುತ್ತಿರುವ ನ್ಯೂಲೈಫ್ ಚರ್ಚಿನ ಪಾದ್ರಿಗಳನ್ನು ಯಾವ ಜೈಲಿಗೆ ಹಾಕಿದರು? ಹಾಗಾದರೆ ಅವರುಗಳು ಮಾಡುವುದೆಲ್ಲಾ ಅಪರಾಧವಲ್ಲವಾ? ಅದೆಲ್ಲಾ ನಮ್ಮ ಕೋಮಿನವರನ್ನು ಉದ್ರೇಕಿಸುವುದಿಲ್ಲವಾ? ಇದಕ್ಕೆಲ್ಲಾ ಯಾವ ಕೋಮು ಸೌಹಾರ್ದಿಗಳು ಉತ್ತರಿಸುತ್ತಾರೆ? ಹಿಂದುಗಳಿಗೆ ಅನ್ಯಾಯವಾದಾಗ ‘ಸಬ್ ಕೋ ಸನ್ಮತಿ ದೇ ಭಗವಾನ್’ ಅಂತಾ ಅಂಗಲಾಚುವ ಮಂದಿ ನಮ್ಮಲ್ಲಿ ಎಷ್ಟಿದ್ದಾರೆ? ನೀವೆ ಹೇಳಿಬಿಡಿ.
“ಮುಸ್ಲಿಂ ಎಂಬ ಕಾರಣಕ್ಕೆ ವೀಸಾ ವಿಳಂಬ: ಪ್ರಧಾನಿ ಜತೆ ತೆರಳದ ಸಂಪಾದಕ” ಎಂದು ಮಂಗಳವಾರ ಒಂದು ಸುದ್ಧಿ ಬಂದಿತ್ತು. ನೀವು ಗಮನಿಸಿದ್ದೀರೋ, ಬಿಟ್ಟಿದ್ದರೋ ಗೊತ್ತಿಲ್ಲ. ಅಸ್ಸಾಂನ ಪ್ರಮುಖ ದಿನಪತ್ರಿಕೆಯೊಂದರ ಸಂಪಾದಕರಾದ ಹೈದರ್ ಹುಸೇನ್ಗೆ ಮುಸ್ಲಿಂ ಎಂಬ ಕಾರಣಕ್ಕೆ ಅಮೆರಿಕ ವೀಸಾ ಕೊಡಲು ಸತಾಯಿಸಿದ ಸುದ್ಧಿ ಅದು. ಅದೇ ಘಟನೆ ನಮ್ಮ ದೇಶದಲ್ಲಿ ನಡೆದಿದ್ದರೆ…?! ಕ್ರೈಸ್ತರು ಮುಸ್ಲಿಂ ಮೇಲೆ ಅನುಮಾನಪಡಬಹುದು, ಮುಸ್ಲಿಂ ಕ್ರೈಸ್ತರನ್ನು ಅವಮಾನಿಸಬಹುದು. ಆದರೆ ಹಿಂದು ಮಾತ್ರ ಹಾಗೆ ಮಾಡುವಂತಿಲ್ಲ. ಬಾಂಗ್ಲಾ ನಿರಾಶ್ರಿತ ಎಂದು ಹೇಳಿಕೊಂಡು ದೇಶದ ಒಳನುಗ್ಗಿ ಬಾಂಬ್ ಇಡುವ ಭಯೋತ್ಪಾದಕನಿಗೂ ಜಾಗ ಕೊಡಬೇಕು ಅನ್ನುವವರು ನಮ್ಮವರೇ! ಇದು ಯಾವ ನ್ಯಾಯ ಸ್ವಾಮಿ?
ಅಷ್ಟಕ್ಕೂ ಮತಾಂತರಗೊಂಡ ಹಿಂದುವನ್ನು ಕ್ರೈಸ್ತ ಸಮುದಾಯ ಯಾವ ತರಹ ಸ್ವೀಕರಿಸುತ್ತದೆ ಎಂಬುದರ ಕುರಿತು ನಮಗೆಷ್ಟು ಗೊತ್ತಿದೆ? ಒಬ್ಬ ದಲಿತ, ಕ್ರೈಸ್ತನಾಗಿ ಪರಿವರ್ತನೆಗೊಂಡ ನಂತರ ಅನುಭವಿಸುವ ನೋವು, ಸಂಕಟಗಳನ್ನು ಬಲ್ಲವರ್ಯಾರು? ಕ್ರೈಸ್ತರಲ್ಲೂ ಅನೇಕ ಪಂಗಡಗಳಿವೆ. ಅವರಲ್ಲೂ ಒಳ ಜಗಳ ಸಾಕಷ್ಟಿದೆ ಎಂಬುದರ ಪರಿವು ನಮಗಿದೆಯಾ? ಮೊನ್ನೆ ಸಿಕ್ಕಿಬಿದ್ದ ನ್ಯೂಲೈಫ್ ಚರ್ಚಿನ ಮಂದಿ ಕ್ರೈಸ್ತ ಧರ್ಮದ ಬಂಡಾಯಕೋರರು! “ಪೆಂತ ಕೊಸ್ತ” ಎಂಬ ಪಂಥಕ್ಕೆ ಸೇರಿದ ನ್ಯೂಲೈಫ್ಗೂ, ರೋಮನ್ ಕ್ಯಾಥೋಲಿಕ್ರ ಆಚಾರ, ವಿಚಾರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಅವರಿಬ್ಬರ ನಡುವೆ ಸಾಕಷ್ಟು ಒಳಜಗಳವಿದೆ. ಪ್ರೊಟೆಸ್ಟಂಟ್ ಮತ್ತು ಕ್ಯಾಥೋಲಿಕ್ರು, ಬ್ರಾಹ್ಮಣ ಮತ್ತು ಶೂದ್ರರಿಗಿಂತ ಹೆಚ್ಚು ಬಡಿದಾಡುತ್ತಾರೆ ಎಂಬುದು ನಮ್ಮಲ್ಲಿ ಎಷ್ಟು ಜನರಿಗೆ ಗೊತ್ತು? ಪರಿವರ್ತಿತ ಕ್ರೈಸ್ತನಿಗೆ ಸಾಕಷ್ಟು ಚರ್ಚುಗಳು ಪ್ರವೇಶ ನೀಡುವುದಿಲ್ಲ. ಅರ್ಥಾತ್ ಇದು ಅಸ್ಪೃಶ್ಯತೆಯೇ ಅಲ್ಲವಾ? ‘ಸಬ್ ಕೋ ಸನ್ಮತಿ ದೇ ಭಗವಾನ್’ಎಂದು ಅಂಗಲಾಚುವ ಮಂದಿ ಈ ಕುರಿತು ಯಾಕೆ ಮಾತಾಡುವುದಿಲ್ಲ?
೧೯೦೧ ರಲ್ಲಿ ಮೇಘಾಲಯದಲ್ಲಿ ಕ್ರೈಸ್ತರ ಸಂಖ್ಯೆ ಶೇ. ೬.೧೬ ರಷ್ಟಿತ್ತು. ೧೯೯೧ ರ ಹೊತ್ತಿಗೆ ಅದು ಶೇ. ೬೪.೫೮ ಕ್ಕೆ ಏರಿಕೆಯಾಗಿದೆ. ೯೦ ವರ್ಷದಲ್ಲಿ ಈ ಪರಿ ಏರಿಕೆ ಹೇಗಾಯಿತು? ಮತಾಂತರ ಎಂಬುದೇ ಪ್ರಶ್ನಗೆ ಸಿಗುವ ಉತ್ತರ! ೧೯೦೧ ರಲ್ಲಿ ಶೇ. ೦.೦೫ ಪ್ರಮಾಣದ ಕ್ರೈಸ್ತರಿದ್ದ ಮಿಜೋರಾಮ್ ಈಗ ಸಂಪೂರ್ಣ ಕ್ರಿಶ್ಚಿಯನ್ ಸಾಮ್ರಾಜ್ಯ! ನಾಗಾಲ್ಯಾಂಡ್, ತ್ರಿಪುರಾ, ಮಣಿಪುರ. ಅಸ್ಸಾಂ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ದೇಶದ ಶೇ. ೨.೫ ರಷ್ಟು ಜನ ಕ್ರೈಸ್ತರು ಹಾಗಂತ ಮಿಷನರಿಗಳು ಕೊಟ್ಟ ಲೆಕ್ಕ. ಪರಿವರ್ತನೆಗೆ ಒಳಗಾಗಿರುವವರನ್ನೂ ಸೇರಿಸಿದರೆ ಆ ಸಂಖ್ಯೆ ಎಷ್ಟಾಗುತ್ತದೋ ಬಲ್ಲವರ್ಯಾರು!
ಹಣದ ಆಮಿಷ ಒಡ್ಡಿ, ಇತರ ಆಮಿಷ ಒಡ್ಡಿ ಇನ್ನೊಬ್ಬರ ಹೆಂಡಿರನ್ನೇ ಲಫಟಾಯಿಸಿಕೊಂಡು ಹೋಗುವ ಈ ಕಾಲದಲ್ಲಿ ಆಮಿಷದಿಂದ ಮತಾಂತರ ಮಾಡುವುದು ದೊಡ್ಡ ಸಾಹಸವಲ್ಲ ಬಿಡಿ! ಆದರೂ ನಾವು ಅದಕ್ಕೆ ನಮ್ಮದೇ ತಪ್ಪುಗಳನ್ನು ಮಂಡಿಸುತ್ತೇವೆ. ಕ್ರೈಸ್ತರನ್ನು ನಿರಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಯತ್ನಿಸುತ್ತೇವೆ ಎಂಬುದು ನಿಜಕ್ಕೂ ದುರಂತದ ಪರಾಕಾಷ್ಠೆ. ಮತಾಂತರ ಎಂಬುದು ಕ್ರೈಸ್ತರಿಗೆ ಎಷ್ಟು ಪರಮಪ್ರಿಯವಾದ ವಿಚಾರವೆಂದರೆ ಮತಾಂತರರದ ಕುರಿತು ಆ ನಾಡಿನಲ್ಲಿ ಫಿಎಚ್ಡಿ ಮಾಡಿದವರು ಹಲವರಿದ್ದಾರೆ!
The conversion process begins with three predispositions: (1) an inclination to seek answers to the mysteries, tragedies, and the circumstances of life through religion and (2) a sense of an enduring frustration that (3) has not been met through one’s present faith. These feelings prompt individuals to become religious seekers. They are oriented toward the kind of answers that might come from a transempirical source… ಹಾಗಂತ ಹೆನ್ರಿ ನ್ಯೂಟನ್ ಮಲೋನಿ ಎಂಬ ಮನಶಾಸ್ತ್ರಜ್ಞನೊಬ್ಬ ಮತಾಂತರ ಮಾಡುವವರು ಅನುಸರಿಸುವ ವಿಧಾನ ಕುರಿತ ಆಡಿರುವ ಮಾತುಗಳಿವು. ಕ್ರೈಸ್ತರ ಮತಾಂಧತೆಗೆ ಇದಕ್ಕಿಂತ ಒಳ್ಳೇ ಮಾತು ಬೇಕೇ? ಮತಾಂತರ ಎಂಬ ದಂಧೆಯನ್ನು ಕ್ರೈಸ್ತರು ತುಂಬಾ ಶ್ರದ್ಧೆಯಿಂದ ಮಾಡುತ್ತಾರೆ ಎಂದು ಗೊತ್ತಿದ್ದರೂ ನಾವು ನಮ್ಮ ಧರ್ಮದ ಹುಳುಕುಗಳೇ ಮತಾಂತರಕ್ಕೆ ಕಾರಣ ಅನ್ನುತ್ತೇವಲ್ಲಾ?
ವೇದಿಕೆಯಲ್ಲಿ ನಿಂತು ಭಾಷಣ ಬಿಗಿಯುವ ಮಂದಿಗೆ, ಎಸಿ ರೂಮಿನಲ್ಲಿ ಕೂತು ಗೀಚುವ ಮಂದಿ ಎಡ, ಬಲ…ಯಾವ ಸಂಘಟನೆಯಲ್ಲಿದ್ದರೂ ಯಾವತ್ತೂ ಅವರಿಗೆ ಕಷ್ಟವಿಲ್ಲ. ಆದರೆ ಸಾಮಾನ್ಯ ಕಾರ್ಯಕರ್ತ ಅನ್ನಿಸಿಕೊಂಡವನನ್ನು ಜೈಲಿಗೆ ಹಾಕಿದರೆ ಒಮ್ಮೊಮ್ಮೆ ಆರು ತಿಂಗಳಾದರೂ ಬಿಡಿಸಿಕೊಂಡು ಬರುವವರು ಯಾರೂ ಇರುವುದಿಲ್ಲ. ಆದರೂ ಇಂಥ ಕೃತ್ಯಗಳನ್ನೆಲ್ಲಾ ವಿರೋಧಿಸುತ್ತಾ, ವರ್ಷಕ್ಕೆ ೬ ತಿಂಗಳು ಜೈಲಿನಲ್ಲಿ ಕೊಳೆಯಲು ಬಜರಂಗಿಯೊಬ್ಬ ಸಿದ್ಧ ಎಂದರೆ ಆತನ ದೇಶಪ್ರೇಮಕ್ಕೊಂದು ಸಲಾಮ್ ಅನ್ನಲ್ಲೇ ಬೇಕು. ಅಷ್ಟಕ್ಕೂ ಬಜರಂಗದಳ ಎಂಬದು ಯೂನಿವರ್ಸಿಟಿ ಪ್ರೊಫೆಸರ್ಗಳ ಸಂಘಟನೆಯಲ್ಲ! ಅಕಾಡೆಮಿಕ್ ನಾಟಕಕಾರರೂ ಅದರಲ್ಲಿ ಇಲ್ಲ!
ರಿಕ್ಷಾ ಚಾಲಕರು, ಟ್ಯಾಕ್ಸಿ ಚಾಲಕರು…ತುತ್ತು ಊಟಕ್ಕೂ ದಿನದ ದುಡಿಮೆಯನ್ನೇ ಆಧರಿಸಿರುವ ಮಂದಿಯೇ ಹೆಚ್ಚು. ಆದರೂ ಅವರು ತಮ್ಮ ನೋವು ಸಂಕಟಗಳನ್ನೆಲ್ಲಾ ಮರೆತು ದೇಶದ ಒಳಿತಿಗಾಗಿ ಜೀವನದ ಒಂದಿಷ್ಟು ಕ್ಷಣ ಕೊಡುತ್ತಾರೆ. ಅಂತಹವನಿಗೂ ಅಡ್ಡಗಾಲಾಗಿ ನಿಂತು, ಆತನನ್ನು ಜೈಲಿಗೆ ಕಳುಹಿಸಿ ಎಂದು ಕೂಗಾಡುತ್ತಾರಲ್ಲ ನಮ್ಮಲ್ಲಿಯ ಕೆಲ ಮಂದಿ! ೩೫೫ ನೇ ವಿಯನ್ನು ರಾಜ್ಯಕ್ಕೆ ವಿಧಿಸುತ್ತೇವೆ ಎಂದು ಕಿರುಚತ್ತಾರಲ್ಲ? ನಾವು ನಮ್ಮ ತತ್ವ, ಸಿದ್ಧಾಂತಗಳನ್ನೆಲ್ಲಾ ಬದಿಗಿಟ್ಟು ಅಂತಹ ಕೆಳ ಮಟ್ಟದ ಕಾರ್ಯಕರ್ತರ ಬಗ್ಗೆ ಆಲೋಚಿಸಬೇಕಿದೆ. ಈಗಲೇ ಈ ಪರಿ ಉರಿಯುತ್ತಿರುವ ಮತಾಂಧರು, ಭಯೋತ್ಪಾದಕರಿಗೆ ಸಡ್ಡು ಹೊಡೆಯುವ ಸಂಘಟನೆಯೊಂದು ದೇಶದಲ್ಲಿ ಇಲ್ಲದಿದ್ದಿದರೆ ದೇಶದ ಸ್ಥಿತಿ ಇಷ್ಟೊತ್ತಿಗೆ ಹೇಗಿರುತ್ತಿತ್ತು ಎಂಬುದನ್ನು ಒಮ್ಮೆ ಕಲ್ಪಿಸಿಕೊಂಡು ನೋಡಿ. ಓ ಏಸುವೇ, ಹಾಗೆ ಕಲ್ಪಿಸಿಕೊಂಡ ನಂತರವೂ ಮತಾಂಧರನ್ನು ಪ್ರೋತ್ಸಾಹಿಸುವವರನ್ನು ನೀನೇ ಕಾಪಾಡಪ್ಪಾ ತಂದೆ! ಎಂದು ಪ್ರಾಥಿಸೋಣ ಅಲ್ವಾ?!
Like this:
Like ಲೋಡ್ ಆಗುತ್ತಿದೆ...
Related
Posted in ಅವಿಭಾಗೀಕೃತ | 4 ಟಿಪ್ಪಣಿಗಳು
ದಯವಿಟ್ಟು ಕಾಪಾಡು, ಇನ್ನು ಕೆಲವೆ ಜನ ಉಳಿದಿದ್ದೆವೆ… ನಾವೂ ಅವರ ಜೊತೆ ಸೇರಿದ ಮೇಲೆ ಇವರನ್ನು ಎನಾದರು ಮಾಡು ಎಕೆಂದರೆ ದಯಾಮಯನಾದ ಅವರ ದೇವರು ಅವರನ್ನು ಅದಕ್ಕೆಂದೆ ನೇಮಿಸಿದ್ದಾರೆ ಮತ್ತು ನಮ್ಮ ದೇವರುಗಳೆಲ್ಲ ನಮ್ಮ ಬುದ್ದಿಜೀವಿಗಳ ಮನೆಯ ಅಟ್ಟದ ಗೋಣಿಚೀಲದಲ್ಲಿ ಉಸಿರುಗಟ್ಟಿ ಕುಳಿತಿದ್ದಾನೆ, ಅಲುಗಾಡದಂತೆ.
-ಶೆಟ್ಟರು, ಮುಂಬಯಿ
ಚರ್ಚ್ ಮೇಲಿನ ಆಕ್ರಮಣವನ್ನು ಪ್ರತಿಭಟಿಸ್ವ ಭರಾಟೆಯಲ್ಲಿ ನಮ್ಮ ಮಾಧ್ಯಮಗಳು ಅದಕ್ಕೆ ಪ್ರಚೋದನೆಯನ್ನು ನೀಡಿದ ಅಂಶವನ್ನೇ ಮರೆತಿರುವುದನ್ನು ನೆನಪಿಸಿರುವುದು ಶ್ಲಾಘನೀಯ. ಮಹೇಶ್ ಭಟ್ ತರಹದ ಬುದ್ಧಿಜೀವಿಯನ್ನು ಕೂರಿಸಿಕೊಂಡು ಚರ್ಚೆ ನಡೆಸುವ ಚಾನೆಲ್ಲಿನವರು ಮತಾಂತರ ಸಾಮಾಜಿಕ ಜೀವನದಲ್ಲಿ ಯಾವ ರೀತಿಯ ಕೋಲಾಹಲವನ್ನು ಉಂಟು ಮಾಡುತ್ತಿದೆ ಎಂಬುದನ್ನು ಚರ್ಚಿಸುವುದಕ್ಕೆ ಏಕೆ ಹಿಂದೇಟು ಹಾಕುತ್ತಾರೆ? ಚರ್ಚಾಸ್ಪದವಾದ ವಿಷಯವಿದು…
supreeth
ಶೇಟ್ಟರ್
ನಿಮ್ಮ ಕಳಕಳಿ ಸದಾ ಇರಲಿ
ಸುಪ್ರೀತ್
ಗಂಭೀರವಾದ ವಿಚಾರ ಚರ್ಚೆ ಮಾಡೋದು ಹೆಚ್ಚಿನವರಿಗೆ ಅಲರ್ಜಿ ಅನ್ನಿಸತ್ತೆ!
please post this to our SECULAR RAJAKARANIGALU. LAJJE ILLADAWARU.