ಅವಕ್ಕೆ ಅದೆಲ್ಲಾ ಯಾಕೆ ಅರ್ಥವಾಗಲ್ಲ…?!
ಮೇ 19, 2008 aksharavihaara ಮೂಲಕ
ನಕ್ಸಲರ ಅಟ್ಟಹಾಸಕ್ಕೆ ಮತ್ತೆರಡು ಹೆಣ ಬಿದ್ದಿದೆ. ಬಿಜೆಪಿಯನ್ನು ಬೆಂಬಲಿಸಬೇಡಿ ಅನ್ನುವ ಕರೆಗೆ ಓಗೊಡಲಿಲ್ಲ ಅಂತಾ ಅವರು ಕೊಲೆ ಮಾಡಿದ್ದಂತೆ! ಅದೇ ಕೊಲೆಯನ್ನು ಭಜರಂಗಿಗಳು, ಹಿಂದುವಾದಿಗಳು ಮಾಡಿದ್ದರೆ ನಮ್ಮ ನಾಡಿನ ಬುದ್ದಿಜೀವಿಗಳ ನಾಡಿಮಿಡಿತ ಏರಿಹೋಗುತ್ತಿತ್ತು! ಅಯ್ಯೋ ಅಮಾಯಕರನ್ನು ಕೊಂದರು…ಕರ್ನಾಟಕ ಮತ್ತೊಂದು ಗುಜಾರಾತ್ ಆಗುತ್ತಿದೆ…ಅಂತೆಲ್ಲಾ ಘ್ನಾನಪೀಠಿಗಳ ಪುಂಗಿ ಶುರುವಾಗುತ್ತಿತ್ತು. ಮಾನವೀಯತೆಯ ಭಾವ ಉಕ್ಕಿ ಉಕ್ಕಿ ಹರಿಯುತ್ತಿತ್ತು! ಆದರೆ ಅದೇ ಕೃತ್ಯವನ್ನು ನಕ್ಸಲೀಯರು ಮಾಡಿದರೆ ಬುದ್ದಿಜೀವಿಗಳ ಭಾವ ಯಾಕೆ ನಿಮಿರುವುದಿಲ್ಲ?!
ನಾನು ಟ್ಯಾಬ್ಲಾಯ್ಡೊಂದಕ್ಕೆ ವರದಿಗಾರಿಕೆ ಮಾಡುತ್ತಿದ್ದಾಗ ಬೋಜಶೆಟ್ಟರನ್ನು ಮಾತಾಡಿಸಿದ್ದೆ. ಅವರಿಗೆ ಊರಿನಲ್ಲಿ ಬದುಕಲು ನಕ್ಸಲರು ನೀಡುತ್ತಿರುವ ಕಿರುಕುಳವನ್ನು, ಅವರು ಅದನ್ನು ಮೆಟ್ಟಿನಿಲ್ಲುತ್ತಿರುವ ರೀತಿಯನ್ನು ವಿವರಿಸಿದ್ದರು. ಮೊನ್ನೆಯಿಂದ ಅದ್ಯಾಕೋ ಆ ಶೆಟ್ಟರ ನೆನಪೇ ಕಾಡುತ್ತಿದೆ. ಹೆಬ್ರಿಯ ಹಳ್ಳಿಮೂಲೆಯೊಂದರಲ್ಲಿ ಶಾಲೆಯ ಅಧ್ಯಾಪಕರಾಗಿ ತಮ್ಮ ಪಾಡಿಗೆ ತಾವು ಬದುಕುತ್ತಿದ್ದ ಶೆಟ್ಟರಿಗೆ ಸಮಾಜೋದ್ದಾರಕ ನಕ್ಸಲರು ಮೃತ್ಯುಪಾಶವಾದರು.ಹೆಬ್ರಿಯಂತಹ ಕಾಡುಮೂಲೆಯ ಹಳ್ಳಿಯಲ್ಲಿ ಇದ್ದ ಸಮಸ್ಯೆಗಳಾದರೂ ಏನು? ನಕ್ಸಲಿಸಂ ಅಲ್ಲಿಗೆ ಯಾಕೆ ಬಂದು ವಕ್ಕರಿಸಿತು. ನಕ್ಸಲಿಸಂ ಬಂದ ಮೇಲೆ ಬಗೆಹರಿದ ಸಮಸ್ಯೆಗಳಾದರೂ ಏನು?!…..ಊಹುಂ ಇವ್ಯಾವುದಕ್ಕೂ ನಮ್ಮ ಘ್ನಾನಪೀಠಿಗಳ ಹತ್ತಿರ ಉತ್ತರವಿಲ್ಲ. ಹಳ್ಳಿಮೂಲೆಯ ಸಮಸ್ಯೆಗಳು ಕೇವಲ ಪಶ್ಚಿಮಘಟ್ಟದ ಹಳ್ಳಿಗೆ ಮಾತ್ರ ಸೀಮಿತವಲ್ಲ. ಭಾರತದ ಪ್ರತಿಯೊಂದು ಹಳ್ಳಿಗಳಿಗೂ ಇದೆ. ಅದರ ನಡುವೆ ನಮ್ಮ ನಾಡಿನ ಜನ ಶಾಂತಿಯಿಂದ, ನೆಮ್ಮದಿಯಿಂದ ಜೀವನ ನಡೆಸುತ್ತಾ ಬಂದಿದ್ದಾರೆ. ವಿದ್ಯುತ್ ಇಲ್ಲ, ಶಾಲೆಯಿಲ್ಲ…ಊಹುಂ ಇಂತಹ ಸಮಸ್ಯೆಗಳಿಗೆ ನಮ್ಮವರು ತಲೆಕೆಡಿಸಿಕೊಳ್ಳಲೇ ಇಲ್ಲ. ಅವರಿಗೆ ಚೆನ್ನಾಗಿ ಗೊತ್ತು ಈ ನಾಡಿನಲ್ಲಿ ಒಂದು ಹೊತ್ತಿನ ತುತ್ತು ಕೂಳಿಗೂ ಗತಿಯಿಲ್ಲದವರು ಅನೇಕರಿದ್ದಾರೆ ಎಂದು. ಅವನ್ನೆಲ್ಲಾ ಸರಿಪಡಿಸುತ್ತೇವೆ ಎಂದು ಕಾಡೊಳಗೆ ಹೋಗಿ ಮಂಗನಂತೆ ಕುಳಿತರೆ ಪ್ರಯೋಜನವಿಲ್ಲ ಎಂದು.
ರಷ್ಯಾದಲ್ಲಿ ಕ್ರಾಂತಿಯಾಯಿತು, ಚೀನಾದಲ್ಲಿ ಅದಾಯಿತು…..ಹಾಗೆ ಭಾರತದಲ್ಲೂ ಇದಾಗತ್ತೆ! ಹೌದು ಆಗತ್ತೆ ಶಾಂತವಾಗಿದ್ದ ಮಲೆನಾಡಿನಲ್ಲಿ ರಕ್ತಹರಿಯತ್ತೆ. ಬುದ್ದಿಜೀವಿಗಳಿಂದ ಕಾಡಿಗೆ ಹೋಗಿ ಕುಳಿತ ಒಂದಿಷ್ಟು ಬಡವರ, ದಲಿತರ, ಪರದೇಶಿಗಳ ಹೆಣ ಬೀಳತ್ತೆ. ಇದನ್ನೆಲ್ಲಾ ಲಾಭವಾಗಿಸಿಕೊಂಡು, ಇದರಿಂದ ಪ್ರಚಾರಗಿಟ್ಟಿಸಿಕೊಂಡು ಹೋರಾಟ ಅದು ಇದು ಅಂತಾ ತಿರುಗಾಡಿ ಹಣಮಾಡುವ ಅಪ್ರತಿಮ ಹೋರಾಟಗಾರರ ಬೊಗಸೆ ತುಂಬತ್ತೆ ಅವರ ಮಕ್ಕಳು ವಿದೇಶಕ್ಕೆ ತೆರಳಲು ಸುಲಭವಾಗತ್ತೆ. ಅಷ್ಟೆ ಆಗುವುದು ಹೊರತು ಮತ್ತೇನೂ ಆಗಲಾರದು ನಾವು ಚೀನಾ ಮಾದರಿಯನ್ನು ಆರಾಧಿಸಲು ಹೊರಟರೆ!
ಮಲೆನಾಡಿಗೆ ನಕ್ಸಲಿಸಂ ಕಾಲಿಟ್ಟು ಸುಮಾರು ದಶಕಗಳೇ ಕಳೆಯಿತು. ಶೃಂಗೇರಿ, ಕುದ್ರೆಮುಖ ಭಾಗದ ಎಷ್ಟು ಹಳ್ಳಿಗಳು ಉದ್ದಾರವಾಗಿವೆ? ಎಷ್ಟು ಹಳ್ಳಿಗಳಿಗೆ ನಕ್ಸಲರು ರಸ್ತೆ ಮಾಡಿದ್ದಾರೆ.ಎಷ್ಟು ಬಾವಿತೋಡಿದ್ದಾರೆ? ಎಷ್ಟು ಶಾಲೆ ಕಟ್ಟಿಸಿದ್ದಾರೆ? ಎಷ್ಟು ದಲಿತರಿಗೆ ಕೂರಿಸಿ ಊಟಹಾಕುತ್ತಿದ್ದಾರೆ?! ಅಂತಾ ಕೇಳಿದರೆ ಅಯ್ಯೋ ಅದನ್ನೆಲ್ಲಾ ಸರ್ಕಾರ ಮಾಡಬೇಕು! ಅದು ಮಾಡಲೀ ಅಂತಾನೇ ನಾವು ಕಾಡಲ್ಲಿ ಕುಳಿತು ಇಷ್ಟೆಲ್ಲಾ ಹೋರಾಟ ಮಾಡುತ್ತಿರುವುದು! ಅನ್ನುತ್ತಾರೆ ನೂರಕ್ಕೂ ಹೆಚ್ಚು ಜನರಿರುವ ನಕ್ಸಲ್ ತಂಡದವರು. ಅಲ್ಲಾ ಸ್ವಾಮಿ ಬಾವಿತೋಡಲು, ರಸ್ತೆಮಾಡಲು ಸರ್ಕಾರ ಯಾಕೆ ಬೇಕು ನೂರು ಮಂದಿ ಸಾಕಾಗುವುದಿಲ್ಲವೇ?
ಬನ್ನಿ ನಮ್ಮ ನಾಡಿನಲ್ಲಿ ಒಂದಿಷ್ಟು ಸ್ತ್ರೀಶಕ್ತಿ ಕೇಂದ್ರಗಳಿವೆ. ಸರ್ಕಾರದ ಸಹಾಯವಿಲ್ಲದೇ ಅವು ಮಾಡುತ್ತಿರುವ ಕೆಲಸವನ್ನು ನೋಡಬಹುದು. ನಾಚಿಕೆ ಆಗಬೇಕು ನಕ್ಸಲರಿಗೆ ಒಬ್ಬ ಹೆಣ್ಣು ಮಗಳು ಮಾಡುವ ಕೆಲಸವನ್ನು ಮಾಡಲಾಗದೇ ಷಂಡರಂತೆ ಕಾಡಿಗೆ ಹೋಗಿ ಕುಳಿತುಕೊಳ್ಳಲು. ಅವರನ್ನು ಕಾಡಿಗೆ ಹೋಗುವಂತೆ ಪ್ರೇರೇಪಿಸುವ ಒಂದಿಷ್ಟು ಪ್ರಾಧ್ಯಾಪಕರಿಗೆ, ಬುದ್ದಿಜೀವಿಗಳಿಗೂ, ಹುಳಿ ಹುಳಿ ಸಂಪಾದಕರಿಗೂ ನಾಚಿಕೆಯಾಗಬೇಕಿತ್ತು. ಬುದ್ದಿ ಪರಾಕಾಷ್ಠೆ ಅತಿಯಾದರೇ ಸಮಾಧಿ ಸ್ಥಿತಿ ತಲುಪುತಾರಂತೆ! ನಾಚಿಕೆ, ಮಾನ, ಮರ್ಯಾದೆ ಎಲ್ಲವನ್ನೂ ಬಿಡುತ್ತಾರಂತೆ! ನಿರ್ಲಿಪ್ತ ಸ್ಥಿತಿ ಅಂತಾರಲ್ಲಾ ಅಂತಹದ್ದೇ ಸ್ಥಿತಿ ತಲುಪುತ್ತಾರಂತೆ ನಮ್ಮ ನಾಡಿನ ಬುದ್ದಿಜೀವಿಗಳು ಅದೇ ಹಂತ ತಲುಪಿದವರು! ಎಲ್ಲವನ್ನು ತ್ಯಜಿಸಿ ನಿಂತಿರುವವರು!ಅವರಿಗೆಲ್ಲಾ ಚೆನ್ನಾಗಿ ಗೊತ್ತು ಈ ಹೋರಾಟದಲ್ಲಿ ಸಾಯುವವರು ಅಮಾಯಕರು ಹೊರತು ತಮ್ಮ ಹೆಂಡಿರು ಮಕ್ಕಳು , ತಾವು ಇಟ್ಟುಕೊಂಡವರು , ಕಟ್ಟಿಕೊಂಡವರು ಸಾಯುವುದಿಲ್ಲ ಅಂತಾ! ಯಾಕೋ ಇದನೆಲ್ಲಾ ನೋಡುತ್ತಿದ್ದರೆ ಶಿವರಾಮ ಕಾರಂತರ ಗೋಂಡಾರಣ್ಯ ಕಾದಂಬರಿ ನೆನಪಿಗೆ ಬರತ್ತೆ. ಇಂತಹವರನ್ನು ನೋಡಿಯೇ ಬಹುಶಃ ಕಾರಂತರು ಆ ಕಾದಂಬರಿ ಬರೆದಿರಬೇಕು!
ಒಟ್ಟಲ್ಲಿ ಶಾಂತ ಮಲೆನಾಡಿನಲ್ಲಿ ರಕ್ತದೋಕಳಿ, ಅಮಾಯಕರ ಬಲಿ. ಈ ಹೋರಾಟಕ್ಕೆ ಶೀಘ್ರವಾಗಿ ಕಡಿವಾಣ ಹಾಕಲೇಬೇಕಿದೆ. ಬೇರು ಕೀಳದೇಮರ ಕಡಿದ್ರೆ ಪ್ರಯೋಜನವಿಲ್ಲ. ಹಾಗಾಗಿ ಯೂನಿವರ್ಸಿಟಿ ವಿದ್ಯಾರ್ಥಿಗಳನ್ನು ನಕ್ಸರನ್ನಾಗಿ ಪರಿವರ್ತಿಸುವ ಕೆಲ ಪ್ರಾದ್ಯಾಪಕರನ್ನು, ನಾಡಿನಲ್ಲಿ ಕುಳಿತು ನಕ್ಸಲ್ ಪರ ಸಂಪಾದಕೀಯ ಬರೆಯುವ ಕೆಲ ಹುಳಿಹುಳಿ ಸಂಪಾದಕರನ್ನು ಪೊಲೀಸರು ಮೊದಲು ಎನ್ಕೌಂಟರ್ ಮಾಡಿದ್ದರೆ ಚೆನ್ನಾಗಿತ್ತು.ಅದೆಲ್ಲಾ ಏನೇ ಇರಲಿ ಸತ್ತ ಬೋಜಶೆಟ್ಟಿಯ ಜೀವಕ್ಕೆ ಬೆಲೆತೆರುವವರು ಯಾರು?ಗುಜಾರಾತ್ನಲ್ಲಿ ಸತ್ತವರದ್ದು ಮಾತ್ರ ಜೀವವಾ? ಹೆಬ್ರಿಯವರದ್ದು ನಿರ್ಜಿವವಾ? ಇದೆಲ್ಲಾ ಯಾಕೆ ಅವಕ್ಕೆ….ಅಂದರೆ ಅವಕ್ಕೆ…ಅದೇ ಬಹಿರಂಗವಾಗಿ…ಅಲ್ಲಲ್ಲ ಅಂತರಂಗದಿಂದ ಬರೆಯುತ್ತಾವಲ್ಲ ಹುಳಿ ಹುಳಿ ಸಂಪಾದಕರು, ಬುದ್ದಿಯ ಪರಾಕಾಷ್ಠೆಯಿಂದ ನಿರ್ಲಿಪ್ತ ಸ್ಥಿತಿ ತಲುಪಿರುವವರಿಗೆ ಅರ್ಥವಾಗಲ್ಲ?!(ಹುಳಿ ಅಂದರೆ ಮಲೆನಾಡು ಬಾಷೆಯಲ್ಲಿ ಅಹಂಕಾರಿ ಅಂತಾ ಅರ್ಥ. ಅದನ್ನು ಇಲ್ಲಿ…..?!!!!)
Like this:
Like ಲೋಡ್ ಆಗುತ್ತಿದೆ...
Related
Posted in ಚಿಂತನ ಚಾವಡಿ | 9 ಟಿಪ್ಪಣಿಗಳು
ನೇರ, ದಿಟ್ಟ ಬರಹ.
ತಮ್ಮ ಮಕ್ಕಳನ್ನು ಫಾರಿನ್ನಿಗೆ ಕಳಿಸಿ ಬೇರೆಯವರ ಮಕ್ಕಳು ನಕ್ಸಲರಾಗಿ ಕಾಡು ಸೇರಿ ಊರು ಉದ್ಧಾರ ಮಾಡುವುದನ್ನು ಬೆಂಬಲಿಸುವ ’ಹುಳಿ’ ಸಂಪಾದಕರು, ’ಎಡ’ವಟ್ಟು ಗಳಿಂದ ಈ ದೇಶ ಬಿಡುಗಡೆ ಹೊಂದುವುದೆಂತೋ.! ಕಾಡಿನ ನಕ್ಸಲೀಯರಿಗಿಂತ ಈ ನಾಡಿನ ನಕ್ಸಲೀಯರನ್ನು ಮೊದಲು ಬೇರು ಸಮೇತ ಕಿತ್ತು ಹಾಕಬೇಕು. ನಕ್ಸಲೀಯರು ಕಾಡಿನಲ್ಲಿ ಅಡಗಿಕೂತು ಕೊಲೆ ಮಾಡುತ್ತಾ ಅದ್ಯಾವ ರೀತಿಯಲ್ಲಿ ದೇಶ ಉದ್ಧಾರ ಮಾಡುತ್ತಾರೋ ಅರ್ಥಾಗುತ್ತಿಲ್ಲ.!!
ಸಕಾಲಿಕ ಬರಹ. ನಕ್ಸಲರು ಉತ್ತಮ ಹೋರಾಟಗಾರರೇ(ಹೋರಾಟವನ್ನ ಅವರ ರೀತಿಯಲ್ಲಿ ವ್ಯಾಖ್ಯಾನಿಸಿದರೆ) ಹೊರತು ಉತ್ತಮ ಆಡಳಿತಗಾರರಲ್ಲ. ಹಾಗಾಗಿ ಅವರು ಕ್ರಾಂತಿ, ರಕ್ತಪಾತ, ಕೊಲೆ, ದರೋಡೆ, ಹಿಂಸೆಗಳನ್ನ ಮಾಡಬಲ್ಲರೇ ಹೊರತು ಜನರನ್ನ ಮುಖ್ಯವಾಹಿನಿಗೆ ತರುವ ಕೆಲಸ ಮಾಡಲಾರರು. ಹಾಗೆ ಮಾಡಿದರೆ, ಅವರ ಬೆಂಬಲಿಗರ ಸಂಖ್ಯೆಯೂ ಕುಸಿಯುತ್ತದೆ.
ಆದರೆ, ನಮ್ಮ ಯುವ ಜನತೆ ಹಿಂಸೆಗೆ ಸೇರ್ಪಡೆಗೊಳ್ಳುತ್ತಿರುವುದು ಅಪಾಯಕಾರಿ ಬೆಳವಣಿಗೆ. ಇದು ಪ್ರಜಾಸತ್ತಾತ್ಮಕ ಸಮಾಜದ ಹಿತದೃಷ್ಟಿಗೆ ಧಕ್ಕೆ ತರುವಂಥದ್ದು.
ಗಣೇಶ್.ಕೆ
ನಮಸ್ಕಾರ,
ಶಾಂತಿ ನೆಮ್ಮದಿಯ ತಾಣದಲ್ಲಿ ನೆಲೆಸಿರುವ ನಮ್ಮಂತವರಿಗೆ ನಕ್ಸಲರ ಬಗೆಗಿನ ಕಲ್ಪನೆಯು ಕೂಡ ಇಲ್ಲ ಅನ್ನ ಬಹುದು. ಮಾಧ್ಯಮಗಳಲ್ಲಿ ಬಂದ ಅರೆ ಬರೆ ವಿಚಾರಗಳನ್ನ ತಿಳಿದ ನಮಗೆ ಗೊಡ್ಡು ಬುದ್ದಿ ಜೀವಿಗಳು ತಲೆಮಾಸಿದ ಪತ್ರಿಗಳು ಇನ್ನು ದಾರಿ ತಪ್ಪಿಸುತ್ತವೆ. ವಾಸ್ತವವಾಗಿ ಅಲ್ಲಿ ಸತ್ತವನಿಗೆ ನಾನು ಮಾಡುತ್ತಿರುವುದು ಏನು ಇದರಿಂದ ನಿಜವಾಗಿ ಸಮಾಜಕ್ಕೆ ಅಥವ ಅವನು ಪ್ರತಿನಿದಿಸುವ ಮಂದಿಗಾದರು ಕನಿಷ್ಟ ಪ್ರಯೋಜನವಾಗುತ್ತಾ ಅನ್ನೊದು ಕೂಡ ತಿಳಿದಿರೊದಿಲ್ಲ, ಅಷ್ಟರ ಮಟ್ಟಿಗೆ ಆ ಮುಗ್ಧರ ಬ್ರೈನ್ ವಾಶ್ ಮಾಡಿರುತ್ತಾರೆ. ಒಟ್ಟಿನಲ್ಲಿ ಯಾರದೊ ಸಿದ್ಧಾಂತ ತರ್ಕಗಳಿಗೆ ಇನ್ಯಾವನೊ ಬಲಿಯಾಗುತ್ತಾನೆ. ಈ ನಕ್ಸಲರ ಹೋರಾಟದ ಮೂಲಕ್ಕೆ(ಬೇಡಿಕೆ) ಬರೊದಾದರೆ ಈ ಲೇಖನದಲ್ಲಿ ಪ್ರಸ್ಥಾಪಿಸಿರುವ ಹಾಗೆ ಆ ಜನರೆ ಒಟ್ಟಿಗೆ ಸೇರಿ ಪಡೆದು ಕೊಳ್ಳಬಹುದು, ಅದಕ್ಕೆ ಗನ್ ಹಿಡಿದು ಹೋರಾಡುವ ಅಗತ್ಯವಿಲ್ಲ. ನಮ್ಮ ದೇಶದಲ್ಲಿ ಸರಕಾರ ಕಿಂಚಿತ್ತು ಸಹಾಯವಿಲ್ಲದೆ ತಮ್ಮ ಊರಿಗೆ ಬೇಕಾದ ಸಕಲ ಸೌಲಭ್ಯಗಳನ್ನ ಮಾಡಿಕೊಂಡ ಮಾಡಿಕೊಳ್ಳುತ್ತಿರುವ ಹಲವು ಉದಾಹರಣೆಗಳಿವೆ,ಅದಕ್ಕೆ ಮಹಾರಾಷ್ಟದ ಅಣ್ಣಾ ಹಜಾರೆ ಉತ್ತಮ ನಿದರ್ಶನ.
ನಾವು ಗಮನಿಸಬೇಕಾದ ಒಂದು ಅಂಶ ಇಲ್ಲಿದೆ …. ಯಾವುದೆ ನಕ್ಸಲಿಯ ಚಳುವಳಿಯನ್ನ ನೋಡಿ ಅದು ಸಕ್ರೀಅವಾಗಿರೋದು ಹಿಂದೂಳಿದ ಪ್ರದೇಶಗಳಲ್ಲಿ, ಯಾಕಂದರೆ ಅಲ್ಲಿ ಬೇಗ ಜನರನ್ನ ಒಲಿಸಿಕೊಳ್ಳ ಬಹುದು ತಮ್ಮ ಸಿದ್ಧಾಂತಗಳನ್ನ ಅವರ ಮೇಲೆ ಹೇರ ಬಹುದು.
-ಅಮರ
@amara
nimma maatu nija malenaadu monne monnevregu nemmadiya taanave aagittu. naksal kuritu janateya haadi tappisuvalli maadyamada paatravu apaaravaagide
@vikasa
naavu ee vicharavaagi neravaaguvdu anivaaryavaagide. heege bittare prati mane angaladallu mundondu dina rakta harisiyaaru naksalaru
@ganesh
pratikriyege danyavaadagalu
ನಿಜ ಕಣ್ರೀ… ಸೆಕ್ಯುಲರಿಸಂನ ಮುಖವಾಡ ಹಾಕಿಕೊಂಡು ಬದ್ಕ್ತಾ ಇರೋ ಸೋ ಕಾಲ್ದ್ ಬುದ್ದಿಜೀವಿಗಳಿಗೆ ಯವಾಗ ಬುದ್ದಿ ಬರುತ್ತೋ ನಾ ಕಾಣೆ..
ಕೋಮುವಾದ, ಮೂಲಭೂತವಾದ; ನಕ್ಸಲಿಸಂ, ಭಯೋತ್ಪಾದನೆ… ಇವೆಲ್ಲ ಒಂದೇ ನಾಣ್ಯದ ಮುಖಗಳು. ವೈಚಾರಿಕವಾಗಿ ಮಾದಿದ್ದೋ, ಲೋಭ ಮೋಹಗಳಿಂದಲೋ… ಒಟ್ಟಿನಲ್ಲಿ ಕೊಲೆಕೊಲೆಯೇ.
ಅದರೂ ಹಿಂದೂ ಮಾಡುವ ದಾಂಧಲೆ ಕೋಮುವಾದ, ಇತರರು ಮಾಡೋದು ಚಳುವಳಿ, ಬಂಡಾಯ, ಹೋರಾಟ ಅಥವಾ ಪ್ರತಿಕ್ರಿಯೆ…. ಹೀಗೆಲ್ಲ ಯಾಕೆ ಬೈ ಫರ್ಗೆಟ್ ಮಾಡ್ತಾರನ್ನೋದೇ ಗೊತ್ತಾಗಲ್ಲ ನಂಗೆ.
ನಾನು, ನೀನು, ನಮ್ಮಂಥವರು – ಮುಸ್ಲಿಮರನ್ನು ಗುಜರಾತಲ್ಲಿ ಅಟ್ಟಾಡಿಸಿ ಕೊಂದ ಹಿಂದೂ ಗೂಂಡಾಗಳನ್ನೂ ಛೀ ಥೂ ಅನ್ನುತ್ತೇವೆ, ಊಟಕ್ಕೆ ಕುಂತ ಹಳ್ಳಿಗನನ್ನ ಮಾಹಿತಿದಾರ ಅನ್ನೋ ಕಾರಣಕ್ಕೆ ಕೊಂದೇ ಹಾಕಿದ ನಕ್ಸಲೀಯರನ್ನೂ ಕ್ಯಾಕರಿಸಿ ಉಗೀತೇವೆ. ಅದೇ, ಜವಾಬ್ದಾರಿಯುತ ಸ್ಥಾನದಲ್ಲಿ ನಿಂತ, ಚಿಂತಕರು ಅಂತೆಲ್ಲ ಕರೆಸಿಕೊಳ್ಳುವ ಜನರಿಗೆ ಮಾತ್ರ ಹೀಗೆ ಎರಡನ್ನೂ ಏಕಪ್ರಕಾರವಾಗಿ ಖಂಡಿಸೋದು ಯಾಕೆ ಸಾಧ್ಯವಾಗಲ್ಲ?
ಇದು ನಾನು ಎರಡೂ ಕಡೆಯ (ಎಡ – ಬಲ) ಜನರಿಗೆ ಕೇಳುತ್ತಿರುವ ಪ್ರಶ್ನೆ. ಗೋಧ್ರಾ ಕಾಂಡವೂ ಪ್ರಚೋದನೆಗೆ ಪ್ರತಿಕ್ರಿಯೆಯೇ ಆಗಿತ್ತು. ಅಲ್ಲವೇ? ತಪ್ಪು ಎಲ್ಲಿಂದ ಶುರುವಾಯ್ತು ಅನ್ನೋದನ್ನ ಯಾಕೆ ಯಾರೂ ಚಿಂತಿಸೋಲ್ಲ?
ಇವತ್ತು ಜಾತ್ಯತೀತತೆಯ ಮಾತಾಡ್ತಾ ಬಿಜೆಪಿಯನ್ನ ಕೋಮುವಾದಿ ಅನ್ನುತ್ತಿರುವ ಕಾಂಗ್ರೆಸ್ಸಿಗೆ ನಾಚಿಕೆಯಾಗ್ಬೇಕು. ಅವತ್ತು ರಾಜೀವ್ ಗಂಧಿ ಮುಸ್ಲಿಮ್ ಓಲೈಕೆಯನ್ನು ಸರಿದೂಗಿಸಲು ಅಯೋಧ್ಯೆ ಪ್ರಕರಣದ ಕೀಲಿಕೈ ತೆರೆಯದಿದ್ದರೆ ಬಾಬ್ರೀ ಪ್ರಕರಣ ನಡೆಯುತ್ತಲೇ ಇರಲಿಲ್ಲ, ನಡೆದರೂ ಅಶ್ಟೆಲ್ಲ ತೀವ್ರವಾಗಿರುತ್ತಿರಲಿಲ್ಲ. ಈ ಸತ್ಯವನ್ನು ಕಾಂಗ್ರೆಸ್ ಮರೆಯೋದ್ಯಾಕೆ? ಅಯೋಧ್ಯೆ ಪ್ರಕರಣದಿಂದಲೇ ಕೋಮು ದ್ವೆಷ ಹೊತ್ತಿಕೊಂಡಿತು ಅನ್ನುತ್ತಿರುವ ಬುದ್ಧಿಜೀವಿಗಳು ಅದರ ಮೂಲ ಕಾರಣವನ್ನು, ಅದರ ಹಿಂದಿನ ಸತ್ಯಗಳನ್ನು ಮರೆಮಾಚುವುದ್ಯಾಕೆ?
ಇದಕ್ಕೆಲ್ಲ ಯಾರು ಉತ್ತರ ಕೊಡುವರು?
(ಉದ್ದವಾಯ್ತು ಕಣೋ. ಇರಲಿ. ಚರ್ಚೆ ಮುಂದುವರೆಸು)
-ಚೇತನಾ
@chetanakka
akka ellaru maaduva koleyannu virodhisabeku. aadare bajarangigalu, hinduvaadigalu kole maaduvudestu swalpa avalokisi. 6 varshadindeechege magalorenalli
nadeda koleyannu avlokisi. alli yaara kai melu omme chintisi. innu ondu vichara edadavaru elli galabe nadedaru adakke hindu vaadigallannu aaropisuttaare? estu kolegalu hindu vaadigalu maadiddu endu saabeetaagide?( gujaraata gataneyannu seri) hindu vaadigalu , bajarangigalu galaate maadabahudu aadre kole, bhayotpaadakatege hinjariyuttaare annuvudu nanna bhava. idu naanu avra paravahisi aaduttiruva maatalla. bhatkala, mangalorina gatanegallannu mundittukottu heluttiruva maatu. yaaro aaropisuttaare endu naanu hinduvaadigalannu kolegaararendu kareyalu taayarilla. avaru kolegaararaaga hortiddare istu hottige naxlisam doolipatavaaguttittu. heege arbata munduvaaredare mullannu mullinidale tegeyalu naavu taayaaraag beku. illavaadare china atava maatyavaa raastrada kaiyallo naavu mattomme namma swatantra iduvudaralli anumaanve illa.
vinayaka,
ondashtu nigUdha vichaaragaLunTu. KhuddAgi sikkAga hELuve.
kole, yAru mADidarU koleyE.
himse, yAru mADidarU himseyE.
pratirOdha yAru tOridarU pratirOdhavE.
nenapiTTukO. shatru maimEleragidAga mAduva hatye koleyAgadu.
Shaanti kAladalli eduraLiya kUdalu konkisidarU adu himseyE. idu Bhaartada naija tattva, sattva.
matte mAtADuvA.
chetana
samyocita baraha. prastuta vicaaraglinda lekhana vastunistavaagide.
barabekadallige vaapas bandidderi. keep it up.
raaghu.Mysore