ಗಂಡಸರೂ ಬಸುರಿ ಆಗುವುದಾಗಿದ್ದರೆ…?!
ಆಗಷ್ಟ್ 8, 2008 aksharavihaara ಮೂಲಕ
(ಈ ಬರಹ ಆರಂಭಿಸುವ ಮೋದಲೇ ಒಂದು ಮಾತನ್ನು ಹೇಳಿ ಬೀಡುತ್ತೇನೆ. ಈ ಲೇಖನ ನನ್ನನ್ನು ಸ್ತ್ರೀ ವಾದಿಯನ್ನಾಗಿಸಬಹುದು. ಆದರೆ ನನಗಂತೂ ಯಾವುದೇ ವಾದಿತನದ “ವ್ಯಾದಿಯಿಲ್ಲ”. ವಾಸ್ತವಕ್ಕೆ ಸರಿಯಾಗಿ ಅಂಟಿಕೊಂಡು ಹೋಗುತ್ತೇನೆ)
ಬಾಳೇಹಳ್ಳಿ ಅಕ್ಷತಾ ಆತ್ಮಹತ್ಯೆ ಮಾಡಿಕೊಂಡಳಂತೆ. ಹಾಗಂತ ಗೆಳೆಯ ರಾಘು ಮೆಸೇಜ್ ಮಾಡಿದ್ದ. ನನಗೊಮ್ಮೆ ಹೃದಯ ಚುರ್ ಅಂದಂತಾಯಿತು. ಹೈಸ್ಕೂಲ್ ಓದುತ್ತಿರುವಾಗ ನನ್ನ ಸೀನಿಯರ್ ಆಗಿದ್ದ ಹುಡುಗಿಯವಳು. ವಯಸ್ಸಿನಲ್ಲಿ ನನಗಿಂತ ಮೂರು ವರ್ಷ ದೊಡ್ಡವಳು. ಅಬ್ಬಬ್ಬಾ ಅಂದರೆ ೨೪ ವರ್ಷ ಆಗಿರಬಹುದು ಅವಳಿಗೆ. ಅಷ್ಟು ಕಿರಿ ವಯಸ್ಸಿನ ಹುಡುಗಿ ಆತ್ಮಹತ್ಯೆ ಮಾಡಿಕೊಂಡಳು ಎಂಬ ಸುದ್ದಿ ಕೇಳಿದಾಗ ನೋವಾಯಿತು.
ಊರಿನಿಂದ ಯಾರೋ ಫೋನ್ ಮಾಡಿದ್ದರು. ಹೀಗೆ ಮಾತಾಡುವಾಗ ಅಕ್ಷತಾ ಸಾವಿನ ಸುದ್ದಿ ಬಂತು.
ಯಾರೋ ಇತರೆ ಪೈಕಿಯವನ ಜತೆ ಲವ್ ಇತ್ತಂತೆ ಅವಳಿಗೆ. ಸಂಬಂಧವೂ ಇತ್ತು ಅಂತಿದಾರೆ…
ನನಗೆ ಕೋಪ ನೆತ್ತಿಗೇರಿತು.
ನಿಮ್ಮ ಈ ಚುಚ್ಚು ಮಾತುಗಳೇ ಅವಳನ್ನ ಸಾಯುವಂತೆ ಮಾಡಿದ್ದು. ಅವಳು ಯಾರಿಗೆ ಬಸುರಿಯಾದರೇನು? ಬಾಣಂತಿಯಾದರೇನು? ಅದರಿಂದ ನಿಮ್ಮ ಗಂಟೇನು ಖರ್ಚಾಗತ್ತೆ…ರೇಗಿದೆ
ಅಲ್ಲಾ ಬಡವರ ಮನೆ ಕೂಸು ಹಂಗೆಲ್ಲಾ ಮಾಡಿಕೊಂಡರೆ ಅಪ್ಪಾ, ಅಮ್ಮ ಸಮಾಜದಲ್ಲಿ ತಲೆ ಎತ್ತಿಕೊಂಡು ತಿರುಗುವುದು ಬ್ಯಾಡದಾ? ಅಂತಾ ರಾಗ ಶುರುವಿಟ್ಟರು.
ಹೌದು ನಮ್ಮ ಸಮಾಜದ ಇದೇ ಧೋರಣೆಯೇ ಅಂತಹ ಕಿರಿ ವಯಸ್ಸಿನ ಹೆಣ್ಣು ಮಕ್ಕಳನ್ನು ಕೊಲ್ಲುತ್ತಿರುವುದು. ನನಗೆ ಇಷ್ಟು ವರ್ಷವಾದರೂ “ಶೀಲ ಎಂಬುದು ದೇಹದಲ್ಲಿ ಅಡಗಿದೆಯಾ? ಅಂಗಾಂಗದಲ್ಲಿ ಅಡಗಿದೆಯಾ? ಮನಸ್ಸಲ್ಲಿ ಅಡಗಿದೆಯಾ? ಎಂಬ ಸಂಗತಿ ಅರ್ಥವಾಗಲಿಲ್ಲ!” “ಹೆಣ್ಣು ಬಸುರಿಯಾಗುತ್ತಾಳೇ ಎಂಬ ಒಂದೇ ಒಂದು ಕಾರಣಕ್ಕೆ ಸಮಾಜದಲ್ಲಿ ಶೋಷಣೆಗೆ ಒಳಗಾಗುತ್ತಾಳೆ. ಸೆಕ್ಸ್ ಎಂಬುದು ಹೆಣ್ಣನ್ನು ಶೋಷಿಸಲು ಬಳಸುವ ವಸ್ತುವಾಗುತ್ತಿದೆ. ಇದು ನಮ್ಮ ಸಮುದಾಯದಲ್ಲಿ ಮಾತ್ರವಲ್ಲ, ಮುಸ್ಲಿಂ, ಕ್ರಿಶ್ಚಿಯನ್ ಸಮಾಜದಲ್ಲಿಯೂ ಹೆಣ್ಣಿನ ಸ್ಥಿತಿ ಇದಕ್ಕಿಂತ ಶೋಚನೀಯವಾಗಿದೆ’ ಅನ್ನುತ್ತಿದ್ದಳು ಅಕ್ಕ.
ಸಮಾಜದ ಎಷ್ಟೋ ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವುದು ಇದೇ ಕಾರಣಕ್ಕೆ. ವಯಸ್ಸಿನ ದೋಷದಿಂದಲೋ, ಅಚಾತುರ್ಯದಿಂದಲೋ ಯಾರ ಜೊತೆಗೋ ಸಂಬಂದ ಬೆಳೆಸುತ್ತಾರೆ. ಅವರನ್ನೇ ಮದುವೆಯಾಗುತ್ತೇನೆ ಎಂದು ಹಠ ಹಿಡಿಯುತ್ತಾರೆ. ಅಪ್ಪಾ ,ಅಮ್ಮ ನೀನು ಆ ಹುಡುಗನನ್ನು ಮದುವೆಯಾಗುವುದಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೆದರಿಸುತ್ತಾರೆ. ಕೊನೆಗೆ ಬೆಸತ್ತ ಹೆಣ್ಣು ಮಗಳು ನೇಣಿಗೆ ಶರಣಾಗುತ್ತಾಳೆ. ಹೆಚ್ಚಿನ ಆತ್ಮಹತ್ಯೆ ಹಿಂದಿರುವ ಕಥೆಯಿಷ್ಟೆ!
ಸತ್ತ ಮೇಲೆ ಸಮಾಜದ ಒಂದಿಷ್ಟು ಮಂದಿ ಛೇ ಅವಳು ಸಾಯಬಾರದಿತ್ತು. ಜನ್ಮ ಜನ್ಮಕ್ಕೂ ಇನ್ನು ಅನುಭವಿಸಬೇಕು. ಮಳ್ಳು ಕೂಸು ಬದುಕಿನಲ್ಲಿ ಏನು ಬಂದರೂ ಎದುರಿಸಬೇಕಿತ್ತು ಅಂತಾ ಪಶ್ಚಾತಾಪದ ಮಾತಾಡುತ್ತಾರೆ. ಇನ್ನೂ ಕೆಲವರು ಯಾರದ್ದೋ ಜೊತೆಗೆ ಸಂಬಂದ ಇತ್ತಂತೆ. ಸತ್ತಳು ಅಂತಾ ಆಡಿಕೊಳ್ಳುತ್ತಾರೆ.
ಒಮ್ಮೆ ಅವಳು ಸಾಯದೇ ಬದುಕಿದಿದ್ದರೆ ಈ ಸಮಾಜ ಅವಳನ್ನು ಹೇಗೆ ಸ್ವೀಕರಿಸುತ್ತಿತ್ತು ಎಂಬುದು ಮುಖ್ಯವಾದ ಪ್ರಶ್ನೆ. ಒಂದಿಷ್ಟು ದಿನ ಅವಳ, ಅಪ್ಪಾ ಅಮ್ಮನೂ ಅವಳನ್ನು ಹತ್ತಿರ ಸೇರಿಸುತ್ತಿರಲಿಲ್ಲ. ಇಡೀ ಸಮಾಜ ಅವಳ ಎದುರಿಗೆ ಆಡಿಕೊಳ್ಳಬಾರದ ಮಾತುಗಳನ್ನೆಲ್ಲಾ ಆಡಿಕೊಳ್ಳುತ್ತಿತ್ತು. ಇನ್ನೂ ನಮ್ಮ ಹಳ್ಳಿ ಹೆಂಗಸರಂತೂ… ತಾವು ಎಷ್ಟು ಸರಿ ಇದ್ದೇವೆ ಎಂಬುದು ಅವರಿಗೆ ಗೊತ್ತಿರುವುದಿಲ್ಲ. ಗಂಡ ಊರಲ್ಲಿ ಇಲ್ಲದಿದ್ದಾಗ ಯಾರ್ಯಾರಿಗೋ ಫೋನ್ ಮಾಡಿ ಕರೆಸಿಕೊಂಡು ಸುಖ ತೆಗೆದುಕೊಳ್ಳುತ್ತೇವೆ ತಾವು ಎಂಬುದು ಕೆಲ ಹೆಂಗಸರಿಗೆ ಗೊತ್ತೆ ಇರುವುದಿಲ್ಲ! ನೀಲಗರಿ ಪ್ಲಾಂಟೇಶನ್ನಿಗೆ ಹೋಗಿ ಯಾರ ಜೊತೆಗೋ ಮೆಯ್ದು ಬರುವುದು ಆ ಹೆಂಗಸರಿಗೆ ನೆನಪೇ ಇರುವುದಿಲ್ಲ! ಆದರೆ ಇಂತಹ ಒಬ್ಬ ಹೆಣ್ಣು ಮಗಳು ಎದುರಿಗೆ ಸಿಕ್ಕರೆ ಆಡಬಾರದ ಮಾತುಗಳನ್ನೆಲ್ಲಾ ಆಡುತ್ತಾರೆ. ಹುಡುಗಿ ಶ್ರೀಮಂತರ ಮನೆ ಕೂಸಾಗಿದ್ದರೆ ಅವಳು ಆಚೆ ಹೋದ ನಂತರ ಆಡುತ್ತಾರೆ. ಬಡವರ ಮನೆ ಕೂಸಾದರೆ ಎದುರಿಗೆ ಆಡುತ್ತಾರೆ. ಇದು ನಮ್ಮ ಸಮಾಜದ ಸ್ಥಿತಿ. ಇವುಗಳನ್ನೆಲ್ಲಾ ಸಹಿಸಿಕೊಂಡು ಆ ಹೆಣ್ಣು ಮಗಳು ಬದುಕಬೇಕು. ಇದನ್ನು ನೆನಸಿಕೊಂಡೇ ಎಷ್ಟೋ ಹೆಣ್ಣು ಮಕ್ಕಳು ನೇಣಿಗೆ ಶರಣಾಗುವುದು ಅನ್ನಿಸತ್ತೆ ನನಗೆ.
ಹಾಂಗತ ಹೆಣ್ಣು ಮಗಳು ಕಂಡ ಕಂಡ ಹುಡುಗನಿಗೆ ಬಸಿರಾಗುವುದು ಸರಿ ಎಂದು ವಾದಿಸುತ್ತಿಲ್ಲ. ತಾನು ಬಯಸಿದ ಹುಡುಗನ ಜತೆಗೆ ಸಂಬಂಧ ಹೊಂದಬೇಕಾದರೂ ಮದುವೆಯಾಗಲೇ ಬೇಕಾ? ಸಂಬಂಧ ಇಟ್ಟುಕೊಂಡರೂ ಅಪ್ಪಾ ಅಮ್ಮ ಕಟ್ಟಿದ ಹುಡುಗನನ್ನೇ ಮದುವೆಯಾಗಬೇಕಾ? ಹೆಣ್ಣಿಗೆ ವಯಕ್ತಿಕ ಬದುಕು ಅನ್ನುವುದೋ ಇಲ್ಲವಾ? ಎಂಬುದು ನನ್ನ ಪ್ರಶ್ನೆ. ಹೆಣ್ಣನ್ನು ನಾವು ಬಸಿರಾಗುತ್ತಾಳೆ ಎಂಬ ಕಾರಣದಿಂದ ಶೋಷಿಸುವುದಾದರೆ ಒಮ್ಮೆ ಗಂಡಸು ಬಸಿರಾಗುವುದಾಗಿದ್ದರೆ ಈ ಸಮಾಜದ ಸ್ಥಿತಿ ಹೇಗೆ ಆಗುತ್ತಿತ್ತು ಒಮ್ಮೆ ಅವಲೋಕಿಸಿ ನೋಡಿ.
ನಾವು ವೇಶ್ಯೆಯರನ್ನು, ಸೂಳೆಯರನ್ನು ಬೈಯ್ಯುತ್ತೇವೆ. ಅದೊಂದು ನೀಚ ವೃತ್ತಿ ಅನ್ನುತ್ತೇವೆ. ಗಂಡಸಿಗೆ ತೃಷೆ ಇಲ್ಲದಿದ್ದರೆ ವೇಶ್ಯಾವಾಟಿಕೆ ಏಕೆ ಹುಟ್ಟುತ್ತಿತ್ತು? ಒಮ್ಮೆ ಆಲೋಚಿಸಿ ನೋಡಿ. ಎಷ್ಟು ಗಂಡಂದಿರು ಹೆಂಡತಿಯ ಕಣ್ಣು ತಪ್ಪಿಸಿ ಯಾರ್ಯಾರ ಜೊತೆಗೋ ಮಲಗಿ ಬರುವುದಿಲ್ಲ ಹೇಳಿ? ಆದರೆ ಅದೇ ಕೆಲಸ ಹೆಣ್ಣು ಮಾಡಿದರೆ? ಅವಳಿಗೆ ಹೊಟ್ಟೆ ಮುಂದು ಬರುವುದರಿಂದ ಅವಳು ಅಂತಹ ಕೆಲಸ ಮಾಡಿದ್ದಾಳೆ ಎಂಬುದು ಗೊತ್ತಾಗಿ ಬಿಡುತ್ತದೆ! (ಇವತ್ತು ಕಾಲ ಬದಲಾಗಿದೆ. ಹೊಟ್ಟೆ ಮುಂದೆ ಬರದಂತೆಯೂ ಮಲಗೆದ್ದು ಬರಲು ಬರುತ್ತದೆ! ಬೆರಳೆಣಿಕೆ ಹೆಣ್ಣು ಮಕ್ಕಳು ಹಾಗೇ ಮಲಗೆದ್ದು ಬರುತ್ತಿದ್ದಾರೆ! ಆದರೆ ಗಂಡಸಿಗಿರುವಷ್ಟು ಚಟ ಹೆಣ್ಣಿಗಿಲ್ಲ ಎಂಬುದು ನನ್ನ ನಂಬಿಕೆ)
“ನಾವು ಎರಡು ಲಿಂಗಗಳ ಸಮ್ಮಿಲದಿಂದಲೇ ಹುಟ್ಟಿದವರು. ಕಾಮ ಕ್ರಿಯೆಯ ಫಲವೇ ಪ್ರತಿಯೊಂದು ಜೀವಿಗಳು. ಹಾಗಾಗಿ ಪ್ರತಿ ಜೀವಕ್ಕೂ ಕಾಮದ ವಾಸನೆ, ತೃಷೆ ಸಹಜ. ಎಕ್ಸ್, ವೈಎಂಬ ಭಿನ್ನ ಕ್ರೋಮೋಸೋಮ್ಗಳು ಗಂಡಸಿನಲ್ಲಿ ಇರುವುದರಿಂದ ಅವನಿಗೆ ತೃಷೆ ಒಂಚೂರು ಹೆಚ್ಚು. ಆದರೆ ಹೆಣ್ಣಿನಲ್ಲಿ ಈ ಭಿನತೆಯ ಕ್ರೋಮಸೋಮ ಇಲ್ಲ. ಏಕತೆಯ ಕ್ರೊಮೋಸೋಮ್ ಹಾಗಾಗಿ ಅವಳಿಗೆ ಲೈಂಗಿಕ ಚಟ ಸ್ವಲ್ಪ ಕಡಿಮೆ” ಅನ್ನುತ್ತಾರೆ ಓಶೋ. ಅವರ ಮಾತು ಅಕ್ಷರಶಃ ನಿಜ ಹಾಗಾಗಿ ಎಲ್ಲಾ ಜೀವಿಗಳಲ್ಲೂ ಸೆಕ್ಸ್ ಸಹಜ. ಸೆಕ್ಸ್ ಇಲ್ಲದಿದ್ದರೆ ಜೀವ ಸಂಕುಲದ ನಿರಂತರತೆ ಸಾಧ್ಯವಿತ್ತಾ?
ಏನೋ ನನಗಂತೂ ಈ ಸಮಾಜದ ಧೊರಣೆಯೇ ಅರ್ಥವಾಗುವುದಿಲ್ಲ. ಅನುಭವದಲ್ಲಿ ಕಿರಿಯವನಾದ್ದರಿಂದ ನನ್ನ ಆಲೋಚನೆಯೇ ಸರಿಯಿಲ್ಲದೆಯೂ ಇರಬಹುದು.! ಆದರೂ ನನ್ನ ವರಗೆಯ, ಇನ್ನೂ ಬದುಕಿ ಬಾಳಿಬೇಕಾದವರೆಲ್ಲಾ ಸಾಯುತ್ತಾರೆ ಎಂದರೆ ನಿಜಕ್ಕೂ ನೋವಾಗತ್ತೆ. ಆ ನೋವನ್ನು ಇಲ್ಲಿ ತೊಡಿಕೊಂಡೆ ಅಷ್ಟೆ.
Like this:
Like ಲೋಡ್ ಆಗುತ್ತಿದೆ...
Related
Posted in ಚಿಂತನ ಚಾವಡಿ | 22 ಟಿಪ್ಪಣಿಗಳು
ಇನ್ನೂ ನಮ್ಮ ಹಳ್ಳಿ ಹೆಂಗಸರಂತೂ… ತಾವು ಎಷ್ಟು ಸರಿ ಇದ್ದೇವೆ ಎಂಬುದು ಅವರಿಗೆ ಗೊತ್ತಿರುವುದಿಲ್ಲ. ಗಂಡ ಊರಲ್ಲಿ ಇಲ್ಲದಿದ್ದಾಗ ಯಾರ್ಯಾರಿಗೋ ಫೋನ್ ಮಾಡಿ ಕರೆಸಿಕೊಂಡು ಸುಖ ತೆಗೆದುಕೊಳ್ಳುತ್ತೇವೆ ತಾವು ಎಂಬುದು ಕೆಲ ಹೆಂಗಸರಿಗೆ ಗೊತ್ತೆ ಇರುವುದಿಲ್ಲ! ನೀಲಗರಿ ಪ್ಲಾಂಟೇಶನ್ನಿಗೆ ಹೋಗಿ ಯಾರ ಜೊತೆಗೋ ಮೆಯ್ದು ಬರುವುದು ಆ ಹೆಂಗಸರಿಗೆ ನೆನಪೇ ಇರುವುದಿಲ್ಲ!
ಏನ್ರೀ ಇದು ಜೆನೆರಲೈಸೇಷನ್ನು?!!
ಇಲ್ಲಿ ಭಯಂಕರ ಭಾಷಣ ಬಿಗಿಯುವ ನಮಗೇ ಅದೇ ಪರಿಸ್ಥಿತಿಯಲ್ಲಿದ್ದಾಗ ಏನು ಮಾಡುತ್ತೇವೆ ಎಂಬುದು ಕೇಳಿಕೊಳ್ಳಬೇಕಾದ ಪ್ರಶ್ನೆ.
ಉಹುಂ. ಈ ’ವ್ಯಾಧಿ’ಯ ಬಗ್ಗೆ ಅಭಿಪ್ರಾಯ ಮಂಡಿಸುವುದೇ ಕಷ್ಟ.
* ನೈತಿಕತೆಯನ್ನ ಯಾವ ಮಾನದಂಡದ ಮೇಲೆ ಅಳೀತಾರೆ ಅನ್ನೋದೇ ಬಗೆಹರಿಯದ ಪ್ರಶ್ನೆ.
* ಜನ ಆಡಿಕೊಳ್ಳುವ ನೂರಾ ಒಂದು ಮಾತುಗಳಿಗೆ ತಲೆಬುಡವೇ ಇರೋದಿಲ್ಲ. ಅಂತ್ರ್ಜಾತಿ ಮದ್ವೆಯಾದರೆ, ‘ಅಯ್ಯೋ, ಜಾತಿ ಬಿಟ್ಲು’ ಅಂತಾರೆ. ಆಗದೆ ಸತ್ರೆ, ‘ಅಯ್ಯಯ್ಯೋ ಸತ್ತು ಬಿಟ್ಲು’ ಅಂತಾರೆ. ಸಾಲದ್ದಕ್ಕೆ, ‘ಅದೇನು ಮಾಡ್ಕೊಂಡಿದ್ಲೋ’ ಅಂತ ಕೊಂಕು ನುಡೀತಾರೆ.
* ಈ ಬಗೆಯ ಚಿಂತನೆ ಅಗತ್ಯವಾಗಿ ಬೇಕು. ಇಲ್ಲೇನೂ ಮಹಿಳಾವಾದದ ಪ್ರಶ್ನೆ ಏಳೋದಿಲ್ಲ. ಇದು ಮಾನವತಾವಾದದ ಪ್ರಶ್ನೆ. ಮಹಿಳೆ ಕೂಡ ಮನುಷ್ಯಳೇ ಅಂತ ಅರಿತಾಗ, ಆಕೆಗೆ ತೋರುವ ಸಹಾನುಭೂತಿ ‘ಮಹಿಳಾವಾದ’ವಾಗದೆ ‘ಮಾನವೀಯತೆ’ಯಾಗುತ್ತದೆ. ಈ ನಿಟ್ಟಿನಲ್ಲಿ ನನ್ನನ್ನು ಕೆಲವೊಮ್ಮೆ ‘ಮಹಿಳಾವಾದಿ’ ಅಂತ ಗುರುತಿಸಿದರೂ (ಕೆಲವರು ಅಣಕಿಸ್ತಾರೆ, ಮತ್ತೆ ಕೆಲವರು ರೇಗಿಸ್ತಾರೆ!) ನಾನು ನಾನೊಬ್ಬಳು ‘ಮಾನವತಾವಾದಿ’ ಅಂತಲೇ ಕರೆದುಕೊಳ್ಳೋಕೆ ಬಯಸ್ತೇನೆ.
ನೀನು ಕೂಡ ಈ ‘ವಾದ’ಗಳನ್ನ ಮನಸ್ಸಿಗೆ ಹಚ್ಚಿಕೊಳ್ಳದೆ ನಿನ್ನ ಪಾಡಿಗೆ ಇಂಥದ್ದನ್ನ ಬರೆದುಕೊಂಡಿರು.
* ವಿಕಾಸ ಹೇಳಿದಂತೆ, ನೀನು ಹಳ್ಳಿ ಹೆಂಗಸರನ್ನ ಜನರಲೈಸ್ ಮಾಡಿದ್ದು ಶುದ್ಧ ತಪ್ಪು. ನನ್ನಮ್ಮ, ನಿನ್ನಮ್ಮ ಎಲ್ಲ ಹಳ್ಳಿಯವರೇ ಅಲ್ವೇನೋ? ನೀನು ಹೇಳಿರುವಂಥ ಹೆಂಗಸರು ಎಲ್ಲೆಡೆ ಇರ್ತಾರೆ. ಎಷ್ಟೋ ಒಂದಷ್ಟು ಪರ್ಸೆಂಟ್ ಇರ್ತಾರೆ ಅಷ್ಟೆ. ಹಾಗಂತ ನಾವು ಹೆಚ್ಚು ಪಲು ಹೆಂಗಸರನ್ನ ಅನುಮಾನದಿಂದ ನೋಡಬೇಕಿಲ್ಲ. ಈ ಸಾಲಿನಲ್ಲಿ ನೀನೇನು ಹೇಳ ಹೊರಟಿದ್ದೀ ಎಂದು ನನಗೆ ಅರ್ಥವಾಗಿದೆ. ತಾವೇ ಹಾಗೆಲ್ಲ ಮಾಡ್ಕೊಂಡು ಬೇರೆಯವ್ರಿಗೆ ಹೇಳ್ತಾರೆ ಅಂತ ತಾನೆ? ಆದ್ರೆ, ಇನ್ನು ಮುಂದೆ, ನೀನು ಬಳಸುವ ಪದಗಳು ಜನರಲೈಸ್ ಆಗದೆ ಇರುವ ಹಾಗೆ ಎಚ್ಚರ ವಹಿಸು.
ನಲ್ಮೆ,
ಅಕ್ಕ
-ಗಂಡಸರೂ ಬಸುರಿ ಆಗುವುದಾಗಿದ್ದರೆ avarannu Hengasu anna bEkagittu. aste 😀
linga gurutisuvudE idara mEle.
-ಸುಖ ತೆಗೆದುಕೊಳ್ಳುತ್ತೇವೆ ತಾವು , vandu vishaya gotta, according to survey 98% hengasarige SKUKA siguvudillavante,
nijakkU ಅನುಭವದಲ್ಲಿ ಕಿರಿಯ ;D
-vikas avare, ವ್ಯಾಧಿ yavudu? sexo ? samajavo? arta agalilla
-chetana avare ನೈತಿಕತೆ annodu avaravara bhavakke, parisarakke, samandagalige sanbhndisiddu annisutte.
-matte vinayaka avare, na barediddakke talekedisko bedi. nimma barahada bhava chennagide.
vikasa avare
generalise maaduvaaga kandthita tappagide. adannu tiddikondiddene. adu halliya kelavu hengasaru anta aagabekkittu. “elli bayankara…” ee saalugalu yaarige helliddu embudu nanage arthavagaalilla
chetanakka
nimma maathu nija. maahilaavadakinta maanavaathavaada mukya. naanu illi kettalu hogiddu adanne. nanginta churu doddavalu sattiddu nannu kaaditu horatu avalu hennu anta alla. aadaare saavina hinde keli baruttiruva maathugalannu vishlesivudu anivaarya annisitu nanage
ವಿನಾಯಕ
ಬರಹ ತುಂಬಾ ಚೆನ್ನಾಗಿದೆ. ಆದರೆ ನಿರೂಪಣೆ ಸ್ವಲ್ಪ ಹಾರ್ಷ್ ಆಯಿತು ಅನ್ನಿಸತ್ತೆ ನನಗೆ. ಆದರೆ ಈ ಲೇಖನ ಕುರಿತು ಒಂದಿಷ್ಟು ತಕರಾರಿದೆ. ಅಪ್ಪ, ಅಮ್ಮನಿಗೆ ಮಗಳ ಕುರಿತಾಗಿ ಕಾಳಜಿ ಇದ್ದೇ ಇರುತ್ತದೆ. ಎಲ್ಲೋ ಕೆಲ ಅಪ್ಪ ಅಮ್ಮಂದಿರು ನೀವು ಹೇಳಿದಂತೆ ಇರಬಹುದು. ನೀವು ಆತ್ಮಹತ್ಯೆಗೆ ತಂದೆ ತಾಯಿಯರೇ ಕಾರಣ ಎಂಬ ರೀತಿಯಲ್ಲಿ ಮಾತಾಡಿದ್ದೀರಿ. ಆದರೆ ಹೆಣ್ಣಿನ ಮಾನಸಿಕ ದೌರ್ಬಲ್ಯತೆ ಕಾರಣ ಎಂದು ನನಗನ್ನಿಸುತ್ತದೆ. ಅಪ್ಪ, ಅಮ್ಮನನ್ನು ಒಪ್ಪಿಸಿ ತಾನು ಬಯಸಿದ ಅಥವಾ ಸಂಬಂಧ ಇಟ್ಟುಕೊಂಡಿರುವ ಹುಡುಗನನ್ನು ಮದುವೆಯಾಗುವ ಯತ್ನವನ್ನು ಹೆಣ್ಣು ಮಾಡಬಹುದು. ಹಾಗೇ ಮಾಡಿಕೊಂಡು ಬದುಕುತ್ತಿರುವ ಸಾಕಷ್ಟು ಜನರಿದ್ದಾರೆ ಈ ಸಮಾಜದಲ್ಲಿ.
ಎಲ್ಲೋ ಕೆಲ ಹೆಂಗಸರು ಗಂಡನಿಗೆ ಹೊರತಾದ ಮತ್ತೊಬ್ಬನನ್ನು ಬಯಸಬಹುದು. ಅಲ್ಲಿ ಪೇಟೆ ಹೆಂಗಸು, ಹಳ್ಳಿ ಹೆಂಗಸು ಅಂತಾ ಭಿನ್ನತೆ ತೋರುವ ಅಗತ್ಯ ಇರಲಿಲ್ಲ.
ಶೀಲ ಎಂಬುದು ನಂತರದ ವಿಚಾರ. ಆದರೆ ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ ವಿಶಿಷ್ಟ ಸ್ಥಾನ ಕೊಡಲಾಗಿದೆ. ಹೆಣ್ಣಿನ ಬದುಕು ನಾಯಿ ತರಹದ್ದಲ್ಲ. ಆ ಸ್ಥಾನವನ್ನು ಹೆಣ್ನು ಸಂತೋಷದಿಂದ ಸ್ವೀಕರಿಸಬೇಕ ಎಂಬುದು ನನ್ನ ವಾದ. ಅದನ್ನೇ ಸಮಾಜ ಬಯಸುವುದು ಕೂಡ. ಹಾಗಾಗಿಯೇ ತಂದೆ ತಾಯಿ ಹೆಣ್ಣನ್ನು ಜೋಪಾನವಾಗಿ ಕಾಯ್ದುಕೊಂಡು ಬರಲು ಯತ್ನಿಸುವುದು. ಅವಳ ಸ್ವಾತಂತ್ರ್ಯ ಕಡೆಗೆ ಚಿಂತಿಸಿದೇ ಇರುವುದು. ಇದು ಹೆಣ್ಣಿನ ಒಂದು ವಯಸ್ಸಿನವರೆಗೆ ಅಗತ್ಯ ಅನ್ನಿಸುತ್ತದೆ ನನಗೆ.
ಇವತ್ತು ಎಲ್ಲಾ ಹೆಣ್ಣು ಮಕ್ಕಳು ಸರಿಯಿದ್ದಾರೆ ಸಮಾಜವೇ ಸರಿಯಿಲ್ಲ. ಹೆಣ್ಣಿನ ಸಾವಿಗೆ ಸಮಾಜವೇ ಕಾರಣ ಎಂದು ಆರೋಪಿಸುವುದು ಅಸಂಬದ್ದವಾಗುತ್ತದೆ. ಕ್ಲಬು ಬಾರ್ಗೆ ಹೋಗುವ ಹೆಣ್ನು ಮಕ್ಕಳೂ ಇದ್ದಾರೆ. ಹೆಣ್ಣಿಗೆ ಸುಖ ಕೊಡುವ ಪುರುಷ ವೇಶ್ಯೇಯರು ಇದ್ದಾರೆ! ಇದು ತಮಾಷೆಯ ಮಾತಲ್ಲ. ಮಣಿಪಾಲದಂತಹ ಪುಟ್ತ ನಗರದಲ್ಲಿ ನಡೆಯುತ್ತಿದೆ. ನಿಮ್ಮ ಗಮನಕ್ಕೆ ಬಂದಿಲ್ಲ ಅಂದುಕೊಳ್ಳುತ್ತೇನೆ.
ಹಾಗಾಗಿ ನಾವಿ ಯಾರದ್ದೋ ಸಾವನ್ನು ಆ ಪರಿ ಕೆದುಕಿಕೊಂಡು ಹೋಗಿ ಯಾರನ್ನೋ ದೂಷಿಸುವ ಅಗತ್ಯವಿಲ್ಲ ಎಂಬುದು ನನ್ನ ಭಾವ.
ಪ್ರೀತಿಯಿಂದ
ಭೂಮಿಕಾ ಸಾಗರ
ಭೂಮಿಕಾ ಅವರೇ
ಇಲ್ಲಿ ನಾನು ವಾಸ್ತವ ಅಲ್ಲದೇ ಇರುವುದು ಏನನ್ನು ಪ್ರಸ್ತಾಪಿಸಲು ಹೋಗಿಲ್ಲ. ಕಣ್ಣಾರೆ ಕಾಣದೇ ಹೆಣ್ಣಿನ ಚಾರಿತ್ರ್ಯದ ಬಗೆಗೆ ಕಮೆಂಟು ಮಾಡುವುದು ಸರಿಯಿಲ್ಲ ಎಂಬುದು ನನ್ನ ನಂಬಿಕೆ. ನನಗೆ ಅತೀ ಹತ್ತಿರದಿಂದ ಗಮನಕ್ಕೆ ಬಂದಿರುವ ಸಂಗತಿಗಳನ್ನು ಹೇಳಿಕೊಂಡು ಹೋಗಿದ್ದೇನೆ ಅಷ್ಟೆ.
ಖಂಡಿತಾವಾಗಿಯೂ ಸಮಾಜ ಅದರದ್ದೇ ಹಾದಿಯಲ್ಲಿ ನಡೆಯುತ್ತದೆ. ಅದನ್ನು ತಿದ್ದುವುದು ಹೇಳಿದಷ್ಟು ಸುಲಭವಲ್ಲ ಕೂಡ. ಹಾಗಾಗಿ ನನ್ನ ಬರಹ ಓದಿ ಸಮಾಜ ಬದಲಾಗುತ್ತದೆ ಎಂಬ ಆಶಯ ನನ್ನಲ್ಲಿ ಇಲ್ಲ. ನನಗನ್ನಿಸಿದ್ದನ್ನು ಬರೆದಿದ್ದೇನೆ ಅಷ್ಟೆ.ಇಲ್ಲಿ ಅಪ್ಪ, ಅಮ್ಮನನ್ನು ಹುಡುಗಿಯನ್ನು ದೂಷಿಸುವುದು, ಹೆಣ್ಣಿನ ಪರ ಭಾಷಣ ಬಿಗಿದು ಸ್ತ್ರೀವಾದಿ ಅನ್ನಿಸಿಕೊಳ್ಳುವುದು ನನ್ನ ಉದ್ದೇಶವಲ್ಲ. ಅಕ್ಷತ ಸಾವಿನ ಎಳೆಯನ್ನಿಟ್ಟುಕೊಂಡು ಎಲ್ಲಾ ಹೆಣ್ಣು ಮಕ್ಕಳ ಬದುಕಿನಲ್ಲಿ ಎದುರಾಗುವ ಸಮಸ್ಯೆಯನ್ನು ವಿಶ್ಲೇಷಿಸಿದ್ದೇನೆ ಅಷ್ಟೆ. ಖಂಡಿತವಾಗಿಯೂ ನಿರೂಪಣೆ ಹಾರ್ಷ್ ಆಗಿದೆ. ಕೆಲ ಸಂಗತಿಗಳನ್ನು ಅದರದ್ದೇ ಆದ ದಾಟಿಯಲ್ಲಿ ಹೇಳಿದರೆ ಚೆಂದ ಎಂಬುದು ನನ್ನ ದೋರಣೆ. ನಿಮ್ಮ ನೇರ, ದಿಟ್ಟ ಪ್ರತಿಕ್ರಿಯೆಗೆ ಧನ್ಯವಾದಗಳು. ಆಗಾಗ ಬಂದು ಈ ರೀತಿ ಕಾಲೆಳೆಯುತ್ತಿರಿ!
ಅಕ್ಕರೆಯಿಂದ
ವಿನಾಯಕ
ವಿನಾಯಕ,
ಗೊತ್ತಾಯಿತು. ’ಕೆಲವು ’ಎಂಬ ಪದ ಬಿಟ್ಟು ಹೋಗಿದೆ ಅಂತ. ಬರೆಯುವ ಜೋಶ್ ನಲ್ಲಿ ಜೆನೆರಲೈಸೇಶನ್ ಗಳಾಗಿ ಬಿಡುತ್ತವೆ ಹಾಗೆ. ಏಕೆಂದರೆ ನನಗೂ ಅದೇ ರೋಗವಿದೆ 🙂
ಭಯಂಕರ ಭಾಷಣದ ವಿಷಯವೆಂದರೆ ಇದೇ ಪರಿಸ್ಥಿತಿಯಲ್ಲಿ ನಾವಿದ್ದರೆ ಅಂದರೆ ನಮ್ಮ ಮಗಳೋ, ಸೋದರಿಯೋ ಯಾರಾದರೂ ಈ ರೀತಿ ಯಾವುದೋ ಹುಡುಗನೊಂದಿಗೆ ದೈಹಿಕ ಸಂಬಂಧ ಇಟ್ಟುಕೊಂಡಾಗ ಅಥವಾ ಇನ್ಯಾವುದೋ ರೀತಿ ಆದಾಗ ಇಷ್ಟೇ ಮುಕ್ತ ಮನಸ್ಸಿನಿಂದ ಸಮರ್ಥಿಸಿಕೊಳ್ಳುವುದಕ್ಕಾಗುವುದಾ ಅಂತ. ಆಗುವುದಾದರೆ ನೋ ಪ್ರಾಬ್ಲೆಮ್ಮು.
@ನೀಲಾಂಜನ
ನಾ ವ್ಯಾಧಿ ಅಂದಿದ್ದು ಸ್ತ್ರೀವಾದವನ್ನ. ಅಂದರೆ ಯಾರಿಗೆ ತೊಂದರೆಯಾದಾಗಲೂ ಖಂಡಿಸುವ ಮಾನವತಾವಾದವನ್ನು ಬಿಟ್ಟು ಬರೀ ಕ್ಷುಲ್ಲಕ ವಿಚಾರಗಳಿಗೂ ಸ್ತ್ರೀ ಶೋಷಣೆಯಾಯಿತು ಎಂದು ಬಾಯಿಬಡಿದುಕೊಳ್ಳುವ ಕೆಲವರ ಸ್ತ್ರೀವಾದ ನನಗೆ ವ್ಯಾಧಿಯೆನಿಸುತ್ತದೆ.
***
ಪ್ರಕೃತಿಸಹಜವಾಗಿ, ಸೃಷ್ಟಿ ಸಹಜವಾಗಿ ಹೆಣ್ಣು ಇರುವುದೇ ಹಾಗೆ. ಅದಕ್ಕೆ ನಮ್ಮ ಕುಟುಂಬದಲ್ಲಿ, ಸಮಾಜದಲ್ಲಿ ಸ್ವಲ್ಪ ವಿಶಿಷ್ಟ ಸ್ಥಾನ ಹೆಣ್ಣಿನದು. ಅದನ್ನೇ ದೊಡ್ಡ ತೊಡಕು/ಕಷ್ಟವೆನ್ನುತ್ತಾ ಹೆಣ್ಣಿನ ಜನ್ಮವನ್ನೇ ಹಳಿದುಕೊಳ್ಳುತ್ತಾ ನಿಜವಾಗಲೂ ಹೆಣ್ಣಿನ ಸಹಜ ಜೀವನ ಪ್ರೀತಿಯನ್ನು ಕಳೆಯುವ ಕೆಲಸವನ್ನು ಇಂದು ಕೆಲವು ವಿದ್ಯಾವಂತ , ಬುದ್ಧಿವಂತರೆನಿಸಿಕೊಂಡಿರುವ ಹೆಣ್ಣುಗಳೇ ಮಾಡುತ್ತಿರುವುದು ವಿಪರ್ಯಾಸ.
ಹ್ಮ್… ಅಭಿಪ್ರಾಯ ಮಂಡನೆ ಕಷ್ಟ ಅಂದಿದ್ದೆ … ಆದ್ರೂ ಮಾತಾಡಿಬಿಟ್ಟೆ 🙂
ವಿಕಾಸ,
ಮೇಲೆ ಕಮೆಂಟಿಸಿರೋದು ನೀಲಾಂಜನ ಅಲ್ಲ, ನೀಲಾಂಜಲ. ’ಶ್ರೀ’ಗಳ ಕನ್ಪ್ಯೂಶನ್ನಿನ ನಂತರ ಇದು ಇನ್ನೊಂದು ಹೊಸ ಹೆಸರಿನ ಗೊಂದಲ. ನಿಮ್ಮ ಚೇತನಕ್ಕ ಕೂಡ ಹೀಗೇನೆ ಮಿಸ್-ಅಂಡರ್ಸ್ಟ್ಯಾಂಡ್ ಮಾಡಿಕೊಂಡಿದ್ದಳು. ಆದರೆ ನೀವು ನೀಲಾಂಜಲರಿಗೆ ಕೊಟ್ಟಿರುವ ಸಮಜಾಯಿಶಿಯನ್ನ ಒಪ್ಪಲಾರೆ. ಪೇಜ್ ಥ್ರೀ ಸ್ತ್ರೀವಾದಿಗಳನ್ನ ಆಚೆಗಿಟ್ಟೇ ಮಾತಾಡೋಣ. ಯಾರು ’ಕ್ಷುಲ್ಲಕ’ವಿಚಾರಗಳ ಬಗ್ಗೆ ಬಾಯಿ ಬಡುಕೋತಿದಾರೆ? ಈ ಕ್ಷುಲ್ಲಕ ವಿಚಾರಗಳನ್ನ ಸ್ವಲ್ಪ ವಿಸ್ತರಿಸಿ ಹೇಳಿದ್ದರೆ ಚೆನ್ನಾಗಿತ್ತು. ಸ್ತ್ರೀವಾದಿಗಳು ಇವತ್ತು ’ಬಡುಕೋತಿರೋದು’ ಈವ್ ಟೀಸಿಂಗು, ಅತ್ಯಾಚಾರ, ಟ್ರಾಫಿಕಿಂಗ್,ವಂಚನೆ, ಕೊಲೆ, ಡೊಮೆಸ್ಟಿಕ್ ವಯಲೆನ್ಸು, ಬಲವಂತದ ಅಬಾರ್ಷನ್ನು, ಶಿಕ್ಷಣವಂಚನೆ,.. ಇವೆಲ್ಲ ಕ್ಷುಲ್ಲಕ ಅನಿಸುತ್ತವೆಯೆ? ಇವು ಬಿಟ್ಟು ಇನ್ನಾವ ಕ್ಷುಲ್ಲಕ ವಿಷಯಗಳ ಬಗ್ಗೆ ಸ್ತ್ರೀವಾದಿಗಳು ಮಾತನಾಡುತ್ತಾರೋ ನನಗೆ ತಿಳಿದಿಲ್ಲ.
ವಿನಾಯಕ,
ಎಲ್ಲರಿಗೂ -ಗಂಡಸಾಗಲೀ, ಹೆಣ್ಣಾಗಲೀ – ತಮ್ಮ ಸೆಕ್ಷುವಾಲಿಟಿಯನ್ನ ವ್ಯಕ್ತಪಡಿಸಲು ಅದಕ್ಕೆ ತಕ್ಕ ಹಾಗೆ ನಡೆಯಲು ಪೂರ್ಣ ಸ್ವಾತಂತ್ರ್ಯ ಇಲ್ಲ. ಗಂಡಸರು ಬ್ರಾಥೆಲ್ಗಳಿಗೆ ಹೋಗುವುದನ್ನು ಮನ್ನಿಸುವ ನಮ್ಮ ಸಮಾಜವು ಹೆಣ್ಣೊಬ್ಬಳು ಹಾಕಲಾದ ಚೌಕಟ್ಟನ್ನ ಉಲ್ಲಂಘಿಸಿದ ಕೂದಲೆ ಆಕೆಗೆ ’ವ್ಯಾಂಪ್’ ಪಟ್ಟ ನೀಡಿಬಿಡುತ್ತದೆ. ಒಂದು ಹೆಣ್ಣು ಇನ್ನೊಬ್ಬಳ ಸೆಕ್ಷುವಾಲಿಟಿಯ ಬಗ್ಗೆ ಕೀಳಾಗಿ ಮಾತನಾಡುವದನ್ನು ಉತ್ತೇಜಿಸುತ್ತದೆ. ’ಗರತಿ’ಯ ಪಟ್ಟ ಹೊಂದಿದಾಕೆಗೆ ಮನೆಯ ’ದೇವತೆ’ಯ ಜಾಗ ನೀಡಿ ಆಕೆಯನ್ನು ಮನೆಯೊಳಗೆ ಪರ್ಮನೆಂಟಾಗಿ ಹೂತುಹಾಕಲಾಗುತ್ತೆ. ಮೀರಿನಿಲ್ಲುವ ಧೈರ್ಯ ಮಾಡಿದವಳು ದಿಕ್ಕೆಟ್ಟು ಮಣ್ಣುಪಾಲಾಗುತ್ತಾಳೆ. ನೀವು ಹೆಣ್ಣುಮಕ್ಕಳ ಗಾಸಿಪ್ಪನ್ನೆ ಎಲ್ಲದಕ್ಕೂ ಹೊಣೆಮಾಡಿಬಿಡುತ್ತೀರಿ.
ವಿಕಾಸ್
ಬರಹದ ಮೂಲ ಉದ್ದೇಶವನ್ನು ಸರಿಯಾಗಿ ಅರ್ಥೈಸಿಕೊಂಡಿದ್ದಕ್ಕೆ ಧನ್ಯವಾದಗಳು.
ಟೀನಾ
ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ. ಸೆಕ್ಸ್ ಎಂಬುದು ಹೆಣ್ಣನ್ನು ಶೋಷಿಸುವ ವಸ್ತುವಾಗುತ್ತಿದೆ ಏಕೆ ಎಂಬುದೇ ನನ್ನ ಪ್ರಶ್ನೆ ಕೂಡ. ಹೇಣ್ಣು ಮಕ್ಕಳ ಶೀಲದ ಕುರಿತು ಅನಗ್ಯತವಾಗಿ ಕಮ್ಮೆಂಟಿಸುವುದಿಲ್ಲ. ಹಾಗಂತ ಕಮೆಂಟ್ಗಳು ನೀವು ಹೇಳಿದಂತೆ ಗಾಸಿಪ್ ಅಲ್ಲ ಅಂತಾನೂ ಅಲ್ಲ! ಸತ್ಯಕ್ಕೆ ತೀರಾ ಸನಿಹವಾದ, ನನ್ನ ನಂಬಿಕೆ ನಿಲುಕಿರುವ ಗಾಸಿಪ್ಗಳನ್ನೇ ಮುಂದಿಟ್ಟುಕೊಂಡು ಮಾತಾಡಿದ್ದೇನೆ ಅಷ್ಟೇ. ಹಾಗೇ ಮಾತನಾಡಬಹುದಾದ ಸ್ವತಂತ್ರ್ಯ ಇದೆ ಅಂದುಕೊಳ್ಳುತ್ತೇನೆ.
ಭಾಗವತರೇ
ಖಂಡಿತವಾಗಿಯೂ ಜೋಯ್ಸರ ಮಗಳ ಮದುವೆ ಅಂತಾ ಎಲ್ಲೋ ಉಲ್ಲೇಖಿಸಿದ್ದೇನೆ! ಅದೇನೆ ಇರಲಿ ಕನಸಿಗೆ ಕೂಸಿಗೊಂದು ಪತ್ರ ಬರೆಯುವ ಸಾಹಸಕ್ಕೆ ಸದ್ಯದಲ್ಲೇ ಕೈ ಹಾಕುತ್ತೇನೆ!
ವಿನಾಯಕ
@ಟೀನಾ
ಹೋ! ಹೌದಲ್ವಾ. ಅವರು ನೀಲಾಂಜಲ. ಸಾರಿ ಫಾರ್ ನೀಲಾಂಜಲ ಮತ್ತು ಥ್ಯಾಂಕ್ಸ್ ಫಾರ್ ಟೀನಕ್ಕ 🙂
ಆಮೇಲೆ, ಸ್ತ್ರೀವಾದದ ಬಗ್ಗೆ ಹೇಳಿದ್ದು ಮತ್ತೊಮ್ಮೆ ಪೇಸ್ಟಿಸಿದ್ದೇನೆ. ಕೆಲವು ಪದಗಳನ್ನು quote ಮಾಡಿದ್ದೇನೆ. ಆ ಪದಗಳೇ ಇಂಪಾರ್ಟೆಂಟು.
ಅಂದರೆ “ಯಾರಿಗೆ ತೊಂದರೆಯಾದಾಗಲೂ ಖಂಡಿಸುವ ಮಾನವತಾವಾದವನ್ನು ಬಿಟ್ಟು” ಬರೀ ಕ್ಷುಲ್ಲಕ ವಿಚಾರಗಳಿಗೂ ಸ್ತ್ರೀ ಶೋಷಣೆಯಾಯಿತು ಎಂದು ಬಾಯಿಬಡಿದುಕೊಳ್ಳುವ “ಕೆಲವರ ” ಸ್ತ್ರೀವಾದ ನನಗೆ ವ್ಯಾಧಿಯೆನಿಸುತ್ತದೆ.
ನಿಜವಾದ ಕಾರಣಗಳಿದ್ದರೆ ಒ.ಕೆ . ಆದರೆ ಅದು ’ಸ್ತ್ರೀ’ಗೆ ಮಾತ್ರ ಸೀಮಿತವಾಗಿರಬೇಕಿಲ್ಲ.
ನೀವು ಹೇಳಿದ ನಿಜವಾದ ಕಾರಣಗಳಿಗಿಂತ ಹೊರತಾದುದು ’ಕ್ಷುಲ್ಲಕ’ ಅಷ್ಟೆ.
ಶೋಷಣೆಯನ್ನು ಖಂಡಿಸಲಿ. ಆದರೆ ಹೆಣ್ಣು ಜನ್ಮವನ್ನೇ ಹಳಿದೂಹಳಿದೂ ಹುಟ್ಟುವ ಎಲ್ಲಾ ಪೀಳಿಗೆಯ ಹೆಣ್ಣುಗಳ ಜೀವನಪ್ರೀತಿ ಕಳೆದುಬಿಡುವುದ್ಯಾಕೆ?
ಗಂಡಸರು ಬ್ರಾಥೆಲ್ಗಳಿಗೆ ಹೋಗುವುದನ್ನು ಮನ್ನಿಸುವ ನಮ್ಮ ಸಮಾಜವು ಹೆಣ್ಣೊಬ್ಬಳು ಹಾಕಲಾದ ಚೌಕಟ್ಟನ್ನ ಉಲ್ಲಂಘಿಸಿದ ಕೂದಲೆ ಆಕೆಗೆ ’ವ್ಯಾಂಪ್’ ಪಟ್ಟ ನೀಡಿಬಿಡುತ್ತದೆ.
ಎಲ್ಲದಕ್ಕೂ ಗಂಡಸನ್ನು ಬೆಂಚ್ ಮಾರ್ಕ್ ಆಗಿ ಇಟ್ಟುಕೊಳ್ಳುವುದೆಂತಹ ಸ್ತ್ರೀವಾದ? ನೀವು ಸಮಾಜದ ಬೇರೆ ಬೇರೆ ಸ್ಥರಗಳನ್ನು ಕಂಬೈನ್ ಮಾಡಿ ಜೆನೆರಲೈಸ್ ಮಾಡಿದ್ದೀರ ಅನಿಸುತ್ತಿದೆ. ’ನಮ್ಮ’ ಸಮಾಜದಲ್ಲಂತೂ ಬ್ರಾಥೆಲ್ ಗಳಿಗೆ ಹೋಗುವ ಗಂಡಸಿಗೂ ಬ್ರಾಥೆಲ್ ನಲ್ಲಿರುವು ಹೆಂಗಸಿಗೂ ಒಂದೇ ಮನ್ನಣೆ.
ಟೀನಕ್ಕ,
ಅಂದಹಾಗೆ… ಟ್ರಾಫಿಕಿಂಗ್ ಅಂದ್ರೆ ಏನು? 😕
ವಿನಾಯಕ,
ನಿಮ್ಮ ಸ್ವಾತಂತ್ರ್ಯವನ್ನು ಗೌರವಿಸಿಕೊಂಡೇ ಇದೇನೆ. ಒಳ್ಳೆಯ ಚರ್ಚೆಯಿದ್ದಾಗ ನೂರೆಂಟು ವಿಚಾರಗಳು ಹೊರಬರುತ್ತವೆ. ನಿಮ್ಮಿಂದ ಕಲಿಯುವಂಥದೇನಾದರು ಇದ್ದರೆ ನಾವೂ ಕಲಿಯುತ್ತೇವೆ.
ವಿಕಾಸ,
ಸ್ತ್ರೀವಾದದ ಬಗ್ಗೆ ಮಾತನಾಡುವ ಮುನ್ನ ನೀವು ಸ್ತ್ರೀವಾದದ ಬಗ್ಗೆ ಚೆನ್ನಾಗಿ ತಿಳಿದುಕೋಬೇಕು ಅನ್ಸತ್ತೆ. ಗಂಡಸನ್ನ ಬೆಂಚ್ ಮಾರ್ಕ್ ಮಾಡಿ ನೋಡೋದಕ್ಕೇ ಸ್ತ್ರೀವಾದ ಅಂತಾರೆ ವಿಕಾಸ. ಗಂಡಸರಿಗೆ ಕಂಪೇರ್ ಮಾಡಿದರೆ ಹೆಣ್ಣಿನ ಜೀವನ ಹೇಗಿದೆ, ಯಾಕೆ ಹೆಣ್ಣು ಹೀಗಿದಾಳೆ ಗಂಡು ಹಾಗಿದಾನೆ ಅಂತ ಅಳೆಯುವದನ್ನೆ ಸ್ತ್ರೀವಾದ ಅಂತಾರೆ. ಇದರಲ್ಲಿ ಸಲ್ಲದ ವಾದ ಮಾಡುವ ವಿಷಯವೇನಿಲ್ಲ. ಸ್ತ್ರೀವಾದದ ಬಗ್ಗೆ ನಿಮಗೆ ವೈಯುಕ್ತಿಕ ತೊಂದರೆಗಳಿದ್ದರೆ ಅದನ್ನ ಬದಿಗಿಟ್ಟು ಮಾತನಾಡೋಣ. ಈ ಜನರಲೈಸೇಶನ್ನಿನ ವಿಷಯ ಸುಮ್ಮನೆ ಹಿಂಸೆ ಕೊಡುತ್ತದೆ ವಿಕಾಸ. ಜನರಲೈಸ್ ಮಾಡದೆ ಸುಮ್ಮನೆ ಪ್ರತಿಯೊಬ್ಬರ ಬಗ್ಗೆಯೂ ಕಸ್ಟಮೈಸ್ಡ್ ರಿಪೋರ್ಟು ಕೊಡಲಿಕ್ಕೆ ಸಾಧ್ಯವಾಗಿದ್ದಿದ್ದರೆ ಚೆನ್ನಿತ್ತು!! ಹಾಗಾಗದೆ ಹೋಗುವದಕ್ಕೆ ಜನರಲೈಸೇಶನ್ನು ಮಾಡಬೇಕಾಗತ್ತೆ. ತಮ್ಮ ಜನ್ಮವನ್ನು ಹಳಿದುಕೊಳ್ಳುವ ಹೆಣ್ಣುಮಕ್ಕಳ stereotypical attitude ಕೂಡ ನಮ್ಮ ಸಮಾಜ ಹುಟ್ಟಿಹಾಕಿರುವಂಥದೆ. ಅದರ ಬಗ್ಗೆ ನಿಮ್ಮಂತೆ ನನಗೂ ಬೇಸರವಿದೆ. ನಮ್ಮ ಸಮಾಜ ಎಂದಾಗ ಎಲ್ಲ ಸ್ತರಗಳನ್ನೂ ಒಳಗೊಂಡು ಮಾತನಾಡಬೇಕಾಗುತ್ತದೆ ವಿಕಾಸ. ನೀವು ನೋಡಿರುವದು ಬರೆ ಒಂದು ಒಳ್ಳೆಯ ಸ್ತರ ಮಾತ್ರ ಅಂತ ನನ್ನ ಅನಿಸಿಕೆ.
ಟ್ರಾಫಿಕಿಂಗ್ ಅಂದರೆ ಹೆಣ್ಣುಮಕ್ಕಳನ್ನು (ಎಂಟು ಒಂಭತ್ತು ವಯಸ್ಸಿನಿಂದ ಹರೆಯ ಬಂದವರು) ವೇಶ್ಯಾವಾಟಿಕೆಯ ಧಂಧೆಗೆ ಸಾಗಿಸುವದು ಎಂದು ಅರ್ಥ.
ಏನು ಅಕ್ಕ ಇಷ್ಟೊಂದು ಗಲಾಟೆ ಮಾಡ್ತಾಳೆ ಇಲ್ಲಿ ಅಂತೀರ?
ದಿನಬೆಳಗಾ ಎದ್ದರೆ ಸುಮಾರು ಜನ ಕ್ಷುಲ್ಲಕ ಅನ್ನಬಹುದಾದ ಹಿಂಸೆಗಳನ್ನ ಹೆಣ್ಣುಮಕ್ಕಳು ಅನುಭವಿಸ್ತಿರೋದನ್ನೆ ನೋಡಿರೋಳು ನಾನು. ನಾನು ಕಾಲೇಜಿಗೆ ಸೇರ್ತಿದೀನಿ ಹಾಸ್ಟೆಲಲ್ಲಿರ್ತೀನಿ ಅಂದ್ರೆ, ’ನಾಚಿಕೆಗೆಟ್ಟೋಳು, ಹುಡುಗುರ್ ಜೊತೆ ಓದ್ತಾಳಂತೆ!! ಅಲ್ಲೆಲ್ಲ ಏನೇನು ಮಾಡ್ಕೊಂಬರ್ತಾಳೋ. ಇದೆಲ್ಲ ಮಾಡಿದ್ರೆ ಮುಸುರೆ ತಿಕ್ಕೋದು ತಪ್ಪತ್ತಾ’ ಎಂದು ಬೆನ್ನ ಹಿಂದೆ ಮಾತನಾಡೋದ ಕೇಳಿಸಿಕೊಂಡು ಆಗೇನೋ ಸುಮ್ಮನಿದ್ದೆ. ಈಗ ಯಾಕೋ ಸುಮ್ನಿರೋಕೆ ಅಗದಪ್ಪ. ಇನ್ನೂ ಹೆಚ್ಚಿನ ಗಲಾಟೆ ಮಾಡೋಕೆ ಯಾವಾಗಾದರು ಚೇತನಾ ನಾನು ನೀವು ವಿನಾಯಕ ಒಂದು ಕಡೆ ಕೂರುವಾ. ಸರಿಯೆ?
ಸ್ತ್ರೀವಾದದ ಬಗ್ಗೆ ನಿಮಗೆ ವೈಯುಕ್ತಿಕ ತೊಂದರೆಗಳಿದ್ದರೆ ಅದನ್ನ ಬದಿಗಿಟ್ಟು ಮಾತನಾಡೋಣ.
ಇಲ್ಲಿ ವೈಯಕ್ತಿಕ ಯಾವುದೂ ಇಲ್ಲ. ಎಲ್ಲವನ್ನೂ ಬರೀ ವೈಯಕ್ತಿಕವಾಗೇ ನೋಡಿದ್ದರೆ ಈ ಬ್ಲಾಗು, ಚರ್ಚೆ, ವಿಚಾರ ವಿನಿಮಯ ಎಲ್ಲಾ ಯಾಕೆ ಬೇಕಿತ್ತು ಹೇಳಿ.
ಗಂಡಸನ್ನ ಬೆಂಚ್ ಮಾರ್ಕ್ ಮಾಡಿ ನೋಡೋದಕ್ಕೇ ಸ್ತ್ರೀವಾದ ಅಂತಾರೆ ಎಂಬುದಕ್ಕೆ ನನ್ನದು ಭಯಂಕರ ತಕರಾರಿದೆ. ಇಲ್ಲಿ ಬೇಡ ಗಲಾಟೆ. ಖುದ್ದು ಸೇರೋಣ ಎಲ್ಲರು, ಎಲ್ಲಾದರು. ಲೊಕೇಷನ್ ಶಿಫ್ಟ್ 🙂
ನಿಮಗೆ ಕೋಪ ಬರುವುದಕ್ಕಿಂತ ಮೊದಲೇ escape…… 🙂
bye
ಟೀನಾ ಅವರೇ
ನನಗೆ ಸ್ರ್ಟಿವಾದದ ಕಲ್ಪನೆ ಅಷ್ಟೊಂದು ಇಲ್ಲ. ಹಾಗಾಗಿ ಆ ಬಗ್ಗೆ ಮಾತನಾಡಲಾರೆ. ನೀವು ಹೇಳಿದಂತೆ ವೇಶ್ಯವಾಟಿಕೆ ದಂದೆಗಿಳಿಸುವ ಕುರಿತಾಗಿ ಕೇಳಿದ್ದೇನೆ. ಆದರೆ ಇತರ ದೇಶಕ್ಕೆ ಹೋಲಿಸಿಕೊಂಡರೆ ನಮ್ಮಲ್ಲಿ ಆ ದಂದೆ ಕಡಿಮೆ ಅಂತಾ ಬಲ್ಲವರು ಹೇಳುತ್ತಾರೆ. ಅಕ್ಕ ಅದ್ಯಾಕೋ ಬ್ಲಾಶ್ ಫೆಮಿ ಬಗ್ಗೆ ಮಾತಾಡುತ್ತಿದ್ದಳು ಮೊನ್ನೆ. ಭಯಾನಕ ಪುಸ್ತಕವಂತೆ ಅದು. ಅದರ ಕಥೆ ಕೇಳಿದ ಮೇಲೆ ನಮ್ಮಲ್ಲಿನ ಸಮಾಜ ಎಷ್ಟೋ ಒಳಿತು ಅನ್ನಿಸಿತು ನನಗೆ. ಅದರ ಬೆನ್ನಲ್ಲೇ ಲೀಲಾ ಸಂಪಿಗೆಯವರ ಓಲಂಪಿಕ್ ಎಂಬ ಕೆಂಪು ದೀಪದತ್ತ ಕಣ್ಣಾಡಿಸಿದೆ. ಅಬ್ಬ ಅದು ಇನ್ನೊಂದು ಭಯಾನಕ ಅಧ್ಯಾಯ. ಇದನ್ನೆಲ್ಲಾ ನೋಡುವಾಗ ಕಾರಂತರ ಮೈ ಮನಗಳ ಸುಳಿಯಲ್ಲಿನ ಕಥೆ ಏನೂ ಅಲ್ಲ ಅನ್ನಿಸತ್ತೆ. ಅದನ್ನು ನೆನಪಿಸಿಕೊಂಡು ನಮ್ಮ ಸಮಾಜದ ಕುರಿತು ಹಮ್ಮೆಪಡಬೇಕು ಅಷ್ಟೇ! ಅಂದಹಾಗೇ ನೀವು ಗಡಿಭಾಗದ ಹೆಣ್ಣು ಮಕ್ಕಳ ಕುರಿತು ವಿಶೇಷ ಅಧ್ಯಯನ ಮಾಡುತ್ತಿದ್ದೀರಾ ಅಂತಾ ಅಕ್ಕ ಹೇಳಿದ ಹಾಗಿತ್ತು. ಅಲ್ಲಿನ ಮಾಹಿತಿಯನ್ನು ಒಂದಿಷ್ಟು ತನ್ನಿ. ಇನ್ನೊಂದು ವಿಚಾರ ಹೆಣ್ಣಿನ ಕುರಿತು ಚರ್ಚೆ ಮಾಡುವವರು, ಭಾಷಣ ಬಿಗಿಯುವವರು ತುಂಬಾ ಜನರಿದ್ದಾರೆ. ಆದರೆ ಕಾರಂತರಂತೆ ವೇಶ್ಯೆಯರಿಗೂ ಸಮಾಜದಲ್ಲಿ ಸ್ಥಾನ ಕಲ್ಪಿಸಿಕೊಡುವವರು ತುಂಬಾ ವಿರಳ ಅನ್ನಿಸತ್ತೆ. ಹಾಗಾಗಿ ನಾವು ಕೂಡ ಸುಮ್ಮನೆ ಚರ್ಚೆ ಮಾಡಿ ಹೊತ್ತು ಕಳೆಯುವುದರಲ್ಲಿ ಅರ್ಥವಿಲ್ಲ. ಬದಲು ಆ ದಿಕ್ಕಿನಲ್ಲಿ ಏನಾದರೂ ಒಂದಿಷ್ಟು ಕೆಲಸ ಮಾಡಲು ಸಾಧ್ಯವಾ ಅಂತಾ ಆಲೋಚಿಸೋಣ ಅಲ್ವಾ?
ಭಾಗವತರೇ
ನುಡಿ ಮತ್ತಿತರ ಯುನಿಕೋಡ್ ನನ್ನ ಹತ್ತಿರವಿಲ್ಲ. ಹಾಗಾಗಿ ಬರಹ ಪ್ಯಾಡ್ನಲ್ಲೇ ಟೈಪ್ ಮಾಡಬೇಕು. ಅದು ಅಲ್ಲದೇ ಫಾಂಟ್ ಕನವರ್ಟರ್ ಕೂಡ ಇಲ್ಲ ನನ್ನಲ್ಲಿ.
ಹರೀಶ್
ಪ್ರತಿಕ್ರಿಯೆಗೆ ಧನ್ಯವಾದಗಳು
ನುಡಿ ಎಂತಕೆ ಬೇಕು? ಇದನ್ನ ಒಂದ್ಸರ್ತಿ ನೋಡು – http://sampada.net/fonthelp
ಬರಹ ಡೈರೆಕ್ಟ್ ಇಲ್ವಾ? blogspot-ನಲ್ಲಿ regional language ಅಂತ option ಇರತ್ತೆ. wordpress-ನಲ್ಲೂ ಇರ್ಬೇಕು, ನೋಡು. ಸಿಕ್ಕಾಪಟ್ಟೆ ಕಾಗುಣಿತ ತಪ್ಪಿದ್ರೆ ಕಿರಿಕಿರಿ ಅನ್ಸತ್ತೆ ಓದ್ಲಿಕ್ಕೆ. ನಿನ್ ಬ್ಲಾಗಿಗೆ ನಾವು ಬರ್ಬೇಕಾ ಬೇಡ್ವಾ? 🙂
“ಹೆಚ್ಚಿನ ಗಲಾಟೆ ಮಾಡೋಕೆ ಯಾವಾಗಾದರು ಚೇತನಾ ನಾನು ನೀವು ವಿನಾಯಕ ಒಂದು ಕಡೆ ಕೂರುವಾ”…
@ವಿಕಾಸ, ವಿನಾಯಕ,
ಹುಷಾರು. ’ಒಂದು ಕಡೆ’ ಕೂರುವ ಮುನ್ನ ಎಲ್ಲಿ ಕೂರ್ತಿದೀರಿ ಅಂತ ಎಲ್ಲಾರ್ಗೂ ಮುಂಚೆನೆ ಹೇಳಿ ಹೋಗೊದು ಸೇಫು 🙂
ಭಾಗ್ವತರೇ
ಇನ್ನು ಮೇಲೆ ಕಾಗುಣಿತ ತಪ್ಪಾಗದಂತೆ ನಿಗಾ ವಹಿಸುವೆ.
ವಿನಾಯಕ,
ಯಾರು ಏನೇ ಹೇಳಲಿ, ಹೆಣ್ಣುಮಕ್ಕಳ ಮೇಲೆ ಅನ್ಯಾಯವಾಗಿ ತಪ್ಪನ್ನು ಹೇರಲಾಗುತ್ತದೆ ಎನ್ನುವ ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ.
ಅಣ್ಣ,
ಸ್ವಲ್ಪ ತಡವಾಗಿ ಈ ಲೇಖನವನ್ನ ಗಮನಿಸಿದೆ. ಚರ್ಚೆಯ ಕಾವು ಬಹುಶಃ ಇನ್ನೂ ತಣ್ಣಗಾಗಿಲ್ಲ ಎಂಬ ನಿರೀಕ್ಷೆಯಲ್ಲಿ ನನ್ನ ಅಭಿಪ್ರಾಯವನ್ನು ದಾಖಲಿಸಲು ಬಯಸುತ್ತೇನೆ.
ನಮ್ಮ ಮನೆಯಲ್ಲಿರುವುದು ನಾನು, ನನ್ನ ತಮ್ಮ, ಅಪ್ಪ ಹಾಗೂ ಅಮ್ಮ. ಹೀಗಾಗಿ ನಮ್ಮನೆಯಲ್ಲಿ ಗಂಡಸರದ್ದೇ ಮೆಜಾರಿಟಿ. ಮನೆಯಲ್ಲಿ ಮೊಣಕೈ ಉದ್ದನೆಯ ಅಳತೆಯ ಒಂದು ಚೆಂದದ ಗೊಂಬೆಯಿದೆ ಅದನ್ನು ನಾವು ‘ಚುಲ್ ಬುಲಿ’ ಅಂತ ಕರೀತೇವೆ. ನಮಗೊಬ್ಬ ‘ಮಾತಾಡದ’ ತಂಗಿಯಿದ್ದಂತೆ ಆಕೆ. ಅಮ್ಮನಿಗೂ ಪುಟ್ಟ ಮಗಳು. ಆಗಾಗ ಸುಮ್ಮನೆ ಕುಶಾಲಿಗೆ ಮಾತಿಗೆ ಮಾತು ಬೆಳೆದಾಗ ನಾನು ಹಿಂದೆಲ್ಲಾ ತುಂಬಾ ಸಲ ‘ಎಷ್ಟೇ ಅಂದ್ರೂ ಹುಡುಗಿಯರಿಗೆ ಐಕ್ಯೂ ಕಡಿಮೆ, ಮ್ಯಾಥಮೆಟಿಕ್ಸ್ ಅವರಿಗೆ ಆಗಿ ಬರುವುದಿಲ್ಲ. ಅವರಿಗೆ ಮ್ಯಾಪು ಓದುವುದಕ್ಕೆ ಬರುವುದಿಲ್ಲ. ಐಐಟಿಗಳಿಂದ ಹಿಡಿದು ಸಿಇಟಿಯವರೆಗೆಲ್ಲಾ ಹುಡುಗರದೇ ಮೇಲುಗೈ. ಪಿಯುಸಿ, ಎಸ್ ಎಸ್ ಎಲ್ ಸಿಯಲ್ಲಿ ಹುಡುಗಿಯರ ಶೇಕಡಾವಾರು ಫಲಿತಾಂಶದಲ್ಲಿನ ಮೇಲುಗೈಗೆ ಬೇರೆಯ ಕಾರಣಗಳಿವೆ. ಒಟ್ಟು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹುಡುಗರದು ಹೆಚ್ಚು. ಹೀಗಾಗಿ ಅವರಲ್ಲಿ ಅರ್ಹತೆಯಿಲ್ಲದವರು ಹೆಚ್ಚು ಮಂದಿ ಇರುತ್ತಾರೆ. ಒಟ್ಟಾರೆ ಫಲಿತಾಂಶ ಕುಸಿತವಾಗುತ್ತದೆ. ಆದರೆ ರ್ಯಾಂಕುಗಳಲ್ಲಿ ಹುಡುಗರೇ ಮುಂದೆ ’ ಹೀಗೆಲ್ಲಾ ವಾದಿಸಿದ್ದೇನೆ. ಹಾಗೆ ಮಾತನಾಡುವಾಗ ಬೇರೆಲ್ಲಾ ಡಿಬೇಟುಗಳಲ್ಲಿದ್ದ ಹಾಗೆ ಕೊಂಚ ಹುಂಬತನ, ನನ್ನ ಸ್ಮಾರ್ಟ್ನೆಸ್ ತೋರಿಸಿಕೊಳ್ಳುವ ಹಂಬಲ, ನನ್ನ ನಿಲುವಿನೊಂದಿಗೆ ನನ್ನನ್ನು ಗುರುತಿಸಿಕೊಳ್ಳುವಿಕೆ ಎಲ್ಲಾ ಇರುತ್ತದೆ. ಇದೆಲ್ಲಾ ಕುಶಾಲಿನೆ ಚರ್ಚೆಗೆ ಓಕೆ.
ಆದರೆ ನಮ್ಮ ಮನೆಯ ಹೆಣ್ಣು ಮಗಳನ್ನು ನಾವು ಯಾವ ರೀತಿಯಲ್ಲಿ ನೋಡುತ್ತೇವೆ? ನಾನು ಒಬ್ಬಂಟಿಯಾಗಿದ್ದಾಗ, ಒಂದು ಗುಂಪಿನ ಸದಸ್ಯನಾಗಿದ್ದಾಗ, ಸಮಾಜದ ಭಾಗವಾದಾಗ ಹೆಣ್ಣನ್ನು ಹೇಗೆ ನೋಡುತ್ತೇನೆ ಎಂಬುದನ್ನು ನಾನು ಅವಲೋಕಿಸಬೇಕು. ನಾನೆಷ್ಟೇ ‘ಸ್ತ್ರೀವಾದಿ’ ಎಂದು ಅಂದುಕೊಂಡರು ಬೇಸಿಕಲಿ ನಾನೊಬ್ಬ ಪುರುಷ. ಒಬ್ಬ ಹೆಣ್ಣಿನ ಸ್ವಾತಂತ್ರ್ಯದ ಕೂಗು ನನಗೆಂದೂ ಪ್ರಿಯವಾಗಿ ಕಾಣದು. ಏಕೆಂದರೆ ಆಕೆ ನನಗೆ ಮತ್ತೊಬ್ಬ ಪ್ರತಿಸ್ಪರ್ಧಿಯಾಗುತ್ತಾಳೆ. ಒಬ್ಬ ಹೆಣ್ಣಿನ ಸಬಲತೆ ಎಂದಿಗೂ ನನ್ನ ಮೇಲಿನ ಆಕ್ರಮಣ ಶೀಲತೆಯಾಗಿಯೇ ಕಾಣುತ್ತದೆ. ಹಕ್ಕಿಗಾಗಿ ಆಗ್ರಹಿಸುವಾಕೆ ನನ್ನಿಂದ ಕಿತ್ತುಕೊಳ್ಳುವವಳಾಗಿಯೇ ನನಗೆ ಕಾಣುತ್ತಾಳೆ. ಹೀಗಿರುವಾಗ ನಾನು ಪುರುಷನಾಗಿ ಮಹಿಳೆಯನ್ನು ಹೇಗೆ ಕಾಣಬೇಕು? ಆಕೆಯನ್ನು ಬೆಳೆಸಲು ನಾನು ಯಾರು? ನನ್ನ ಸಹಾನುಭೂತಿ, ಅನುಕಂಪ ಆಕೆಯನ್ನು ತಾನು ನನಗಿಂತ ಕೀಳು ಎಂಬ ಭಾವನೆಯನ್ನು ನನ್ನಲ್ಲಿ ಸ್ಥಾಪಿಸುತ್ತದೆಯಲ್ಲವೇ? ಆಕೆಯ ಮೇಲಿನ ನನ್ನ ಹಗೆ ಆಕೆಯ ಅಹಂನ್ನು ಕೆಣಕುತ್ತದೆಯಲ್ಲವೇ? ಇದೆಲ್ಲವನ್ನೂ ಗಮನದಲ್ಲಿರಿಸಿಕೊಂಡು ಆಲೋಚನೆ ಮಾಡಬೇಕು ಅಂದುಕೊಳ್ಳುತ್ತೇನೆ. ನಾನಿನ್ನೂ ನಿರ್ಣಯಗಳಿಂದ ದೂರವಿದ್ದೇನೆ.
-ಸುಪ್ರೀತ್
ಸುಪ್ರೀತ್
ನಾನಿಲ್ಲಿ ಹೆಣ್ಣು, ಗಂಡೆಂಬ ಭಾವದ ಕುರಿತಾಗಿ ಮಾತಾಡುತ್ತಿಲ್ಲ. ಲಿಂಗ ಭೇದವೆಂಬುದು ಹೆಣ್ಣನ್ನು ಶೋಷಿಸುವ ವಸ್ತುವಾಗುತ್ತಿದೆ ಎಂಬುದು ಮಾತ್ರ ನನ್ನ ನೋವು. ಅಂದಹಾಗೆ ನನಗಂತೂ ಹೆಣ್ಣು ಪ್ರತಿಸ್ಪರ್ಧಿ ಎಂಬ ಭಾವವಿಲ್ಲ.
ನಾನು ಎಲ್ಲರೂ ಪತ್ರಿಕೆಗಳಿಂದ ಗುರುತಿಸಲ್ಪಡುವುದಿಲ್ಲ ಎಂದಿಲ್ಲ. ಬರಹಗಾರನೆನಿಸಿಕೊಂಡ ಪ್ರತಿಯೊಬ್ಬನೂ ಒಂದೆಲ್ಲಾ ಒಂದು ದಿನ ಮುಖ್ಯವಾಹಿನಿಗೆ ಬಂದೇ ಬರುತ್ತಾನೆ. ಆದರೆ ಪತ್ರಿಕೆಗಳು ಬರೆಯುವ ಹುಮ್ಮಸ್ಸು ಇದ್ದ ಕಾಲದಲ್ಲಿ ವೇದಿಕೆ ಕೊಡುವುದಿಲ್ಲ ಎಂಬುದು ನನ್ನ ಅನಿಸಿಕೆ.
-‘ಸೆಕ್ಸ್ ಎಂಬುದು ಹೆಣ್ಣನ್ನು ಶೋಷಿಸುವ ವಸ್ತುವಾಗುತ್ತಿದೆ ಏಕೆ ಎಂಬುದೇ ನನ್ನ ಪ್ರಶ್ನೆ ‘
idakke uttaravannu ‘ganDasare’ hELabEku.
-‘ಆದರೆ ಹೆಣ್ಣು ಜನ್ಮವನ್ನೇ ಹಳಿದೂಹಳಿದೂ ಹುಟ್ಟುವ ಎಲ್ಲಾ ಪೀಳಿಗೆಯ ಹೆಣ್ಣುಗಳ ಜೀವನಪ್ರೀತಿ ಕಳೆದುಬಿಡುವುದ್ಯಾಕೆ?’
idakke uttara ‘varadakshiNe’ andukonDiddene. I mean, samajada paristiti.
duDDU illadiddalli, ganDiginta jaasti odiddalli, noDalu chennagilladiddalli……..magaLa maduve illa.
Jeevana viDi “bhara” enisuva heNNannu haLiyade innenu maDiyaru?
esto heNNu makkaLu tande-tayogaLige, aNNa-tammandirige “bhara”da feelings maDisibiduttare.
manegelasakke baruvavara family stories keLi nodi.