ಅದು ಬರಹಗಾರನ ಹೊಸತನ ಅಂದ್ರಂತೆ ಬಲ್ಲವರು!!!
Posted in ಪುರೋಹಿತರ ಪಂಚಾಮೃತ!!! on March 27, 2008 | No Comments »
ಕರ್ನಾಟಕದಲ್ಲೂ ಗಾಂಧಿಗಿರಿ ಆರಂಭವಾಯಿತಾ ಗುರು?
ಆದ್ರೆ ಕೃಷ್ಣ ಮಹಾರಾಷ್ಟ್ರ ಬಿಟ್ಟು ಬಂದಿದ್ದು ವೇಸ್ಟ್ ಆಗತ್ತೆ!
*******
ದೇವೆಗೌಡ್ರು ರಾಜಕೀಯಕ್ಕೆ ನಿವೃತ್ತಿ ಘೋಷಿಸುತ್ತಾರಂತೆ?
ಸೂರ್ಯ ಪಶ್ಚಿಮದಲ್ಲಿ ಹುಟ್ಟೋ ದಿನವೆ ಒಳ್ಳೆ ಮೂಹೂರ್ತ ಅಂದಿದಾರಂತೆ ಜೋಯ್ಸರು!
***********
ಕುಮಾರಸ್ವಾಮಿ ಚೈತ್ರಯಾತ್ರೆ ಆರಂಭಿಸಿದ್ದಾರಂತೆ?
ಯಡ್ಯೂರಪ್ಪಾ “ಶೋಭಾ”ಯಾತ್ರೆ ಆರಂಭಿಸುತ್ತಾರಂತೆ!
************
ನೈಪಾಲ್ ಹೆಂಡ್ತಿಗೆ ಕಿರುಕುಳ ಕೊಡುತ್ತಿದ್ದನಂತೆ?
ಅದು ಬರಹಗಾರನ ಹೊಸತನ ಅಂದ್ರಂತೆ ಬಲ್ಲವರು!
**********
ಯಡ್ಯೂರಪ್ಪಾಗೆ ಈ ಭಾರಿ ಟಿಕೇಟ್ ಇಲ್ಲವಂತೆ?
ಹಾಗಂತ ಅನಂತ್‌ಕುಮಾರ ಆಪ್ತರಬಳಿ ಹೇಳಿದ್ದಾರಂತೆ!
**********
ಬ್ಲಾಗಿನಲ್ಲಿ ನೈಪಾಲ್ ಕುರಿತು ಕಾಳಗವಂತೆ?
ಅದು ಓದು, ಬರಹ ಎರಡು ಬಲ್ಲವರಿಗೆ ಮಾತ್ರ!