Posted in ಕ್ರಿಯೇಟಿವ್ ಪೇಜ್ on July 1, 2008 | 1 Comment »
ಹೋಯ್ ಬಜಾರಿ
ನೀ ಪತ್ರ ಓದಲು ಒಲ್ಲೆ ಅಂದಮೇಲೆ ನಂಗೂ ಪತ್ರ ಬರೆಯಲು ಒಲ್ಲೆ ಅನ್ನಿಸುತ್ತಿದೆ! ನೀನು ಹೇಳಿದ ಹಾಗೇ ಬದುಕಿನ ಎಲ್ಲಾ ಘಟ್ಟಗಳು ಒಂದು ಕ್ರ್‍ಎಜು ಅಷ್ಟೆ. ಅವುಗಳಲ್ಲಿ ಈ ಲವ್ವು ಫೀಲುಗಳು ಒಂದು. ಒಂದು ವಯಸ್ಸಿನಲ್ಲಿ ಪ್ರತಿಯೊಬ್ಬನೂ ತನ್ನ ಚಿಂತನೆ, ಆಲೋಚನೆಗಳ ಮೇಲೆ ಬದುಕು ಕಟ್ಟಿಕೊಳ್ಳುವುದನ್ನು ಕಲಿಯುತ್ತಾನೆ. ಅಪ್ಪ, ಅಮ್ಮ, ಗೆಳೆಯ ಎಲ್ಲಾ ಐಡೆಂಟಿಗಳನ್ನು ಕಳಚಿಕೊಂಡು ಬದುಕಲು ಪ್ರಯತ್ನಿಸುತ್ತಾನೆ. ಒಂದಿಷ್ಟು ದಿನ ಬದುಕಿಯೂ ಬದುಕುತ್ತಾನೆ! ಆ ಮೇಲೆ ಅವನಿಗೆ ತಾನು ಒಂಟಿ ಎಂಬ ಭಾವನೆ ಕಾಡಲು [...]
Read Full Post »
Posted in ಕ್ರಿಯೇಟಿವ್ ಪೇಜ್ on June 17, 2008 | No Comments »
ಹಾಯ್ ಕಪೀಶ
ನಾನು ನಿಂಗೆ ಹೊಸ ಹೆಸರಿಟ್ಟಿದ್ದೇನೆ ಅಂತಾ ಕಣ್ಣು ಮಿಟುಕಿಸುತ್ತಿದ್ದೀಯಾ? ನೀನು ಬರೀ ಕಪೀಶ ಅಲ್ಲ. ಕಪೀಶೋತ್ತಮ ಕಪೀಶ! ಅಣ್ಣಾ ದೊರೆಯೆ, ನನ್ನ ಅಪ್ಪಾ ಜೋಯ್ಸನ್ನ ಸಾರ್ವಜನಿಕವಾಗಿ ಬೈಯ್ಯಬೇಡ ಅಂತಾ ನಾ ನಿಂಗೆ ಎಷ್ಟು ಸಲ ವದರಿದ್ದೀನಿ. ಆದ್ರೂ ನೀನು ಮಾತ್ರ ನಿನ್ನ ಚಾಳಿ ಬಿಟ್ಟಿಲ್ಲ. ಹಾಗಾಗಿ ಇನ್ನು ಮೇಲೆ ನಾನು ನಿನ್ನ ಪತ್ರವನ್ನು ಓದುವುದಿಲ್ಲ ಎಂಬುದಾಗಿ ನಿರ್ಧಾರ ಮಾಡಿದ್ದೇನೆ. ನನ್ನ ಈ ನಿರ್ಧಾರಕ್ಕೆ ಎದುರಿಗಿರುವ ಎಮ್ಮೆ ಕೋಣಗಳೇ ಸಾಕ್ಷಿ!
ಅದ್ಯಾಕೋ ಇತ್ತೀಚೆಗೆ ನಿನ್ನ ಪತ್ರಗಳು ತುಂಬಾ ಬೇಸರ [...]
Read Full Post »
Posted in ಕ್ರಿಯೇಟಿವ್ ಪೇಜ್ on May 31, 2008 | No Comments »
ಹಾಯ್ ಕೋತಿ
ನಿನಗೆ ನಾನು ಪತ್ರ ಬರೆಯದೇ ತುಂಬಾ ದಿನಗಳೇ ಆಗಿಹೋಯಿತು ಮಾರಾಯಿತಿ. ಬರೀಬೇಕು ಅಂದುಕೊಂಡಿದ್ದೇ ಏನು ಮಾಡ್ತಿಯಾ ಹೇಳು ನಾನು ಬರೆಯಲಿಕ್ಕೆ ಅಂತಾ ಹೊರಟಾಗಲೆಲ್ಲಾ ನಮ್ಮ ಮನೆ ಬೆಕ್ಕು ಅಡ್ಡಬಂತು! ನೀನೇ ಹೇಳಿದ್ದೆ ಅಲ್ವಾ ಕೆಲಸಕ್ಕೆ ಮುಂಚೆ ಬೆಕ್ಕು ಅಡ್ಡ ಬಂದ್ರೆ ಅಪಶಕುನ ಅಂತಾ! ಬೆಕ್ಕು ಇಲ್ಲದ ಹೊತ್ತು ನೋಡಿಕೊಂಡು ಬರೆಯೋವಾಗ ಇಷ್ಟುದಿನ ಆಯಿತು ನೋಡು! ಹೋಗ್ಲಿ ಬಿಡು ಆ ಲಾಂಗ್ ಸ್ಟೋರಿಗಳೆಲ್ಲಾ ಈಗ್ಯಾಕೆ? ಮತ್ತೆ ಹೇಗಿದ್ದಿಯಾ? ಜೋಯ್ಸರು ಹೇಗಿದ್ದಾರೆ?!
ಅಂದಹಾಗೆ ತುಂಗಾ ನದಿಗೆ ಹಾರಿ ಸಾಯುವ ನಿನ್ನ [...]
Read Full Post »
Posted in ಕ್ರಿಯೇಟಿವ್ ಪೇಜ್ on May 2, 2008 | No Comments »
ಮೊನ್ನೆ ಸಾಗರದಲ್ಲಿಅಣ್ಣನ ಪುಸ್ತಕದ ಬಿಡುಗಡೆ ಇತ್ತು ಅಂತಾ ನೆವ ಮಾಡಿಕೊಂಡು ಅಂತೂ ಎರಡು ದಿನದ ಮಟ್ಟಿಗೆ ಮನೆಗೆ ಹೋಗಿ ಬಂದೆ. ಬಸ್‌ಸ್ಯ್ಟಾಂಡ್ ಇಳಿದು ಮನೆ ಕಡೆ ಹೆಜ್ಜೆಹಾಕೋವಾಗ ಅದ್ಯಾಕೋ ದೀಡೀರನೇ ಮಲೆನಾಡಿನ ಬೇಸಿಗೆ ನೆನಪಾಯಿತು. ಅಂದಹಾಗೇ ಬೇಸಿಗೆಯಲ್ಲಿ ಮನೆಗೆ ಹೋಗದೇ,ನೇರಳೆ ಹಣ್ಣು, ಈಚಲು ಹಣ್ಣು, ಸಂಪಿಗೆ ಹಣ್ಣು , ಕಬ್ಬಿನಾಲೆ ಇವನೆಲ್ಲಾ ಕಾಣದೆ ಸುಮಾರು ಐದು ವರ್ಷಗಳೇ ಕಳೆದುಹೋಗಿತ್ತು. ನಾವು ಇಸ್ಕುಲಿಗೆ ಹೋಗುತ್ತಿದ್ದ ಕಾಲದಲ್ಲಿ ಬೇಸಿಗೆ ಅಂದ್ರೆ ನಮಗೆ ಬೊಂಬಾಟ್ ಕಾಲ. ಆವಾಗಿನ ನಮ್ಮ ದಿನಚರಿ ಅಂದ್ರೆ…..ಛೇ [...]
Read Full Post »
Posted in ಕ್ರಿಯೇಟಿವ್ ಪೇಜ್ on April 11, 2008 | 1 Comment »
ಹಾಯ್ ಅವಾಂತರೇಶ,
ಅಪ್ಪಾ, ಅಮ್ಮ ನನ್ನನ್ನು ಸುಳಿದು ಬಿಟ್ಟು ವರ್ಷಗಳೇ ಕಳೆದಿವೆ. ಇನ್ನೂ ನನ್ನ ಪಾಲಿಗೆ ಉಳಿದಿರುವವನು ನೀನೊಬ್ಬನೇ. ನೀನೆ ನನ್ನನ್ನು ಆ ಪರಿ ಬೈಯ್ಯುತ್ತಿರುವಾಗ ನಾನು ಬದುಕಿಯೂ ಅರ್ಥವಿಲ್ಲ ಅಂತಾ ನಿನ್ನ ಕಾಗದದ ಓದಿದ ಮೇಲೆ ನಾನು ನಿರ್ಧಾರ ಮಾಡಿದೆ. ಆ ಕುರಿತು ಸುದೀರ್ಘವಾಗಿ ಚಿಂತಿಸಿದೆ. ನಿನ್ನ ಬಿಟ್ಟು ನಾನು ಬದುಕಬಹುದಾ? ಅಂತಾ ಆಲೋಚಿಸಿದೆ. ಆಮೇಲೆ ಅಂತಿಮವಾಗಿ ಸಾಯಲೇ ಬೇಕು ಅಂತಾ ತುಂಗೆಯ ತೀರಕ್ಕೆ ಹೋದೆ. ಈ ಹಾಳು ಬಿಸಿಲಿಗೆ ತುಂಗೆ ಬತ್ತಿ ಬರಡಾಗಿದ್ದಳು. ತುಂಗೆಯ ಒಡಲಲ್ಲಿ [...]
Read Full Post »
Posted in ಕ್ರಿಯೇಟಿವ್ ಪೇಜ್ on April 3, 2008 | No Comments »
ಹಾಯ್ ಪುಟ್ಟಿ
“ಏನೇ ನಮ್ಮ ಅಪ್ಪಾ, ಅಮ್ಮನ್ನೇ ಗಯ್ಯಾಳಿ ಮನೆತನದವರು ಅಂತೀಯಾ? ನಿಂಗೆ ಕೊಬ್ಬು ತುಂಬಾ ಹೆಚ್ಚಾಗಿದೆ. ನೀನು ಏನು ಹೇಳಿದರೂ ನಾನು ತಿರುಗಿ ಮಾತಾಡಲ್ಲ ಅನ್ನೋ ಭಾವ ನಿನ್ನಲ್ಲಿ ಮೂಡಿದೆ. ನೋಡು ಇದು ನಿಂಗೆ ಲಾಸ್ಟ್ ವಾರ್ನಿಂಗ್. ಇನ್ನೊಂದು ಸಲ ಈ ರೀತಿ ಕಿರಿಕ್ ಮಾಡಿದ್ಯಾ ಅವಳು ಸರಿಯಿಲ್ಲ ಅಂತಾ ನಿಮ್ಮೂರಿಗೆಲ್ಲಾ ಹಬ್ಬಿಸುತ್ತೇನೆ. ನನ್ನಂತಹ ಪಾಪದ ಹುಡುಗನ ಜೊತೆಯೇ ಜಗಳ ಕಾಯೋ ಜಗಳಗಂಟಿ ಅಂತಾ ನಿಮ್ಮುರಿನ ಬಾಯಿಬಡುಕ ಹೆಂಗಸರಿದ್ದಾರಲ್ಲ, ಅದೇ ಸೀತಮ್ಮ, ಮೀನಾಕ್ಷಮ್ಮ…ಅವರ ಹತ್ರಾ ಹೇಳ್ತೀನಿ. ಆಮೇಲೆ [...]
Read Full Post »
Posted in ಕ್ರಿಯೇಟಿವ್ ಪೇಜ್ on March 24, 2008 | 2 Comments »
ಹಾಯ್ ಪೆದ್ದು,
ನೀನು ಬರೆದ ಪತ್ರ ಕುಂಠುತ್ತಾ, ತೆವಳುತ್ತಾ ಬಂದು ನನ್ನ ಕೈ ಸೇರಿತು ಮಾರಾಯ! ನಿನಗೆ ನಾನು ಪೆದ್ದು ಅನ್ನೋದು ಅದಕ್ಕೆ ನೋಡು ಮಾಡೋದೆಲ್ಲಾ ಅನಾಹುತಗಳೇ, ಅಲ್ವೋ ಜೋಯ್ಸರನ್ನ ರಾಜಾರೋಷವಾಗಿ ಬೈದಿದ್ದೀಯಲ್ಲಾ? ಆ ಪತ್ರ ಮೊದ್ಲು ಸೇರಿದ್ದು ಜೋಯ್ಸರ ಕೈಯನ್ನೇ ಗೊತ್ತಾ! ಯಾವಾಗ್ಲೂ ಮಂತ್ರ ಹೇಳೋ, ಜ್ಯೋತಿಷ್ಯ ನೋಡೋ ಜೋಯ್ಸ ಅಂತಾ ನಮ್ಮಪ್ಪನ್ನ ಅಣಗಿಸುತ್ತಾ ಇದ್ದೆಯಲ್ವಾ? ನೋಡು ನಮ್ಮಪ್ಪ ಓದೋಕೇ ಅಂತಾ ಇಸ್ಕೂಲಿಗೆ ಹೋಗದೇ ಮಂತ್ರ ಕಲಿತಿದ್ದು ಇವತ್ತು ಹೆಲ್ಪ್ ಆಯಿತು. ನಮ್ಮಪ್ಪನಿಗೇನಾದ್ರೂ ಓದ್ಲಿಕ್ಕೆ ಬಂದಿದ್ದರೆ, ನೀನು [...]
Read Full Post »
Posted in ಕ್ರಿಯೇಟಿವ್ ಪೇಜ್ on March 18, 2008 | 2 Comments »
ಪುಟ್ಟಿ,
ಹಾಳಾದ ಈ ಬ್ಲಾಗಿಗೆ ಬರೆಯೋದನ್ನ ಶುರುಹಚ್ಚಿಕೊಂಡ ಮೇಲೆ ನಿನಗೆ ಲೇಟರ್ ಬರೆಯೋದೇ ಮರೆತುಹೋಗಿತ್ತು ನೋಡು. ನಂಗೊತ್ತು ನೀನು ಚೂಪು ಮೂತಿ ಮಾಡಿಕೊಂಡು, ಮುಖ ಕೆಂಪೇರಿಸಿಕೊಂಡು, ನನ್ನ ಮೇಲೆ ಹರಿಹಾಯ್ತ ಕುತಿರುತ್ತೀಯಾ ಅಂತಾ. ಎಷ್ಟಂದ್ರೂ ನೀನು ಜೋಯ್ಸರ ಮಗಳಲ್ವಾ? ಹಾಗಾಗಿ ಮೂಗಿನ ತುದಿಗೆ ಸಿಟ್ಟು ನಿಂಗೆ!
ಏ ನೀನು ನಂಗೆ ಮೊದಲನೇ ಸಾರಿ ನೋಡ್ಲಿಕ್ಕೆ ಸಿಕ್ಕಿದ್ದು ಭಿಮನಕಟ್ಟೆಯ ದೋಣಿಯಲ್ಲಿ ಅಲ್ವಾ? ಅದೇ ಕಣೆ ನಾನು ದೋಣಿಯಲ್ಲಿ ಕೂತಿದ್ದೆ. ಅಷ್ಟೊತ್ತಿಗೆ ನೀನು ಗಯ್ಯಾಳಿ ತರ ಎಂಟ್ರಿ ಕೊಟ್ಟೆ. ದೋಣಿಯ ಅಂಬಿಗನ ಹತ್ತಿರ [...]
Read Full Post »
Posted in ಕ್ರಿಯೇಟಿವ್ ಪೇಜ್ on March 17, 2008 | 1 Comment »
ಮೊನ್ನೆ ತಾನೇ ಭಡ್ತಿಯವರು ಶಿವರಾತ್ರಿ ಕಳೆದರೂ ಹದ ಮಳೆ ಇನ್ನೂ ಬಿದ್ದಿಲ್ಲ ಅಂತಾ ಗಡ್ಡದಾಗಿ ವಿ.ಕ.ದಲ್ಲಿ ಬರೆದಿದ್ದರು ವರುಣ ದೇವನಿಗೆ ಅದ್ಯಾರೂ ಆ ಲೇಖನ ಒಯ್ದು ಕೊಟ್ಟರೋ ಗೊತ್ತಿಲ್ಲ! ಮಳೆ ಚೆನ್ನಾಗಿ ಜಡಿದಿದೆ. ಬೆಂಗ್ಳೂರಿಗರೆಲ್ಲಾ ಸಾಕಪ್ಪಾ ಹದ ಮಳೆಯ ಸಹವಾಸ ಅನ್ನೋ ತರಹ ಜಡಿದಿದೆ ನೋಡಿ ಮಳೆ! ಆದ್ರೂ ನಮ್ಮೂರಿನಲ್ಲಿ ಈ ಹದ ಮಳೆ ಹುಯ್ಯಿದಿದ್ದರೆ ಏನು ಪಸಂದಾಗಿತ್ತು ಗೊತ್ತಾ? ಅಲ್ಲಲ್ಲ ಈ ಮಳೆ ಹುಯ್ಯೋವಾಗ ನಾನು ನಮ್ಮೂರಲ್ಲಿ ಇದ್ದಿದ್ದರೆ ಏನೂ ಚೆಂದಾಗಿತ್ತು ಗೊತ್ತಾ? ಹೌದು ಮಲೆನಾಡಿನ ಹದ ಮಳೆಯ [...]
Read Full Post »
Posted in ಕ್ರಿಯೇಟಿವ್ ಪೇಜ್ on March 16, 2008 | No Comments »
ಅದು ಬಾಲ್ಯದ ದಿನಗಳು. ಬೇಸಿಗೆ ರಜೆ ಬಂತೆಂದರೆ ಅಜ್ಜನ ಮನೆಗೆ ಓಡುತ್ತಿದ್ದ ದಿನವದು. ಉತ್ತರ ಕನ್ನಡದ “ಚಪ್ಪರಮನೆ” ಅಂತಾ ಊರಿನ ಹೆಸರು. ಯಕ್ಷಗಾನದಿಂದ, ಮಾವನ ಭಾಗವತಿಕೆಯಿಂದ ಆ ಊರು ಪರಿಚಿತ ಅನ್ನೋದು ಬಿಟ್ಟರೆ ಅದಿಲ್ಲವಾದರೆ ಇವತ್ತಿಗೂ ಆ ಊರು ಒಂತರಹ ಭಯಾನಕ ಕೊಂಪೆಯೇ ಸರಿ! ಸಿದ್ದಾಪುರ ಸೀಮೆಯೆಂದರೆ ನಮ್ಮ ಸಾಗರದವರಿಗೆ ಒಂತರಹ ಮೂದಲಿಕೆ! ಅವರು ಸಾಗರ ಸೀಮೆಯವರ ಲೆಕ್ಕದಲ್ಲಿ ಗೊಡ್ಡುಗಳಂತೆ!(ನನ್ನ ಅಪ್ಪ ಅಮ್ಮನಿಗೆ ಬೈಯ್ಯುತ್ತಿದ್ದಾಗ ನನಗೆ ಈ ವಿಚಾರ ಗೊತ್ತಾಗಿದ್ದು!)ನಮಗೆಲ್ಲಾ ಅದು ಅಜ್ಜನ ಮನೆ ಅನ್ನೋದಕ್ಕಿಂತ ಆಯಿ [...]
Read Full Post »