Feed on
Posts
Comments

Archive for the ‘ಕಥೆ-ವ್ಯಥೆ!’ Category

ಸಂಚಿ ನಾಗಿ ಅಂತಾನೇ ಆಕೆ ನಮಗೆಲ್ಲಾ ಪರಿಚಿತೆ. ರಾಮ ಭಟ್ರ ಮನೆಯ ಕೆಸದಾಕೆ ಅವಳು. ಅವಳ ಕಥೆ ಮಗಳ ಕಥೆಗಿಂತಲೂ ದೊಡ್ಡದು. ಆದ್ರೂ ಮಗಳ ಕಥೆ ಅವಳಗಿಂತಲೂ ದೊಡ್ಡದು! ಕುಂದಾಪುರದ ಕಡೆಯವಳು, ಬಾಬು ಸೇರಿಗಾರನ ಜೊತೆ ಓಡಿಬಂದವಳು ಅಂತಾರೆ ಕೆಲವರು. ಇನ್ನೂ ಕೆಲವರು ನಾಗಿ ಅಂದ್ರೆ ಹುಟ್ಟಾ ಸೂಳೆ ಅಂತಾ ಮೂಗು ಮುರಿತಾರೆ. ಹಾಗಾಗಿ ನಮಗೆಲ್ಲಾ ನಾಗಿ ಅಂದ್ರೆ ಮೊದಲಿಂದಲೂ ಕೂತುಹಲ. ನಾಗಿ ಮ್ಯಾಲೆ ಎಂತಹದೋ ಒಂತರಹ ಗುಮಾನಿ! ಊರಿನ ಜನ ಏನೇ ಆಡಿಕೊಂಡರು ಎಲ್ಲರಿಗೂ ನಾಗಿ [...]

Read Full Post »

 ಊಹುಂ ಕಥೆ ಬರೆಯಲು ನಾನು ಒಲ್ಲೆ…. ಹಾಗಂದುಕೊಂಡೆ ಗೀಚಿದ ಕಥೆ ಅದು. ನನ್ನ ವಯಸ್ಸನ್ನು ಗುರುತಿಸಬಹುದಾದ ಕಥೆ. ಅದ್ಯಾಕೋ ಅದಕ್ಕೆ ಮರೀಚಿಕೆ ಅಂತಾ ಹೆಸರು ಕೊಡಬೇಕು ಅನ್ನಿಸಿತ್ತು. ಹಾಗೇ ಹೆಸರಿಟ್ಟಿದ್ದೆ.  ಅದೊಂದು ಪತ್ರಿಕೆಯಲ್ಲಿ ಪ್ರಕಟವೂ ಆಯಿತು. ಕಥೆ ಮೆಚ್ಚಿ ಹಲವು ಪತ್ರಗಳು ಬಂತು.
 ಮರೀಚಿಕೆಯ ಕಥೆ ಆರಂಭವಾಗುವುದೇ ಇಲ್ಲಿಂದ. ಅರೆ ಕಥೆ ಮುಗಿದ ಮೇಲೆ ಮತ್ತೆ ಆರಂಭ……? ಅಂತಾ ನೀವು ಕೇಳಬಹುದು. ಅದು ಕಥೆ. ಇದು….? ಅದರಲ್ಲಿ ಅವಳು ಬರೆದ ಪತ್ರವೂ ಒಂದಿತ್ತು. ಸಾರ್ ನಿಮ್ಮ ಕಥೆಯಲ್ಲಿನ ನಾಯಕಿ [...]

Read Full Post »

ಒಬ್ಬ ಪತ್ರಕರ್ತನಾಗಿ ಕಲಿಯಬೇಕಾಗಿರುವ ಕೆಲಸಗಳು ಸಾಕಷ್ಟು ಇರುವುದರಿಂದ, ಒಂದಿಷ್ಟು ತೆವಲುಗಳನ್ನು ಮೈಗಂಟಿಸಿಕೊಂಡು ಕೂತಿರುವುದರಿಂದ, ಅದರ ಜೊತೆಗೆ ಬರಹ ಅನ್ನುವುದು ಬೇಸರಮೂಡಿಸುತ್ತಿರುವುದರಿಂದ ಇಲ್ಲಿನ ನನ್ನ ವಿಹಾರವನ್ನು ಮುಗಿಸುತ್ತಿದ್ದೇನೆ. ಇಲ್ಲಿಯವರೆಗೆ ಪ್ರೋತ್ಸಾಹಿಸಿ ಬೆನ್ನು ತಟ್ಟಿದ ಕಾಲೆಳೆದು ತಪ್ಪನ್ನು ತಿದ್ದಿದ್ದ ನಿಮಗೆ ಧನ್ಯವಾದಗಳು. ಬ್ಲಾಗ್‌ಎಂಬುದರ ಗಂಧಗಾಳಿಯೂ ಗೊತ್ತಿಲ್ಲದವನಿಗೆ ಅದನ್ನು ಕಲಿಸಿ, ನನ್ನ ಬ್ಲಾಗಿಗೊಂದು ಸುಣ್ಣ ಬಣ್ಣ ಬಳಿದು ಸ್ವಚ್ಛಂದಗೊಳಿಸಿಕೊಟ್ಟ ಅಕ್ಕಾ ಚೇತನಾ ತೀರ್ಥಹಳ್ಳಿಗೂ ವಿಶೇಷ ಧನ್ಯವಾದಗಳು. ಮತ್ತೆ ಬಂದರೆ ನೀವು ನನ್ನ ವಿಹಾರಕ್ಕೆ ಸಾಥು ನೀಡುವಿರಿ ಎಂಬ ಭರವಸೆಯೊಂದಿಗೆ
                                               ವಿನಾಯಕ

Read Full Post »

ಗಂಡ ಕಡು ಕುಡುಕ. ಸರ್ವಗುಣ ಸಂಪನ್ನ. ಆಕೆ ಗಂಡ, ಸಂಸಾರವನ್ನು ಬಿಟ್ಟು ಬೇರೇನನ್ನೂ ಅರಿಯದ ಹುಡುಗಿ. ಅಡುಗೆ ಮನೆಯ ವಿಶ್ವವನ್ನು ದಾಟಿ ಹೊರಬಂದೇ ಗೊತ್ತಿಲ್ಲದವಳು. ಆಕೆಗೆ ತನ್ನ ಗಂಡ ಇನ್ನೊಬ್ಬಳನ್ನು ಜಗಜ್ಜಾಹಿರವಾಗಿ ಇಟ್ಟುಕೊಂಡಿದ್ದು ತೀರಾ ನೋವು ಕೊಡಲು ಶುರುವಿಟ್ಟಿತು. ಮನೆಯ ಸಂಪತ್ತನ್ನೆಲ್ಲಾ ಬಗೆದುಕೊಂಡು ಹೋಗಿ ಇಟ್ಟುಕೊಂಡುವಳ ಚೆಲುವಿಗೆ ಚೆಲ್ಲುತ್ತಿರುವುದು ಹೇಳಲಾರದಷ್ಟು ಸಂಕಟವನ್ನುಂಟು ಮಾಡತೊಡಗಿತು. ಇದ್ದುಬದ್ದ ದೇವರಗುಡಿಗೆಲ್ಲಾ ಹೋಗಿ ಗಂಡನಿಗೆ ಒಳ್ಳೆ ಬುದ್ದಿ ಬರಲೆಂದು ಫ್ರಾರ್ಥಿಸಿಕೊಂಡಳು. ಹರಕೆ ಸ್ವೀಕರಿಸಲು ಅರ್ಹರೆನಿಸಿದ ದೇವರ ಬಳಿಯೆಲ್ಲಾ ಹರಕೆ ಹೊತ್ತುಕೊಂಡಳು. ದಾರ, ವಿಭೂತಿ [...]

Read Full Post »