ಇದು ನನ್ನ ಕುರಿತ ತುತ್ತೂರಿ…

ಉಡುಪಿ ವಿನಾಯಕ ಅಂತಾ ಗುರುತಿಸಿಕೊಂಡಿದ್ದವನು, ಇವತ್ತು ವಿನಾಯಕ ಕೋಡ್ಸರ ಎಂದು ಹೆಸರನ್ನು ರೂಪಾಂತರ ಮಾಡಿಕೊಂಡಿದ್ದೇನೆ! ಸಾಗರ-ಜೋಗ ಮಾರ್ಗ ಮಧ್ಯದಲ್ಲಿ ಸಿಗುವ ‘ಕೋಡ್ಸರ’ ನನ್ನ ಹುಟ್ಟೂರು. ಅದ್ಯಾಕೊ ಗೊತ್ತಿಲ್ಲ, ನನ್ನ ದೇಶ, ನನ್ನ ಊರು, ನನ್ನ ಅಪ್ಪ, ಅಮ್ಮ ಅಂದ್ರೆ ನನಗೆ ಮೊದಲಿನಿಂದಲೂ ಪ್ರೀತಿ. ಶಿವರಾಮ ಕಾರಂತರ ‘ಹುಚ್ಚು ಮನಸಿನ ಹತ್ತು ಮುಖಗಳು’ ಬದುಕಿನ ಕುರಿತಾಗಿ ನನಗೊಂದು ಕನಸು ಕಟ್ಟಿಕೊಟ್ಟ ಕೃತಿ. ಕಂಡಿದ್ದನ್ನು ಕಂಡ ಹಾಗೆ ಹೇಳೋದು ನನ್ನ ಸ್ವಭಾವ. ಹಾಗಾಗಿ ಕಾರಂತರು, ಓಶೋ ರಜನೀಶ, ಎಸ್.ಎಲ್ ಭೈರಪ್ಪ, ಪೂರ್ಣಚಂದ್ರ ತೇಜಸ್ವಿ…ನನ್ನಿಷ್ಟದ ಲೇಖಕರು. ಸದ್ಯಕ್ಕೆ ನನ್ನ ವೃತ್ತಿ-ಪ್ರವೃತ್ತಿ ಎರಡೂ ಬರಹ. ನಿದ್ದೆ ಮಾಡುವುದು ಅಂದರೆ ಪಂಚಪ್ರಾಣ. ಓದು, ಯಕ್ಷಗಾನ, ಸಂಗೀತ…ಇವೆಲ್ಲ ಒಂಟಿತನದಿಂದ ನನ್ನನ್ನು ಕೆಲ ಕಾಲ ದೂರ ಇಡುತ್ತವೆ.

1 Comment

1 response so far ↓

  • balu // June 27, 2009 at 8:36 am

    ನೋಟೀಸ್ ಬೋರ್ಡ್
    ಎಚ್ಚರಿಕೆ!! ಈ ಬ್ಲಾಗಿನ ಯಾವತ್ತೂ ಬರಹಗಳು ಕಳುವಾಗದಂತೆ ಶ್ರೀ ಸಿಗಂದೂರು ಚೌಡೇಶ್ವರಿ ದೇವಿಯಲ್ಲಿ ಹರಕೆ ಹೊತ್ತುಕೊಳ್ಳಲಾಗಿದೆ!!!…

    maraya chennagide… aadre nanu notice board ne kalla thana maduva antha iddene!!!

    blog chennagide!!!

Leave a Comment