ಅಪಘಾತ ಮತ್ತು ಅಪಘಾತ!
ಆಗಷ್ಟ್ 5, 2008 aksharavihaara ಮೂಲಕ
ಕಾವೇರಿ ಗಲಾಟೆಯಂತೆ, ಬೆಂಗಳೂರು ಬಂದಂತೆ…ಅವಳು ಮಣಗುಡುತ್ತಿದ್ದರೂ ಕಿವಿಗೆ ಬೀಳದವನಂತೆ ಬ್ಯಾಗ್ ಏರಿಸಿ, ಶೂ ಕಟ್ಟಿ ಆಫೀಸ್ನತ್ತ ಮುಖ ಮಾಡಲು ಸಜ್ಜಾದೆ.
ರೀ ಇವತ್ತಿಗೆ ಮದ್ವೆಯಾಗಿ ಒಂದು ವರ್ಷ ಕಳೆಯಿತು. ಹಾಯಾಗಿ ಯಾವುದಾದರೂ ದೇವಸ್ಥಾನಕ್ಕೆ ಹೋಗಬಾರದ? ಹೇಗೂ ಬೆಂಗಳೂರು ಬಂದಂತೆ…ಮತ್ತೆ ರಾಗ ಎಳೆದಳು.
ಸ್ವಾತಂತ್ರ್ಯ ದಿನಕ್ಕೂ ರಜೆ ಕೊಡದ, ಧ್ವಜ ಹಾರಿಸದ ಎಂಎನ್ಸಿ ನಮ್ಮದು. ಅಂತಹದರಲ್ಲಿ ಯಕಶ್ಚಿತ್ ಸ್ಟ್ರೈಕ್ಗೆ ರಜ ಕೊಡ್ತಾರಾ. ಮುಂದುಗಡೆ ಬಾಗಿಲಿಗೆ ಬೀಗ ಜಡಿದು ಹಿಂದುಗಡೆಯಿಂದ ಕೆಲಸ ಮಾಡಿಸುತ್ತಾರೆ. ಒಂದು ದಿನ ರಜ ಕೊಟ್ಟರೂ ಅವರಿಗೆ ಲಕ್ಷಾಂತರ ನಷ್ಟವಾಗುತ್ತೆ…ಅನ್ನುತ್ತಲೇ ಶೂ ಕಟ್ಟಿ ಬಾಗಿಲ ಬಳಿ ಹೊರಟೆ. ಫೋನ್ ರಿಂಗಣಿಸಿತು. ಮ್ಯಾನೇಜರ್ ವಿಶ್ವನಾಥನ ಕರೆ. ಇವತ್ತು ರಕ್ಷಣ ವೇದಿಕೆಯವರು ಹೋರಾಟ ಮಾಡುತ್ತಾರಂತೆ. ಬಾಗಿಲು ಮುಚ್ಚದ ಕಂಪನಿಗಳಿಗೆ ಕಲ್ಲು ಹೊಡಿತಾರಂತೆ! ಹಾಗಾಗಿ ಬಾಸು ಆಫೀಸ್ಗೆ ರಜ ಕೊಡಲು ಹೇಳಿದಾರೆ ಇವತ್ತು. ಸೋ ನಿಮಗೆಲ್ಲಾ ರಜೆ ಎಂದು ಕರೆ ಕಟ್ಟು ಮಾಡಿದ. ಮುಂಡೆವಕ್ಕೆ ದಿನ ಬೆಳಗಾದರೆ ಕುಡಿಯಲು ಕಾವೇರಿ ನೀರೇ ಬೇಕು ಅಂತಾ ಗೊತ್ತಿಲ್ಲ. ಯಾರೋ ಗಲಾಟೆ ಮಾಡುತ್ತಾರಂತೆ. ಅದಕ್ಕೆ ಇವರು ರಜ ಕೊಡುತ್ತಾರಂತೆ. ಇಂತಹವರಿಂದಲೇ ದೇಶ ಹಾಳಾಗುತ್ತಿದೆ ಎಂದು ಗೊಣಗುತ್ತಾ ಶೂ ಕಳಚಿ ಬಿಸಾಡಿ, ಬ್ಯಾಗನ್ನು ಸೋಫಾದ ಮೇಲೆ ಎಸೆದು ರೂಮು ಸೇರಿದೆ.
ರೀ ಇವತ್ತಿಗೆ ನಮ್ಮ ಮದ್ವೆಯಾಗಿ ಒಂದು ವರ್ಷ ಆಯಿತು. ಏನೂ ಸ್ಪೆಷಲ್ ಅಡುಗೆ ಮಾಡಲಿ? ಅವಳು ಸತ್ತು ಎರಡು ವರ್ಷವಾಯಿತು ನಾನು ಏನು ತಿನ್ನಲಿ? ಊಹುಂ! ಹಾಗಂತ ಹೆಂಡತಿಗೆ ಹೇಳಲು ಮನಸ್ಸಾಗಲಿಲ್ಲ. ತಲೆ ನೋಯುತ್ತಿದೆ. ನನಗೇನು ಬೇಡ. ಮಧ್ಯಾಹ್ನ ಎಚ್ಚರ ಆದ್ರೆ ಊಟ ಮಾಡುತ್ತೆನೆ…ರೂಮು ಬಾಗಿಲು ಹಾಕಿಕೊಂಡೆ. ಅವಳು ತಿರುಗಿ ಏನನ್ನು ಕೇಳಲಿಲ್ಲ. ಕೇಳಿದ್ದರೂ ಅದು ನನಗಂತೂ ಕೇಳುತ್ತಿರಲಿಲ್ಲ. ಅಷ್ಟು ಗಟ್ಟಿಯಾಗಿ ರೂಮಿನ ಬಾಗಿಲು ಜಡಿದಿದ್ದೆ.
ಕಿಟಕಿ ಬಾಗಿಲು ತೆರೆದೆ. ಸದಾ ಗಿಚಿಗುಡುತ್ತಿದ್ದ ಮಹಾನಗರಿ ಮೈತುಂಬಾ ಮೌನ ಆವರಿಸಿತ್ತು. ಲಾರಿ, ಬಸ್ಸುಗಳಿಂದ ತುಂಬಿ ತುಳುಕುತ್ತಿದ್ದ ರಸ್ತೆಗಳೆಲ್ಲಾ ಬಿಕೋ ಅನ್ನುತ್ತಿತ್ತು. ಬೀದಿಯಲ್ಲಿ ನೋಣಗಳು ಇತ್ತೇನೋ ಆದರೆ ಜನವಂತೂ ಇರಲಿಲ್ಲ! ದೇವರೆ ವಾರಕ್ಕೆ ಮೂರು ಕಾವೇರಿ ಹೋರಾಟ ನಡೆಯಲಿ ಎನ್ನುತ್ತಾ ದಿಂಬಿಗೆ ತಲೆ ಕೊಡುತ್ತಾ ಹಾಸಿಗೆಗೆ ಒರಗಿದೆ.
ಮಾಣಿ ಹಗಲೇ ಎಣ್ಣೆ ಹೊಡುದ್ಯೆನೋ. ಅಲ್ಲಾ ಅವಳ ಮೇಲೆ ಬೈಕು ಹತ್ತಿಸ್ತಾ ಇದ್ದ್ಯೆಲ್ಲಾ…
ಬೀಡಾ ಅಂಗಡಿ ವೆಂಕಟೇಶಣ್ಣ ಕಿರುಚುತ್ತಾ ಇದ್ದರೆ ನನ್ನ ಎದೆ ಡವಗುಡುತ್ತಿತ್ತು. ದಿನ ಹಗಲೆ ಟೈಟ್ ಆಗ್ತಾ ಇದ್ದೆ. ಆದ್ರೆ ಇವತ್ತು ದೇವರಾಣೆಗೂ ಒಂದೇ ಒಂದು ಗುಟುಕು ಕುಡಿದಿಲ್ಲ. ಹಣೆ ಬರಹ ನಂದು ಒಂದು ಪೆಗ್ ಏರಿಸಿ ಬಂದಿದ್ದರೆ ಹೀಗಾಗುತ್ತಿರಲಿಲ್ಲವೇನೋ… ಅವಳನ್ನು ಸೀನನ ರಿಕ್ಷಾಕ್ಕೆ ಹತ್ತಿಸಿದೆ. ವೆಂಕಟೇಶಣ್ಣನು ಬಂದು ಸಹಾಯ ಮಾಡಿದರು. ಎಚ್ಚರ ತಪ್ಪಿತ್ತು ಅಷ್ಟೆ. ಆದರೂ ಹನಿ ರಕ್ತವೆನೂ ತೊಟ್ಟಿಕ್ಕಿರಲಿಲ್ಲ. ಹೆಣ್ಣು ಮಕ್ಕಳು ಎಲ್ಲದರಲ್ಲೂ ತುಂಬಾ ಸೂಕ್ಷ್ಮ ಎಂಬುದನ್ನು ಕೇಳಿದ್ದರಿಂದ ಏನಾದ್ರೂ ಆದ್ರೆ ಅನ್ನೋ ಭಯ.
ಸಂಜಿವಿನಿ ಆಸ್ಪತ್ರೆಗೆ ತಗೊಂಡು ಹೋಗು. ನಾನು ಬೈಕಲ್ಲಿ ಬರ್ತೀನಿ. ಸೀನನಿಗೆ ಹೇಳಿದೆ. ವೆಂಕಟೇಶಣ್ಣನಿಗೆ ಏನೋ ಮಾಡಿ ಬಾಯಿ ಮುಚ್ಚಿಸಿದೆ.
ಆದ್ರೂ ನನ್ನ ಸರ್ವೀಸನಲ್ಲಿ ಇದು ಫಸ್ಟ್ ಆಕ್ಸಿಡೆಂಟು. ಎರಡು ಮೂರು ಬಾಟಲಿ ಏರಿಸಿಕೊಂಡು ಬೈಕ್ ಹೊಡೆದರೂ ಈ ವರೆಗೂ ಯಾರಿಗೂ ಕುಟ್ಟಿಲ್ಲ. ಹಣೆ ಬರಹ ಅದು ಹುಡುಗಿಗೆ ತಾಗಬೇಕಿತ್ತಾ? ನೋಡಿದ್ರೆ ಊರಿಗೆ ಹೊಸಬಳ ತರಹ ಕಾಣ್ತಾಳೆ. ಇದೇನಾದ್ರೂ ಅಪ್ಪನ ಕಿವಿಗೆ ಬಿದ್ರೆ ನನ್ನ ತಿಥಿ ಗ್ಯಾರಂಟಿ. ಅವನೊಬ್ಬ ಬೆವರ್ಸಿ ಅಪ್ಪಾ. ನಾನು ತಪ್ಪು ಮಾಡುವುದನ್ನೆ ಕಾಯ್ತಿರ್ತಾನೆ ಅಂತೆಲ್ಲಾ ಯೋಚಿಸುತ್ತಾ ಸಾಗುವಾಗ ಸಂಜೀವಿನಿ ಆಸ್ಪತ್ರೆ ಬಂದಿತ್ತು.
ಮುದುಕರ ಕೇರಿಗೆ ಸೂಳೆನೇ ಶೃಂಗಾರಿ ಅನ್ನೋ ತರಹದ್ದು ನಮ್ಮೂರಿನ ಸಂಜೀವಿನಿ ಆಸ್ಪತ್ರೆ. ಆ ಡಾಕ್ಟರಮ್ಮನಿಗೆ ಬಸುರಿ ಹೆಂಗಸರನ್ನ ಅಬಾರ್ಷನ್ ಮಾಡಿಸುವುದು, ಥಂಡಿ, ಜ್ವರಕ್ಕೆ ಮಾತ್ರೆ ಕೊಡುವುದು ಬಿಟ್ಟರೆ ಮತ್ತೆನೂ ಗೊತ್ತಿಲ್ಲ. ತಲೆ ನೋವು ಅಂದ್ರೆ ತಲೆಗೆ ಇಂಜೆಕ್ಷನ್ ಕೊಡುವ ಸಾಗರದ ಐತಾಳ ಡಾಕ್ಟರ ಜಾತಿಯವಳು ಈ ಹಡ್ಬೆ ಹೆಂಗಸು. ಇನ್ನು ಏನೇನೋ ಇಲ್ಲದೇ ಹೋಗಿರುವ ಖಾಯಿಲೆಯಲ್ಲ ಇದೆ ಅನ್ನತ್ತೋ, ಯಾವ ಇಂಜೆಕ್ಷನ್ ಹೆಟ್ಟಬೇಕು ಅನ್ನತ್ತೋ… ಅದೇ ಚಿಂತೆಯಲ್ಲೇ ಅವಳನ್ನು ಮಲಗಿಸಿದ್ದ ವಾರ್ಡಗೆ ಹೋದೆ. ಡಾಕ್ಟರ್ ಮಾಲತಿಯಮ್ಮ ಆ ಪುಣ್ಯಾಗ್ತಿತ್ತಿಯನ್ನು ಪರೀಕ್ಷಿಸಿ ಹೊರಬರುತ್ತಿದ್ದಳು. ಕೆಲಸ ಆಗಬೇಕು ಅಂದ್ರೆ ಕಥೆ ಕಾಲನ್ನಾದರೂ ಹಿಡಿಯಬೇಕು ಅನ್ನೋ ಅಪ್ಪನ ಮಾತು ನೆನಪಾಯಿತು. ಸಟಕ್ಕನೆ ಎರಡು ಕೈಜೋಡಿಸಿ ಡಾಕ್ಟರಮ್ಮನಿಗೊಂದು ನಮಸ್ಕಾರ ಹೊಡೆದೆ. ಆಯಮ್ಮ ಹಲ್ಲು ಕಿರಿಯುತ್ತಾ ಅಂತ ಮೇಜರ್ ಏನೂ ಇಲ್ಲ, ಪ್ರಜ್ಞೆ ತಪ್ಪಿದೆ ಅಷ್ಟೆ ಎಂದಿತು. ನಂಗೆ ಜೀವ ಬಂದಹಾಗೆ ಆಯಿತು. ಹೋಗಿ ಅವಳಿರುವಲ್ಲಿ ಕೂತೆ. ಜೇಬಲ್ಲಿ ಇದ್ದ ಸಿಗರೇಟ್ ಪ್ಯಾಕ್ ತೆಗೆದು ಸಿಗರೇಟು ಸೇದುತ್ತಾ ಮುಂದೇನು ಮಾಡಬೇಕೆಂದು ಯೋಚಿಸುತ್ತಾ ಕುಳಿತೆ. ನನ್ನ ಯೋಚನಾ ವೋಗಕ್ಕೆ ಅರ್ಧ ಪ್ಯಾಕ್ ಸಿಗರೇಟು ಖರ್ಚಾಗಿತ್ತು.
ಇವತ್ತು ನೋಡಿದರೆ ನಿಜಕ್ಕೂ ಎಂತಹ ಹುಡುಗರನ್ನು ಮರುಳು ಮಾಡುವ ಸೌಂದರ್ಯವುಳ್ಳ ಹುಡುಗಿ. ಆದ್ರೆ ಆವತ್ತು ನಂಗೆ ಅದ್ಯಾವುದು ಬೇಡವಾಗಿತ್ತು. ಅವಳ ಜೀವ ಉಳಿದು ಮನೆ ತಲುಪಿದರೆ ಸಾಕು. ಯಾವುದೇ ಅವಘಡವೂ ಆಗದ್ದಿದ್ದರೆ ಸಾಕು ಅನ್ನುವಂತಾಗಿತ್ತು. ಇನ್ನೂ ಸರಿಯಾಗಿ ಹೇಳುವುದಾದರೆ ನನ್ನ ಪಾಲಿಗೆ ಆ ಘಳಿಗೆಯಲ್ಲಿ ಅವಳು ಶನಿಯಾಗಿದ್ದಳು.
ಇನ್ನೊಂದು ಸಿಗರೇಟು ಹೊತ್ತಿಸಿ ಅವಳ ಕಾಲು ಬುಡದಲ್ಲಿ ಅವಳನ್ನೇ ದಿಟ್ಟಿಸುತ್ತಾ ಕುಳಿತಿದ್ದೆ. ಪುಣ್ಯಾಗ್ತಿತ್ತಿ ಕಣ್ಣು ತೆರೆದಳು. ಜೀವ ಬಂದಹಾಗಾಯಿತು ನನಗೆ. ಡಾಕ್ಟರಮ್ಮ ಏನೇ ಹೇಳಿದರೂ ನಂಗೆ ಸಮಾಧಾನ ಆಗಿರಲಿಲ್ಲ. ಡಾಕ್ಟರಮ್ಮನ ಮೇಲೆ ನಂಬಿಕೆ ಅನ್ನೋದಂತೂ ಮೊದಲೇ ಇಲ್ಲ. ನಿಜಕ್ಕೂ ದೀರ್ಘವಾದೊಂದು ಉಸಿರು ಬಿಟ್ಟೆ. ಅವಳು ಕಣ್ಣು ತೆರೆದು ನನ್ನ ಸಿಗರೇಟನ್ನೆ ದಿಟ್ಟಿಸಿದಳು. ಆಸ್ಪತ್ರೆಯಲ್ಲಿ ಸಿಗರೇಟು ಸೇದಬಾರದು ಅನ್ನೋ ಪರಿಜ್ಞಾನವೂ ಬೇಡವ ನಿನಗೆ ಅಂತಾ ಲೊಳಗುಟ್ಟಿರಬೇಕು ಅವಳು! ಇದು ನಿಮ್ಮಪ್ಪನ ಆಸ್ಪತ್ರೆಯಲ್ಲ ಬಿದ್ಕಳೆ ಸುಮ್ಮನೆ ಅನ್ನುವ ಎಂಬಷ್ಟು ಕೋಪ ಬಂತು. ಆದರೂ ಹಾಸಿಗೆ ಮೇಲೆ ಮಲಗಿರುವ ರೋಗಿ ಅವಳು ಅಂತಾ ಸುಮ್ಮನಾದೆ.
ಹೆಚ್ಚುಹೊತ್ತು ಬೇಕಾಗಲಿಲ್ಲ ಅವಳು ಎದ್ದು ಚೇತರಿಸಿಕೊಳ್ಳಲು. ಡಾಕ್ಟರಮ್ಮ ಹೇಳಿದಂತೆ ಪ್ರಜ್ಞೆ ತಪ್ಪಿತ್ತು ಅಷ್ಟೆ. ಸಿಗರೇಟು ಸೇದುತ್ತಿದ್ದ ನನ್ನ ಭಂಗಿ ನೋಡಿಯೇ ದಂಗು ಬದಿದು ಹೋಗಿದ್ದಳು ಅವಳು! ಹೆಚ್ಚೆನೂ ಮಾತಾಡಲಿಲ್ಲ. ಆದರೂ ಅವಳನ್ನು ಸರಿಯಾದ ಜಾಗಕ್ಕೆ ಸೇರಿಸುವುದು ಅನಿವಾರ್ಯವಾಗಿತ್ತು. ಊರಿಗೆ ಹೊಸ ಫಿಗರ್ನಂತೆ ಕಾಣುತ್ತೀಯಾ ಯಾರ ಮನೆ ಕೂಸು ನೀನು ಹೇಳು ಮನೆ ತಲುಪಿಸಿ ಬರುತ್ತೀನಿ ಮಾತು ಮುಗಿಸುವುದರೊಳಗೆ ಗುಡ್ಡೆದಿಂಬದ ರಾಮಭಟ್ಟರು ಮನೆ ಅಂದಳು. ಬೈಕ್ನಲ್ಲೇ ಹತ್ತಿಸಿಕೊಂಡು ಹೋಗಿ ಅವಳ ಮನೆ ಹತ್ತಿರ ಅವಳನ್ನು ಬಿಸಾಕಿ ಬರೋಣ ಅಂದುಕೊಂಡೆ. ಆದರೆ ಅವಳ ಕೈನಟಿಕ್ ಹೋಂಡಾ ಇತ್ತಲ್ಲ! ಸರಿ ರೀಕ್ಷಾದಲ್ಲಿ ಹತ್ತಿಸುತ್ತೀನಿ ಮನೆಗೆ ಹೋಗಿ ಮಲಗು. ನಿನ್ನ ಬೈಕನ್ನ ಸಂಜೆಯೊಳಗೆ ಮನೆಗೆ ಸೇರಿಸುತ್ತೀನಿ. ವಿಜಯತ್ತೆಗೆ ಹೇಳು ಪ್ರಸನ್ನ ಬೈಕ್ ತಂದಿಡ್ತಿ ಹೇಳಿದ್ದ, ಹಿಂಗೆಲ್ಲಾ ಆತು ಅಂತಾ ಎಂದೆ. ಪಾಪ ತರತರ ನಡುಗುತ್ತಿದ್ದಳು. ಬೈಕ್ ಮೇಲೆ ಕುತುಕೊಳ್ಳಲು ಗೊತ್ತಿಲ್ಲದವರಿಗೆಲ್ಲಾ ಬೈಕ್ ಕೊಡ್ತಾರೆ ಶ್ರೀಮಂತರು. ನಮ್ಮ ಪ್ರಾಣ ತೆಗೆಯಲಿಕ್ಕೆ… ಈ ರಕ್ಕಸನಿಂದ ಆದಷ್ಟು ಬೇಗ ಬಿಡುಗಡೆ ಸಿಕ್ಕಿದರೆ ಸಾಕು ಅನ್ನಿಸಿರಬೇಕು ಅವಳಿಗೆ! ಮುಖ ಸಪ್ಪೆಯಾಗಿತ್ತು. ಈಗಲೋ ಆಗಲೋ ಕಣ್ಣಿಂದ ನೀರು ಇಳಿಯುತ್ತದೆ ಅನ್ನೋಹಾಗಿತ್ತು. ನನಗೆ ಅಳುವವರನ್ನು ಕಂಡರೆ ಮೊದಲೇ ಭಯ. ರಿಕ್ಷಾ ಹತ್ತಿಸಿ ಕಳುಹಿಸಿಬಿಟ್ಟೆ.
ಕೂಸು ವಿಜಯತ್ತೆ ಮನೆಯದ್ದು…ಸಮಾಧಾನವಾಯಿತು. ತಲೆ ಮೇಲಿನ ಅರ್ಧ ಭಾರ ಇಳಿದ ಹಾಗಾಯಿತು. ಅದೇನೋ ಗೊತ್ತಿಲ್ಲ ನಾನು ಕುಡಿದು ಊರತುಂಬಾ ಗಲಾಟೆ ಮಾಡಿದರೂ ನನ್ನನ್ನು ಕರೆದು ಕೂರಿಸಿಕೊಂಡು ಬುದ್ದಿ ಹೇಳಿದವಳು ವಿಜಯತ್ತೆ ಮಾತ್ರ. ಈ ವಯಸ್ಸಿಗೆ ಕುಡಿತ ಯಾಕೆ ಕಲಿತೆ ಅಂತಾ ಬಿಡಿಸಿ ಬಿಡಿಸಿ ಪ್ರಶ್ನೆ ಕೇಳಿದವಳು ಅವಳು ಮಾತ್ರ. ಉಳಿದವರೆಲ್ಲಾ ನನ್ನನ್ನು ಕುಡುಕ, ಕುಡುಕ ಅಂತಾ ದೂರ ಇಟ್ಟವರೆ. ನನ್ನ ಅಪ್ಪಾ, ಚಿಕಮ್ಮನ್ನು ನಾನು ಕುಡಿತೀನಿ ಅನ್ನೋ ಕಾರಣಕ್ಕೆ ಸರಿಯಾಗಿ ಮುಖ ಕೊಟ್ಟು ಮಾತಾಡುತ್ತಿರಲಿಲ್ಲ. ಹುಟ್ಟಿಸಿದ ತಪ್ಪಿಗೆ ಕೇಳಿದಾಗಲೆಲ್ಲಾ ಕಾಸು ಕೊಡುತ್ತಿದ್ದರು ಅಷ್ಟೆ. ಹಾಗಾಗಿಯೇ ನಂಗೆ ವಿಜಯತ್ತೆ ಅಂದ್ರೆ ಮೊದಲಿನಿಂದಲೂ ಪ್ರಾಣ.
ಹುಡುಗಿ ಬದುಕಿದ್ದಾಳೋ. ಸತ್ತಿದ್ದಾಳೊ ಅಂತಾ ನೋಡಿಕೊಂಡು ಅವಳದ್ದು ಈ ಕಿರಿಕ್ ಹೋಂಡಾ… ಅಲ್ಲಲ್ಲ ಕೈನೆಟಿಕ್ ಹೋಂಡಾ ಕೊಟ್ಟು ಬರೋಣ ಅಂತಾ ಸಾಯಂಕಾಲ ನಾಲ್ಕುವರೆ ಸಮಯಕ್ಕೆ ವಿಜಯತ್ತೆ ಮನೆ ತಾವ ಹೋದೆ. ಕೂಸು ಅಂಗಳದಲ್ಲೆ ಇತ್ತು. ಅನಿಷ್ಟ ಶನಿ ಎದುರಿಗೆ ಇದೆ ಅಂದುಕೊಂಡೆ. ಹಲ್ಲು ಕಿರಿದಳು. ನಯವಾಗಿಯೆ ಮಾತಾಡಿಸಿದಳು. ಊಹುಂ ನನ್ನ ವರ್ತನೆ ನೋಡಿ ಅವಳು ನನ್ನ ಎಡ ಬಲಕ್ಕೂ ಸುಳಿಯರಾಳಲು ಅಂದುಕೊಂಡಿದ್ದೆ. ಅಯ್ಯಪ್ಪಾ ಹುಡುಗಿಯರು ನನ್ನಂತಹವನನ್ನು ನೋಡಿಯೂ ಹಲ್ಲು ಕಿರಿಯುತ್ತಾರಾ? ಇವಳಿಗೆ ಬೆಳಿಗ್ಗೆ ತಲೆಗೇನಾದ್ರೂ ಏಟು ಬಿದ್ದಿರಬಹುದಾ?! ಅನುಮಾನ ಶುರುವಾಯಿತು. ನಿನ್ನ ಗಾಡಿ ಇಲ್ಲೆ ಬಡಿದಿದ್ದೀನಿ. ವಿಜಯತ್ತೆ ಇಲ್ವಾ..?
“ಎಂತುದಾ ಮಾಣಿ ನಿಂದು ಗಲಾಟೆ, ಪಾಪದ ಕೂಸು ಸಿಕ್ಕಿದ್ದು ಹೇಳಿ ನೀ ಹಾಂಗೆಲ್ಲಾ ಜೋರು ಮಾಡದನಾ? ಅನ್ನುತ್ತಾ ಅಂಗಳಕ್ಕೆ ಧಾವಿಸಿದರು ವಿಜಯತ್ತೆ.
ಇಲ್ಲೆ ಪಾಪ ಕೂಸಿಗೆ ಬೆಳಿಗ್ಗೆ ತಲೆಗೆ ಏಟು ಬಿದಿದು ಕಾಣ್ಸುತ್ತು. ಅದ್ಕೆ ಗಟ್ಟಿ ಧ್ವನಿಲಿ ಮಾತಾಡಿದೆ ಅಷ್ಟೆ…
ನಿನ್ನಂತಹವನ ಕೈಯಲ್ಲಿ ಸಿಕ್ಕಿಹಾಕಿಕೊಂಡರೆ ತಲೆಗೂ ಬಿಳ್ತು ಮತ್ತೊಂದಕ್ಕೂ ಬೀಳ್ತು. ನಿನ್ನ ಕಟ್ಟಿಕೊಳ್ಳವಳನ್ನ ಆ ದೇವರೆ ಕಾಪಾಡಕ್ಕು ಒಳಗೆ ಬಾ ಕಾಫಿ ಕುಡಿಲ್ಲಕ್ಕಡ? ಈ ಹೊತ್ತಲ್ಲಿ ಕಾಫಿ ಕುಡಿತ್ಯಾ ಅಥವಾ…?
ಇಲ್ಲೆ ಮಾರಾಯಿತಿ ಅದೇನು ಕಾಫಿ ಹಂಗೆ ಮೂರು ರೂಪಾಯಿಗೆ ಸಿಕ್ತು ಅಂದ್ಕೊಂಡಿದ್ದ್ಯೆನೆ. ಅದೆಲ್ಲಾ ಕಾಸ್ಟ್ಲಿ ಮಾರಾಯಿತಿ. ಅಪ್ಪಾ ಕೊಡೋ ದುಡ್ಡು ವಾರಕ್ಕೆ ಒಂದ್ಸಾರಿ ಕುಡಿಯಕ್ಕು ಸಾಕಾತ್ತಲ್ಲೆ ಮಾರಾಯಿತಿ…
ಮನೆಯಾಳತನ ಸಿಗೋ ಮಾವನ ಮನೆ ನೋಡು…ಸಾಕು ಬಾ ಕಾಫಿ ಕುಡಿಲ್ಲಕ್ಕಡ ಅಡುಗೆ ಮನೆಗೆ ಕರೆದರು.
ಸರಿ ಈ ಇಲೆಮೆಂಟು ನಿಮ್ಮ ಮನೆಗೆ ಹ್ಯಾಂಗೆ ಬಂದು ಸೇರಿಕೊಂಡ್ತು ಮಾರಾಯಿತಿ. ಬೆಳ್ಳಿಗೆ ಆಗಿದ್ದು ಗೊತ್ತಾಗಿರಕ್ಕಲ್ಲ ನಿಂಗೆ…
ಗೊತಾತು ಪಾಪ ಕೂಸು ಗಾಡಿ ಕಲಿತಾ ಇದ್ದು. ಅಲ್ಲಾ ಗಾಡಿ ಕಲಿತ ನಿಂಗಾದ್ರೂ ಪ್ರಜ್ಞೆ ಬ್ಯಾಡ್ದನಾ?
ಅದ್ದಿದ್ದರೆ ನಾನು ಈ ಊರಲ್ಲಿ ಎಂತಕೆ ಇರ್ತಿದ್ನೆ ಮಾರಾಯಿತಿ…
ಇವಳು ನಮ್ಮನೆ ರಾಜಗೋಪಾಲ್ ಭಾವನ ಮಗಳು. ಈ ವರ್ಷ ಅವಕ್ಕೆ ಆಂದ್ರದಿಂದ ಬೆಂಗಳೂರಿಗೆ ಟ್ರಾನ್ಸ್ಫರ್ ಆತು. ಹಾಂಗಾಗಿ ಎಲ್ಲಾ ಬೈಂದ. ನಿಂಗೆ ಇವಳನ್ನು ನೋಡಿದಾ ನೆನಪೇ ಇಲ್ಲ್ಯೆನೋ ಅಲ್ದಾ? ನೋಡಕ್ಕೆ ಅವು ಊರಿಗೆ ಬಪ್ಪುದೇ ಅಪರೂಪ. ಈ ಬ್ಯಾಂಕಲ್ಲಿ ಇದ್ದವರ ಹಣೆಬರಹವೆ ಹಿಂಗೆ ನೋಡು. ಸವಿರ್ಸಲ್ಲಿ ಅರ್ದಕರ್ದ ಹೊರರಾಜ್ಯದಲ್ಲೆ ಕಳೆದು ಬಿಡ್ತಾ…
ನನ್ನ ಹೆಸರು ಸುಮಾ ಅಂತಾ.. ಫಸ್ಟ್ ಪಿಯುಸಿ ಮುಗತ್ತು. ಇಷ್ಟು ದಿನ ವಿಶಾಖ ಪಟ್ಟಣಂಲ್ಲಿ ಇದ್ದಿದ್ಯ. ಈಗ ಅಪ್ಪಂಗೆ ಬೆಂಗಳೂರಿಗೆ ಟ್ರಾನ್ಸ್ಫರ್ ಆಯ್ದು…
ಛೇ ನಿಜಕ್ಕೂ ಪಾಪದ ಕೂಸು ಸುಮ್ನೆ ರೇಗಾಡಿಬಿಟ್ಟೆ. ಒಂತರಹ ಸಂಕಟ ಶುರುವಾಯಿತು. ಆದ್ರೂ ಅಂತಹ ಸಂಕಟ, ಕರುಣೆ ಎಲ್ಲಾ ನನ್ನಲ್ಲಿ ಉಳಿಯುವುದು ಸ್ವಲ್ಪ ಕಾಲ ಮಾತ್ರ.
ಪುಟ್ಟಿ ಸ್ವಾರಿ. ಸಾಧ್ಯಾವಾದ್ರೆ ನಮ್ಮ ಮನೆಗೆ ಬಾ. ನನ್ನ ಅಮ್ಮ ವಿಜಯತ್ತೆ ಹಂಗೆ ಕಾಫಿ ಕೊಟ್ಟು ಕಳಿಸ್ತಾ ಅಂತಾ ನಾನೇನು ಭರವಸೆ ಕೊಡ್ನ್ತಲ್ಲೆ.
ನಿಮ್ಮ ಮನೆಲ್ಲಿ ಕಾಫಿ ಮಾಡಿಕೊಂಡು ಕುಡ್ಕಂಡು ಬತ್ಯಾ ತಗಾ..
ಸರಿ ನಾನ್ನಿನ್ನು ಹೊರಡ್ತಿ
ಅವರು ಬರಲಿಲ್ಲ. ಅವಳು ಸಿಗಲಿಲ್ಲ. ಅವಳನ್ನು ಮತ್ತೆ ಹುಡುಕುವ ಗೌಜಿಗೂ ನಾನು ಹೋಗಲಿಲ್ಲ. ಆದ್ರೂ ಅವಳು ನನ್ನ ಹೃದಯದಲ್ಲಿ ಪುಟ್ಟದೊಂದು ತಲ್ಲಣ ಹುಟ್ಟುಹಾಕಿದಳು. ನಿದ್ದೆ ಬರುತ್ತಿತ್ತಾದರೂ ಯಾಕೋ ನಿದ್ದೆ ಬರಲಿಲ್ಲ. ಹೆಂಡತಿ ಬಳಿ ಒಂದು ಲೋಟ ಕಾಫಿ ಕೊಡುವಂತೆ ಕೂಗಿದೆ. ಆದರೂ ನನ್ನಲ್ಲಿ ಆ ದಿನಗಳಷ್ಟು ಅಬ್ಬರವಿಲ್ಲ. ಅದಿಗಿಂತ ಎಷ್ಟೋ ಸೌಮ್ಯವಾಗಿದ್ದೇನೆ. ಅದಕೆಲ್ಲಾ ಅವಳೇ ಕಾರಣ.
*****
ಊಹುಂ ಕಾಫಿ ಕುಡಿದರೂ ನನಗೆ ಅವಳ ನೆನಪುಗಳಿಂದ ಹೊರಬರಲಾಗುತ್ತಿಲ್ಲ. ಹೆಂಡತಿ ಏನೂ ಗೊಣಗುತ್ತಿದ್ದರೂ ಉತ್ತರಿಸಬೇಕನ್ನಿಸುತಿಲ್ಲ.
ಪಿಯುಸಿ ಮುಗಿಸಿ ಎಂಜಿನಿಯರಿಂಗ್ಗೆ ಅಂತಾ ಬೆಂಗಳೂರಿಗೆ ಬಂದು ಪಿಇಎಸ್ ಕಾಲೇಜು ಸೇರಿದೆ. ನನ್ನ ಹುಡುಗಾಟ, ತೆವಲುತನ ಯಾವುದು ನಿಂತಿರಲಿಲ್ಲ. ಹೀಗೆ ಎರಡು ಸೆಮ್ ಕಳೆದಿತ್ತು. ಅದು ಮೂರನೆ ಸೆಮ್ ಪ್ರಾರಂಭದ ದಿನ. ಫಸ್ಟ್ ಸೆಮ್ಗೆ ಬಂದಿರುವ ಹುಡುಗಿಯರನ್ನು ನೋಡಿ, ಒಂದಿಷ್ಟು ಅಣಗಿಸಿ ಬರಬೇಕು ಅಂತಾ ನಾವೆಲ್ಲಾ ಸ್ಕೆಚ್ ಹಾಕಿಕೊಂಡು ಕಾರಿಡಾರ್ನಲ್ಲಿ ನಿಂತಿದ್ದೆವು. ಆಕಾಶ ನೀಲಿ ಬಣ್ಣದ ಚೂಡಿ ತೊಟ್ಟಿದ್ದ, ಉದ್ದ ಜಡೆಯ ಹುಡುಗಿಯೊಬ್ಬಳು ನನ್ನ ಮುಂದೆ ಹಾದು ಹೋದಳು. ನಾನು ಮುಖ ನೋಡಲಿಲ್ಲ.
ಇದ್ಯಾವ ಫಿಗರೋ ಒಳ್ಳೆ ಗೌರಮ್ಮನ ತರಹ ಇದೆಯಲ್ಲೋ…
ಸಟಕ್ಕನೆ ತಿರುಗಿದಳು. ಎದೆಯೊಮ್ಮೆ ಡಬ್ಬ ಅಂದಿತ್ತು.
ಏ ಸುಮಾ…ನೀನು…ನೀನಿಲ್ಲಿ….
ನಡುಗುತ್ತಿದ್ದೆ. ಯಾಕೆ ನಡುಗಿದೆನೋ ನನಗಂತೂ ಗೊತ್ತಿಲ್ಲ. ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾರಿಡಾರಿನಲ್ಲಿ ನಿಂತು ಹುಡುಗಿಯರನ್ನು ಅಣಗಿಸುವುದು ದೊಡ್ದ ವಿಷಯವೇ ಅಲ್ಲ. ಹುಡುಗಿ ಅಂದ್ರೆ ಮೂರು ಮಾರು ಹಾರುತ್ತಿದ್ದ ನನ್ನಂತಹವನು ಕಾರಿಡಾರನಲ್ಲಿ ನಿಂತು ಹುಡುಗಿಯನ್ನು ಚುಡಾಯಿಸುತ್ತೀನಿ ಅಂದರೆ ಕಾಲೇಜಿನ ಪರಿಸರ ಹೇಗಿರಬಹುದು.
ಏ ಪ್ರಸನ್ನ ನೀನು…
ಕಳೆದು ಹೋದವಳು ಅವಳಾಗಿಯೇ ಸಿಕ್ಕಿದಳು ಅಂದುಕೊಂಡೆ.
ಆಮೇಲೆ ಕ್ಯಾಂಟೀನ್ಗೆ ಹೋಗಿ ಕುಳಿತೆವು. ಅವಳು ನಮ್ಮ ಕಾಲೇಜಿನಲ್ಲೆ ಎಂಜಿನಿಯರಿಂಗ್ಗೆ ಸೇರಿದ್ದಾಳೆ ಅಂತಾ ಗೊತ್ತಾಯಿತ್ತು. ಅಪ್ಪ ಇಲ್ಲೆ ಕತ್ರಿಗುಪ್ಪೆಯಲ್ಲಿ ಬ್ಯಾಂಕ್ ಮ್ಯಾನೇಜರ್. ನಾವು ಇಲ್ಲೆ ಮನೆ ಮಾಡಿದಿವಿ….ಹೀಗೆ ಒಂದು ಮುಕ್ಕಾಲು ಗಂಟೆ ಅದು,ಇದು ಅಂತಾ ಹರಟಿರಬಹುದು. ಊರಲ್ಲಿ ನಾನು ಅವಳು ಹಾಗೆಲ್ಲಾ ಹರಟ್ಟಿದ್ದರೆ ದೊಡ್ಡ ಸುದ್ದಿಯೇ ಆಗುತ್ತಿತ್ತು. ಆದ್ರೆ ಬೆಂಗಳೂರಿನಲ್ಲಿ ಅವೆಲ್ಲಾ ಮಾಮೂಲು. ಅಷ್ಟಕ್ಕು ಒಬ್ಬರ ಮುಖ ಇನ್ನೊಬ್ಬರಿಗೆ ಪರಿಚಯವಿಲ್ಲದ ನಾಡಿದು. ಮುಖ ಪರಿಚಯ ಮಾಡಿಕೊಂಡು ಆಗಬೇಕಾದ್ದು ಏನೂ ಇಲ್ಲ!
ಮೊದ ಮೊದಲಿಗೆ ಗೆಳೆತನವಾಗಿತ್ತು ಹೋಗುಹೋಗುತ್ತಾ ಪ್ರೀತಿಗೆ ತಿರುಗಿತು. ಇಬ್ಬರೂ ಪ್ರೀತಿಯಲ್ಲಿ ಮುಳುಗಿದೆವು. ಸುತ್ತಾಡಲು ಶುರುವಿಟ್ಟೆವು. ನನ್ನ ಕುಡಿತ, ಸಿಗರೇಟು…ಇವ್ಯಾವ ಚಟವೂ ನನ್ನಿಂದ ದೂರವಾಗಿರಲಿಲ್ಲ. ಅದು ಅವಳಿಗೂ ಗೊತ್ತಿತ್ತು! ಸಿಕ್ಕಾಗಲೆಲ್ಲಾ ಭೊಧನೆಗೆ ಶುರುವಿಟ್ಟಳು. ಹಂತ ಹಂತವಾಗಿ ನನ್ನ ಚಟಗಳನ್ನೆಲ್ಲಾ ಬಿಡಿಸಿದಳು. ಅದರ ಪ್ರಭಾವ ಎಷ್ಟಿತ್ತೆಂದರೆ ಅವಳು ಸತ್ತಾಗ ನನ್ನ ತಲೆ ಎಷ್ಟು ಹಾಳಾದರೂ ನನಗೆ ಮತ್ತೆ ಕುಡಿಯಬೇಕು ಅನ್ನಿಸಲಿಲ್ಲ, ಸಿಗರೇಟ್ ಸೇದಬೇಕು ಅನ್ನಿಸಲಿಲ್ಲ. ಅಷ್ಟು ನಾಜೂಕಿನಿಂದ ಅವಳು ನನ್ನ ಚಟವನ್ನು ದೂರ ಮಾಡಿದ್ದಳು.
ನನಗಂತೂ ಕೂತುಹಲವಿತ್ತು. ನನ್ನಂತಹ ಶುದ್ದ ಒರಟನ ಬಲೆಗೆ ಅವಳು ಏಕೆ ಬಿದ್ದಳು ಮತ್ತು ಹೇಗೆ ಬಿದ್ದಳು ಎಂಬುದು. ನನ್ನ ಕಂಡ ದಿನ ಅವಳು ಹೆದರಿದ್ದಳಂತೆ, ವಿಜಯತ್ತೆ ಬಳಿ ಹೋಗಿ ನನ್ನ ಕುರಿತು ಹೇಳಿದಳಂತೆ. ಆಗ ವಿಜಯತ್ತೆ ನನ್ನ ಬದುಕಿನ ಕಥೆ ಹೇಳಿದರಂತೆ. ನನ್ನ ಕುರಿತು ಒಂದು ಒಳ್ಳೆ ಅಭಿಪ್ರಾಯ ಅವಳಲ್ಲಿ ಮೂಡುವಂತೆ ಮಾಡಿದರಂತೆ ಹಾಗಂತ ಅವಳೆ ಒಂದು ದಿನ ನನ್ನ ಬಳಿ ಹೇಳಿದ್ದಳು.
ಪ್ರೇಯಸಿಯಾಗಿ, ಅದಕ್ಕಿಂತ ಮೀಗಿಲಾಗಿ ನನ್ನ ಬದುಕಿನ ಒಬ್ಬ ಗೆಳತಿಯಾಗಿ ಅವಳು ನನ್ನ ಬದುಕಿಗೆ ಅಂಟಿಕೊಂಡಳು. ಆವತ್ತು ನನಗೆ ಕೆಲಸ ಸಿಕ್ಕಿದ ಸಂಭ್ರಮ. ಪಾರ್ಟಿ ಕೊಡಿಸು ಅಂತಾ ಹಠ ಹಿಡಿದಳು. ನನಗೆ ಒಂಚೂರು ಮನಸ್ಸಿರಲಿಲ್ಲ.
ಬೇಡ ಸುಮಿ ಇನ್ನೊಂದು ದಿನ ಪಾರ್ಟಿ ಕೊಡುಸ್ತೀನಿ ಪ್ಲೀಸ್ ಹಠ ಮಾಡಬೇಡ. ನನಗೆ ಇವತ್ತು ಹೊರಗಡೆ ಹೋಗಲು ಮೂಡಿಲ್ಲ…
ಊಹುಂ ಕೇಳಲಿಲ್ಲ. ಮಗುವಿನಂತೆ ಹಠ ಹಿಡಿದಳು. ನನ್ನ ಸ್ಕೂಟರನಲ್ಲೇ ಹೋಗೋಣ. ನೀನು ಹಿಂದೆ ಕೂಳಿತುಕೋ ಸಾಕು ಅಂತಾ ಶಾಂತಿಸಾಗರ್ ಹೋಟೆಲ್ಗೆ ಕರೆದುಕೊಂಡು ಹೋದಳು.
ಪಾರ್ಟಿ ಮುಗಿಸಿ ಬರುತ್ತಾ ಇದ್ದ್ವಿ ಬಸ್ಸೊಂದು ನಮ್ಮ ಬೈಕ್ಗೆ ಡಿಕ್ಕಿ ಹೊಡೆದದ್ದು ಗೊತ್ತು. ಮುಂದೇನಾಯಿತೋ ಗೊತ್ತಿಲ್ಲ. ನಾನು ಆಸ್ಪತ್ರೆಯ ಐಸಿಯುದಲ್ಲಿ ತಿಂಗಳ ಕಾಲವಿದ್ದೆ. ಆದರೂ ಒಂದು ದಿನವೂ ಅವಳು ನನ್ನನ್ನು ನೋಡಲು ಬರಲಿಲ್ಲ. ಪಕ್ಕದಲ್ಲಿದ್ದವರನ್ನು ಕೇಳಿದ್ರೆ ಇಲ್ಲ ಅವಳು ಆಸ್ಪತ್ರೆಗೆ ಸೇರಿದಾಳೆ ಅಂದರು. ಆಸ್ಪತ್ರೆ ಎಂಬ ನರಕದಿಂದ ಹೊರಬಂದ ಮೇಲೆ ಗೊತ್ತಾಯಿತು ಆವತ್ತಿನ ಆಕ್ಸಿಡೆಂಟ್ನಲ್ಲಿ ಅವಳು ತೀರಿಹೋದಳು ಅಂತಾ. ಇವತ್ತಿಗೆ ಅವಳು ತೀರಿ ಎರಡು ವರ್ಷವಾಯಿತು…ರೀ ಇವತ್ತಿಗೆ ಮದ್ವೆಯಾಗಿ ವರ್ಷವಾಯಿತು. ದೇವಸ್ಥಾನಕ್ಕೆ ಹೋಗಿ ಬರೋಣ ಅಂದ್ರೆ…ಹೆಂಡತಿ ರಾಗ ಎಳೆದಳು. ಅವಳು ಸತ್ತ ಮೇಲೆ ವಿಜಯತ್ತೆ ಹಠ ಮಾಡಿ ನನಗೆ ಗಂಟು ಹಾಕಿದ ಹುಡುಗಿಯಿವಳು.
Like this:
Like ಲೋಡ್ ಆಗುತ್ತಿದೆ...
Related
Posted in ಕಥೆ-ವ್ಯಥೆ! | 11 ಟಿಪ್ಪಣಿಗಳು
ಕಥೆಯೊಳಗಿನ ವ್ಯಥೆ ಚೆನ್ನಾಗಿದೆ.. ಆದರೆ ಅಗತ್ಯಕ್ಕಿಂತ ಹೆಚ್ಚಾದ ಒರಟುತನದ ಶೈಲಿ ಕಥೆಯ ನಿರೂಪಣೆಯನ್ನು ಕುಂದಿಸಿದೆ.
ತೇಜಸ್ವಿನಿ ಹೆಗಡೆಯವರೇ
ನಿಮ್ಮ ನೇರವಾದ ಮಾತು ತುಂಬಾ ಸಂತೋಷವನ್ನು ಉಂಟುಮಾಡಿತು. ನಿಜಕ್ಕೂ ಬರಹದಲ್ಲಿನ ವಾಸ್ತವದ ಕುರಿತಾಗಿ ಹೇಳಿದಾಗ ಮಾತ್ರ ಬರಹದ ಸುಧಾರಣೆ ಸಾಧ್ಯ. ಪ್ರತಿಕ್ರಿಯೆಗೆ ಧನ್ಯವಾದಗಳು. ಅನುಭವಕ್ಕೆ ಮೀರಿದ ಪಾತ್ರಗಳನ್ನು ಸೃಷ್ಟಿಸುವಾಗ ಕೆಲವೊಮ್ಮೆ ಕಥೆಗಾರ ಸೋಲುತ್ತಾನೆ ಅನ್ನಿಸತ್ತೆ ನನಗೆ. ಇಲ್ಲೂ ಅದೇ ತರಹ ಆಗಿರಬಹುದು. ಆದರೆ ನನ್ನ ಕಥೆಗಳಲ್ಲಿ ನನಗೆ ಅತ್ಯಂತ ಇಷ್ಟವಾದ ಕಥೆಯಿದು.
ವಿನಾಯಕ
ಕಥೆಯ ನಿರೂಪಣಾ ಶೈಲಿ ತುಂಬಾ ಇಷ್ಟವಾಯಿತು. ಕಥೆಯೂ ತುಂಬಾ ಚೆನ್ನಾಗಿದೆ. ಹೀಗೆ ಕಥೆಗಳನ್ನು ಬರೆಯುತ್ತಾ ಇರಿ.
ಅ.ವಿ,
ನಿರೂಪಣೆಯಲ್ಲಿ ಒರಟುತನಕ್ಕಿಂತ ಹೆಚ್ಚಾಗಿ ಕಾಡುತ್ತಿರುವುದು ಪಂಕ್ಚುಯೇಶನ್ನುಗಳ ಕೊರತೆ. ಇಡೀ ಕಥೆ ಒಂದೇ ಟೋನಿನಲ್ಲಿ ಸಾಗುತ್ತಿರುವ ಹಾಗಿದೆ. ಪ್ಯಾರಾಗಳಿಗೆ ಕೊಂಚ ಸ್ಪೇಸಿಂಗು ಕೊಟ್ಟು, ಸರಿಯಾದ ಚಿಹ್ನೆಗಳು ಸೇರಿಸಿ ಎಡಿಟ್ ಮಾಡಿ ನೋಡೋಣ, ಅದು ಹ್ಯಾಗೆ ಈ ಕಥೆ ಬೇರೆ ಥರ ಕಾಣಲ್ಲ ಅಂತ?
-ಅಕ್ಕರೆಯಿಂದ, ಟೀನಾ
ವಿನಾಯ್ಕ, ಎಂತ ಒಂದ್ ಪೆಗ್ ಏರಿಸ್ಕೊಂಡ್ ಬರೆದ್ಯಾ ಎಂತ ಕಥೆ? ಎಷ್ಟೊಂದ್ ಕಾಗುಣಿತ ತಪ್ಪುಗಳು ಮಾರಾಯ? ಎಲ್ಲ ಕೂತ್ಕೊಂಡು ಸರಿ ಮಾಡು, ನಾನು ನಾಳೆ ಮತ್ತೆ ನೋಡೋದ್ರೊಳಗೆ 🙂
ಅಂದ ಹಾಗೆ, ನಿಮ್ ಜೋಯಿಸರ ಮಗಳು ಏನಂತಾಳೆ? ಇವಾಗ ಪತ್ರ ಬರಿತಾ ಇಲ್ವ? ಸಕ್ಕತ್ತಾಗಿರತ್ತೆ ಮಾರಾಯ. ಮತ್ತೆ ಬರಿ.
ಟೀನಾರವರೇ,
ಬರಹದಿಂದ ಶ್ರೀ ಲಿಪಿಗೆ ಕನವರ್ಟ ಮಾಡಿಕೊಂಡು ಎಲ್ಲಾ ಸರಿ ಮಾಡಿದಿದ್ದೆ. ಆದರೆ ಬರಹ ಪ್ಯಾಡ್ನಲ್ಲಿ ಎಡಿಟ್ ಮಾಡ್ಲಿಕ್ಕೆ ಮರೆತುಹೋಗಿತ್ತು. ನೀವು ಹೇಳಿದ ಮೇಲೆ ನೋಡಿದೆ. ತುಂಬಾ ತಪ್ಪಿತ್ತು. ಹಾಗಾಗಿಯೇ ಕಥಾ ಸ್ವಾರಸ್ಯ ಕುಸಿದಿತ್ತು. ಸಾಧ್ಯವಾದಷ್ಟನ್ನು ಸರಿ ಮಾಡಿದ್ದೇನೆ. ಪ್ರತಿಕ್ರಿಯೆಗೆ ಧನ್ಯವಾದಗಳು.
ಭಾಗವತರೇ,
ನಂಗೆ ಬರಹ ಪ್ಯಾಡನಲ್ಲಿ ಟೈಪ್ ಮಾಡದು ಅಂದ್ರೆ ಜೀವನವೆಲ್ಲಾ ಜಿಗುಪ್ಸೆ ಬಂದೊಕ್ತು! ಸಾಧ್ಯವಾದಷ್ಟ್ಯು ಸರಿ ಮಾಡಿದ್ದಿ. ಇದಕ್ಕೂ ಮಿಕ್ಕಿ ತಪ್ಪಿದ್ದರೆ ಸಹಿಸಿಕೊಂಡು ಓದಿ. ಬರೆಯುವ ವೋಗದಲ್ಲಿ ನಾನು ಯಾವಾಗಲೂ ಅಕ್ಷರದ ಕುರಿತು ನಿಗಾ ವಹಿಸದಿಲ್ಲೆ. ಕ್ಷಮೆ ಇರಲಿ. ಅಂದಹಾಗೇ ಜೋಯ್ಸರ ಮಗಳಿಗೆ ಮದ್ವೆ ಆಯ್ತು ಅಂತಾ ಬರೆದಿದ್ದೆ. ಮದ್ವೆ ಆದ ಮೇಲೂ ಕಾಗದ ಬರೆದರೆ ಅವಳ ಗಂಡ ಗಲಾಟೆ ಮಾಡ್ತ
ಅಕ್ಕರೆಯಿಂದ
ವಿನಾಯಕ ಕೋಡ್ಸರ
ಜೋಯ್ಸರ ಮಗ್ಳಿಗೆ ಮದ್ವೆ ಆಯ್ತು ಅಂತ ಎಲ್ಲಿ ಬರ್ದಿದ್ದೆ? ಜೂನ್ ೧೭ರ ಪೋಸ್ಟಿನಲ್ಲೂ ಇಲ್ಲ, ಜುಲೈ ೧ರಲ್ಲೂ ಇಲ್ಲ. ಅವ್ಳು ಗುಟ್ಟಾಗಿ ಯಾರಿಗೂ ಹೇಳದೆ ಮದ್ವೆ ಆದ್ಲಾ?
ಕಥೆ ಚೆನ್ನಾಗಿದೆ. ಉಳಿದವರು ಹೇಳಿದಂತೆ ಅಲ್ಲಲ್ಲಿ ಪದಗಳು ತಪ್ಪಾಗಿ ಪ್ರಯೋಗಿಸಲ್ಪಟ್ಟಿವೆ.
ವೋಗವನ್ನು ಓಘ ಎಂದು ಬರೆದರೆ ಚೆನ್ನ 🙂
ಬರಹ ಪ್ಯಾಡಿನಲ್ಲಿ ಯಾಕೆ ಬರೀಬೇಕು?
ಒಳ್ಳೆ ಕಥೆ. ಒಂದೇ ಗುಟುಕಿಗೆ ಬರೆದು ಮುಗಿಸಿದ ಕಥೆ. ನಾನು ಮೊದ ಮೊದಲು ಇದು ವಿನಾಯಕರ ನಿಜಾನುಭವ ಅಂತ ಅನ್ಕೊಂಡು ಓದ್ತಾ ಇದ್ದೆ. ಆಮೇಲೆ ಪ್ರಸನ್ನ ಅಂತ ನಾಯಕ ಪರಿಚಯಿಸಿಕೊಂಡಮೇಲೆ ಕಥೆ ಅಂತ ತಿಳಿದದ್ದು. ಕಥೆ ಎಂದರೆ ಹಾಗಿರಬೇಕು, ವಾಸ್ತವ ಮತ್ತು ಅನುಭವ ವಾವ್, ಮತ್ತೊಂದು ಉತ್ತಮ ಕಥೆಗಾಗಿ, ಬ್ಲಾಗಿಗಾಗಿ ನನ್ನ ಬ್ಲಾಗ್ ಪಟ್ಟಿಗೆ ಸೇರಿಸಿಕೊಂಡೆ. ತ್ಯಾಂಕ್ಸ್
sharmare
nange adakke kate bareyalu hedarike! esto jana naanu bareva kategalu nanna jeevanaddu andukondu nanannu tapaagi arthaisikollutaare! haagigiye naanu kate bareyuvdu aparoopa. andahaage ee kate sunday indian nalli prakatavaagide.
pratikriyege dhanyavaada