ಮೆಣಸಿನಕಾಯಿ ಮತ್ತು ಮಹಿಳಾವಾದ!
ಸೆಪ್ಟೆಂಬರ್ 12, 2008 aksharavihaara ಮೂಲಕ
ಯಾವಾಗಲೂ ಬೆಳಿಗ್ಗೆ ೬ ಗಂಟೆ ೬೦ ನಿಮಿಷಕ್ಕೆ ಸರಿಯಾಗಿ ಎದ್ದುಬಿಡುವ ನಾನು ಮೊನ್ನೆ ಏಳುವುದು ಸ್ವಲ್ಪ ಲೇಟಾಯಿತು. ಅದೇನೋ ತರಕಾರಿ ತಗೊಂಡು ಬರಬೇಕಿತ್ತಂತೆ. ತಡಿರಿ ಒಂದ್ನಿಮಿಷ, ಮುಖ ತೊಳೆದು ತಗೊಂಡು ಬರ್ತೀನಿ ಅಂದ್ರೆ ಅಕ್ಕಾ ಕೋಪ ಮಾಡಿಕೊಂಡು ಅಂಗಡಿ ಕಡೆಗೆ ಓಡಿದಳು. ಯಾವಾಗಲೂ ಮೂಗಿನ ತುದಿಗೆ ಸಿಟ್ಟು! ಅದರಲ್ಲೂ ಹುಡುಗರ ಸೋಮಾರಿತನ ಕಂಡರೆ ಮೈಮೇಲೆ ಚೇಳು ಕಡಿದವರಂತೆ ಆಡುತ್ತಾರೆ. ಹಾಗಾಗಿಯೇ ನಾನು ಅಕ್ಕನನ್ನು ಮಹಿಳಾವಾದಿ ಅಂತಾ ಅಣಗಿಸುವುದು! (ನಿಜ ಹೇಳಬೇಕು ಅಂದ್ರೆ ಅಕ್ಕಾ ಯಾವ ವಾದಿಯೂ ಅಲ್ಲ(ನ್ಯಾಯವಾದಿ ಕೂಡ!))
ಅಂಗಡಿಯಿಂದ ಗೇಟಿನ ಬಳಿ ಬರುತ್ತಿದ್ದಂತೆ ‘ಏ ಮೆಣಸಿನ ಕಾಯಿ ತರೋದು ಮರೆತು ಬಿಟ್ಟು ಬಂದೆ ತಗೊಂಡು ಬಾರೋ ಪ್ಲೀಸ್’ ಅಂತಾ ರಾಗ ಶುರುಮಾಡಿದರು. ಸಿಕ್ಕಿದ್ದೇ ಛಾನ್ಸು ಮಿಸ್ ಮಾಡಿಕೊಳ್ಳಬಾರದು ಅನ್ನಿಸಿತು. ಅರೆ ಅದೇನಕ್ಕೋ ಒಂದ್ಸರಿ ಅಂಗಡಿಗೆ ಹೋಗಿ ಬರೋದ್ರೊಳಗೆ ಮಹಿಳೆಯ ಸ್ವಾಭಿಮಾನ ಕುಸಿದು ಹೋಯ್ತಾ? ಅಂತಾ ನಾನೂ ರಾಗವಾಗಿಯೇ ಕೇಳಿದೆ. ಆಮೇಲೆ ಇನ್ನೂ ಹೆಚ್ಚಿಗೆ ಮಾತಾಡಿದರೆ ದೋಸೆ ಮಾಡುವುದನ್ನೇ ಕ್ಯಾನ್ಸಲ್ ಮಾಡುತ್ತಾರೆ ಅಂತಾ ಮೆಣಸಿನಕಾಯಿ ತಗೊಂಡು ಬಂದೆ ಬಿಡಿ!
ಈ ಪೀಠಿಕೆಯನ್ನು ಇಲ್ಲಿ ಯಾಕೆ ತಗೊಂಡು ಬಂದೆ ಅಂದ್ರೆ, ನಾವು ಎಷ್ಟೇ ಸ್ವಾಭಿಮಾನಿಯಾಗಿ, ಕೆಲ ವಾದಿಗಳ ಮುಖವಾಡ ಹಾಕಿಕೊಂಡು ಬದುಕುತ್ತೇವೆ ಅಂದ್ರೂ ನಮಗೆ ಪರಾವಲಂಬಿಗಳಾಗಿ ಬದುಕುವ ಸಮಯ ಬದುಕಿನ ಒಂದೆಲ್ಲಾ ಒಂದು ಗಳಿಗೆಯಲ್ಲಿ ಬಂದೇ ಬರತ್ತೆ. ಗಂಡನಿಗೆ ಹೆಂಡತಿ ಬೇಕು, ಅಕ್ಕನಿಗೆ ತಮ್ಮ ಬೇಕು, ಹಾಗೇ ತಮ್ಮನಿಗೂ ಅಕ್ಕಾ ಬೇಕು. ಅಣ್ಣನಿಗೆ ತಂಗಿ ಬೇಕು. ತಂಗಿಗೂ ಅಣ್ಣ ಬೇಕು. ಆದ್ರೂ ನಾವು ಮಹಿಳಾವಾದ, ಪುರುಷವಾದ ಗುದ್ದಾಡುತ್ತೇವೆ! ಭಾಷಣ ಬಿಗಿಯುತ್ತೇವೆ!
ಅಮ್ಮಾ ಮತ್ತು ಅಕ್ಕನ ಕುರಿತಾಗಿ ಆಲೋಚಿಸುತ್ತಿದೆ. ಅಮ್ಮ ಮನೆಗೆ ಬಂದ ಯಾರ ಹತ್ತಿರವಾದರೂ ಕೆಲಸ ಮಾಡಿಸಿಕೊಳ್ಳುತ್ತಾರೆ. ಅವರು ಕೆಲಸ ಮಾಡಿ ಅಂತಾ ಹೇಳದಿದ್ದರೂ, ಬಂದವರೇ ಕೇಳಿಕೊಂಡು ಕೆಲಸ ಮಾಡಿಕೊಡುತ್ತಾರೆ. ಅದಕ್ಕೆ ಕಾರಣ ಅಮ್ಮ ಬಂದವರ ಮೇಲೆ ತೋರಿಸುವ ಪ್ರೀತಿ, ವಾತ್ಸಲ್ಯ. ಬಹುಶಃ ನಮ್ಮ ಅಮ್ಮನಿಗೆ ಮಹಿಳಾವಾದದ ಗಂಧ ಗಾಳಿಯೂ ಗೊತ್ತಿರಲಿಕ್ಕಿಲ್ಲ. ತೀರಾ ವಿದ್ಯಾವಂತೆಯೂ ಅಲ್ಲ. ಸಾಹಿತ್ಯ, ಫೆಮಿನಿಸಂಗಳ ಪರಿವೇ ನಮ್ಮ ಅಮ್ಮನಿಗಿಲ್ಲ.
ಅಕ್ಕ ಈಗಿನ ಕಾಲದವಳು. ಓದಿಕೊಂಡವಳು. ಅದರಲ್ಲೂ ದೊಡ್ಡ ದೊಡ್ಡ ಅಕಾಡೆಮಿಕ್ ಸಾಹಿತಿಗಳನ್ನು ಓದಿಕೊಂಡವಳು. ಹಾಗಾಗಿಯೇ ಅವಳ ಸ್ವಭಾವ ಒಂತರಹ! ಅಕ್ಕನಿಗೆ ಇನ್ನೊಬ್ಬರಿಂದ ಕೆಲಸ ಮಾಡಿಸಿಕೊಂಡು ಗೊತ್ತಿಲ್ಲ.
ಅಡಿಗೆ ಮನೆ ಹೊಕ್ಕ ಹೆಣ್ಣು ಮಗಳನ್ನು ಶೋಷಿಸುತ್ತೇವೆ ಎಂಬುದು ನಿಜ. ಆದರೆ ಇದೇ ಸಮಾಜದ ಒಂದು ವರ್ಗ ಹೆಣ್ಣಿಗೆ ಪ್ರೋತ್ಸಾಹ ನೀಡುತ್ತದೆ ಎಂಬುದು ಸುಳ್ಳಲ್ಲ. ಪ್ರತಿ ಪುರುಷನ ಯಶಸ್ಸಿನ ಹಿಂದೆ ಮಹಿಳೆಯ ಪ್ರಭಾವ ಹೇಗಿದೆಯೋ ಹಾಗೆ, ಪ್ರತಿ ಸ್ತ್ರೀ ಸಾಧನೆಯ ಹಿಂದೆಯೂ ಪುರುಷನ ಕೈ ಇರುತ್ತದೆ. ಒಮ್ಮೆ ಈ ಸಮಾಜದಲ್ಲಿ ಪುರುಷರೂ ಮಾತ್ರ ಇದ್ದಿದ್ದರೆ ಅಥವಾ ಮಹಿಳೆ ಮಾತ್ರ ಇದ್ದಿದ್ದರೆ ನಮ್ಮ ಸಮಾಜ ಹೇಗಿರಬಹುದಿತ್ತು ಎಂಬುದನ್ನು ಅಕಾಡೆಮಿಕ್ ಮಹಿಳಾವಾದಿಗಳು ಒಮ್ಮೆ ಆಲೋಚಿಸಬೇಕು.
ಇತ್ತೀಚೆಗೆ ಯಾವುದೋ ಒಂದು ಬ್ಲಾಗ್ ನೋಡುತ್ತಿದೆ. ಹುಡುಗಿಯರಿಗೆ ಬಕೆಟ್ ಹಿಡಿಯಲೇ ಮೀಸಲಾಗಿರುವ ಬ್ಲಾಗ್ ಅದು ಅನ್ನಿಸಿತು ನನಗೆ! ಹುಡುಗಿಯರು ಅಂದಾಕ್ಷಣ ಜೊಲ್ಲು ಸುರಿಸಿಕೊಂಡು ನೌಕ್ರಿ ಕೊಡುವ ಮಂದಿ ಇವತ್ತು ಹೆಚ್ಚಾಗಿದ್ದಾರೆ. ಹುಡುಗಿ ಸ್ವಲ್ಪ ಚೆಲ್ಲು ಚೆಲ್ಲಾಗಿದ್ದರೆ, ಸ್ವಲ್ಪ ನಗಲು ಗೊತ್ತಿದ್ದರೆ, ಅರೆ ನಗ್ನ ಬಟ್ಟೆ ತೊಡಲು ಸಿದ್ಧವಿದ್ದರೆ ಅವಳ ಎದುರಿಗೆ ಎಂತಹ ಪ್ರತಿಭಾವಂತನಿಗೂ ಕೆಲಸ ಸಿಗಲಾರದು. ಇವತ್ತಿನ ಹುಡುಗಿಯರೂ ಕಡಿಮೆ ಇಲ್ಲ ಬಿಡಿ. ಕಂಪನಿಯ ಮುಖ್ಯ ಸ್ಥಾನದಲ್ಲಿ ಕುಳಿತವನನ್ನು ಬುಟ್ಟಿಗೆ ಹಾಕಿಕೊಳ್ಳುವ ಎಲ್ಲಾ ಕಲೆಯೂ ಅವರಿಗೆ ಚೆನ್ನಾಗಿ ಗೊತ್ತಿದೆ. aರ್ಥಾತ್ ಎಲ್ಲೋ ಒಂದು ಕಡೆ ಹುಡುಗರು ಶೋಷಣೆಗೆ ಒಳಗಾಗುತ್ತಿದ್ದಾರೆ ಅಲ್ವಾ?!
ಮುಖವಾಡ ಧರಿಸಿರುವ ಮಹಿಳಾವಾದಿಗಳ ಕಥೆ ಹೇಳುತ್ತಾ ಹೋದರೆ…ನಮ್ಮ ನಾಲಿಗೆ ಹೊಲಸಾಗುತ್ತದೆ ಹೊರತು ಮತ್ತೇನೂ ಬದಲಾವಣೆಯಾಗುವುದಿಲ್ಲ! ಒಂದು ಮೆಣಸಿನ ಕಾಯಿಂದಾಗಿ ಇಷ್ಟೆಲ್ಲಾ ಬರೆಯಬೇಕಾಯಿತು!
(ವಿಶೇಷ ಸೂಚನೆ: ಆದರೂ ನಾನು ಅಕ್ಕನಿಗೆ ಹೆದರುತ್ತೀನಿ. ಈ ಲೇಖನವೇನಾದ್ರೂ ಅಕ್ಕನ ಕಣ್ಣಿಗೆ ಬಿದ್ದರೆ ಮನೆಯಲ್ಲಿರುವ ಒಂದೇ ಒಂದು ಲಟ್ಟಣ್ಣಿಗೆ ಮುರಿಯಬಹುದೆಂಬ ಭಯ ನನ್ನನ್ನು ಕಾಡ್ತಾ ಇದೆ!)
Like this:
Like ಲೋಡ್ ಆಗುತ್ತಿದೆ...
Related
Posted in ಚಿಂತನ ಚಾವಡಿ | 14 ಟಿಪ್ಪಣಿಗಳು
ಪ್ರಿಯ ಆತ್ಮೀಯ ಸ್ನೇಹಿತರೆ,
ನಾನು ಕನ್ನಡ ಹನಿಗಳ ಬಳಗದಿಂದ ವಿನಂತಿಸಿಕೊಳ್ಳುತ್ತಿರುವುದೇನೆಂದರೆ, ನಮ್ಮ ಕನ್ನಡ ಹನಿಗಳು ಹಾಸ್ಯ್, ಕವನ, ಹನಿಗವನ ಇನ್ನೂ ಹತ್ತು ಹಲವನ್ನು ಹೊಂದಿದೆ.
http://kannadahanigalu.com/
ನೀವು ಮೀಕ್ಷಿಸಿ, ನಿಮ್ಮ ಬ್ಲಾಗ್ನಲ್ಲಿ ಪ್ರಕಟಿಸುವಿರಾ, ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಬ್ಲಾಗ್ನ್ನು ಪ್ರಕಟಿಸುತ್ತೇವೆ.
ಹಾಗೆಯೇ ಸಾದ್ಯವಾದಲ್ಲಿ ನಿಮ್ಮಲ್ಲೂ ಕವನ, ಚುಟುಕ, ಕವಿತೆ, ಹಾಸ್ಯ ಮುಂತಾದವುಗಳಿದ್ದರೆ ನಿಮ್ಮ ಹೆಸರಿನಲ್ಲಿ ಪ್ರಕಟಿಸಬಹುದು.
ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ – kannadajokes@gmail.com
ಧನ್ಯವಾದಗಳೊಂದಿಗೆ……..
maganE,
Manege bA.
kAytideeni. eraDu tunDu mADi ondu tunDu SAgarakkU, mattondu tunDu samudrakkU bisADteeni.
neenu SuvarNa channel bagge barediddu sariyilla. modalu clearification koDu. athavA A sAlugaLannu tegedu hAku.
nanagantU clearification bEkE bEku.
ninage alli hAge naDeetide annO mahiti iddare, adannu KhAtri paDiskonDu public nalli mAtADu. illavAdare, khAsagiyAgi, khAsagi baLagadondige haraTuva hakku ninagiddE ide.
aksharavihaara,
nanagannisutte andare,
“ಹುಡುಗಿಯರು ಅಂದಾಕ್ಷಣ ಜೊಲ್ಲು ಸುರಿಸಿಕೊಂಡು ನೌಕ್ರಿ ಕೊಡುವ ಮಂದಿ..ಹುಡುಗಿ ಸ್ವಲ್ಪ ಚೆಲ್ಲು ಚೆಲ್ಲಾಗಿದ್ದರೆ, ಸ್ವಲ್ಪ ನಗಲು ಗೊತ್ತಿದ್ದರೆ, ಅರೆ ನಗ್ನ ಬಟ್ಟೆ ತೊಡಲು ಸಿದ್ಧವಿದ್ದರೆ…..ಬುಟ್ಟಿಗೆ ಹಾಕಿಕೊಳ್ಳುವ ಎಲ್ಲಾ ಕಲೆ…..”
hIge maDi ariyade shOSHaNege oLagagta irodu aa huDugire anta.
“ಸುವರ್ಣದ ಭಟ್ಟನಿಂದ “ಶೋಷಣೆ”ಗೆ ಒಳಗಾದ ಹುಡುಗರ..”
tuLitakku, shoSHaNegu vatyasavide andu konDiddine.
mEle baredaddu ApaddaarthanU koDabahudu!
u mean that fellow is a………….?
illi bEre pada baLasabahudittu annisutte.
ವಿನಾಯಕಣ್ಣ,
ಒಬ್ಬರ ಬಗ್ಗೆ ಜವಾಬ್ದಾರಿಯುತವಾಗಿ ಆರೋಪ ಮಾಡಬೇಕಾದಾಗ ಪಾಲಿಸಬೇಕಾದ ವಸ್ತುನಿಷ್ಠತೆಯ ಬಗ್ಗೆ ಪತ್ರಕರ್ತರಾದ ನಿಮಗೆ ಹೇಳಬೇಕಿಲ್ಲ. ಇದು ಜಗತ್ತಿಗೇ ಗೊತ್ತಿರುವ ವಿಷ್ಯ ಎಂದು ತೇಲಿಸುವುದು ಸಮಂಜಸವಲ್ಲ. ಏಕೆಂದರೆ ಜಗತ್ತಿಗೇ ಗೊತ್ತಿದ್ದರೆ ಅದನ್ನು ನೀವು ಹೇಳಬೇಕಾದ ಅಗತ್ಯವಿರುವುದಿಲ್ಲ ಅಲ್ಲವೇ? ಅಕ್ಕಾ ಡಿಮ್ಯಾಂಡ್ ಮಾಡಿದ ಹಾಗೆ ಕ್ಲಾರಿಫಿಕೇಶನ್ನು ಕೊಡಿ. ಬ್ಲಾಗು ಲೋಕದಲ್ಲಿ ಹೀಗೆ ಬೇಜವಾಬ್ದಾರಿಯುತ ಆರೋಪಗಳು ನಡೆಯುವುದು ಬೇಡ.
ಇನ್ನು ಮಹಿಳಾವಾದ, ಪುರುಷವಾದ(?)ದ ಬಗ್ಗೆ ತುಂಬಾ ಸೂಪರ್ಫಿಶಿಯಲ್ ಆಗಿ ಬರೆದಂತಿದೆ ನೀವು. ದೇಶ ಪ್ರೇಮವೆಂದರೆ ಏನು? ಎಲ್ಲರನ್ನೂ ಎದುರು ಹಾಕಿಕೊಂಡು ನಮ್ಮ ದೇಶ ಎಂದು ಕುಳಿತುಕೊಳ್ಳುವುದೇ? ಬೇರೆಲ್ಲಾ ದೇಶಗಳನ್ನು ದ್ವೇಷಿಸುವುದು ದೇಶಪ್ರೇಮವಾಗದು ಅಲ್ಲವೇ? ಹಾಗೆಯೇ ಮಹಿಳಾವಾದಿ ಎಂದರೆ ಪುರುಷರನ್ನು ದ್ವೇಷಿಸಬೇಕು ಎಂದು ಹೇಗೆ ಭಾವಿಸುತ್ತೀರಿ?
ಇನ್ನು ನೀಲಾಂಜಲರವರು ‘ಹುಡುಗಿಯರು’ ಎಂದು ಹೇಳಿರುವ ಕಡೆ ಎಲ್ಲರನ್ನೂ ಸೇರಿಸಿಕೊಂಡು ಜನರಲೈಸ್ ಮಾಡಿಕೊಂಡು ವೈಯಕ್ತಿಕ ಮಟ್ಟದ ಪ್ರತಿಕ್ರಿಯೆ ಕೊಟ್ಟಿದ್ದಾರೆ. ತಮ್ಮ ಸ್ತ್ರೀ ಗೌರವವನ್ನು ಸ್ವಾರ್ಥಕ್ಕಾಗಿ, ಲಾಭಕ್ಕಾಗಿ ಬಳಸಿಕೊಳ್ಳುವುದು ತಮ್ಮ ವ್ಯಕ್ತಿತ್ವಕ್ಕೆ ತಾವೇ ಮಾಡಿಕೊಳ್ಳುವ ಅವಮಾನವಷ್ಟೇ. ಇದರಲ್ಲಿ ಶೋಷಣೆ, ಶೋಷಕ ಎಂಬ ಪದಗಳನ್ನು ತುರುಕುವುದು ಅಸಂಬದ್ಧ.
ಸುಪ್ರೀತ್
ಖಂಡಿತ.
ಸ್ತ್ರೀ ಗೌರವವನ್ನು ಲಾಭದ ಸರಕಾಗಿಸಿಕೊಳ್ಳುವುದು ಸರಿಯಲ್ಲ. ದುರಂತವೆಂದರೆ ಇವತ್ತು ಬಹುತೇಕ ನಡೆಯುತ್ತಿರುವುದು ಅದೇ ಆಗಿದೆ. ಇಂತಹ ಕೆಲವರಿಂದಾಗಿ ಸಂಗತಿಗಳು ಜನರಲೈಸ್ ಆಗಿ ಎಲ್ಲರ ಬಗೆಯೂ ಅನುಮಾನ ಹುಟ್ಟುವ ಹಾಗೆ ಮಾಡಿಬಿಡುತ್ತದೆ. (ಇದು ಎಲ್ಲ ವಿಚಾರಗಳಲ್ಲೂ ಹಾಗೆಯೇ!)
ವಿನಾಯಕ,
ಒಬ್ಬ ಉದಯೋನ್ಮುಖ ಬರಹಗಾರ ಮತ್ತು ಪತ್ರಕರ್ತನಾಗಿರುವ ನಿನಗೆ ನಿನ್ನ ಮೇಲಿನ ನನ್ನ ಕಳಕಳಿಯ ಹಕ್ಕಿನಿಂದ ಒಂದು ಕಿವಿಮಾತು ಹೇಳುತ್ತೇನೆ ಕೇಳು. ಶಶಿಧರ ಭಟ್ಟರು ಹಿರಿಯರು. ಪತ್ರಿಕಾರಂಗದಲ್ಲಿ ಒಂದಷ್ಟು ಸಾಧಿಸಿದವರು. ಈಗ ಸುವರ್ಣ ವಾಹಿನಿಯ ಉನ್ನತ ಸ್ಥಾನದಲ್ಲಿರುವವರು. ಮೊದಲನೆಯದಾಗಿ ನೀನು ಅವರನ್ನು ಸಾರ್ವಜನಿಕವಾಗಿ ಏಕವಚನ ಉಪಯೋಗಿಸಿ ಸಂಬೋಧಿಸಿದ್ದೇ ದೊಡ್ಡ ತಪ್ಪು. ಆನೆಯ ಜತೆ ಆನೆ ಗುದ್ದಾಡಿದಾಗ ಬೆಲೆ ಹೊರತು, ಆನೆಯ ಜತೆ ಮೊಲ ಗುದ್ದಾಡಿದಾಗ ಅಲ್ಲ. ಭಟ್ಟರ ಬಗ್ಗೆ ನನಗೆ ಹೆಚ್ಚಿನ ಯಾವ ಮಾಹಿತಿಯೂ ಇಲ್ಲ. ಅವರ ಮೇಲೆ ಇಂತಹ ಶೋಷಣೆಯ ಅಪವಾದಗಳೇನಾದರೂ ಇದ್ದರೆ, ಖಂಡಿತ ನೀನು ಮುಂದುವರೆದು ಅದನ್ನು ಕ್ಲಾರಿಫೈ ಮಾಡಿಕೊಂಡು ಪರಿಹಾರ ಅಥವಾ ಮುಂದಿನ ಹೆಜ್ಜೆಯ ಬಗ್ಗೆ ಯೋಚಿಸು. ಅವರ ಮೇಲೆ ಆರೋಪ ಮಾಡಿದ ನೀನು, ಅದರ ಸತ್ಯಾಸತ್ಯತೆಯ ಬಗ್ಗೆ ತಿಳಿದುಕೊಳ್ಳುವ ಅಗತ್ಯ ನನಗಿಲ್ಲ ಎಂದಿರುವುದು ನಿನ್ನ ಬೇಜವಾಬ್ದಾರಿತನವನ್ನು ತೋರಿಸುತ್ತದೆ.
ಪತ್ರಿಕೋದ್ಯಮಿಗಳಿಗೆ ಲಂಕೇಶ್, ರವಿ ಬೆಳಗೆರೆ ಆದರ್ಶವಾಗುವುದು ತಪ್ಪಲ್ಲ. ಆದರೆ, ಅವರು ಬಯ್ದು ಬೆಳೆದಿದ್ದಕ್ಕಿಂತ ಹೆಚ್ಚು, ಬರೆದು ಬೆಳೆದರು ಎನ್ನುವುದು ನಮಗೆ ಸದಾ ನೆನಪಿರಬೇಕು.
ನನ್ನ ಮಾತುಗಳು ಜಾಸ್ತಿಯಾಯ್ತು ಅನಿಸಿದರೆ ಡಿಲೀಟ್ ಮಾಡಿಹಾಕು. ನಾನಂತೂ ಹೇಳಲೇಬೇಕು ಅನಿಸಿದ್ದನ್ನು ಹೇಳಿದ್ದೇನೆ.
ಪ್ರೀತಿಯಿಂದ,
ಅಕ್ಕ
🙂 🙂
ಸುಪ್ರೀತ್
ತೇಲಿಕೆ ಸರಿಯಾದ ಮಾರ್ಗವಲ್ಲ ನಿಜ. ಆದರೆ ಎಲ್ಲಾ ವರದಿಗಳಿಗೂ ಪೋಟೋ,ವಿಡಿಯೋ, ಅಥವಾ ಇನ್ಯಾವುದೋ ಬಗೆಯ ಆಧಾರ ಒದಗಿಸುವುದು ಅಸಾಧ್ಯ. ಹಾಗಂತ ವರದಿ ಸುಳ್ಳು ಎನ್ನಲು ಸಾಧ್ಯವಿಲ್ಲ. ಬಹುಶಃ ಆ ಬಗೆಯ ಬರಹವನ್ನೇ ನಾವು ಟಾಬ್ಲಾಯ್ಡ್ ಜರ್ನಲಿಸಂ ಅಂತಾ ಕರೆಯುತ್ತೇವೆ. ಅದೇನೆ ಇರಲಿ ಬ್ಲಾಗ್ ಲೋಕಕ್ಕೆ ಅಂತಾ ಸರಕು ಬೇಡ ಎಂಬ ನಿನ್ನ ಮಾತನ್ನು ಒಪ್ಪಿದ್ದೀನಿ.
ಚೇತನಕ್ಕಾ
ಅಕ್ಕಾ ಅಲ್ಲಿ ನಾನು ಆ ಸಾಲುಗಳನ್ನು ನನ್ನ ಮಾತಾಗಿ ಬಳಸಲಿಲ್ಲ. ಬೇರೆ ಯಾರೋ ಹೇಳಿದ್ದನ್ನು ಯಥಾವತ್ತಾಗಿ ಬರೆದಿದ್ದೇನೆ ಎಂಬುದನ್ನು ನೀವು ಗಮನಿಸಿದ್ದೀರಾ ಎಂದು ಭಾವಿಸುತ್ತೇನೆ. ಆನೆಗೆ ಆನೆಯೇ ಪ್ರತಿಸ್ಪರ್ಧಿ, ರೌಡಿಗೆ ರೌಡಿಯೇ ಪ್ರತಿಸ್ಪರ್ಧಿ, ಭಯೋತ್ಪಾದಕನಿಗೆ ಪೋಲಿಸರೇ ಉತ್ತರ, ಸಾಮಾನ್ಯನಿಂದ ಅವರಿಗೆ ಏನೂ ಮಾಡಲು ಸಾಧ್ಯವಿಲ್ಲ ಅಂತಾ ನಾವುಗಳು ಕೈಕಟ್ಟಿ ನರಸತ್ತವರಂತೆ ಕೂತಿರುವುದರಿಂದಲೇ ನಮ್ಮ ಸಮಾಜ ಇವತ್ತು ಈ ಸ್ಥಿತಿಗೆ ಬಂದಿರುವುದು. ಖಂಡಿತಾ ನಾನು ಯಾವುದೋ ಪೂರ್ವಾಗ್ರಹದಿಂದಲೋ ಅಥವಾ ಮತ್ತ್ಯಾವುದೋ ಕಾರಣದಿಂದಲೋ ಭಟ್ಟರನ್ನು ಬೈದಿಲ್ಲ. ಅಥವಾ ನನ್ನ ಬೈಗುಳ ಎಂಬಂತ ಸಾಲನ್ನು ಬರೆದಿಲ್ಲ. ಯಾರೋ ಮಿತ್ರರು ಭಟ್ಟರ ಬಗ್ಗೆ ಆಡಿದ ಮಾತನ್ನು ನನ್ನ ಅನುಭವ ಮತ್ತು ವಿವೇಚನೆಗೆ ತಂದುಕೊಂಡು ಇಲ್ಲಿ ಉಲ್ಲೇಖಿಸಿದ್ದೇನೆ.
ಅದೇನೆ ಇರಲಿ ನಿಮ್ಮ ಕಳಕಳಿಯ ಸಲಹೆಯಿಂದ ನಾನು ಆ ಸಾಲುಗಳನ್ನು ನಿನ್ನೆಯೇ ಡಿಲೀಟ್ ಮಾಡಿದ್ದೇನೆ. ನಿಮ್ಮ ಸಲಹೆಗೆ ಧನ್ಯವಾದಗಳು. ಆದರೆ ನನ್ನದೊಂದು ಪ್ರಶ್ನೆಯಿದೆ. ನಾವು ಎಷ್ಟು ದಿನ ಕಣ್ಣಿದ್ದು ಕುರುಡರಂತೆ ಕೆಲವರ ಆಟವನ್ನು ವಿಕ್ಷಿಸುತ್ತಾ ಕೂರಬೇಕು? ನೀವು ಹೇಳಿದ ಹಾಗೆ ಆನೆಯನ್ನು ಎದುರಿಸುವ ಆನೆ ಯಾವಾಗ ಹುಟ್ಟಿ ಬರುತ್ತದೆ? ನನಗೆ ಇತಿಹಾಸದ ಪುಟದಿಂದ ಉದುರುವ ಉತ್ತರಗಳು ಬೇಡ. ಪ್ರಸ್ತುತದ ಉತ್ತರ ಬೇಕು. ಕೊಡುವಿರೆಂದು ಭಾವಿಸಿದ್ದೇನೆ.
ನಿಲಾಂಜಲರವರೇ,
ಅಲ್ಲಿ ಹುಡುಗಿಯರು ಸನ್ನಿವೇಶ ಗೊತ್ತಿದ್ದೂ ಸಂತೋಷದಿಂದ ಸ್ವೀಕರಿಸಿದ್ದಾರೆ. ಹಾಗಾಗಿ ಅದು ಹುಡುಗಿಯ ಶೋಷಣೆ ಅಲ್ಲ. ಹುಡುಗಿಯಿಂದಾಗಿ ಅವಕಾಶ ಕಳೆದುಕೊಂಡ ಪ್ರತಿಭಾವಂತರ ಶೋಷಣೆ.(ಪ್ರತಿಭಾವಂತ ಹುಡುಗಿಯೂ ಆಗಿರಬಹುದು ಹುಡುಗನೂ ಆಗಿರಬಹುದು)
ವಿನಾಯಕ
ವಿನಾಯಕ,
ಬರೆಯುವ ಓಘದಲ್ಲಿ ತಪ್ಪುಗಳಾಗೋದು ಸಹಜ. ಅದನ್ನ ಒಪ್ಪಿ, ತಿದ್ದಿಕೊಳ್ಳುವುದು ಬೆಳವಣಿಗೆಯ ಸಂಕೇತ. ಇಲ್ಲದೆ ಹೋದರೆ ನಮನಮಗೇ ಲಾಸ್ ಅಷ್ಟೆ. ನೀನು ಡಿಲೀಟ್ ಮಾಡಿರುವೆ, ಸರಿ.
ನಿನಗೆ ನರ ಸತ್ತವರಂತೆ ಕುಳಿತುಕೋ ಎಂದು ನಾನೆಂದಿಗೂ ಹೇಳಲಾರೆ ಅನ್ನುವುದು ನನ್ನನ್ನ ಹತ್ತಿರದಿಂದ ನೋಡುತ್ತಿರುವ ನಿನಗೆ ಗೊತ್ತೇ ಇದೆ. ಕೊಂಚ ಕಟುವಾದ ಪದ ಬಳಸಬಹುದಾದರೆ, ಇಲ್ಲಿ ಯೋಗ್ಯತೆಯ ಪ್ರಶ್ನೆ ಬರುತ್ತದೆ.
ನಿನಗೆ ಗೊತ್ತಾ? ನಮ್ಮ ರಾಜ್ಯದಲ್ಲಿ ‘ಡಮ್ ಡಮಾರ್’, ‘ಹುಲಿ ಬಂತು ಹುಲಿ’ ಇವೇ ಮೊದಲಾದ ಪತ್ರಿಕೆಗಳಿವೆ, ಅವು ಹೀಗೆ ಯಾರ್ಯಾರನ್ನೋ ಅವನು- ಇವನು ಅಂತೆಲ್ಲ ಬಯ್ಯುತ್ತ ತಾನು ‘ಎಲ್ಲಿಂದಲೋ ಕೇಳಿದ’ ಸಂಗತಿಗಳನ್ನ ಮುದ್ರಿಸ್ಕೊಂಡು ಜನರ ಮುಂದೆ ಬರುತ್ತವೆ ಅಂತ!?
ಇಂತ ಪತ್ರಿಕೆಗಳಲ್ಲಿ ಬರೋ ಸುದ್ದಿಗಳು ಯಾಕೆ ‘ಸುದ್ದಿ’ಯಾಗೋಲ್ಲ ಹೇಳು? ಅದು, ಬರೆದವರ ಯೋಗ್ಯತೆಯ ಮೇಲೆ ನಿರ್ಧಾರವಾಗ್ತದೆ.
ಟ್ಯಾಬ್ಲಾಯ್ಡ್ ಜರ್ನಲಿಸಮ್ ಅಂದ್ರೆ ಹುಡುಗಾಟವಲ್ಲ. ಅಲ್ಲಿ ಅದರದೇ ಆದ ಜವಾಬ್ದಾರಿಗಳಿರ್ತವೆ.
ಯಾರಿಂದಲೋ ಕೇಳಿದ ಸುದ್ದಿ, ಯಾರೋ ಬರೆಸಿದ ಸುದ್ದಿ ಇವೆಲ್ಲ ಎಂತಹ ಅನಾಹುತ ಸೃಷ್ಟಿಸುತ್ತವೆ ಅನ್ನೋದು ನಿನಗೆ ಗೊತ್ತಿದ್ದಂತಿಲ್ಲ. ಅದರಲ್ಲೂ ನೈತಿಕತೆಯೇ ಮುಖ್ಯವಾಗಿರುವ ಭಾರತದಲ್ಲಿ ಹೀಗೆ ಗಂಡು- ಹೆಣ್ಣಿನ ವ್ಯವಹಾರದ ಸಂಗತಿಗಳಲ್ಲಿ ಇಂತಹ ದೂಷಣೆಯನ್ನು ‘ಸಾರ್ವಜನಿಕ’ವಾಗಿ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು.
ಇಲ್ಲಿಗೆ ಮುಗಿಸ್ತೇನೆ. ನೀನು ವಾದದ ಮೂಡಲ್ಲಿ ಇರುವ ಹಗಿದೆ. ಮತ್ತು, ನನಗದು ಸದ್ಯಕ್ಕೆ ಬೇಡವಾಗಿದೆ. ಇಷ್ಟಾದರೂ ನೀನು ನಿನ್ನ ಹೇಳಿಕೆಯನ್ನ ಸಮರ್ಥಿಸ್ಕೊಳ್ಳೋದಾದರೆ, ಖಂಡಿತ ಇನ್ನು ನನ್ನ ಅಭ್ಯಂತರವಿಲ್ಲ.
ಪ್ರೀತಿಯಿಂದ,
ಚೇತನಾ
ನನಗೆ ಅನ್ನಿಸುವುದು
ಶೋ ಬೀಜ್ ಇರೋರಿಗೆ ಅರೆನಗ್ನ ಡ್ರೆಸ್ ಗಳು, ಬುಟ್ಟಿಗೆ ಹಾಕ್ಕೊಳ್ಳೊದು ಅವರ professionನ ಅನಿವಾರ್ಯತೆ ಆಗಿರುತ್ತವೆ. ಆ industry ಇರುವದೇ ಹೀಗೆ. ಮಡೊನ್ನಾ ಇಡೀ ಮೈ ಮುಚ್ಚಿಕೊನ್ಡ ಪೋಸ್ಟರ್ ಮಾರಟ ಹೇಗೆ ಆದೀತು! ಅವರದನ್ನು ಮಾಡದಿದ್ದಲ್ಲಿ ಅಲ್ಲಿ survive ಅಗೋದು ತುಂಬಾ ಕಷ್ಟ. ಅದೇ ರೀತಿ ವೈಶ್ಯಾ ವೃತ್ತಿಯಲ್ಲಿರುವವರು ಸ್ತ್ರಿಗೌರವ ಅಂತ ಕುಳಿತಿದ್ದರೆ ಹೊಟ್ಟೆಗೆನು ತಿಂತಾರೆ ? ಸಂಬಂಧ, ರೀತಿನೀತಿಗಳು, ಮೌಲ್ಯಗಳು, ಸಮಾಜ ಸಂಕೀರ್ಣವಾಗುತ್ತಿರುವುದರಿಂದ ಮೇಲೆ ಹೇಳಿದ ಸಮಸ್ಯೆ ನಾನು ಬರೆದಿರುವಷ್ಟು ಚಿಕ್ಕದಲ್ಲ. ಇಲ್ಲಿನ give and take (compulsory) ಸ್ಥಿತಿ/ಸಂಬಂಧ ನನಗೆ ಶೋಷಣೆಯಾಗಿ ಕಾಣುತ್ತೆ.
ಸ್ವಲ್ಪ ಚೆಲ್ಲು ಚೆಲ್ಲಾಗಿದ್ದರೆ ಕೆಲಸ ಕೊಡುವ ಮಂದಿ ಅವಳಿನ್ದ ವಾಪಸ್ favor ಬಯಸದೇ ಇರುತ್ತಾರಾ? ಬುಟ್ಟಿಗೆ ಬಿದ್ದ ಗಂಡಸು ಇವಳಿಗೆ ಮೋಸ ಮಾಡೊಲ್ಲ ಅನ್ನೋ ಗ್ಯಾರಂಟಿ ಇಲ್ಲವಲ್ಲ. ನಾನು ಗಮನಿಸಿದಂತೆ ಈ ತರಹ ವರ್ತಿಸುವವರು ತಾವು ಮಾಡ್ ಎಂಬ ಭ್ರಮೆಯಲ್ಲಿ ಸಿಕ್ಕಿರುವವರು; ಇದೆ ಸತ್ಯ, ಇದೆ ಬದುಕು, ಅನ್ದುಕೊನ್ಡಿರುವರು. ಅದಕ್ಕೆ ಅವರ social background ಕಾರಣವೂ ಇರಬಹುದು. ‘ಸ್ತ್ರೀ ಗೌರವ’ ಅಂದರೆ ಏನು ಅಂತ ಗೊತ್ತಿಲ್ಲದವರು . ಅವರ ಈ ನಂಬಿಕೆಗಳನ್ನು, ಜೀವಿಸುವ ರೀತಿಯನ್ನು ಗಂಡು (ಬಾಸ್ ) ಉಪಯೋಗಿಸಿಕೊಳ್ಳುತ್ತಾನೆ . ಇಲ್ಲಿನ ಸ್ಥಿತಿ/ಸಂಬಂಧ ನನಗೆ ಶೋಷಣೆಯಾಗಿ ಕಾಣುತ್ತೆ.
ಇಂಥ ಹುಡುಗಿಯರು ಕೆಲಸ ಗಿಟ್ಟೀಸಬಹುದು, ಆದರೆ ಕೆಲಸವೇ ಗೊತ್ತಿರದಿದ್ರೆ ಎಷ್ಟು ದಿನ ಅಂತ ಆ ಬಾಸ್ ಅವಳನ್ನು ಸಾಕುತ್ತಾನೆ ? ತನಗೆ ಎಟಕುವಷ್ಟು use ಮಾಡಿ ಕೆಲಸದಿಂದ ಬೀಸಕುತ್ತಾನೆ . ಇಲ್ಲಿ ನನಗೆ ಶೋಷಣೆಯಾಗಿ ಕಾಣುತ್ತೆ.
ಇಂಥ ಹುಡುಗಿಯರಿಂದ ಪ್ರತಿಭಾವಂತರ ಶೋಷಣೆ ??
ಬರಿ ಚೆನ್ದವಿದ್ದವರನ್ನು receptionist ಮಾಡಬಹುದು, team lead ಮಾಡಕೆ ಆಗುತ್ತದೆಯೇ ? ಎಷ್ಟು ದಿನ? team ಗೋವಿಂದ ಆಗೋ ವರೆಗೆ!
ಕೆಲಸವೂ ಚೆನ್ನಾಗಿ ಗೊತ್ತಿದ್ದೂ ಈ ತರಹ ಇರಲು ಗೊತ್ತಿದ್ದಾರೆ ಆಕೆ ಬಹು ಬೇಗ ಮೇಲೆ ಎರುತ್ತಾಳೆ. ಈ ತರಹ ಅವಳು ಇರುವುದಕ್ಕೆ ಕಾರಣ ಈಗೀನ ಹೊಸ ಮೌಲ್ಯಗಳು. ಹೊಸ ಸಂಕೀರ್ಣ ಸಮಾಜದ ಸ್ವತ್ತುಗಳಾದ ಇವು ಅವಳ ಶೋಷಕವಾಗಿ ನಾನು ನಂಬುವ ಸ್ವಸ್ಥ ಸಮಾಜದ ಕಣ್ಣಿಗೆ ಕಾಣುತ್ತೆ.
ಮೆಣಿಸಿನ ಕಾಯಿ ರೇಟ್ ಎಷ್ಟು 😦 ?
huh! :O
ಅಕ್ಕಾ,
ಹುಲಿ ಬಂತು ಹುಲಿಯಂಥ ಪತ್ರಿಕೆಗಳು ಸಾಯಲು ಸಾಕಷ್ಟು ಕಾರಣವಿದೆ. ಖಂಡಿತಾ ನೀವು ನಮ್ಮನ್ನು ಕೈಕಟ್ಟಿ ಕುಳಿತುಕೊಳ್ಳಿ ಹೇಳುತ್ತಿರಾ ಎಂದಲ್ಲ. ಸಮಾಜದ ಮನಸ್ಥಿಯನ್ನು ಹೇಳಿದ್ದು ಅಷ್ಟೆ. ಅದೇನೆ ಇರಲಿ ಆ ವಾದವನ್ನು ನಾನು ಇಲ್ಲಿಗೆ ನಿಲ್ಲಿಸುತ್ತೇನೆ.
ನೀಲಾಂಜಲ ಅವರೇ,
ನಿಮ್ಮ ಮಾತು ನಿಜ. ಹಾಗಾಗಿಯೇ ಕೆಲ ಚಾನೆಲ್ಗಳು ಸೋತು ತೋಪಾಗಿರುವುದು. ಖಂಡಿತಾ ನಮ್ಮ ಮುಖ್ಯಸ್ಥರಿಗೆ ಕೆಲಸಬೇಡ. ಇತರ ಎಲ್ಲವೂ ಬೇಕು. ಯಾಕಂದ್ರೆ ಚಾನೆಲ್ಗಳಿಗೆ ದುಡ್ಡು ಹಾಕುವ ಮಂದಿಯೇ ಬೇರೆ. ಮುನ್ನಡೆಸುವ ಮಂದಿಯೇ ಬೇರೆ. ಟಿವಿಯಲ್ಲಿ ಬರುವವರು ಅರೆ ಬಟ್ಟೆಯಲ್ಲಿ ಬಂದರೆ ಮಾತ್ರ ಜನ ನೋಡುತ್ತಾರೆ. ಆ ಉದ್ಯಮವೇ ಹಾಗಿದೆ ಎಂಬುದು ಭ್ರಾಂತಿ. ಅದನ್ನೆಲ್ಲಾ ಮೀರಿಸಿದ ಸಾಕಷ್ಟು ಕಾರ್ಯಕ್ರಮಗಳು ನಮ್ಮ ವಾಹಿನಿಗಳಲ್ಲೇ ಬರುತ್ತವೆ.
ಸಂದೀಪರೇ
ಎರಡು ರೂಪಾಯಿ ಮೆಣಸಿನಕಾಯಿ ಈ ಪರಿ ಚರ್ಚೆ ಹುಟ್ಟುಹಾಕತ್ತೆ ಅಂತಾ ನಾನಂತೂ ಭಾವಿಸಿರಲಿಲ್ಲ!
ವಿನಾಯಕರೇ,
ನಿಮ್ಮ ಟೋನ್ ನನಗೆ ಅರ್ಥವಾಗುತ್ತೆ, ಕೆಲವೊಮ್ಮೆ ನನಗೂ ಹಾಗೆ ಅನಿಸಿದ್ದುಂಟು (ಹುಡುಗಿಯರು ಅಂದಾಕ್ಷಣ ಜೊಲ್ಲು ಸುರಿಸಿಕೊಂಡು ನೌಕ್ರಿ ಕೊಡುವ ಮಂದಿ…)
ಆದ್ರೆ ನಾವು ಕೂಡಾ ಎಷ್ಟು ಕಾರಣರು ಎಂಬುದು ಅರಿತುಕೊಳ್ಳುವಷ್ಟು ದಡ್ಡರು ಅಲ್ಲವಲ್ಲಾ? ಸ್ವಾಮಿ ನನಗೆ ನನ್ನ ಹಿರಿಯ ಗೆಳೆಯರೊಬ್ಬರು ಸಲಹೆ ನಿಡಿದ್ದು ಹೀಗೆ, “ಹುಡುಗಿಯರು ಚೆನ್ನಾಗಿದ್ದರೆ ನೌಕರಿ ಕೊಡ್ತಾರಂತಿಯ OK, ಅಂದ್ರೆ ಅವರಿಗೆ ಕಣ್ಣು ತಂಪಾಗಿದ್ರೆ ಸಾಕಾ? ಕಂಪನಿಗೆ ಕೆಲಸಾ ಮಾಡೊವ್ರೆ ಬೆಡ್ವಾ, ಅವರು ಲಾಭಕ್ಕೊಸ್ಕರ ಕಂಪನಿ ನೆಡಸ್ತಿಲ್ವಾ? ಲಾಭಕ್ಕಲ್ಲ ಬರಿ ಶೋಕಿಗೆ ಅಂದ್ರೆ ಬಿಟ್ಟಹಾಕು ಆ ಕೆಲಸ ನಿನಗೆ ಬೇಡ, ಇಲ್ಲಾ ಅವರಿಗೆ ಸೌಂದರ್ಯದೊಂದಿಗೆ ಲಾಭಾನೂ ಬೇಕು, ಕೆಲಸಾ ಮಾಡೊವ್ರು ಬೇಕು ಅಂದ್ರೆ, ಎಷ್ಟು ಜನಾನಂತ ಬರಿ ಅವರ ಸೌಂದರ್ಯಕ್ಕಾಗಿ ತೆಗೆದುಕೊಳ್ತಾರೆ? ಕೆಲಸಾ ಮಾಡೊಕು ಒಂದಿಷ್ಟು ಜನ ಬೇಡ್ವಾ ಅವರಿಗೆ? ಆದ್ರೆ ಅವ್ರಿಗೆ ತಮ್ಮ ಕೆಲಸದ ಜೊತೆಗೆ ಹೆಚ್ಚಿನ ಕೆಲಸ ಮಾಡೊವ್ರಿಗೆ ಅವಕಾಶ ಕೊಡ್ತಾರೆ, ಕೆಲಸ ಕಲಿಬೇಕು ಅನ್ನೊ ಸ್ಟೇಜಿನಲ್ಲಿದ್ದವನಿಗೆ ಇದಕ್ಕಿಂತ ಅವಕಾಶ ಬೇಕಾ? ಬೇಗ್ನೆ ಹಿಡಿದ್ಕೊ ಆ ಕೆಲಸಾನ, ನೀನಿನ್ನು ಯೋಚ್ನೆ ಮಾಡ್ತಾ ಕೂತರೇ ಮತ್ಯಾರೊ ಒಪ್ಗೊಳ್ತಾರೆ”
ನಾನು ಕೆಲಸಕ್ಕೆ ಸೇರಿದೆ, ಇವತ್ತು ಹತ್ತಾರು ಅವಕಾಶಗಳು ಕೈ ಬಿಸಿ ಕರಿತಿವೆ, ಅಷ್ಟೆ..
ಕೆಲಸದ ಮೇಲೆ ಊರಿಂದ ದೂರವಿದ್ದುದರಿಂದ ಲೇಟಾಗಿ ಕಮೇಂಟಿಸ್ತಾಯಿದ್ದೆನೆ, ಕ್ಷಮಿಸಿ.
ಧನ್ಯವಾದಗಳೊಂದಿಗೆ
ಶೆಟ್ಟರು
ಬಹುಶ: ನಿಮ್ಮ ಪರಿಸ್ಥಿತಿ ಊಹಿಸಿಕೊಳ್ಳಬಲ್ಲೆ… ಆದರೆ, ನನ್ನ ಅನುಭವದ ಹಿನ್ನೆಲೆಯಲ್ಲಿ, ಕೆಲವು ಕಿವಿಮಾತು, ಅಥವಾ ಸ್ವಗತ –
1) ನಿಮ್ಮ TALENT ಇತರರಿಗೂ TALENT ಆಗಿಯೇ ಕಾಣಬೇಕು, ಜತೆಗೆ ನೀವು ಅದಕ್ಕೋಸ್ಕರ ನಿಮ್್ಮದಲ್ಲದ ದಾರಿಯಲ್ಲಿ ಹೋಗುವಂತಾಗಬಾರದು. ಈ ಸಮನ್ವಯ ಸಾಧಿಸುವುದು ಕಷ್ಟದ ಕೆಲಸ. ಆದರೆ, ಬೇರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ, ಈ ಕ್ಷಣದಲ್ಲಿ ಬದುಕುತ್ತ, ಈಗ ಮಾಡುತ್ತಿರುವದಕ್ಕೆ ನೂರಕ್ಕೆ ನೂರು ನ್ಯಾಯ ಸಲ್ಲಿಸುವ ಯತ್ನ ಮಾಡಿದಲ್ಲಿ ನಿಮಗೆ ಎಂದಿಗೂ ಮೋಸವಾಗುವುದಿಲ್ಲ – ಇದು ನನ್ನ ವೈಯಕ್ತಿಕ ಅನುಭವ. (ನೀವೀಗ ಹುಡುಗಿಯರಿಗೆ ಫೇವರ್ ಮಾಡಲಾಗುತ್ತದೆ ಅಂತ ಅಂದುಕೊಂಡ ಹಾಗೆ ನಾನೂ ಹುಡುಗರಿಗೆ ಫೇವರ್ ಮಾಡಲಾಗುತ್ತದೆ, ಹುಡುಗಿಯರನ್ನು ತುಳಿಯಲಾಗುತ್ತದೆ ಅಂತ ಅಂದುಕೊಂಡ ಕಾಲವಿತ್ತು :p ಆದರೆ ನನ್ನ ಪುಣ್ಯಕ್ಕೆ ಆ ಕಾಲದಲ್ಲಿ ಬ್ಲಾಗುಗಳಿರಲಿಲ್ಲ, ನಾನು ನಿಮ್ಮ ಹಾಗೆ ಯಾರಲ್ಲೂ ಅದನ್ನು ಹೇಳಿಕೊಳ್ಳುವ ಪರಿಸ್ಥಿತಿ ಬರಲಿಲ್ಲ, ಹಾಗಾಗಿ ಇವತ್ತು ನಾನು ಸಂತೋಷವಾಗಿದ್ದೇನೆ, ಹಾಗೂ ಅಂದು ಹಾಗಂದುಕೊಂಡಿದ್ದು ಎಷ್ಟು ಸುಳ್ಳು ಅಂತ ನನಗೇ ಗೊತ್ತಾಗುತ್ತಿದೆ)
2) ಉರಿಯುವ ಬೆಂಕಿಗೆ ತುಪ್ಪ ಸುರಿದರೆ ಬೆಂಕಿ ನಂದಿದ ಉದಾಹರಣೆ ಎಲ್ಲೂ ಇಲ್ಲ. ಇದು ಎಷ್ಚು ಬೇಗ ನಿಮಗೆ ಅರ್ಥವಾಗುತ್ತದೋ ಅಷ್ಟು ಒಳ್ಳೆಯದು. ಮಾತ್ರವಲ್ಲ, ಈರೀತಿಯ ಕೆಸರು ಎರಚಾಟದಿಂದ ಹಾನಿಯಾಗುವುದು ಯಾರಿಗೆಂದು ನೀವೇ ಯೋಚಿಸಿ ನಿರ್ಧರಿಸಿ.
ಕೆಲವೊಮ್ಮೆ ನಮಗಿಷ್ಟವಿಲ್ಲದ್ದು ಬದುಕಲ್ಲಿ ನಡೆಯಬಹುದು, ಆದರೆ, ವಿಷಕಂಠನ ಥರಾ ಬದುಕಲು, ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಕ್ಷಮಿಸಲು – ಕಲಿತದ್ದೇ ಆದರೆ ಸೋಲು ನಿಮ್ಮನ್ನು ಕಂಡ್ರೆ ಓಡಿಹೋಗ್ತದೆ!
3) ಏನೇ ಆದರೂ ಕೊಟ್ಟಕೊನೆಯ ತನಕ ನಿಮ್ಮ ಜತೆಗುಳಿದು ನಿಮ್ಮ ಹೆಸರು ಉಳಿಸುವುದು – ಅಥವಾ ತೆಗೆಯುವುದು – ನಿಮ್ಮ professionalism ಮಾತ್ರ. ಅದನ್ನು ಅಭಿವೃದ್ಧಿ ಮಾಡಿಕೊಳ್ಳಿ, ಅದರ ಮೇಲೆ ಯಾರೂ ಒಂದು ಮಾತು ಕೂಡಾ ಹೇಳಲು ಸಾಧ್ಯವಿಲ್ಲದಷ್ಟು ಪಕ್ಕಾ ಆಗಿ. ಅದರ ಮುಂದೆ ಇನ್ಯಾವುದೂ ಉಳಿಯುವುಲ್ಲ.
ಹೇಳಲು ಮರೆತೆ, ನೀವು ಪ್ರಸ್ತಾಪಿಸಿದ ವ್ಯಕ್ತಿಯ ಹೆಸರು ನೀವು ಹೇಳದೆಯೇ ಇಲ್ಲಿ ಎಲ್ಲರಿಗೂ ಗೊತ್ತಾಗಿರುವುದು ಆಶ್ಚರ್ಯ ತರಿಸಿತು…
ಇರಲಿ ಬಿಡಿ, ನಿಮಗೆ ನನ್ನ ಆಶಯ ಅರ್ಥವಾಗಿರುತ್ತದೆಂದುಕೊಂಡಿದ್ದೇನೆ. ಮೊದಲಿಗೆ ಕಮೆಂಟಿಸಬಾರದೆಂದುಕೊಂಡೆ, ಮತ್ತೆ ನಿಮ್ಮಂತಹ ಹಲವರನ್ನು ನೋಡಿರುವ ಕಾರಣ ಆಗಿದ್ದಾಗಲಿ ಹೇಳಿಬಿಡುವ ಅಂದುಕೊಂಡೆ. ಇಷ್ಟವಾದರೆ ತೆಗೆದುಕೊಳ್ಳಿ, ಕಷ್ಟವಾದರೆ ಬಿಟ್ಟುಬಿಡಿ, ಅಥವಾ ಈ ಕಮೆಂಟ್ ಡಿಲೀಟ್ ಮಾಡಿ. ಮತ್ತೆ ಈ ವಾದದಲ್ಲಿ ನಾನು ಪಾಲ್ಗೊಳ್ಳುವುದಿಲ್ಲ.