ವಿಹಾರವನ್ನು ಮುಗಿಸುವ ಮುನ್ನಾ
May 4, 2008 by aksharavihaara
ಒಬ್ಬ ಪತ್ರಕರ್ತನಾಗಿ ಕಲಿಯಬೇಕಾಗಿರುವ ಕೆಲಸಗಳು ಸಾಕಷ್ಟು ಇರುವುದರಿಂದ, ಒಂದಿಷ್ಟು ತೆವಲುಗಳನ್ನು ಮೈಗಂಟಿಸಿಕೊಂಡು ಕೂತಿರುವುದರಿಂದ, ಅದರ ಜೊತೆಗೆ ಬರಹ ಅನ್ನುವುದು ಬೇಸರಮೂಡಿಸುತ್ತಿರುವುದರಿಂದ ಇಲ್ಲಿನ ನನ್ನ ವಿಹಾರವನ್ನು ಮುಗಿಸುತ್ತಿದ್ದೇನೆ. ಇಲ್ಲಿಯವರೆಗೆ ಪ್ರೋತ್ಸಾಹಿಸಿ ಬೆನ್ನು ತಟ್ಟಿದ ಕಾಲೆಳೆದು ತಪ್ಪನ್ನು ತಿದ್ದಿದ್ದ ನಿಮಗೆ ಧನ್ಯವಾದಗಳು. ಬ್ಲಾಗ್ಎಂಬುದರ ಗಂಧಗಾಳಿಯೂ ಗೊತ್ತಿಲ್ಲದವನಿಗೆ ಅದನ್ನು ಕಲಿಸಿ, ನನ್ನ ಬ್ಲಾಗಿಗೊಂದು ಸುಣ್ಣ ಬಣ್ಣ ಬಳಿದು ಸ್ವಚ್ಛಂದಗೊಳಿಸಿಕೊಟ್ಟ ಅಕ್ಕಾ ಚೇತನಾ ತೀರ್ಥಹಳ್ಳಿಗೂ ವಿಶೇಷ ಧನ್ಯವಾದಗಳು. ಮತ್ತೆ ಬಂದರೆ ನೀವು ನನ್ನ ವಿಹಾರಕ್ಕೆ ಸಾಥು ನೀಡುವಿರಿ ಎಂಬ ಭರವಸೆಯೊಂದಿಗೆ
ವಿನಾಯಕ
Posted in ಕಥೆ-ವ್ಯಥೆ! | 2 Comments
Leave a Reply
ಅಲ್ವೋ ಪುಣ್ಯಾತ್ಮಾ…
)
ಹೀಗೆ ಬ್ಲಾಗು ಮುಚ್ಚೋದಕ್ಕೂ ನಾನೇ ಗುರುವೇನೋ ನಿಂಗೆ?
(ನಾನೂ ಒಮ್ಮೆ ಹೀಗೆ ಕದ ಹಾಕಿದು ನೆನಪಾಯ್ತು!
ಸರಿ. ಪುರುಸೊತ್ತು ಮಾಡಿಕೊಂಡು ಬಾ ಮತ್ತೆ. ನಾವೆಲ್ಲ ಕಾಯ್ತಿರ್ತೀವಿ.
- ಅಕ್ಕ
eshtu bega vaaking boraadre hege ?e saoubhagyakke sigandooru devi hesaralli notice bere haakabekitta??